For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಸೋಂಕಿತರ ಕಣ್ಣೀರಿನಿಂದಲೂ ಹರಡಬಹುದು ಕೊರೊನಾವೈರಸ್: ಅಧ್ಯಯನ ವರದಿ

|

ಕೊರೊನಾ ಒಬ್ಬರಿಂದ-ಒಬ್ಬರಿಂದ ಡ್ರಾಪ್‌ಲೆಟ್ಸ್‌ ಅಂದರೆ ನಮ್ಮ ಬಾಯಿಯಲ್ಲಿರುವ ಎಂಜಲಿನ ಕಣಗಳ ಮೂಲಕ ಹರಡುವುದಾಗಿ ತಿಳಿದಿತ್ತು. ಈ ಕಾರಣದಿಂದಲೇ ಕೊರೊನಾ ತಡೆಗಟ್ಟಲು ಎಲ್ಲರೂ ಮಾಸ್ಕ್ ಧರಿಸಬೇಕೆಂದು ಹೇಳುವುದು. ಮಾಸ್ಕ್‌ ಧರಿಸಿದಾಗ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಡ್ರಾಪ್‌ಲೆಟ್ಸ್‌ ಹೊರಕ್ಕೆ ಹಾರುವ ಸಾಧ್ಯತೆ ಕಡಿಮೆ. ಒಂದು ವೇಳೆ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಅವರ ಡ್ರಾಪ್‌ಲೆಟ್ಸ್ ಮೂಲಕ ಹೊರ ಬಂದರೂ ನಾವು ಮಾಸ್ಕ್ ಧರಿಸಿದಾಗ ಅದು ನಮಗೆ ಹರಡುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕೆ ಮಾಸ್ಕ್ ಧರಿಸಲಾಗುತ್ತಿದೆ.

ಆದರೆ ಇತ್ತೀಚೆಗೆ ನಡೆಸಿದ ಅಧ್ಯಯನ ವರದಿ ಕಣ್ಣೀರಿನಿಂದಲೂ ಸೋಂಕು ಹರಡುವುದು ಎಂದು ಹೇಳಿದೆ. ಆದರೆ ಪ್ರಮುಖವಾಗಿ ಕೆಮ್ಮಿದಾಗ ಅಥವಾ ಸೀನಿದಾಗ ಬರುವ ಡ್ರಾಪ್‌ಲೆಟ್ಸ್‌ನಿಂದಲೇ ಹರಡುವುದು, ಆದರೆ ಸೋಂಕಿತರ ಕಣ್ಣೀರಿನ ಮೂಲಕವು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ಹೇಳಿದೆ.

ಅಧ್ಯಯನ ವರದಿ ಏನು ಹೇಳಿದೆ?

ಅಧ್ಯಯನ ವರದಿ ಏನು ಹೇಳಿದೆ?

120 ಕೋವಿಡ್‌ ಪಾಸಿಟಿವ್‌ ಸೋಂಕಿತರು ಈ ಅಧ್ಯಯನದಲ್ಲಿ ಒಳಪಟ್ಟಿದ್ದರು. ಅದರಲ್ಲಿ ಶೇ.52ರಷ್ಟು ಹೆಚ್ಚೇನು ಗಂಭೀರ ರೋಗ ಲಕ್ಷಣಗಳನ್ನು ಹೊಂದಿರಲಿಲ್ಲ, ಶೇ.48 ಸೋಂಕಿತರು ರೋಗ ಲಕ್ಷಣಗಳು ತುಂಬಾ ಗಂಭೀರ ಸ್ಥಿತಿಯಲ್ಲಿ ಇರುವವರು ಆಗಿದ್ದರು.

ಅವರಲ್ಲಿ ಶೇ. 17ರಷ್ಟು ಸೋಂಕಿತರ ಕಣ್ಣೀರನ್ನು RT-PCR ಪರೀಕ್ಷೆ ಮಾಡಿಸಿದಾಗ ಅದರಲ್ಲಿಶೇ. 9ರಷ್ಟು ಸೋಂಕಿತರ ಕಣ್ಣೀರಿನಲ್ಲಿ ಕೊರೊನಾವೈರಸ್ ಪತ್ತೆಯಾಗಿದೆ.

ಕೊರೊನಾ ಸೋಂಕಿತರ ಬಗ್ಗೆ ತುಂಬಾ ಮುಚ್ಚೆಚ್ಚರಿಕೆ ವಹಿಸಬೇಕು

ಕೊರೊನಾ ಸೋಂಕಿತರ ಬಗ್ಗೆ ತುಂಬಾ ಮುಚ್ಚೆಚ್ಚರಿಕೆ ವಹಿಸಬೇಕು

ಕೊರೊನಾ ಸೋಂಕಿತರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅವರನ್ನು ಮುಟ್ಟುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಭಾರತದಲ್ಲಿ ಮೂರನೇ ಅಲೆ

ಭಾರತದಲ್ಲಿ ಮೂರನೇ ಅಲೆ

ಐಸಿಎಂಆರ್‌ (Indian Council Of Medical Reserach)ಅಧ್ಯಯನ ವರದಿ ಹಾಗೂ ಮತ್ತಿತರ ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಆಗಸ್ಟ್‌ ಕೊನೆಯ ವಾರದಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ.

ಕೆಲ ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿವೆ. ಕೇರಳದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದರೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ನಿಧಾನಕ್ಕೆ ಹೆಚ್ಚಾಗುತ್ತಿವೆ.

ಆದರೆ ತಜ್ಞರು ಭಾರತದಲ್ಲಿ ಕೊರೊನಾ 3ನೇ ಅಲೆ ಇನ್ನೂ ಪ್ರಾರಂಭವಾಗಿಲ್ಲ, ಆಗಸ್ಟ್‌ನಲ್ಲಿ ಇರಬಹುದು ಎಂದು ಊಹಿಸಲಾಗಿತ್ತು, ಆದರೆ ಇನ್ನೂ ಸ್ವಲ್ಪ ತಡವಾಗಿ ಅಂದರೆ ಡಿಸೆಂಬರ್‌ ಆಸುಪಾಸಿನಲ್ಲಿ ಕಂಡು ಬರಬಹುದು ಎಂದು ಹೇಳಿದ್ದಾರೆ.

ಕೊರೊನಾ 3ನೇ ಅಲೆ 2ನೇ ಅಲೆಯಂತೆ ಅನೇಕ ನಷ್ಟಗಳನ್ನು ತರಲ್ಲ ಎಂದು ಕೆಲ ತಜ್ಞರು ಹೇಳಿದರೆ, 3ನೇ ಅಲೆಗೆ ಕಾರಣವಾಗುವ ರೂಪಾಂತರ ತಳಿ ಅಪಾಯಕಾರಿಯಾಗಿದೆ ಎಂದು ಇನ್ನು ಕೆಲ ತಜ್ಞರು ಹೇಳುತ್ತಿದ್ದಾರೆ. 3ನೇ ಅಲೆಯ ಬಗ್ಗೆ ಮಿಶ್ರ ಅಭಿಪ್ರಾಯವಿದ್ದು 3ನೇ ಅಲೆ ಹೇಗಿರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಲ್ಲ

ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಲ್ಲ

ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಏಮ್ಸ್ ಹಾಗೂ ವಿಶ್ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್‌ ಅನ್ನು ಎದುರಿಸುವ ಪ್ರತಿಕಾಯಗಳು ಮಕ್ಕಳ ದೇಹದಲ್ಲಿ ದೊಡ್ಡವರಿಗಿಂತ ಅಧಿಕವಿದೆ ಎಂಬುವುದು ತಿಳಿದು ಬಂದಿದೆ.

ಕೊರೊನಾ 3ನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ಅಗ್ಯತ

ಕೊರೊನಾ 3ನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ಅಗ್ಯತ

ಲಾಕ್‌ಡೌನ್ ಇಲ್ಲ ಎಂದು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೊರೊನಾ 2ನೇ ಅಲೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದಂತೆಯೇ ಈಗಲೂ ಪಾಲಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಕೈಗಳನ್ನು ಆಗಾಗ ತೊಳೆಯಿರಿ, ಸಾಮಾಜಿಕ ಅಂತರ ಪಾಲಿಸಿ.

ಬಹು ಮುಖ್ಯವಾಗಿ ಕೊರೊನಾ ಲಸಿಕೆ ಪಡೆಯಿರಿ.

English summary

Coronavirus Positive Patients Tears Can Be Source of SAR-COV-2 Infection, Study Finds

Coronavirus positive patients tears Can Be source of SAR-COV-2 infection, Study Finds...
Story first published: Wednesday, August 4, 2021, 9:16 [IST]
X
Desktop Bottom Promotion