For Quick Alerts
ALLOW NOTIFICATIONS  
For Daily Alerts

ಬೆಡ್‌ರೂಂನಲ್ಲಿ ನಿಂಬೆಹಣ್ಣು ಇಟ್ಟರೆ ಸಿಗುವುದು ಈ ಅದ್ಭುತ ಆರೋಗ್ಯ ಲಾಭ

|

ನಿಮ್ಮ ತಲೆ ದಿಂಬಿನ ಪಕ್ಕ ನಿಂಬೆಹಣ್ಣು ಇಟ್ಟು ಮಲಗಿದರೆ ತುಂಬಾ ಒಳ್ಳೆಯದು ಎಂದು ನಾವು ಹೇಳಿದರೆ, ಇವರೇನು ಮೂಢನಂಬಿಕೆ ಹೇಳುತ್ತಿದ್ದಾರೆಯೇ ಎಂದು ಅನಿಸಬಹುದು. ಆದರೆ ಇಲ್ಲಿ ಮೂಢನಂಬಿಕೆ ಬಗ್ಗೆ ಹೇಳುತ್ತಿಲ್ಲ, ನಾವಿಲ್ಲಿ ತಲೆದಿಂಬಿನ ಪಕ್ಕ ನಿಂಬೆ ಹಣ್ಣು ಇಡುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ. ಈ ವಿಧಾನದಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ಪರಿಹರಿಸಬಹುದೆಂದು ಹೇಳಿದ್ದೇವೆ.

Keeping Lemon In Bedroom

ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದನ್ನು ಬಳಸಿ ಅನೇಕ ಮನೆಮದ್ದು ತಯಾರಿಸಲಾಗುವುದು. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ತೂಕ ಇಳಿಕೆ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಕಾರಿ ಅಲ್ಲದೆ ಅನೇಕ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು. ಇದರ ರಸ, ಸಿಪ್ಪೆ ಎಲ್ಲವೂ ಆರೋಗ್ಯಕರ ಗುಣ ಹೊಂದಿರುವುದರಿಂದ ಔಷಧೀಯ ಗುಣವಿರುವ ಅದ್ಭುತ ಹಣ್ಣು ಇದಾಗಿದೆ.
ಮಂಚದ ಸಮೀಪ ನಿಂಬೆಹಣ್ಣಿನ ದುಂಡು ಇಟ್ಟರೆ ದೊರೆಯುವ ಪ್ರಯೋಜನ

ಮಂಚದ ಸಮೀಪ ನಿಂಬೆಹಣ್ಣಿನ ದುಂಡು ಇಟ್ಟರೆ ದೊರೆಯುವ ಪ್ರಯೋಜನ

ಕೆಲವು ತುಂಡು ನಿಂಬೆ ಹಣ್ಣುಗಳನ್ನು ಮಂಚದ ಸಮೀಪ ಅಥವಾ ಮಲಗುವ ಕೋಣೆಯ ಕಿಟಕಿಯಲ್ಲಿ ಇಟ್ಟು, ಅದರ ಮೇಲೆ ಸ್ವಲ್ಪ ಉಪ್ಪು ಉದುರಿಸಿದರೆ ಅದರಿಂದ ಹೊರ ಸೂಸುವ ಸುವಾಸನೆ ನಿಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ. ಇನ್ನು ಉಸಿರಾಟದ ತೊಂದರೆ ಇರುವವರು ಈ ವಿಧಾನ ಅನುಸರಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇನ್ನು ಇದನ್ನು ಏರ್‌ಫ್ರೆಷ್‌ನರ್ ರೀತಿ ಬಳಸಬಹುದು.

ಕಟ್ಟಿದ ಮೂಗು ಸರಿಪಡಿಸುತ್ತದೆ

ಕಟ್ಟಿದ ಮೂಗು ಸರಿಪಡಿಸುತ್ತದೆ

ನಿಂಬೆಹಣ್ಣಿನಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಾ ಗುಣ ಹಾಗೂ ಅದರ ವಾಸನೆ ನಿಮ್ಮ ಕಟ್ಟಿದ ಮೂಗನ್ನು ಸರಿಪಡಿಸಿ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಮೂಗು ಕಟ್ಟಿದಾಗ ಈ ಮದ್ದು ಟ್ರೈ ಮಾಡಿ ಖಂಡಿತ ಪ್ರಯೋಜನ ಪಡೆಯುವಿರಿ. ನಿಂಬೆಹಣ್ಣನ್ನು ಕತ್ತರಿಸಿ ಮಂಚದ ಸಮೀಪ ಇಡುವುದರಿಂದ ಅದರ ವಾಸನೆ ಮೂಗಿಗೆ ಬಡೆಯುತ್ತಿರುತ್ತದೆ. ಇದರಿಂದ ಕಟ್ಟಿದ ಮೂಗು ಸರಿಯಾಗುವುದು, ಉಸಿರಾಟ ಸರಾಗವಾಗಿ ನಡೆಯುವುದು. ಹೀಗಾಗಿ ನಿದ್ದೆ ಚೆನ್ನಾಗಿ ಮಾಡಬಹುದು.

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಮಾನಸಿಕ ಒತ್ತಡವಿದ್ದರೆ ಸರಿಯಾಗಿ ನಿದ್ದೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಿಂಬೆಹಣ್ಣು ಹಾಸಿಗೆ ಪಕ್ಕ ಇಟ್ಟರೆ ಅದರ ವಾಸನೆಗೆ ಮಾನಸಿಕ ಒತ್ತಡ ಹೊರಹಾಕುವ ಸಾಮರ್ಥ್ಯ ಇದೆ. ಇದರಲ್ಲಿರುವ ಸಿಟ್ರಸ್ ವಾಸನೆ ಗ್ರಹಿಸಿದಾಗ ಮೆದುಳಿಗೆ ವಿಶ್ರಾಂತಿಯ ಅನುಭವ ಉಂಟಾಗುತ್ತದೆ. ಇದರಿಂದಾಗಿ ಮಾನಸಿಕ ಒತ್ತಡದಿಂದ ಬಳಲಿದ ಮೆದುಳಿಗೆ ಚೇತರಿಕೆ ಉಂಟಾಗುತ್ತದೆ. ಹಾಗಾಗಿ ನಿದ್ದೆ ಮಾಡಲು ಸಹಕಾರಿ.

ಕೀಟಗಳು ಬರದಂತೆ ತಡೆಯುತ್ತದೆ

ಕೀಟಗಳು ಬರದಂತೆ ತಡೆಯುತ್ತದೆ

ಇದರ ವಾಸನೆಗೆ ಸೊಳ್ಳೆಗಳು ಹಾಗೂ ಇತರ ಕೀಟಗಳು ಆಕರ್ಷಿತವಾಗುವುದಿಲ್ಲ. ಸೊಳ್ಳೆ ಕಾಟಕ್ಕೆ ಸೊಳ್ಳೆ ಬತ್ತಿಗಿಂತ ಈ ರೀತಿಯ ನೈಸರ್ಗಿಕ ವಿಧಾನಗಳನ್ನು ಬಳಸುವುದು ಒಳ್ಳೆಯದು. ಇದರಿಂದ ಶರೀರಕ್ಕೂ ಒಳ್ಳೆಯದು ಹಾಗೂ ಕೀಟಗಳ ಕಾಟದಿಂದ ಮುಕ್ತಿ ಕೂಡ ಪಡೆಯಬಹುದು.

 ಗಾಳಿಯನ್ನು ಶುದ್ಧವಾಗಿಡುತ್ತದೆ

ಗಾಳಿಯನ್ನು ಶುದ್ಧವಾಗಿಡುತ್ತದೆ

ಬೆಡ್‌ರೂಂನ ಗಾಳಿ ಶುದ್ಧವಾಗಿದ್ದಷ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ನಾವು ಮಲಗುವ ಪರಿಸರದ ಸ್ವಚ್ಛತೆಗೆ ಎಷ್ಟು ಆದ್ಯತೆ ಕೊಡುತ್ತೇವೋ ಅಷ್ಟೆ ಪ್ರಾಮುಖ್ಯತೆಯನ್ನು ಆ ಕೋಣೆಯ ಗಾಳಿ, ಬೆಳಕಿನ ಓಡಾಡಕ್ಕೆ ನೀಡಬೇಕು. ಗಾಳಿ, ಬೆಳಕು ಚೆನ್ನಾಗಿದ್ದರೆ ಮಲಗುವ ಕೋಣೆಗೆ ಹೋದಾಗ ಮನಸ್ಸಿಗೆ ವಿಶ್ರಾಂತಿಯ ಅನುಭವ ಉಂಟಾಗುತ್ತದೆ. ಇನ್ನು ನಿಂಬೆಹಣ್ಣು ಇಡುವುದರಿಂದ ಇದು ಗಾಳಿಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುವುದರಿಂದ ಗಾಳಿ ಶುದ್ಧವಾಗಿರುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ನಿಂಬೆಹಣ್ಣಿನ ವಾಸನೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬುವುದು ಸಾಬೀತಾಗಿದೆ. ಮಾನಸಿಕ ಒತ್ತಡ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುವುದು. ನಿಂಬೆಹಣ್ಣು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂಂದ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು.

ಬೆಳಗ್ಗೆ ಏಳುವಾಗ ಚೈತನ್ಯದಿಂದ ಇರುವಿರಿ

ಬೆಳಗ್ಗೆ ಏಳುವಾಗ ಚೈತನ್ಯದಿಂದ ಇರುವಿರಿ

ನಿಂಬೆಹಣ್ಣು ಕತ್ತರಿಸಿ ಮಲಗುವ ಕೋಣೆಯಲ್ಲಿ ಇಟ್ಟು ನೋಡಿ, ಬೆಳಗ್ಗೆ ಏಳುವಾಗ ಉಯದಾಸೀನ ಅನಿಸುವುದಿಲ್ಲ. ಹೊಸ ಚೈತನ್ಯದಿಂದ ಎದ್ದೇಳುತ್ತೀರಿ. ಇದರಿಂದ ಆ ದಿನವನ್ನು ಖುಷಿ-ಖುಷಿಯಾಗಿ ಪ್ರಾರಂಭಿಸಬಹುದು. ಏಕೆಂದರೆ ನಿಂಬೆ ಹಣ್ಣಿನ ವಾಸನೆ ಮೆದುಳಿನಲ್ಲಿ ಸೆರೋಟಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮಗೆ ಸವಿನಿದ್ದೆಯನ್ನು ನೀಡುವುದರಿಂದ ಬೆಳಗ್ಗೆ ಫ್ರೆಶ್‌ ಆಗಿ ಏಳುವಿರಿ. ಆದ್ದರಿಂದ ನಿಂಬೆಹಣ್ಣು ನಿದ್ದೆ ಹೀನತೆ ತಡೆಗಟ್ಟುವಲ್ಲಿಯೂ ಸಹಕಾರಿ.

ಸೂಚನೆ: ನಿಂಬೆಹಣ್ಣನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಅನೇಕ ಆರೋಗ್ಯಕರ ಗುಣಗಳು ಸಿಗುತ್ತವೆ. ಆದರೆ ಪ್ರತಿದಿನ ನಿಂಬೆ ಹಣ್ಣು ತುಂಡನ್ನು ಬದಲಾಯಿಸಿ, ತಾಜಾ ನಿಂಬೆ ಹಣ್ಣು ಕತ್ತರಿಸಿ ಇಡಿ. ಬಳಸಿದ ನಿಂಬೆ ಹಣ್ಣನ್ನು ಅಡುಗೆ ಮನೆಯ ಪಾತ್ರೆ ಶುಚಿತ್ವಕ್ಕೆ ಬಳಸಬಹುದು.

English summary

Benefits Of Keeping A Sliced Lemon Next To Your Bed

Lemon is more than an air freshener. Keeping a sliced lemon in the bedroom at night comes with several advantages that you need to know of - let's take a look.
Story first published: Monday, January 27, 2020, 16:39 [IST]
X
Desktop Bottom Promotion