For Quick Alerts
ALLOW NOTIFICATIONS  
For Daily Alerts

ಗರ್ಭಕಂಠ ಕ್ಯಾನ್ಸರ್: ಲಕ್ಷಣಗಳು ಹಾಗೂ ತಡೆಗಟ್ಟುವುದು ಹೇಗೆ?

|

ಕ್ಯಾನ್ಸರ್ ಎಂಬುವುದೇ ಮಾರಕ ರೋಗ, ಇದರಲ್ಲಿ ಅನೇಕ ವಿಧಗಳಿವೆ, ಅದರಲ್ಲೊಂದು ಗರ್ಭಕಂಠದ ಕ್ಯಾನ್ಸರ್. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್ ತುಂಬಾನೇ ಅಪಾಯಕಾರಿ. ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಜೀವಕೋಶಗಳಲ್ಲಿ ಬದಲಾವಣೆಯಾದಾಗ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದು. ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸಬಹುದು, ಆದರೆ ದುರಾದೃಷ್ಟವಶಾತ್‌ ಹೆಚ್ಚಿನವರಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದೇ ಇಲ್ಲ, ಹೀಗಾಗಿ ಜೀವಕ್ಕೆ ಅಪಾಯ ಉಂಟಾಗುವುದು.

ಗರ್ಭಕಂಠದ ಕ್ಯಾನ್ಸರ್ ಅನ್ನು ಲಸಿಕೆ ಪಡೆಯುವುದರಿಂದ ತಡೆಗಟ್ಟಬಹುದು, 9-45 ವರ್ಷದವರೆಗಿನ ಮಹಿಳೆಯರಿಗೆ ಲಸಿಕೆ ಪಡೆಯುವಂತೆ ಸಿಡಿಸಿ ಸಲಹೆ ನೀಡಿದೆ.

ಯಾರಿಗೆ ಗರ್ಭಕಂಠ ಕ್ಯಾನ್ಸರ್ ಅಪಾಯ ಹೆಚ್ಚು?

ಯಾರಿಗೆ ಗರ್ಭಕಂಠ ಕ್ಯಾನ್ಸರ್ ಅಪಾಯ ಹೆಚ್ಚು?

ಹೆಚ್‌ಐವಿ ಇರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ನ ಅಪಾಯ ಹೆಚ್ಚು ಅಲ್ಲದೆ ಕೆಲವೊಂದು ಜೀವನಶೈಲಿ ಕೂಡ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದ. ಬೇಗನೆ ಋತುಮತಿಯಾಗುವುದು, ಧೂಮಪಾನ, ಗರ್ಭನಿರೋಧಕ ಮಾತ್ರೆಗಳು, ಮೆನೋಪಾಸ್‌ ನಿಧಾನವಾಗುವುದು, ಒಂದಕ್ಕಿಂತ ಹೆಚ್ಚಿನವರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಇವೆಲ್ಲಾ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು.

ಆಹಾರಶೈಲಿ ಕೂಡ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಒಬೆಸಿಟಿ ಇರುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬೆಳೆಯಬಹುದು ಯಾರು ಹಣ್ಣು ಮತ್ತು ತರಕಾರಿಗಳನ್ನು ಕಡಿಮೆ ತಿನ್ನುತ್ತಾರೋ ಅವರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಹೆಚ್ಚು.

ಗರ್ಭ ಕಂಠದ ಕ್ಯಾನ್ಸರ್ ಲಕ್ಷಣಗಳೇನು?

ಗರ್ಭ ಕಂಠದ ಕ್ಯಾನ್ಸರ್ ಲಕ್ಷಣಗಳೇನು?

ಮುಟ್ಟಿನ ನಂತರ ಕೂಡ ಆಗಾಗ ಸ್ವಲ್ಪ ರಕ್ತ ಕಲೆ ಕಂಡು ಬರುವುದು, ಲೈಂಗಿಕ ಕ್ರಿಯೆ ಬಳಿಕ ರಕ್ತಸ್ರಾವ, ಬಿಳುಪು ಹೋಗುವುದು ಹೆಚ್ಚುವುದು, ಲೈಂಗಿಕ ಕ್ರಿಯೆ ವೇಳೆ ನಿಔಆಗುವುದು, ಮೆನೋಪಾಸ್ ಆದ ಬಳಿಕ ಕೂಡ ರಕ್ತಸ್ರಾವವಾಗುವುದು, ಜನನೇಂದ್ರೀಯ ಭಾಗದಲ್ಲಿ ತುರಿಕೆ ಕಂಡು ಬರುವುದು, ತಲೆಸುತ್ತು, ಆಗಾಗ ಮೂತ್ರ ವಿಸರ್ಜನೆ, ಕೆಳಹೊಟ್ಟು ಉಬ್ಬುವುದು ಇವೆಲ್ಲಾ ಗರ್ಭಕಂಠ ಕ್ಯಾನ್ಸರ್‌ ಲಕ್ಷಣಗಳಾಗಿವೆ.

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಟಿಪ್ಸ್

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಟಿಪ್ಸ್

* ಲಸಿಕೆ ಪಡೆಯುವುದು: ಸಿಡಿಸಿ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಒಳ್ಳೆಯದೆಂದು ಸಲಹೆ ನೀಡಿದೆ.

* ಧೂಮಪಾನ ವರ್ಜಿಸಿ: ಧೂಮಪಾನದ ಅಭ್ಯಾಸವಿದ್ದರೆ ಅದನ್ನು ಬಿಡುವುದರಿಂದ ದೇಹದಲ್ಲಿ ರೋಗ ನಿರೊಧಕ ಶಕ್ತಿ ಹೆಚ್ಚುವುದು.

* ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದು, ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ.

* ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ: ಗರ್ಭನಿರೋಧಕ ಮಾತ್ರೆಗಳಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯವಿರುವುದರಿಂದ ಮಾತ್ರೆ ಬದಲಿಗೆ ಇತರ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿ.

*ಒಂದಕ್ಕಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಅಪಾಯಕಾರಿ

* ನಿಯಮಿತ ಪರೀಕ್ಷೆ ಮಾಡಿಸಿ.

* ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಚಿಕಿತ್ಸೆಯೇನು?

ಗರ್ಭಕಂಠದ ಕ್ಯಾನ್ಸರ್‌ ಆರಂಭದ ಹಂತದಲ್ಲಿ ಪತ್ತೆಯಾದರೆ ಬೇಗನೆ ಗುಣಪಡಿಸಬಹುದು, ಆದರೆ ಕ್ಯಾನ್ಸರ್ 2ನೇ ಅಥವಾ 3ನೇ ಹಂತಕ್ಕೆ ಹೋದರೆ ಕೀಮೋ ಥೆರಪಿ ಅಥವಾ ರೇಡಿಯೋ ಥೆರಪಿ ಮಾಡಿಸಬೇಕಾಗುತ್ತದೆ.

English summary

Cervical Cancer: Symptoms and Lifestyle Changes To prevent the Disease in Kannada

Cervical cancer: Symptoms and Lifestyle changes to prevent the disease in Kannada,
X
Desktop Bottom Promotion