For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಸಾಕ್ಸ್‌ನಲ್ಲಿ ಇಟ್ಟರೆ ಸಿಗುವುದು ಈ ಪ್ರಯೋಜನಗಳು

|

ಈರುಳ್ಳಿಯನ್ನು ಮನೆಮದ್ದಾಗಿ ಅನೇಕ ರೀತಿಯಲ್ಲಿ ಬಳಸುತ್ತಾರೆ. ಇದರ ರಸ ಕೂದಲಿಗೆ ಹಚ್ಚಿದರೆ ಒಳ್ಳೆಯದು, ಇನ್ನು ಕೆಮ್ಮು ಇದ್ದಾಗ ಈರುಳ್ಳಿಯನ್ನು ಕತ್ತರಿಸಿ ಅದನ್ನು ಜೇನಿನಲ್ಲಿ ಹಾಕಿಟ್ಟು ಕುಡಿಯುವುದು ಒಳ್ಳೆಯದು. ಹೀಗೆ ಅನೇಕ ರೀತಿಯಲ್ಲಿ ಇದನ್ನು ಬಳಸಬಹುದು. ಇದನ್ನು ಮಲಗುವಾಗ ಪಾದಗಳಲ್ಲಿ ಇಟ್ಟು ಮಲಗುವುದರಿಂದ ದೊರೆಯುವ ಅನೇಕ ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ?

ಈ ಲೇಖನದಲ್ಲಿ ಈರುಳ್ಳಿ ತುಂಡನ್ನು ನಿಮ್ಮ ಸಾಕ್ಸ್‌ನ ಒಳಗಡೆ ಇಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ ನೋಡಿ:

ಬ್ಯಾಕ್ಟಿರಿಯಾ, ಕೀಟಾಣು ನಾಶಪಡಿಸಿ ದುರ್ವಾಸನೆ ತಡೆಯುತ್ತೆ

ಬ್ಯಾಕ್ಟಿರಿಯಾ, ಕೀಟಾಣು ನಾಶಪಡಿಸಿ ದುರ್ವಾಸನೆ ತಡೆಯುತ್ತೆ

ನಮ್ಮ ಪಾದಗಳಲ್ಲಿ 7000 ನರಗಳಿರುತ್ತದೆ ಎಂದು ವಿಜ್ಞಾನ ಹೇಳಿದೆ. ಈ ನರಗಳು ನಮ್ಮ ದೇಹದ ಇತರ ಭಾಗಗಳಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದ ಸಾಕ್ಸ್ ಒಳಗೆ ಈರುಳ್ಳಿ ಹಾಕಿದರೆ ಒಳ್ಳೆಯದು. ಇದು ನಿಮ್ಮ ಪಾದಗಳಲ್ಲಿರುವ ಕೀಟಾಣುಗಳು ಹಾಗೂ ಬ್ಯಾಕ್ಟಿರಿಯಾ ಹೀರಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದೇಹ ಕ್ಲೆನ್ಸ್ ಆಗುತ್ತದೆ.

ಶೀತಕ್ಕೂ ಅತ್ಯುತ್ತಮವಾದ ಮನೆಮದ್ದು

ಶೀತಕ್ಕೂ ಅತ್ಯುತ್ತಮವಾದ ಮನೆಮದ್ದು

ಈರುಳ್ಳಿಯನ್ನ ಕತ್ತರಿಸಿ ಪಾದದಲ್ಲಿ ಇಟ್ಟು ನಂತರ ಸಾಕ್ಸ್ ಹಾಕಿ ಮಲಗಿದರೆ ಶೀತ ಬೇಗನೆ ಕಡಿಮೆಯಾಗುತ್ತದೆ. ಆದ್ದರಿಂದ ಇದೊಂದು ಉತ್ತಮ ಮನೆಮದ್ದಾಗಿದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಈರುಳ್ಳಿ ವಾಸನೆಯನ್ನು ಹೀರಿಕೊಳ್ಳುವ ಗುಣವಿದೆ, ಆದ್ದರಿಂದ ಇದು ಕೋನೆಯ ವಾಯುವನ್ನು ಶುದ್ಧವಾಗಿಸುತ್ತದೆ. ಇನ್ನು ಮಲಗುವ ಮುನ್ನ ಸಾಕ್ಸ್ ಒಳಗೆ ಈರುಳ್ಳಿ ತುಂಡು ಹಾಕಿ ಮಲಗಿದರೆ ಇದರಿಂದ ರಕ್ತ ಶುದ್ಧವಾಗುವುದು. ಆದರೆ ಸಾವಯವ ಈರುಳ್ಳಿಯಷ್ಟೇ ಬಳಸಿ.

ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ದೊರೆಯುವ ಇತರ ಪ್ರಯೋಜನ

ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ದೊರೆಯುವ ಇತರ ಪ್ರಯೋಜನ

ಮಲಗುವಾಗ ಸಾಕ್ಸ್‌ ಒಳಗೆ ಈರುಳ್ಳಿ ಇಟ್ಟು ಮಲಗಿದರೆ ಬ್ಲೇಡರ್‌ ಸೋಂಕು ಇದ್ದರೆ ಕಡಿಮೆಯಾಗುವುದು ಅಲ್ಲದೆ ಹಲ್ಲು ನೀವು ಕಡಿಮೆಯಾಗುವುದು. ಮೊದಲೇ ತಿಳಿಸಿದಂತೆ ರಕ್ತವನ್ನು ಶುದ್ಧ ಮಾಡುತ್ತದೆ, ಶೀತ ಕಡಿಮೆ ಮಾಡುತ್ತದೆ. ಚೀನಾದಲ್ಲಿ ತುಂಬಾ ಹಿಂದಿನಿಂದಲೂ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ.

ಈರುಳ್ಳಿ ಹೇಗೆ ಬಳಸಬೇಕು?

ಈರುಳ್ಳಿ ಹೇಗೆ ಬಳಸಬೇಕು?

ಈರುಳ್ಳಿಯನ್ನು ಕತ್ತರಿಸಿ ಪಾದಗಳಲ್ಲಿ ಇಟ್ಟು ಸಾಕ್ಸ್ ಹಾಕಬೇಕು. ನಂತರ ಬೆಳಗ್ಗೆ ಸ್ವಲ್ಪ ಈರುಳ್ಳಿ ಪಾದಗಳಿಗೆ ಉಜ್ಜಬೇಕು. ಹೀಗೆ ಮಾಡಿದರೆ ತುಂಬಾ ಒಳ್ಳೆಯದು.

English summary

Benefits of keeping Onion in your sock in kannada

Here we told benefits of keeping onion in your sock, read on...
Story first published: Tuesday, March 9, 2021, 14:20 [IST]
X
Desktop Bottom Promotion