For Quick Alerts
ALLOW NOTIFICATIONS  
For Daily Alerts

Health tips: ದೇಹಕ್ಕೆ ನಿತ್ಯ ನಿಯಮಿತ ವ್ಯಾಯಾಮ ಬೇಕೇ ಬೇಕು, ಇದೇ ಕಾರಣಗಳಿಗೆ ನೋಡಿ

|

ವ್ಯಾಯಾಮವು ದೇಹಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ, ಆದರೆ ಎಷ್ಟು ಒಳ್ಳೆಯದು ಎಂದು ಗೊತ್ತೆ?. ನಿಮ್ಮ ಮನಸ್ಥಿತಿಯಿಂದ, ದೈಹಿಕ ಸಾಮರ್ಥ್ಯ ಸುಧಾರಿಸುವವರೆಗೆ ವ್ಯಾಯಾಮವು ನಿಮ್ಮ ಜೀವನವನ್ನು ಸಕಾರಾತ್ಮಕವಾಗಿ, ಸಂತೋಷದಿಂದ ಬದುಕಲು ಕಾರಣವಾಗಬಹುದು.

ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ. ಇದರಿಂದ ಬೊಜ್ಜು, ತೂಕ ಹೆಚ್ಚುವುದು, ಹೃದಯ ಸಮಸ್ಯೆ, ಲೈಂಗಿಕ ಬದುಕಿನಲ್ಲಿ ಸಂತೋಷ ಇಲ್ಲದಿರುವುದು ಸೇರಿದಂತೆ ನಮ್ಮನ್ನು ತುಂಬಾ ಅಲಸ್ಯರನ್ನಾಗಿ ಮಾಡುತ್ತದೆ. ವಯಸ್ಸು, ಲಿಂಗ ಅಥವಾ ದೈಹಿಕ ಸಾಮರ್ಥ್ಯವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ವ್ಯಾಯಾಮದಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

ನಿತ್ಯ ವ್ಯಾಯಾಮದ ಪ್ರಯೋಜನಗಳೆಷ್ಟು, ಇದು ಏಕೆ ಎಲ್ಲರಿಗೂ ಕಡ್ಡಾಯ, ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯಕರವಾಗಿರಿಸಲು ಇದು ಏಕೆ ಬೇಕು ಮುಂದೆ ನೋಡಿ:

1. ವ್ಯಾಯಾಮವು ತೂಕವನ್ನು ನಿಯಂತ್ರಿಸುತ್ತದೆ

1. ವ್ಯಾಯಾಮವು ತೂಕವನ್ನು ನಿಯಂತ್ರಿಸುತ್ತದೆ

ವ್ಯಾಯಾಮವು ಅಧಿಕ ತೂಕವನ್ನು ತಡೆಯಲು ಅಥವಾ ತೂಕ ನಷ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಷ್ಟು ನಿಮ್ಮ ಕ್ಯಾಲೊರಿಗಳು ಕಡಿಮೆಯಾಗುತ್ತದೆ.

ನಿಯಮಿತವಾಗಿ ವರ್ಕ್‌ಔಟ್‌ ಮಾಡುವುದು ಉತ್ತಮ ಅಭ್ಯಾಸವಾಗಿವೆ, ಆದರೆ ಪ್ರತಿದಿನ ವ್ಯಾಯಾಮ ಮಾಡಲು ನಿಮಗೆ ಹೆಚ್ಚಿನ ಸಮಯವನ್ನು ಹೊಂದಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ದೇಹಕ್ಕೆ ಕಸರತ್ತು ನೀಡಲು ವ್ಯಾಯಾಮವನ್ನೇ ಮಾಡಬೇಕೆಕಂದಿಲ್ಲ, ದೇಹಕ್ಕೆ ಶ್ರಮ ನೀಡುವಂಥ ಯಾವುದೇ ಚಟುವಟಿಕೆಯು ಕ್ಯಾಲೋರಿಯನ್ನು ಕರಗಿಸುತ್ತದೆ. ವ್ಯಾಯಾಮದ ಪ್ರಯೋಜನಗಳನ್ನು ಪಡೆಯಲು, ನೀವು ದಿನವಿಡೀ ಹೆಚ್ಚು ಕ್ರಿಯಾಶೀಲರಾಗಿರಿ, ಎಲಿವೇಟರ್, ಲಿಫ್ಟ್‌ ಬದಲಿಗೆ ಮೆಟ್ಟಿಲುಗಳನ್ನು ಹತ್ತಿ, ನೆಲೊರೆಸಲು ಮಾಪ್‌ ಬದಲಿಗೆ ಬಗ್ಗಿ ಬಟ್ಟೆಯಿಂದ ಒರೆಸಿ ಅಥವಾ ನಿಮ್ಮ ಮನೆಕೆಲಸಗಳನ್ನು ಮಾಡಬಹುದು.

2. ವ್ಯಾಯಾಮವು ಆರೋಗ್ಯ ಪರಿಸ್ಥಿತಿಗಳು ಮತ್ತು ರೋಗಗಳ ವಿರುದ್ಧ ಹೋರಾಡುತ್ತದೆ

2. ವ್ಯಾಯಾಮವು ಆರೋಗ್ಯ ಪರಿಸ್ಥಿತಿಗಳು ಮತ್ತು ರೋಗಗಳ ವಿರುದ್ಧ ಹೋರಾಡುತ್ತದೆ

ನಿಮ್ಮ ಪ್ರಸ್ತುತ ತೂಕ ಏನೇ ಇರಲಿ, ಸಕ್ರಿಯವಾಗಿರುವುದು ಅಂದರೆ ನಿರಂತರ ದೇಹಕ್ಕೆ ಶ್ರಮ ನೀಡುವುದರಿಂದ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್‌ಡಿಎಲ್) ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ, "ಉತ್ತಮ" ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಮತ್ತು ಅನಾರೋಗ್ಯಕರ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ರಕ್ತವನ್ನು ಸರಾಗವಾಗಿ ಹರಿಯುವಂತೆ ಮಾಡುತ್ತದೆ, ಇದು ನಿಮ್ಮ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತ ವ್ಯಾಯಾಮವು ಅನೇಕ ಆರೋಗ್ಯ ಸಮಸ್ಯೆಗಳು ತಡೆಗಟ್ಟಲು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸುತ್ತದೆ

3. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸುತ್ತದೆ

ಭಾವನಾತ್ಮಕವಾಗಿ ಸಕಾರಾತ್ಮಕವಾಗಿರಬೇಕೆ, ಒತ್ತಡದದಿಂದ ದೂರ ಇರಬೇಕೆ, ಖಿನ್ನತೆ ಬಾಧಿಸದಂತೆ ತಡೆಯಬೇಕೆ ಒಂದೇ ಮದ್ದು ಯೋಗ/ವ್ಯಾಯಾಮ. ದೈಹಿಕ ಶ್ರಮವು ನಿಮ್ಮ ದೇಹದಲ್ಲಿ ರಾಸಾಯನಿಕಗಳನ್ನು ಪ್ರಚೋದಿಸುತ್ತದೆ, ಅದು ನಿಮಗೆ ಸಂತೋಷ, ಹೆಚ್ಚು ಶಾಂತವಾಗಿರುವುದು ಮತ್ತು ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ.

ನೀವು ನಿಯಮಿತವಾಗಿ ವ್ಯಾಯಾಮ ಮಾಡುವಾಗ ನಿಮ್ಮ ನೋಟ ಮತ್ತು ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸುತ್ತದೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಸ್ವಾಭಿಮಾನವನ್ನು ಸುಧಾರಿಸುತ್ತದೆ.

4. ವ್ಯಾಯಾಮವು ಶಕ್ತಿಯನ್ನು ಹೆಚ್ಚಿಸುತ್ತದೆ

4. ವ್ಯಾಯಾಮವು ಶಕ್ತಿಯನ್ನು ಹೆಚ್ಚಿಸುತ್ತದೆ

ನಿಯಮಿತ ದೈಹಿಕ ಚಟುವಟಿಕೆಯು ನಿಮ್ಮ ಸ್ನಾಯುವಿನ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ವ್ಯಾಯಾಮವು ನಿಮ್ಮ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತದೆ ಮತ್ತು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೃದಯ ಮತ್ತು ಶ್ವಾಸಕೋಶದ ಆರೋಗ್ಯ ಸುಧಾರಿಸಿದಾಗ, ದೈನಂದಿನ ಕೆಲಸಗಳನ್ನು ನಿಭಾಯಿಸಲು ನಿಮಗೆ ಹೆಚ್ಚಿನ ಶಕ್ತಿ ಇರುತ್ತದೆ.

5. ವ್ಯಾಯಾಮವು ಉತ್ತಮ ನಿದ್ರೆಗೆ ರಹದಾರಿ

5. ವ್ಯಾಯಾಮವು ಉತ್ತಮ ನಿದ್ರೆಗೆ ರಹದಾರಿ

ನಿಯಮಿತ ದೈಹಿಕ ಚಟುವಟಿಕೆಯು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ, ಉತ್ತಮ ನಿದ್ರೆ ಪಡೆಯಲು ಮತ್ತು ನಿಮ್ಮ ನಿದ್ರೆಯನ್ನು ಗಾಢವಾಗಿಸಲು ನಿಯಮಿತ ವ್ಯಾಯಾಮ ಅತ್ಯಗತ್ಯ. ಆದರೆ ನೆನಪಿಡಿ ಮಲಗುವ ಸಮಯದಲ್ಲಿ ವ್ಯಾಯಾಮ ಮಾಡಬೇಡಿ.

6. ವ್ಯಾಯಾಮದಿಂದ ಲೈಂಗಿಕ ಜೀವನದಲ್ಲಿ ಸ್ಪಾರ್ಕ್ ಇರುತ್ತದೆ

6. ವ್ಯಾಯಾಮದಿಂದ ಲೈಂಗಿಕ ಜೀವನದಲ್ಲಿ ಸ್ಪಾರ್ಕ್ ಇರುತ್ತದೆ

ದೈಹಿಕ ಅನ್ಯೋನ್ಯತೆಯನ್ನು ಆನಂದಿಸಲು ನೀವು ದೈಹಿಕವಾಗಿ ಫಿಟ್‌ ಹಾಗೂ ಆರೋಗ್ಯವಾಗಿ ಆಗಿ ಇರುವುದು ಸಹ ಮುಖ್ಯವಾಗುತ್ತದೆ. ನಿಯಮಿತ ದೈಹಿಕ ಚಟುವಟಿಕೆಯು ನಿಮ್ಮ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೈಹಿಕ ನೋಟದ ಕುರಿತು ನಿಮ್ಮಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಲೈಂಗಿಕ ಜೀವನದ ಸಂತೋಷವನ್ನು ಹೆಚ್ಚಿಸಲು ಕಾರಣವಾಗುತ್ತದೆ.

ಇನ್ನೂ ಮುಖ್ಯವಾಗಿ, ನಿಯಮಿತ ದೈಹಿಕ ಚಟುವಟಿಕೆಯು ಮಹಿಳೆಯರಿಗೆ ಪ್ರಚೋದನೆಯನ್ನು ಹೆಚ್ಚಿಸುತ್ತದೆ. ಮತ್ತು ವ್ಯಾಯಾಮ ಮಾಡದ ಪುರುಷರಿಗಿಂತ ನಿಯಮಿತವಾಗಿ ವ್ಯಾಯಾಮ ಮಾಡುವ ಪುರುಷರಿಗೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆಗಳು ಕಡಿಮೆ ಇರುತ್ತದೆ.

7. ವ್ಯಾಯಾಮವು ವಿನೋದಮಯ ಮತ್ತು ಸಾಮಾಜಿಕವಾಗಿರಲು ಸಹಕಾರಿಯಾಗಬಹುದು!

7. ವ್ಯಾಯಾಮವು ವಿನೋದಮಯ ಮತ್ತು ಸಾಮಾಜಿಕವಾಗಿರಲು ಸಹಕಾರಿಯಾಗಬಹುದು!

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯು ಆನಂದದಾಯಕವಾಗಿರುತ್ತದೆ. ಅವರು ನಿಮಗೆ ವಿಶ್ರಾಂತಿ ಪಡೆಯಲು, ಹೊರಾಂಗಣವನ್ನು ಆನಂದಿಸಲು ಅಥವಾ ನಿಮ್ಮನ್ನು ಸಂತೋಷಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತದೆ. ದೈಹಿಕ ಚಟುವಟಕೆಯು ಮೋಜಿನ ಸಂದರ್ಭಗಳಲ್ಲಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.

ಆದ್ದರಿಂದ ನೃತ್ಯ ತರಗತಿಗಳಿಗೆ ಹೋಗಿ, ಟ್ರೆಕ್ಕಿಂಗ್‌, ಪ್ರವಾಸ, ಲಂಆಗ್‌ ರೈಂಡಿಂಗ್‌, ಫಿಟ್‌ನೆಸ್‌ ತಂಡ ಕಟ್ಟುವುದು, ಹೊಸದನ್ನು ಪ್ರಯತ್ನಿಸಿ ಅಥವಾ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಏನಾದರೂ ಮಾಡಿ ಹೀಗೆ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳು ನಿಮ್ಮಲ್ಲಿ ಆರೋಗ್ಯದ ಜತೆಗೆ ನೆಮ್ಮದಿಗೆ ಕಾರಣವಾಗಬಹುದು.

English summary

Benefits of regular physical activity in kannada

Here we are discussing about Benefits of regular physical activity in kannada. Read more.
X
Desktop Bottom Promotion