Just In
- 2 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ವೃಷಭ, ವೃಶ್ಚಿಕ, ಮಕರ ರಾಶಿಯವರಿಗೆ ಆರ್ಥಿಕವಾಗಿ ಶುಭ ದಿನವಲ್ಲ
- 18 hrs ago
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
- 22 hrs ago
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
- 1 day ago
Today Rashi Bhavishya: ಸೋಮವಾರದ ದಿನ ಭವಿಷ್ಯ: ತುಲಾ, ಮಕರ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ
Don't Miss
- News
ಕೊರೊನಾದ ಓಮಿಕ್ರಾನ್ ಸೋಂಕಿಗೂ ಆರು ತಿಂಗಳಿನಲ್ಲಿ ಲಸಿಕೆ ರೆಡಿ
- Movies
ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್
- Sports
ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಲು ಇದನ್ನು ಮಾಡಬೇಕಿದೆ ಎಂದ ಸೌರವ್ ಗಂಗೂಲಿ
- Automobiles
ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ
- Finance
Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
- Technology
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು
ನೀವು ಅಡುಗೆಗೆ ಮಣ್ಣಿನ ಪಾತ್ರೆ ಬಳಸುತ್ತೀರಾ? ಮಣ್ಣಿನ ಪಾತ್ರೆ ಬಳಸುವವರಾದರೆ ಅದರಲ್ಲಿ ಮಾಡುವ ಅಡುಗೆಯ ರುಚಿ ಇತರ ಪಾತ್ರೆಯಲ್ಲಿ ಮಾಡುವ ಅಡುಗೆಗಿಂತ ಹೇಗೆ ಭಿನ್ನವಾಗಿರುತ್ತೆ ಎಂಬುವುದು ಖಂಡಿತ ಗೊತ್ತಿರುತ್ತದೆ.
ಇಲ್ಲದಿದ್ದರೆ ಇನ್ನು ಕೆಲ ರೆಸ್ಟೋರೆಂಟ್ಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಬಿರಿಯಾನಿ ಅಥವಾ ಕರಿ ಎಂದು ಸ್ಪೆಷಲ್ ಆಗಿ ಹೈಲೈಟ್ ಮಾಡಿರುತ್ತಾರೆ, ಅಂಥ ಹೋಟೆಲ್ಗಳಲ್ಲಿ ಆಹಾರದ ರುಚಿ ನೋಡಿರುತ್ತೀರಿ...
ಈ ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆ ರುಚಿಯಲ್ಲಿ ಮಾತ್ರವಲ್ಲ, ಇನ್ನಿತರ ವಿಷಯಗಳಲ್ಲೂ ಬೇರೆ ಪಾತ್ರೆಗಳಲ್ಲಿ ಮಾಡುವ ಅಡುಗೆಗಿಂತ ತುಂಬಾನೇ ವಿಶೇಷವಾಗಿರುತ್ತೆ. ಹೇಗೆ ಎಂದು ನೋಡೋಣ ಬನ್ನಿ:

1. ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಆಹಾರದ ಪೋಷಕಾಂಶಗಳು ಹಾಳಾಗಲ್ಲ
ಮಣ್ಣಿನ ಪಾತ್ರೆ ಇತರ ಅಲ್ಯುಮಿನಿಯಂ, ನಾನ್ಸ್ಟಿಕ್ ಪಾತ್ರೆಗೆ ಹೋಲಿಸಿದರೆ ನಿಧಾನಕ್ಕೆ ಬಿಸಿಯಾಗುತ್ತೆ, ಅಲ್ಲದೆ ಆಹಾರದಲ್ಲಿ ಬಿಸಿ ಒಂದೇ ರೀತಿ ಹರಡುತ್ತದೆ. ಇದರಿಂದಾಗಿ ಇತರ ಪಾತ್ರೆಗಳಲ್ಲಿ ಮಾಡಿದ ಅಡುಗೆಗಿಂತ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಪೋಷಕಾಂಶ ಹೆಚ್ಚಿರುತ್ತದೆ.

2. ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದಾಗ ಅದರಲ್ಲಿರುವ ನೀರಿನಂಶ, ಎಣ್ಣೆಯಂಶ ಎಲ್ಲಾ ಆಹಾರ ಬೇಯುವಾಗ ಬಳಕೆಯಾಗುತ್ತೆ, ಇತರ ಪಾತ್ರೆಯಲ್ಲಿ ಬಳಸುವ ಎಣ್ಣೆಗಿಂತ ಸ್ವಲ್ಪ ಎಣ್ಣೆ ಹಾಕಿದರೆ ಸಾಕಾಗುತ್ತೆ. ಎಣ್ಣೆ ಸ್ವಲ್ಪ ಬಳಸಿದಾಗ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

3. ಆಹಾರದಲ್ಲಿ PH ಸಮತೋಲನ ಮಾಡುತ್ತದೆ
ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ PH ಸಮತೋಲನದಲ್ಲಿರುತ್ತದೆ. ಆದ್ದರಿಂದ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಗೆ ರುಚಿ ಮಾತ್ರವಲ್ಲ ಒಳ್ಳೆಯ ಸುವಾಸನೆ ಕೂಡ ಇರುತ್ತದೆ.

4. ಖನಿಜಾಂಶಗಳಿರುತ್ತದೆ
ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಕಬ್ಬಿಣದಂಶ, ಮೆಗ್ನಿಷ್ಯಿಯಂ ಮುಂತಾದ ಖನಿಜಾಂಶಗಳಿರುತ್ತದೆ. ಆಹಾರದಲ್ಲಿರುವ ಎಲ್ಲಾ ಖನಿಜಾಂಶಗಳು ಹಾಳಾಗದೆ ನಿಮಗೆ ಸಿಗುತ್ತದೆ.

5. ಪರಿಸರಕ್ಕೂ ಒಳ್ಳೆಯದು
ಇನ್ನು ಮಣ್ಣಿನ ಪಾತ್ರೆ ಒಡೆದಾಗ ಬಿಸಾಡಿದರೆ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಅಡುಗೆ ಮಾಡಿದರೆ ಆರೋಗ್ಯಕ್ಕೆ ಒಳ್ಲೆಯದು, ಬಿಸಾಡಿದಾಗ ಪರಿಸರಕ್ಕೂ ಒಳ್ಳೆಯದು. ಒಟ್ಟಿನಲ್ಲಿ ಮಣ್ಣಿನ ಪಾತ್ರೆ ಹಾಗೂ ಅದರ ದಿ ಬೆಸ್ಟ್....