For Quick Alerts
ALLOW NOTIFICATIONS  
For Daily Alerts

ಲಸಿಕೆ ಪಡೆದರೂ ತಗುಲಬಹುದು ಡೆಲ್ಟಾ ರೂಪಾಂತರ: ಅನ್‌ಲಾಕ್ ಎಂದು ನಿರ್ಲಕ್ಷ್ಯ ಬೇಡ್ವೆ ಬೇಡ

|

ಕರ್ನಾಟಕ ಅನ್‌ಲಾಕ್‌ ಆಗಿದೆ. ಕೊರೊನಾ ಕೇಸ್‌ ಕಡಿಮೆಯಾಗಿರುವುದರಿಂದ ರಾಜ್ಯ ಅನ್‌ಲಾಕ್‌ ಆಗಿದೆ, ಅಲ್ಲದೆ ಲಸಿಕೆ ಬೇರೆ ತೆಗೆದುಕೊಂಡಿದ್ದೇವೆ ಇನ್ನೇನು ಭಯವಿಲ್ಲ ಎಂದು ಬೇಕಾಬಿಟ್ಟೆ ಓಡಾಡಿದರೆ ಅಪಾಯ ತಪ್ಪಿದ್ದಲ್ಲ ಹುಷಾರ್‌!

ಕೊರೊನಾ 2ನೇ ಅಲೆ ದೇಶದ ಮೇಲೆ, ಎಲ್ಲಾ ವರ್ಗದ ಜನರ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿತ್ತು, ಇದೀಗ ಎರಡನೇ ಅಲೆ ಸ್ವಲ್ಪ ತಗ್ಗಿದರೂ ಮೂರನೇಯ ಅಲೆಯ ಆತಂಕವಿದ್ದೇ ಇದೆ, ಆದ್ದರಿಂದ ಜನರು ಈಗ ನಿರ್ಲಕ್ಷ್ಯ ತೋರಿದರೆ 3ನೇ ಅಲೆ ಉಂಟಾಗುವ ಸಾಧ್ಯತೆ ಇದೆ. ಇನ್ನು ಲಸಿಕೆ ತೆಗೆದುಕೊಂಡಿದ್ದೇವೆ ಎಂಬ ಧೈರ್ಯವೂ ಬೇಡ, ಏಕೆಂದರೆ ಕೊರೊನಾ ವೈರಸ್‌ ಹೊಸ ತಳಿ ಡೆಲ್ಟಾ ಪ್ಲಸ್ ಕೋವಿಡ್ 19 ಲಸಿಕೆ ಎರಡು ಡೋಸ್‌ ತೆಗೆದುಕೊಂಡವರಲ್ಲೂ ಕಂಡು ಬರುತ್ತಿದೆ.

ಡೆಲ್ಟಾ ಪ್ಲಸ್‌ ಕೋವಿಡ್‌ 19 ಲಸಿಕೆ ಪಡೆಯದವರಲ್ಲಿ ಗಂಭೀರ ಪರಿಣಾಮ ಬೀರುತ್ತಿದೆ

ಡೆಲ್ಟಾ ಪ್ಲಸ್‌ ಕೋವಿಡ್‌ 19 ಲಸಿಕೆ ಪಡೆಯದವರಲ್ಲಿ ಗಂಭೀರ ಪರಿಣಾಮ ಬೀರುತ್ತಿದೆ

ಅಮೆರಿಕದಲ್ಲಿ ಡೆಲ್ಟಾ ರೂಪಾಂತರದ ಆರ್ಭಟ ಶುರುವಾಗಿದೆ. ಭಾರತದಲ್ಲಿ 3ನೇ ಅಲೆಗೆ ಈ ವೈರಸ್‌ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಡೆಲ್ಟಾ ಪ್ಲಸ್ ಸೋಂಕು ತಗುಲಿದವರಲ್ಲಿ ಕೊರೊನಾ ಲಸಿಕೆ ಪಡೆದವರಿಗಿಂತ ಪಡೆಯದೇ ಇರುವವರಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಅದೇ ಡೋಸ್ ಕಂಪ್ಲೀಟ್‌ ಮಾಡಿದವರಲ್ಲಿ ಡೆಲ್ಟಾ ಪ್ಲಸ್‌ ಹೆಚ್ಚಿನ ಅಪಾಯ ಉಂಟು ಮಾಡುತ್ತಿಲ್ಲ ಎಂಬುವುದಾಗಿ ಅಧ್ಯಯನಗಳು ಹೇಳುತ್ತಿವೆ.

ಮಕ್ಕಳಿಗೆ ಅಪಾಯಕಾರಿ ಏಕೆ?

ಮಕ್ಕಳಿಗೆ ಅಪಾಯಕಾರಿ ಏಕೆ?

12 ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ಸಿಗುತ್ತಿಲ್ಲ, ಇದರಿಂದಾಗಿ ಡೆಲ್ಟಾ ಪ್ಲಸ್‌ ದೊಡ್ಡವರಿಗಿಂತ ಮಕ್ಕಳ ಬಗ್ಗೆ ತುಸು ಹೆಚ್ಚು ಜಾಗ್ರತೆವಹಿಸಬೇಕೆಂದು ತಜ್ಞರು ಹೇಳುತ್ತಿದ್ದಾರೆ.

ಕೆಲ ಮಕ್ಕಳಲ್ಲಿ, ಹದಿಹರೆಯದ ಪ್ರಾಯದವರಲ್ಲಿ ಕೋವಿಡ್‌ 19 ಲಕ್ಷಣಗಳು ತುಂಬಾ ಸಮಯ ಕಾಡುತ್ತಿವೆ ಎಂದು ಅಮೆರಿಕದಲ್ಲಿ ನಡೆಸಿದ ಅಧ್ಯಯನಗಳು ಹೇಳಿವೆ. ಮಕ್ಕಳಲ್ಲಿ ರೋಗ ಲಕ್ಷಣಗಳು ಗಂಭೀರವಾದರೆ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಒದಗಿಸಬೇಕು.

ಕೊರೊನಾ 2ನೇ ಅಲೆಯಲ್ಲಿ ರೋಗಿಗಳಿಗೆ ಬೆಡ್‌ ಸಿಗದೆ, ಸರಿಯಾದ ಆಕ್ಸಿಜನ್ ಸಿಗದೆ ಜನರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಕೊರೊನಾ 3ನೇ ಅಲೆ ಉಂಟಾದರೆ ಜನರ ಪ್ರಾಣಕ್ಕೆ ಅಪಾಯ ಉಂಟಾಗುವುದನ್ನು ಜನರು, ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಲಸಿಕೆ ಪಡೆಯಿರಿ

ಲಸಿಕೆ ಪಡೆಯಿರಿ

ದೇಶದಲ್ಲಿ ಕೊರೊನಾ ಲಸಿಕೆ 18 ವರ್ಷದ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದರೂ ಲಸಿಕೆಯ ಅಭಾವ ಇದೆ. ಲಸಿಕೆ ಸಿಕ್ಕಾಗ ಪಡೆಯಿರಿ, ಯಾವುದೇ ಕಾರಣಕ್ಕೆ ಹಿಂದೇಟು ಹಾಕಬೇಡಿ.

ಲಸಿಕೆ ಪಡೆದವರು ಸೋಂಕು ಹರಡಬಹುದೇ?

ಲಸಿಕೆ ಪಡೆದವರು ಸೋಂಕು ಹರಡಬಹುದೇ?

ಡೆಲ್ಟಾ ರೂಪಾಂತರ ವೈರಸ್‌ ಕೊರೊನಾ ಲಸಿಕೆ ಪಡೆದವರಲ್ಲೂ ಕಂಡು ಬರುತ್ತಿದೆ. ಡೆಲ್ಟಾ ರೂಪಾಂತರ ಲಸಿಕೆ ಪಡೆವರ ಮೇಲೆ ಹೆಚ್ಚು ಗಂಭೀರ ಬೀರುತ್ತಿಲ್ಲ, ಆದರೆ ಅವರಿಂದ ಮತ್ತೊಬ್ಬರಿಗೆ ಹರಡುವುದು. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಮಕ್ಕಳಿಗೆ, ಇನ್ನೂ ಲಸಿಕೆ ಪಡೆಯದವರಿಗೆ ಹರಡಿದರೆ ಪರಿಸ್ಥಿತಿ ತುಂಬಾ ಗಂಭೀರವಾಗುವುದು.

ಲಸಿಕೆ ಪಡೆದವರೂ, ಇನ್ನಷ್ಟೇ ಲಸಿಕೆ ಪಡೆಯಬೇಕಾದವರೂ ಎಲ್ಲರೂ ಜೋಪಾನ

ಲಸಿಕೆ ಪಡೆದವರೂ, ಇನ್ನಷ್ಟೇ ಲಸಿಕೆ ಪಡೆಯಬೇಕಾದವರೂ ಎಲ್ಲರೂ ಜೋಪಾನ

ಅನ್‌ಲಾಕ್ ಆಗಿದೆ ಇನ್ನೇನು ಭಯವಿಲ್ಲ ಎಂಬ ಯೋಚನೆ ಇದ್ದರೆ ಮೊದಲು ಅದನ್ನು ತಲೆಯಿಂದ ತೆಗೆದುಹಾಕಿ, ಇದುವರೆಗೆ ಹೇಗೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೀರಾ ಅದೇ ರೀತಿಯಲ್ಲಿ ಮುನ್ನೆಚ್ಚರಿಕೆಯಿಂದ ಇರಿ. ಮಾಸ್ಕ್‌ ಧರಿಸಿ, ಹೊರಗಡೆ ಹೋಗುವಾಗ ಆಗಾಗ ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

12 ವರ್ಷದ ಕೆಳಗಿನ ಮಕ್ಕಳನ್ನು ಮದುವೆ, ಸಮಾರಂಭಗಳಿಗೆ ಕರೆದುಕೊಂಡು ಹೋಗದಿರುವುದು ಸುರಕ್ಷಿತ, ಅವರನ್ನು ಬೇರೆ ಮಕ್ಕಳ ಜೊತೆ ಬೆರೆಯಲು ಬಿಡಬೇಡಿ. ಜಾಗ್ರತೆವಹಿಸಿದರೆ ಅಪಾಯವನ್ನು ತಪ್ಪಿಸಬಹುದು... ಆದ್ದರಿಂದ ಕೊರೊನಾ ನಿಯಮಗಳನ್ನು ತಪ್ಪದೇ ಪಾಲಿಸಿ.

English summary

Delta Variant Could Affect You Even If You're Vaccinated: Experts

Delta variant could affect you even if you're vaccinated: experts, read on...
Story first published: Wednesday, July 7, 2021, 15:25 [IST]
X
Desktop Bottom Promotion