For Quick Alerts
ALLOW NOTIFICATIONS  
For Daily Alerts

ಉತ್ತಮ ಅರೋಗ್ಯಕ್ಕಾಗಿ ಪ್ರತಿದಿನ ಗೋಡಂಬಿ ತಿನ್ನಿ

|

ಡ್ರೈ ಫ್ರೂಟ್ಸ್ ಗಳಲ್ಲಿ ಒಂದಾದ ಗೋಡಂಬಿ ಹೆಚ್ಚಿನವರ ಫೇವರೆಟ್. ಇದು ಕಬ್ಬಿಣ ಮತ್ತು ಸತುಗಳಿಂದ ಸಮೃದ್ಧವಾಗಿದ್ದು, ರಕ್ತಹೀನತೆಯನ್ನು ಸರಿಮಾಡುವಲ್ಲಿ ಅತ್ಯಂತ ಪರಿಣಾಮಕಾರಿ. ಜೊತೆಗೆ ವಿಟಮಿನ್ ಸಿ, ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಕಬ್ಬಿಣವನ್ನು ಹೊಂದಿದ್ದು, ನಿಮ್ಮ ತ್ವಚೆಗೆ ಕಾಂತಿಯುತ ಹೊಳಪನ್ನು ನೀಡುವುದು. ಗೋಡಂಬಿಯಲ್ಲಿರುವ ಹೆಚ್ಚಿನ ಮಟ್ಟದ ತಾಮ್ರ ಮತ್ತು ರಂಜಕದಿಂದಾಗಿ ಕೂದಲಿಗೂ ಸಹ ಪ್ರಯೋಜನಕಾರಿಯಾಗಿದೆ.

ಒಂದು ಪದಾರ್ಥ ನಮ್ಮ ದೇಹಕ್ಕೆ ಇಷ್ಟೆಲ್ಲಾ ಲಾಭಗಳನ್ನ ನೀಡುವುದು ಎಂದರೆ ನಂಬಲಾಗುತ್ತಿಲ್ಲ ಅಲ್ಲವೇ? ಹೌದು, ಗೋಡಂಬಿ ಆರೋಗ್ಯ ಸೇರಿದಂತೆ, ಕೂದಲು, ಕಣ್ಣು ಹಾಗೂ ತ್ವಚೆಗೆ ಬಹಳಷ್ಟು ಒಳ್ಳೆಯದು. ಹಾಗಾದರೆ ಬನ್ನಿ, ಈ ಸೂಪರ್‌ಫುಡ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಗೋಡಂಬಿಯಿಂದ ಚರ್ಮ, ಕಣ್ಣು ಹಾಗೂ ಕೂದಲಿಗಿರುವ ಪ್ರಯೋಜನಗಳೇನು ಎಂಬುದನ್ನು ವಿವರವಾಗಿ ಈ ಕೆಳಗೆ ನೀಡಲಾಗಿದೆ:

ಕಾಂತಿಯುತ ತ್ವಚೆ ನೀಡುವುದು:

ಕಾಂತಿಯುತ ತ್ವಚೆ ನೀಡುವುದು:

ನಾವೆಲ್ಲರೂ ಆರೋಗ್ಯಕರ, ಮೃದು ಮತ್ತು ಸುಕ್ಕುಗಳಿಲ್ಲದ ತ್ವಚೆಯನ್ನು ಬಯಸುತ್ತೇವೆ. ಈ ಗೋಡಂಬಿ ಇಂತಹ ಚರ್ಮ ಪಡೆಯಲು ಸಹಾಯ ಮಾಡುತ್ತದೆ. ಗೋಡಂಬಿಯು ಸತು, ಮೆಗ್ನೀಸಿಯಮ್, ಸೆಲೆನಿಯಮ್, ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿದ್ದು ಮೈಬಣ್ಣವನ್ನು ಬಣ್ಣವನ್ನು ಸುಧಾರಿಸುತ್ತದೆ ಮತ್ತು ಸುಕ್ಕುಗಳನ್ನು ತಡೆದು, ತಾರುಣ್ಯ ಪೂರ್ಣ ತ್ವಚೆಯನ್ನು ನೀಡುತ್ತದೆ.

ಕಣ್ಣುಗಳಿಗೆ ವರದಾನ:

ಕಣ್ಣುಗಳಿಗೆ ವರದಾನ:

ಗೋಡಂಬಿಯಲ್ಲಿ ಜೀಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕವಿದೆ. ಈ ವರ್ಣದ್ರವ್ಯವು ನಮ್ಮ ಕಣ್ಣಿನ ರೆಟಿನಾದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸಿ, ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ. ಆದ್ದರಿಂದ ದಿನಕ್ಕೆ ಒಂದು ಗೋಡಂಬಿ ತಿನ್ನುವುದು ಕಣ್ಣಿಗೆ ಬಹಳ ಒಳ್ಳೆಯದು.

ವಯಸ್ಸಾಗುವಿಕೆಯ ಲಕ್ಷಣ ನಿಧಾನಗೊಳಿಸುವುದು:

ವಯಸ್ಸಾಗುವಿಕೆಯ ಲಕ್ಷಣ ನಿಧಾನಗೊಳಿಸುವುದು:

ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಅದು ನಿಮ್ಮ ಚರ್ಮದಲ್ಲಿ ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ನಿಮ್ಮ ಚರ್ಮವು ಕೋಶಗಳನ್ನು ತ್ವರಿತವಾಗಿ ಪುನರುತ್ಪಾದಿಸಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ದೇಹವು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇವುಗಳು ಮುಖದಲ್ಲಿ ಸುಕ್ಕು, ಸೂಕ್ಷ್ಮ ರೇಖೆಗಳನ್ನು ಉಂಟುಮಾಡಲು ಕಾರಣವಾಗುವಂತಹುಗಳು.

ಸ್ಟ್ರೆಚ್ ಮಾರ್ಕ್ಸ್ ಕಡಿಮೆಮಾಡುವುದು:

ಸ್ಟ್ರೆಚ್ ಮಾರ್ಕ್ಸ್ ಕಡಿಮೆಮಾಡುವುದು:

ಈ ಗುರುತುಗಳನ್ನು ಮರೆಮಾಡಲು ಎಲ್ಲವನ್ನೂ ಪ್ರಯತ್ನಿಸಿದರೂ, ಇನ್ನೂ ಯಶಸ್ವಿಯಾಗಲಿಲ್ಲವೇ? ಸರಿ, ಇಲ್ಲಿ ನಿಮ್ಮ ರಕ್ಷಣೆಗೆ ಗೋಡಂಬಿ ಬರಬಹುದು. ಏಕೆಂದರೆ, ಗೋಡಂಬಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಅದು ತೂಕ ಹೆಚ್ಚಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ನಿಮ್ಮ ಮಾರ್ಕ್ ಗಳು ವೇಗವಾಗಿ ಹಿಗ್ಗುವುದಿಲ್ಲ.

ಕಲೆಗಳ ವಿರೋಧಿ:

ಕಲೆಗಳ ವಿರೋಧಿ:

ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸಲು ಸುಲಭವಾದ ಮಾರ್ಗವನ್ನು ಹುಡುಕುತ್ತಿದ್ದರೆ, ಅದಕ್ಕಾಗಿ ಅಲಂಕಾರಿಕ ಉತ್ಪನ್ನಗಳನ್ನು ಬಳಸಲು ಇಷ್ಟವಿಲ್ಲದಿದ್ದರೆ, ಗೋಡಂಬಿಯು ನಿಮಗೆ ಸಹಾಯ ಮಾಡಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಕಲೆಗಳು ಮತ್ತು ಸೂರ್ಯನಿಂದಾದ ಟ್ಯಾನ್ ಗಳನ್ನು ಕಡಿಮೆ ಮಾಡುತ್ತದೆ.

ಹೊಳೆಯುವ ಕೂದಲು:

ಹೊಳೆಯುವ ಕೂದಲು:

ಪ್ರತಿ ಹುಡುಗಿಯೂ ಉದ್ದವಾದ, ಹೊಳೆಯುವ ಕೂದಲನ್ನು ಆಶಿಸುತ್ತಾಳೆ. ಗೋಡಂಬಿ ಆ ಆಸೆಯನ್ನು ಸಾಕಾರಗೊಳಿಸಬಹುದು! ಇದರಲ್ಲಿ ತಾಮ್ರದ ಅಂಶ ಹೇರಳವಾಗಿದ್ದು, ಅದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲ, ಕೂದಲನ್ನು ಮೃದು ರೇಷ್ಮೆಯಂತೆ ಮಾಡುತ್ತದೆ. ಜೊತೆಗೆ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.

ಕೂದಲು ಉದುರುವಿಕೆ ತಡೆಯುವುದು:

ಕೂದಲು ಉದುರುವಿಕೆ ತಡೆಯುವುದು:

ಗೋಡಂಬಿಯಲ್ಲಿ ಪೊಟ್ಯಾಶಿಯಂ ಮತ್ತು ಕೂದಲುದುರಿವಕೆ ತಡೆಯವ ಇತರ ಅಗತ್ಯ ಪೋಷಕಾಂಶಗಳು ತುಂಬಿದ್ದು, ಅನಗತ್ಯವಾಗಿ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

English summary

Cashew Nuts Benefits For Skin, Hair And Eyes in Kannada

Cashews do more good for your skin, hair, and body than you can imagine. Here we talking about Cashew Nuts Benefits For Skin, Hair And Eyes in Kannada, read on
Story first published: Saturday, August 28, 2021, 17:35 [IST]
X
Desktop Bottom Promotion