For Quick Alerts
ALLOW NOTIFICATIONS  
For Daily Alerts

ನಮಗಾಗಿರುವುದು ಅಲರ್ಜಿಯೇ, ಸೈನಸ್‌ ಸಮಸ್ಯೆಯೇ? ತಿಳಿಯುವುದು ಹೇಗೆ?

|

ಹವಾಮಾನ ಬದಲಾಗುತ್ತಲೇ ಇದೆ, ಒಮ್ಮೆ ಮಳೆ ಇದ್ದರೆ ಮತ್ತೊಮ್ಮೆ ಬಿಸಿಲು, ಹವಾಮಾನದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಕಾಯಿಲೆ ಬೀಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೆಚ್ಚಿನವರಲ್ಲಿ ಶೀತ, ಕೆಮ್ಮು, ತಲೆನೋವು, ಜ್ವರ ಈ ಬಗೆಯ ಸಮಸ್ಯೆಗಳು ಕಂಡು ಬರುತ್ತಿದೆ.

ಕೆಲವರಲ್ಲಿ ಸೈನಸೈಟಿಸ್ ಸಮಸ್ಯೆ ಕಂಡು ಬಂದರೆ ಇನ್ನು ಕೆಲವರಿಗೆ ಅಲರ್ಜಿ ಸಮಸ್ಯೆಯಿಂದಾಗ ಶೀತ, ತಲೆನೋವು ಮುಂತಾದ ತೊಂದರೆಗಳು ಉಂಟಾಗುತ್ತಿದೆ. ಈ ತೊಂದರೆಗಳಿಗೆ ಸರಿಯಾದ ಕಾರಣ ಯಾವುದು ಅಲರ್ಜಿ ಇರಬಹುದೇ ಅಥವಾ ಸೈನಸೈಟಿಸ್‌ ಇರಬಹುದೇ ಎಂದು ಹೆಚ್ಚಿನರಿಗೆ ತಿಳಿಯುವುದಿಲ್ಲ.

ಅಲರ್ಜಿ ಹಾಗೂ ಸೈನಸೈಟಿಸ್‌ ನಡುವಿನ ವ್ಯತ್ಯಾಸವೇನು? ನಮಗಿರುವುದು ಸೈನಸ್‌ ಸಮಸ್ಯೆಯೇ ಅಥವಾ ಅಲರ್ಜಿಯೇ ಎಂದು ತಿಳಿಯುವುದು ಹೇಗೆ ಎಂಬುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ:

ಸೈನಸ್‌ VS ಅಲರ್ಜಿ

ಸೈನಸ್‌ VS ಅಲರ್ಜಿ

ಅಲರ್ಜಿ ಅಥವಾ ಸೈನಸ್‌ ಏನೇ ಬಂದರೂ ತುಂಬಾನೇ ತೊಂದರೆ ಅನುಭವಿಸಬೇಕಾಗುತ್ತದೆ, ಆದರೆ ಅಲರ್ಜಿ ಹಾಗೂ ಸೈನಸ್‌ ಎರಡೂ ಒಂದೇ ಕಾರಣದಿಂದ ಬರುವುದಿಲ್ಲ. ದೂಳು ಅಥವಾ ಹೂ , ಪ್ರಾಣಿಗಳ ರೊಮ ಮುಂತಾದ ಕಾರಣಗಳಿಂದ ಅಲರ್ಜಿ ಉಂಟಾಗುತ್ತದೆ.

ಮೂಗಿನ ರಂಧ್ರಗಳಿಗೆ ಸೋಂಕು ತಗುಲಿದಾಗ ಸೈನಸ್‌ ಸಮಸ್ಯೆ ಉಂಟಾಗುತ್ತೆದೆ. ಸೈನಸ್‌ ಹಾಗೂ ಅಲರ್ಜಿ ಎರಡೂ ಸಮಸ್ಯೆಯಲ್ಲಿ ಮಗು ಕಟ್ಟಿದ ಅನುಭವ ಉಂಟಾಗುವುದು, ಆದರೆ ಈ ಎರಡೂ ಬೇರೆ-ಬೇರೆ ಸಮಸ್ಯೆಗಳಾಗಿವೆ.

ಅಲರ್ಜಿಗೆ ಕಾರಣವೇನು?

ಅಲರ್ಜಿಗೆ ಕಾರಣವೇನು?

ಅಲರ್ಜಿ ಸಮಸ್ಯೆ ಯಾವಾಗ ಬೇಕಾದರೂ ಬರಬಹುದು, ಕೆಲವೊಂದು ವಸ್ತುಗಳು ನಿಮಗೆ ಅಲರ್ಜಿಯನ್ನು ಉಂಟು ಮಾಡಬಹುದು. ಅಲರ್ಜಿ ಉಂಟಾದಾಗ ತಲೆನೋವು, ಶತ, ಮೂಗು ಕಟ್ಟಿದಂತಾಗುವುದು, ತ್ವಚೆಯಲ್ಲಿ ಗುಳ್ಳೆಗಳು ಏಳುವುದು ಮುಂತಾದ ತೊಂದರೆಗಳು ಕಂಡು ಬರುವುದು.

ಸೈನಸ್‌ಗೆ ಕಾರಣವೇನು?

ಮೂಗಿನ ರಂಧ್ರಗಳಿಗೆ ವೈಸರ್‌ಗಳು ತಗುಲಿ ಸೋಂಕು ಉಂಟಾದಾಗ ಸೈನಸ್‌ ಸಮಸ್ಯೆ ಕಂಡು ಬರುವುದು. ಕಫ ಸಮಸ್ಯ, ಮೂಗು ಕಟ್ಟಿದಂತಾಗುವುದು ಈ ಎಲ್ಲಾ ಸಮಸ್ಯೆಗಳು ಕಂಡು ಬರುವುದು.

ಸೈನಸ್‌ ಹಾಗೂ ಅಲರ್ಜಿ ಸಮಸ್ಯೆಗಳ ಲಕ್ಷಣಗಳ ನಡುವಿನ ವ್ಯತ್ಯಾಸ

ತಲೆನೋವು: ಸೈನಸ್ ಹಾಗೂ ಅಲರ್ಜಿ ಉಂಟಾದಾಗ ಕಂಡು ಬರುವುದು

ತಲೆನೋವು: ಸೈನಸ್ ಹಾಗೂ ಅಲರ್ಜಿ ಉಂಟಾದಾಗ ಕಂಡು ಬರುವುದು

ಮೂಗುಕಟ್ಟುವುದು: ಸೈನಸ್ ಹಾಗೂ ಅಲರ್ಜಿ ಉಂಟಾದಾಗ ಈ ಸಮಸ್ಯೆ ಉಂಟಾಗುವುದು.

ಕೆನ್ನೆ ಹಾಗೂ ಕಣ್ಣಿನ ಭಾಗದಲ್ಲಿ ನೋವು: ಸೈನಸ್‌ನಲ್ಲಿ ಕಂಡು ಬರುವ ಲಕ್ಷಣವಾಗಿದೆ.

ಸೀನು: ಅಲರ್ಜಿ ಲಕ್ಷಣವಾಗಿದೆ

ಕಣ್ಣಿನಲ್ಲಿ ತುರಿಕೆ, ನೀರುಬರುವುದು: ಅಲರ್ಜಿ ಲಕ್ಷಣ

ಮೂಗಿನ ಮೂಲಕ ಉಸಿರಾಟಡಲು ಕಷ್ಟವಾಗುವುದು: ಅಲರ್ಜಿ ಹಾಗೂ ಸೈನಸ್‌ನಲ್ಲಿ ಕಂಡು ಬರುವುದು

ಹಲ್ಲುನೋವು, ಬಾಯು ದುರ್ವಾಸನೆ, ಜ್ವರ: ಸೈನಸ್‌ ಉಂಟಾದಾಗ ಕಂಡು ಬರುವುದು

ಚಿಕಿತ್ಸೆಯೇನು?

ಚಿಕಿತ್ಸೆಯೇನು?

ಸೈನಸ್‌ ಹಾಗೂ ಅಲರ್ಜಿ ಚಿಕಿತ್ಸೆಗೆ ಹೋಲಿಕೆ ಹಾಗೂ ವ್ಯತ್ಯಾಸ ಎರಡೂ ಇದೆ. ಅಲರ್ಜಿಯನ್ನು antihistamines ಔಷಧಗಳಾದ ಬೆನೆಡ್ರಿಲ್‌, ಜೈರೆಟೆಕ್‌, ಕ್ಲಾರಿಟಿನ್‌ ಔಷಧಿಗಳನ್ನು ನೀಡಲಾಗುವುದು (ವೈದ್ಯರನ್ನು ಬೇಟಿ ಮಾಡಿದ ಬಳಿಕವಷ್ಟೇ ಈ ಔಷಧಗಳನ್ನು ತೆಗೆದುಕೊಳ್ಳಬೇಕು).

ಅಲರ್ಜಿ ಅಥವಾ ಸೈನಸ್ ಸಮಸ್ಯೆ ಇದ್ದಾಗ

* ತುಂಬಾ ರೆಸ್ಟ್‌ ಮಾಡಿ

* ಸಾಕಷ್ಟು ನೀರು ಕುಡಿಯಿರಿ

* ಸಲೈನ್‌ ಡ್ರಾಪ್‌ ಬಳಸಿ

* ಅಲರ್ಜಿಗೆ ಔಷಧಿಯನ್ನು ತೆಗೆದುಕೊಳ್ಳಿ.

ಅಲರ್ಜಿ ಅಥವಾ ಸೈನಸ್‌ ಸಮಸ್ಯೆ ತಡೆಗಟ್ಟುವುದು ಹೇಗೆ?

ಅಲರ್ಜಿ ಅಥವಾ ಸೈನಸ್‌ ಸಮಸ್ಯೆ ತಡೆಗಟ್ಟುವುದು ಹೇಗೆ?

* ಚೆನ್ನಾಗಿ ನಿದ್ದೆ ಮಾಡಿ.

* ವಿಟಮಿನ್ ಸಿ ಸಪ್ಲಿಮೆಂಟ್‌ ತೆಗೆದುಕೊಳ್ಳಿ

* ಆಗಾಗ ಕೈಗಳನ್ನು ತೊಳೆದುಕೊಳ್ಳಿ.

* ನಿಮಗೆ ಯಾವ ವಸ್ತುಗಳಿಂದ ಅಲರ್ಜಿ ಉಂಟಾಗುತ್ತಿದೆ ಎಂದು ತಿಳಿದರೆ ಅದರಿಂದ ದೂರವಿರಿ.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು

* ಅಲರ್ಜಿ ಬಂದ ತಕ್ಷಣ ವೈದ್ಯರನ್ನು ಕಾಣ ಬೇಕಾಗಿಲ್ಲ, ಆದರೆ ನಿಮ್ಮ ಬಳಿ ಇರುವ ಔಷಧಿಗಳಿಂದ ಯಾವುದೇ ಪ್ರಯೋಜನ ಸಿಗದಿದ್ದಾಗ ಮಾತ್ರ ವೈದ್ಯರನ್ನು ಕಾಣಿ.

English summary

Difference between sinus infections and allergies in Kannada

What are the difference between sinus infection and allergies, read on...
Story first published: Monday, September 19, 2022, 13:29 [IST]
X
Desktop Bottom Promotion