For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಡೆಂಗ್ಯೂ ಹೆಚ್ಚಳ: ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?

|

ಕೋವಿಡ್ 19 ಕಾಯಿಲೆಯ 2ನೇ ಅಲೆ ಭಾರತದಲ್ಲಿ ತುಂಬಾನೇ ಕೆಟ್ಟ ಪರಿಣಾಮ ಬೀರಿತ್ತು. ಇದಿಗ ಪರಿಸ್ಥಿತಿ ಸುಧಾರಿಸಿ, ಜನ ಜೀವನ ಮೊದಲಿನ ಸ್ಥಿತಿಗೆ ಮರಳುತ್ತಿರುವಾಗಲೇ ಡೆಂಗ್ಯೂ ಆತಂಕ ಎದುರಾಗಿದೆ. ದೇಶದೆಲ್ಲಡೆ ಡೆಂಗ್ಯೂ ಕಾಯಿಲೆ ಹೆಚ್ಚಾಗುತ್ತಿದೆ. ಒಂದು ವರದಿಯ ಪ್ರಕಾರ ರಾಜಾಸ್ಥಾನದಲ್ಲಿ 13,000ಕ್ಕೂ ಅಧಿಕ ಜನರಿಗೆ ಡೆಂಗ್ಯೂ ಬಾಧಿಸಿದೆ. ಹರಿಯಾಣದಲ್ಲಿ 8000ಕ್ಕೂ ಅಧಿಕ ಜನರಿಗೆ ಡೆಂಗ್ಯೂ ಬಂದಿದೆ. ತಮಿಳಿನಾಡಿನಲ್ಲಿ 3, 700ಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ 1300ಕ್ಕೂ ಅಧಿಕ ಕೇಸ್‌ಗಳು ಕಂಡು ಬಂದಿವೆ.

ಒಂದು ಕಡೆ ಮಳೆಯ ಆರ್ಭಟ, ಇದರ ನಡುವೆ ಡೆಂಗ್ಯೂ ಸಮಸ್ಯೆ ಕೂಡ ಹೆಚ್ಚಾಗಿ ಕಂಡು ಬರುತ್ತಿದೆ. ಡೆಂಗ್ಯೂ ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಸೋಂಕು ತಗುಲಿದ ಹೆಣ್ಣು ಸೊಳ್ಳೆ ಕಚ್ಚಿದಾಗ ಹರಡುತ್ತದೆ. ಡೆಂಗ್ಯೂ ಹರಡುವ ವಾಹಕ ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಾಗಿದೆ. ಡೆಂಗ್ಯೂ ಇರುವ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ.

ಪ್ಲೇಟ್‌ಲೆಟ್‌ ಕಡಿಮೆಯಾದರೆ ಮಾತ್ರ ಡೆಂಗ್ಯೂ ಅಂತಲ್ಲ

ಪ್ಲೇಟ್‌ಲೆಟ್‌ ಕಡಿಮೆಯಾದರೆ ಮಾತ್ರ ಡೆಂಗ್ಯೂ ಅಂತಲ್ಲ

ಡೆಂಗ್ಯೂ ಬಂದಾಗ ಮುಖ್ಯವಾಗಿ ಪ್ಲೇಟ್‌ಲೆಟ್‌ ಕಡಿಮೆಯಾಗುತ್ತದೆ. ಇದ್ದಕ್ಕಿದ್ದಂತೆ ಪ್ಲೇಟ್‌ಲೆಟ್‌ ತುಂಬಾನೇ ಕಡಿಮೆಯಾಗುವುದು. ಕೆಲವರಲ್ಲಿ ಪ್ಲೇಟ್‌ಲೆಟ್‌ 40,000ಕ್ಕೂ ಕಡಿಮೆ ಇರುತ್ತದೆ. ಈ ರೀತಿಯಾದರೆ ತುಂಬಾ ಅಪಾಯ. ಪ್ಲೇಟ್‌ಲೆಟ್‌ ತುಂಬಾ ಕಡಿಮೆಯಾದರೆ ಸಾವು ಕೂಡ ಸಂಭವಿಸಬಹುದು.

ಪ್ಲೇಟ್‌ಲೆಟ್‌ ಕಡಿಮೆಯಾಗದಿದ್ದರೂ ಡೆಂಗ್ಯೂ ಪಾಸಿಟಿವ್‌ ಬರುತ್ತಿದೆ

ಪ್ಲೇಟ್‌ಲೆಟ್‌ ಕಡಿಮೆಯಾಗದಿದ್ದರೂ ಡೆಂಗ್ಯೂ ಪಾಸಿಟಿವ್‌ ಬರುತ್ತಿದೆ

ಕೆಲವರಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗಿರುವುದಿಲ್ಲ, ಆದರೆ ಡೆಂಗ್ಯೂ ಪಾಸಿಟಿವ್ ಬರುತ್ತಿದೆ.

ತುಂಬಾ ಜ್ವರ, ತಲೆನೋವು, ಕಣ್ಣುಗಳಲ್ಲಿ ನೋವು, ಮೈಕೈ ನೋವು, ತಲೆಸುತ್ತು, ವಾಂತಿ, ತ್ವಚೆಯಲ್ಲಿ ಗುಳ್ಳೆಗಳು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಡೆಂಗ್ಯೂ ಪರೀಕ್ಷೆ ಮಾಡಿಸಿ.

ಡೆಂಗ್ಯೂವಿನ ಅಪಾಯಕಾರಿ ಲಕ್ಷಣಗಳು

ಡೆಂಗ್ಯೂವಿನ ಅಪಾಯಕಾರಿ ಲಕ್ಷಣಗಳು

ಡೆಂಗ್ಯೂ ಶಾಕ್ ಸಿಂಡ್ರೋಮ್ (DSS) ಡೆಂಗ್ಯೂವಿನ ಅಪಾಯಕಾರಿ ಲಕ್ಷಣವಾಗಿದೆ. ಹೀಗಾದಾಗ ಡಿಹೆಚ್‌ಎಫ್‌ (Dengue Haemorrhagic Fever) ಉಂಟಾಗುತ್ತದೆ, ಆಗ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಅಪಾಯ.

ಕೆಲವರಲ್ಲಿ ಡೆಂಗ್ಯೂ ಉಂಟಾದಾಗ ಈ ರೀತಿಯ ಲಕ್ಷಣಗಳೂ ಕಂಡು ಬರಬಹುದು

* ಹೈಪೋಟೆನ್ಷನ್

* ತಲೆಸುತ್ತು

* ತುರಿಕೆ

* ಎದೆಬಡಿತ ಕಡಿಮೆಯಾಗುವುದು

* ಕಣ್ಣುಗಳ ಹಿಂದೆ ನೋವು, ರಕ್ತಸ್ರಾವ ಮುಂತಾದವು

ಡೆಂಗ್ಯೂ ಮತ್ತೆ ಬಂದರೆ ತುಂಬಾ ಅಪಾಯಕಾರಿ

ಕೆಲವರಲ್ಲಿ ಡೆಂಗ್ಯೂ ಮರುಕಳಿಸುತ್ತದೆ. ಒಂದು ಅಥವಾ ಎರಡು ವರ್ಷದ ಹಿಂದೆ ಡೆಂಗ್ಯೂ ಕಾಣಿಸಿಕೊಂಡಿದ್ದು ಮತ್ತೆ ಬಂದರೆ ಅಂಥವರಿಗೆ ತುಂಬಾ ಅಪಾಯಕಾರಿಯಾಗಿದೆ.

ಡೆಂಗ್ಯೂ ತಡೆಗಟ್ಟುವುದು ಹೇಗೆ?

ಡೆಂಗ್ಯೂ ತಡೆಗಟ್ಟುವುದು ಹೇಗೆ?

* ಡೆಂಗ್ಯೂ ಹರಡುವುದು ಸೊಳ್ಳೆಯಿಂದ. ಆದ್ದರಿಂದ ಸೊಳ್ಳೆಗಳನ್ನು ತಡೆಗಟ್ಟಬೇಕು.

* ಬೆಡ್‌ಗೆ ಸೊಳ್ಳೆ ಪರದೆ ಹಾಕಿ.

* ಸಂಜೆ ಮತ್ತು ಬೆಳಗ್ಗೆ ಕಿಟಕಿ, ಬಾಗಿಲುಗಳನ್ನು ಹಾಕಿ.

* ತುಂಬು ತೋಳಿನ ಉಡುಪು ಧರಿಸಿ.

* ಸೊಳ್ಳೆ ಕಚ್ಚದಂತೆ ಕ್ರೀಮ್‌ ಹಚ್ಚಿ ಅಥವಾ ಸ್ಪ್ರೇ ಬಳಸಿ.

* ಸಾಕಷ್ಟು ನೀರು ಕುಡಿಯಿರಿ

ಯಾವಾಗ ವೈದ್ಯರನ್ನು ಕಾಣಬೇಕು?

* ಮೇಲೆ ತಿಳಿಸಿದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಬೇಕು. ಬೇಗ ಚಿಕಿತ್ಸೆ ಪಡೆದಷ್ಟೂ ಬೇಗ ಗುಣಮುಖರಾಗಬಹುದು. ಒಂದೆರಡು ದಿನ ನೋಡೋಣ ಅಂತ ವೈದ್ಯರಿಗೆ ತೋರಿಸದೆ ಮನೆಯಲ್ಲಿಯೇ ಇದ್ದರೆ ಪ್ಲೇಟ್‌ಲೆಟ್ ಡೌನ್‌ ಆಗಿ ತೊಂದರೆಯಾಗಬಹುದು. ಆದ್ದರಿಂದ ಡೆಂಗ್ಯೂ ಸಮಸ್ಯೆಗೆ ಆರಂಭದಲ್ಲಿಯೇ ಅತ್ಯುತ್ತಮವಾದ ಚಿಕಿತ್ಸೆ ಪಡೆಯಿರಿ.

FAQ's
  • ಡೆಂಗ್ಯೂ ಜ್ವರವಿದ್ದಾಗ ಯಾವ ಆಹಾರಗಳು ಒಳ್ಳೆಯದು?

    * ತೆಳು ಮಾಂಸ, ಮೀನು
    * ಲಿವರ್
    * ಮೊಟ್ಟೆ
    * ಬೀನ್ಸ್, ಕಡಲೆ, ಧಾನ್ಯಗಳು, ಬಟಾಣಿ
    * ನೀರು, ಎಳನೀರು, ತಾಜಾ ಜ್ಯೂಸ್‌ಗಳು
    * ಕಿವಿ ಹಣ್ಣು
    * ಬ್ರೊಕೋಲಿ
    * ಪಪ್ಪಾಯಿ ಎಲೆ
    * ದಾಳಿಂಬೆ, ಅರಶಿಣ, ಕಿತ್ತಳೆ
    * ಪಾಲಾಕ್‌

  • ಯಾವ ಬಗೆಯ ಆಹಾರ ಒಳ್ಳೆಯದಲ್ಲ?

    * ಎಣ್ಣೆಯಲ್ಲಿ ಕರಿದ ಪದಾರ್ಥಗಳು
    * ಮಸಾಲೆ ಪದಾರ್ಥಗಳು
    * ಕೆಫೀನ್ ಇರುವ ಪಾನೀಯಗಳು (ಟೀ/ಕಾಫಿ)
    * ಮಾಂಸಾಹಾರ (ಎಣ್ಣೆಯಲ್ಲಿ ಫ್ರೈ ಮಾಡಿದ ಆಹಾರ)

English summary

Dengue Cases On The Rise In India: Here is How To Prevent Dengue in Kannada

Dengue Cases On The Rise In India: Here is How to prevent dengue in Kannada, read on...
Story first published: Wednesday, November 17, 2021, 11:42 [IST]
X
Desktop Bottom Promotion