For Quick Alerts
ALLOW NOTIFICATIONS  
For Daily Alerts

ವಯಾಗ್ರ ಸೇವಿಸುವ ಪುರುಷರಿಗೆ ಹೃದಯಾಘಾತ ಹಾಗೂ ಈ ಆರೋಗ್ಯ ಸಮಸ್ಯೆಗಳಿರಲ್ಲ!

|

ಪುರುಷರು ವಯಾಗ್ರ ತೆಗೆದುಕೊಳ್ಳುವುದರಿಂದ ಬೆಡ್‌ನಲ್ಲಿ ತೃಪ್ತಿ ಮಾತ್ರವಲ್ಲ ಇದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂಬುವುದು ಗೊತ್ತೇ? ಅನೇಕ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ವಯಾಗ್ರ ತೆಗೆದುಕೊಳ್ಳುತ್ತಾರೆ.

Viagra

ಕೆಲವರಿಗೆ ಶೀಘ್ರ ಸ್ಖಲನ ಸಮಸ್ಯೆ ಇರುತ್ತದೆ ಅಂಥವರು ವಯಾಗ್ರ ತೆಗೆದುಕೊಂಡು ಲೈಂಗಿಕ ಸುಖ ಪಡೆಯಲು ಬಯಸುತ್ತಾರೆ. ವಯಾಗ್ರ ಹೆಚ್ಚಾಗಿ ತೆಗೆದುಕೊಂಡು ಅದರಿಂದ ಅಡ್ಡಪರಿಣಾಮ ಉಂಟಾಗಿರುವ ಅನೇಕ ವರದಿಗಳಿವೆ. ಆದರೆ ವಯಾಗ್ರ ತೆಗೆದುಕೊಳ್ಳುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.

ವಯಾಗ್ರ ಪುರುಷರ ಆರೋಗ್ಯ ಹೆಚ್ಚಿಸುತ್ತೆ ಎಂದು ACC (American College of Cardiology) ಜರ್ನಲ್ ವರದಿ ಮಾಡಿದೆ.

ಹೃದಯಾಘಾತ ಅಪಾಯ ಕಡಿಮೆ ಮಾಡುವುದರ ಜೊತೆಗೆ ಯಾವೆಲ್ಲಾ ಪ್ರಯೋಜನಗಳಿವೆ ಎಂದು ಅಧ್ಯಯನ ವರದಿ ಹೇಳಿದೆ ನೋಡಿ:

ವಯಾಗ್ರ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತೆ

ವಯಾಗ್ರ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತೆ

ಅಪಧಮನಿಗಳಲ್ಲಿ ಬ್ಲಾಕ್‌ (ತಡೆ) ಉಂಟಾದಾಗ ಹೃದಯಕ್ಕೆ ರಕ್ತ ಪೂರೈಕೆಯಾಗಲು ಕಷ್ಟವಾಗುವುದು. ಇದರಿಂದಾಗ ಹೃದಯ ಬಡಿತ ಹೆಚ್ಚಾಗುವುದು, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಮೈ ತುಂಬಾ ಬೆವರುವುದು, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಹೃದಯಾಘಾತ ಉಂಟಾಗುವುದು.

ಅದೇ ವಯಾಗ್ರ ತೆಗೆದುಕೊಳ್ಳುವ ಪುರುಷರಲ್ಲಿ ಹೃದಯಾಘಾತ ಸಾಧ್ಯತೆ ಕಡಿಮೆಯಾಗುವುದಾಗಿ ವರದಿ ಹೇಳಿದೆ. ಸ್ವೀಡಿಷ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ 16,548 ಪುರುಷರು ಭಾಗವಹಿಸಿದ್ದರು. ಆಗ ವಯಾಗ್ರ ತೆಗೆದುಕೊಳ್ಳುತ್ತಿರುವ ಪುರುಷರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂಬ ಅಂಶ ತಿಳಿದು ಬಂದಿದೆ.

ಇದರ ಜೊತೆಗೆ ವಯಾಗ್ರ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಈ ಪ್ರಯೋಜನಗಳೂ ಇವೆ:

ಪಾರ್ಶ್ವವಾಯು ಅಪಾಯ ಕಡಿಮೆ ಮಾಡುವುದು

ಪಾರ್ಶ್ವವಾಯು ಅಪಾಯ ಕಡಿಮೆ ಮಾಡುವುದು

ವಯಾಗ್ರವನ್ನು ಮಿತಿಯಲ್ಲಿ ತೆಗೆದುಕೊಳ್ಳುವುದರಿಂದ ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯು ಸಮಸ್ಯೆ ತಡೆಗಟ್ಟಬಹುದು.

 ಸ್ಟಾಮಿನಾ ಹೆಚ್ಚಿಸುತ್ತೆ

ಸ್ಟಾಮಿನಾ ಹೆಚ್ಚಿಸುತ್ತೆ

ಈ ವಯಾಗ್ರ ಮಾತ್ರೆಯನ್ನು ಮಿತಿಯಲ್ಲಿ ತೆಗೆದುಕೊಳ್ಳುವುದುರಿಂದ ಸ್ಟಾಮಿನಾ ಹೆಚ್ಚುವುದು. ಇದರಿಂದ ಗುಡ್ಡ, ಪರ್ವತ ಏರುವವರಿಗೆ ಅನುಕೂಲವಾಗುವುದು, ಶ್ವಾಸಕೋಶ ಸಮಸ್ಯೆ ಕಡಿಮೆ ಮಾಡುತ್ತೆ.

 ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತೆ

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತೆ

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತೆ. ಅಲ್ಲದೆ ಹೊಟ್ಟೆ ಖಾಲಿಯಿದ್ದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುವುದು, ಅದನ್ನು ನಿಯಂತ್ರಿಸಲು ಸಹಕಾರಿ.

ವಯಾಗ್ರದಿಂದ ನೀವು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಯೋಜನವಿದೆ ಎಂದು ಮಿತಿಮೀರಿ ಸೇವಿಸಬೇಡಿ. ಮಿತಿಯಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ.

English summary

Consumption of Viagra may reduce the risk of heart diseases in men: Study

Consumption of Viagra may reduce the risk of heart diseases in men: Study, Read on....
Story first published: Saturday, April 23, 2022, 20:16 [IST]
X
Desktop Bottom Promotion