For Quick Alerts
ALLOW NOTIFICATIONS  
For Daily Alerts

ನ್ಯೂಮೋನಿಯಾ ಬಂದಾಗ ಮನೆಯಲ್ಲಿ ಚಿಕಿತ್ಸೆ ಪಡೆಯುವುವದಾದರೆ ಏನು ಮಾಡಬೇಕು?

|

ಮಳೆಗಾಲದಲ್ಲಿ ಸುರಿಯುವಂತೆ ಮಳೆ ಸುರಿಯುತ್ತಿದೆ, ಮಳೆಯಿಂದಾಗಿ ಜನರಲ್ಲಿ ಕಾಯಿಲೆಗಳು ಕೂಡ ಅಧಿಕವಾಗುತ್ತಿದೆ. ಜ್ವರ, ನೆಗಡಿ, ಕೆಮ್ಮು ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವರಲ್ಲಿ ನ್ಯೂಮೋನಿಯಾ ಜ್ವರ ಕಾಣಿಸಿಕೊಳ್ಳುತ್ತಿದೆ. ನ್ಯೂಮೋನಿಯಾ ಬಂದವರೆಲ್ಲರೂ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾಗಿ. ನಿಮ್ಮ ಆರೋಗ್ಯ ಸ್ಥಿತಿ ನೋಡಿ ಅಡ್ಮಿಟ್ ಆಗಬೇಕೋ, ಬೇಡ್ವೋ ಎಂಬುವುದನ್ನು ವೈದ್ಯರೇ ಸೂಚಿಸುತ್ತಾರೆ.

ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವುದಾದರೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು. ನ್ಯೋಮೋನಿಯಾ ಇರುವವರನ್ನು ಮನೆಯಲ್ಲಿಯೇ ಹೇಗೆ ಆರೈಕೆ ಮಾಡಬೇಕು ಎಂಬುವುದನ್ನು ನೋಡೋಣ:

ನ್ಯೂಮೋನಿಯಾ ಬರಲು ಕಾರಣವೇನು?

ನ್ಯೂಮೋನಿಯಾ ಬರಲು ಕಾರಣವೇನು?

ನ್ಯೋಮೋನಿಯಾ ಇನ್‌ಫೆಕ್ಷನ್‌ (ಸೋಂಕು) ಅಥವಾ ನಾನ್‌ ಇನ್‌ಫೆಕ್ಷನ್‌ ಕಾರಣದಿಂದ ಬರಬಹುದು. ಸಾಮನ್ಯವಾಗಿ ನ್ಯೂಮೋನಿಯಾ ಬ್ಯಾಕ್ಟಿರಿಯಾ ಸೋಂಕಿನಿಂದಾಗಿ ಉಂಟಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ನ್ಯೂಮೋನಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಮಧುಮೇಹ, ರೋಗ ನಿರೋಧಕ ಶಕ್ತಿಯ ಕೊರತೆ, ಪೋಷಕಾಂಶದ ಕೊರತೆ, ಹೃದಯ ಸಮಸ್ಯೆ, ಧೂಮಪಾನದ ಚಟ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ನ್ಯೂಮೋನಿಯ ಲಕ್ಷಣಗಳೇನು?

ನ್ಯೂಮೋನಿಯ ಲಕ್ಷಣಗಳೇನು?

* ಕೆಮ್ಮು, ಕಫದಲ್ಲಿ ರಕ್ತ

* ಜ್ವರ

* ಉಸಿರಾಟಕ್ಕೆ ತೊಂದರೆ

* ಪಲ್ಸ್‌ ಹೆಚ್ಚಾಗುವುದು

* ದೊಡ್ಡವರು ಜ್ವರ ಅಧಿಕವಾದಾಗ ಪ್ರಜ್ಞೆ ಕೂಡ ತಪ್ಪಬಹುದು

ನ್ಯೂಮೋನಿಯಾಗೆ ಚಿಕಿತ್ಸೆ ಏನು?

ನ್ಯೂಮೋನಿಯಾಗೆ ಚಿಕಿತ್ಸೆ ಏನು?

1. Antipyretics ಜ್ವರ ಕಡಿಮೆ ಮಾಡುತ್ತೆ

2. Anti-tussive ನೀಡಿ ಕೆಮ್ಮು ನಿಯಂತ್ರಿಸಲಾಗುವುದು.

3. ಕಫ ಕರಗಿಸಲು ನೆಬ್ಯೂಲೈಸೇಷನ್ ಮಾಡಲಾಗುವುದು

4. ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್‌ ಸಪ್ಲಿಮೆಂಟ್‌ ನೀಡಲಾಗುವುದು

5. ಅಗ್ಯತವಿರುವವರಿಗೆ ಇತರ ಆರ್ಗನ್‌ ಸಪೋರ್ಟ್‌ ನೀಡಿ ಚಿಕಿತ್ಸೆ ನೀಡಲಾಗುವುದು (ಐಸಿಯುವಿನಲ್ಲಿ ಚಿಕಿತ್ಸೆ.

ಮನೆಯಲ್ಲಿಯೇ ನ್ಯೂಮೋನಿಯಾ ಚಿಕಿತ್ಸೆ ಹೇಗೆ?

ಮನೆಯಲ್ಲಿಯೇ ನ್ಯೂಮೋನಿಯಾ ಚಿಕಿತ್ಸೆ ಹೇಗೆ?

* ವೈದ್ಯರು ಸೂಚಿಸಿದಂಥ ಔಷಧಿಯನ್ನೇ ನೀಡಿ.

* ನಿದ್ದೆಗೆ ತೊಂದರೆಯಾಗುತ್ತಿದ್ದರೆ ಕಫದ ಔಷಧಿ ತೆಗೆದುಕೊಳ್ಳಿ.

* ನೀವು ಹುಷಾರಾಗಿದ್ದರೂ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವುದನ್ನು ಸ್ಟಾಪ್‌ ಮಾಡಬೇಡಿ.

* ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ

* ನಿದ್ದೆ ಚೆನ್ನಾಗಿ ಮಾಡಿ

* ನಿಮ್ಮ ವೈದ್ಯರು ಸುಚಿಸಿದ ಬಳಿಕವಷ್ಟೇ ಸಹಜ ಚಟುವಟಿಕೆಗೆ ಮರಳಿ.

* ಸಾಕಷ್ಟು ನೀರು ಕುಡಿಯಿರಿ.

ಏನು ಮಾಡಬಾರದು?

* ಮದ್ಯಪಾನ ಸೇವಿಸಬಾರದು

* ನಿಕೋಟಿನ್, ತಂಬಾಕು ಇಂಥ ಪದಾರ್ಥಗಳನ್ನು ಸೇವಿಸಬಾರದು.

English summary

Do’s And Don’ts To Treat Pneumonia At Home in kannada

Do’s and don’ts to treat pneumonia at home in kannada, Read on...
X
Desktop Bottom Promotion