For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಲಕ್ಷಣಗಳು: 2ನೇ ಅಲೆಗೂ ಮೊದಲಿನ ಅಲೆಗೂ ಇರುವ ವ್ಯತ್ಯಾಸವೇನು?

|

ಕೊರೊನಾ ಎರಡನೇ ಅಲೆ ಮತ್ತೆ ದೇಶದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆರೋಗ್ಯಇಲಾಖೆ ಹಾಗೂ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ, ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವುದೇ ದೊಡ್ಡ ಸಮಸ್ಯೆಯಾಗಿದೆ.

ಕೊರೊನಾ ಎರಡನೇ ಅಲೆಯೂ ಮೊದಲು ಬಂದ ವೈರಸ್‌ಗಿಂತ ಭಯಾನಕವಾಗಿದೆ. ಮೊದಲು ಬಂದ ವೈರಸ್‌ಗಿಂತ ಹೆಚ್ಚು ಜನರಿಗೆ ಬಾಧಿಸುತ್ತಿದೆ ಹಾಗೂ ಈ ವೈರಸ್‌ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ತುಂಬಾನೇ ಏರಿಕೆಯಾಗುತ್ತಿದೆ.

ಅದರಲ್ಲೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ, ನಮ್ಮ ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಕೇಸ್‌ಗಳು ನಿಯಂತ್ರಣ ಮೀರಿ ಬರುತ್ತಿವೆ. ಪ್ರತೀ ರಾಜ್ಯದಲ್ಲೂ ಈ ಹಿಂದಿಗಿಂತಲೂ 4 ಪಟ್ಟು ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ವರ್ಷದ ಹಿಂದೆ ಕಾಣಿಸಿದ್ದ ಕೊರೊನಾವೈರಸ್‌ಗೂ ಈಗ ಕಂಡು ಬರುತ್ತಿರುವ ಕೊರೊನಾ ವೈರಸ್‌ಗೂ ವ್ಯತ್ಯಾಸಗಳನ್ನು ನೋಡಬಹುದಾಗಿದೆ. ಕೊರೊನಾವೈರಸ್‌ ಎರಡನೇ ಅಲೆ ಮೊದಲಿಗಿಂತಲೂ ಭಯಾನಕವಾಗಿದೆ.

ಕೊರೊನಾ ವೈರಸ್‌ ಮೊದಲನೇ ಅಲೆ ಹಾಗೂ ಎರಡನೇ ಅಲೆಗೆ ವ್ಯತ್ಯಾಸ ಏನೆಂದು ನೋಡುವುದಾದರೆ:

ಕೊರೊನಾವೈರಸ್‌ ಎರಡನೇ ಅಲೆ ಶ್ವಾಸಕೋಶಕ್ಕೆ ಹೆಚ್ಚಿ ಹಾನಿ ಮಾಡುತ್ತಿದೆ

ಕೊರೊನಾವೈರಸ್‌ ಎರಡನೇ ಅಲೆ ಶ್ವಾಸಕೋಶಕ್ಕೆ ಹೆಚ್ಚಿ ಹಾನಿ ಮಾಡುತ್ತಿದೆ

ಕೊರೊನಾ ವೈರಸ್‌ ಎರಡನೇ ಅಲೆಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹೆಚ್ಚಿನವರು ಉಸಿರಾಟದ ತೊಂದರೆ ಉಂಟಾಗಿ, ಕೆಲ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದೆ ಸಾವನ್ನಪ್ಪುತ್ತಿದ್ದಾರೆ.

ಅದೇ ಕೊರೊನಾವೈರಸ್‌ ಮೊದಲನೇ ಅಲೆಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕೆಲವರಲ್ಲಿ ಅಷ್ಟೇ ಕಂಡು ಬರುತ್ತಿತ್ತು, ಸಾಮಾನ್ಯವಾಗಿ ಒಣ ಕೆಮ್ಮು, ಕೈ ಕಾಲುಗಳಲ್ಲಿ ನೋವು, ತಲೆ ನೋವು ಕಂಡು ಬರುತ್ತಿತ್ತು.

ಮಕ್ಕಳು ಹಾಗೂ ಚಿಕ್ಕ ಪ್ರಾಯದವರಲ್ಲಿ ಸೋಂಕು ಕಂಡು ಬರುತ್ತಿದೆ

ಮಕ್ಕಳು ಹಾಗೂ ಚಿಕ್ಕ ಪ್ರಾಯದವರಲ್ಲಿ ಸೋಂಕು ಕಂಡು ಬರುತ್ತಿದೆ

ಮೊದಲನೇ ಕೊರೊನಾವೈರಸ್‌ ಅಲೆಯಲ್ಲಿ ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ಸೋಂಕು ಹರಡುತ್ತಿತ್ತು. ಎರಡನೇ ಕೊರೊನಾವೈರಸ್‌ ಅಲೆಯಲ್ಲಿ ಹದಿ ಹರೆಯದವರಲ್ಲಿ ಹಾಗೂ ಮಕ್ಕಳಲ್ಲಿ ಮೊದಲಿಗಿಂತ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬರುತ್ತಿದೆ.

ಸಾವಿನ ಸಂಖ್ಯೆ ಕಡಿಮೆ ಇದೆ

ಸಾವಿನ ಸಂಖ್ಯೆ ಕಡಿಮೆ ಇದೆ

ಎರಡನೇ ಅಲೆ ಬಗ್ಗೆ ಒಂದು ಸಮಧಾನಕರ ಸಂಗತಿ ಎಂದರೆ ಸಾವಿನ ಸಂಖ್ಯೆ ಕಡಿಮೆ ಇದೆ. ಭಾರತದಲ್ಲಿ ದಿನಕ್ಕೆ 1000 ಆಸುಪಾಸಿನಲ್ಲಿ ಸಾವಿನ ಸಂಖ್ಯೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆ ಇದೆ.

ಕೋವಿಡ್‌ 19 ಪರೀಕ್ಷೆಯಲ್ಲಿ ರೂಪಾಂತರ ವೈರಸ್‌ ಪತ್ತೆಯಾಗುವುದು

ಕೋವಿಡ್‌ 19 ಪರೀಕ್ಷೆಯಲ್ಲಿ ರೂಪಾಂತರ ವೈರಸ್‌ ಪತ್ತೆಯಾಗುವುದು

ತಜ್ಞರ ಪ್ರಕಾರ RT-PCR ಪರೀಕ್ಷೆಯಲ್ಲಿ ಎರಡರಿಂದ ಮೂರು ಜೀನ್‌ಗಳನ್ನು ಪರೀಕ್ಷೆ ಮಾಡುವುದರಿಂದ ರೂಪಾಂತರ ಕೊರೊನಾವೈರಸ್‌ ಇದ್ದರೂ ಪತ್ತೆಯಾಗುವುದು.

ಕೊರೊನಾ 2ನೇ ಅಲೆಗೆ ಕಾರಣವೇನು?

ಕೊರೊನಾ 2ನೇ ಅಲೆಗೆ ಕಾರಣವೇನು?

ಭಾರತದಲ್ಲಿ ಕೊರೊನಾ ಅಲೆ ಹೆಚ್ಚಾಗಲು ಪ್ರಮುಖ 3 ಕಾರಣ ನೀಡಬಹುದು

* ಜನರು ತೋರಿದ ನಿರ್ಲಕ್ಷ್ಯ: ಜನರು ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಮಾಸ್ಕ್ ಧರಿಸದೇ ಹೋಡಾಡುವುದು, ಸ್ಯಾನಿಟೈಸರ್ ಬಳಸದಿರುವುದು, ಹೆಚ್ಚು ಜನ ಸೇರಿ ಸಭೆ, ಸಮಾರಂಭ ನಡೆಸುವುದು.

* ಸರ್ಕಾರದ ನಿರ್ಲಕ್ಷ್ಯ: ರಾಜಕೀಯ ಸಮಾರಂಭಗಳು, ಆರಂಭದಲ್ಲಿಯೇ ಕೊರೊನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೇ ಹೋದದ್ದು ಇವು ಕೂಡ ಕೊರೊನಾ ಹೆಚ್ಚಾಗಲು ಒಂದು ಕಾರಣವಾಗಿದೆ.

* ಸರ್ಕಾರ ನಿಯಮ ವಿಧಿಸಿದರೂ ಪಾಲಿಸಲು ಜನರ ನಿರಾಕರಣೆ

ಮಾಸ್ಕ್‌ ಧರಿಸಿ ಎಂದು ಕಡ್ಡಾಯಗೊಳಿಸಿದರೂ ಜನರು ಅದನ್ನು ಪಾಲಿಸಲು ಹಿಂದೇಟು ಹಾಕುತ್ತಿರುವುದು, ದೈಹಿಕ ಅಂತರ ಕಾಯ್ದುಕೊಳ್ಳದಿರುವುದು ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ.

Reference:Livemint.com

timesofindia.indiatimes.com

English summary

Covid-19 Symptoms : Difference Between Second Wave and First Wave

Covid-19 Symptoms : Here are difference between second wave and first wave, Read on,
Story first published: Tuesday, April 20, 2021, 17:34 [IST]
X
Desktop Bottom Promotion