For Quick Alerts
ALLOW NOTIFICATIONS  
For Daily Alerts

ಕರ್ಕಟ ಚಿಕಿತ್ಸೆ: ಮಳೆಗಾಲದ ಈ ಆಯುರ್ವೇದ ಚಿಕಿತ್ಸೆ ತುಂಬಾ ಪರಿಣಾಮಕಾರಿ, ಏಕೆ?

|

ಕೇರಳದಲ್ಲಿ ಕರ್ಕಟ ಮಾಸ ಆಯುರ್ವೇದ ಚಿಕಿತ್ಸೆ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಜುಲೈ 17ರಿಂದ ಆಗಸ್ಟ್ 17ರ ನಡುವಿನ ಕಾಲವನ್ನು ಕರ್ಕಟ ಮಾಸ ಕರೆಯಲಾಗುವುದು. ಇದು ಮಳೆ ಅತ್ಯಂತ ಸುರಿಯುವ ಕಾಲ.

ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಾಮಾರ್ಥ್ಯ ಸ್ವಲ್ಪ ಕಡಿಮೆ ಇರುತ್ತದೆ, ಆದ್ದರಿಂದಾಗಿ ಸೇವಿಸಿದ ಆಹಾರವು ಹೊಟ್ಟೆಯಲ್ಲಿಯೇ ಉಳಿದು ಅಜೀರ್ಣ, ಅಸಿಡಿಟಿ ಮುಂತಾದ ಸಮಸ್ಯೆ ಬರಬಹುದು.

ಮಾನವನ ಶರೀರವು ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬ ಶರೀರದ ದೋಷವೂ ಭಿನ್ನವಾಗಿರುತ್ತದೆ. ಈ ದೋಷಗಳು ಮಳೆಗಳಾದಲ್ಲಿ ಉಲ್ಭಣವಾಗುವುದು ಅಧಿಕ. ಇಂತಹ ದೋಷಗಳನ್ನು ನಿವಾರಿಸಲು ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ನೀಡಲಾಗುವುದು. ದೇಹದಲ್ಲಿರುವ ದೋಷವನ್ನು ಹೋಗಲಾಡಿಸಲು ಆಯುರ್ವೇದದಲ್ಲಿ ಕರ್ಕಟ ಚಿಕಿತ್ಸೆ ನೀಡಲಾಗುವುದು. ಕೇರಳದಲ್ಲಿ ಈ ಚಿಕಿತ್ಸೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ.

ದೇಹ ಬಲವರ್ಧನೆ, ಒತ್ತಡ ನಿವಾರಣೆ, ಶರೀರದ ತೂಕ ನಿರ್ವಹಣೆ, ತ್ವಚೆ ಕಾಂತಿ, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಕರ್ಕಟ ಚಿಕಿತ್ಸೆ ಪಡೆಯಲಾಗುವುದು. ಇದೀಗ ಕೇರಳದಲ್ಲಿ ಮಾತ್ರವಲ್ಲ ಬೆಂಗಳೂರು ಮತ್ತಿತರ ಕಡೆ ಕೂಡ ಈ ಚಿಕಿತ್ಸಾ ವಿಧಾನ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಕರ್ಕಟ ಸುಖ ಚಿಕಿತ್ಸೆ ಎಂದು ಕೂಡ ಕರೆಯುತ್ತಾರೆ. ಕರ್ಕಟ ಚಿಕಿತ್ಸೆ ಪಡೆಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

 1. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ

1. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ

ನಮ್ಮ ದೇಹದಲ್ಲಿ ಅನೇಕ ಕಾರಣಗಳಿಂದ ಕಶ್ಮಲ ಸಂಗ್ರಹವಾಗುತ್ತಾ ಹೋಗುತ್ತದೆ. ಕಲುಷಿತ ವಾತಾವರಣ, ರಾಸಾಯನಿಕ ಸಿಂಪಡಿಸಿರುವ ಆಹಾರ ಸೇವನೆ, ಕೃತಕ ರುಚಿ ಸೇರಿಸಿದ ಆಹಾರಗಳ ಸೇವನೆ ಇವೆಲ್ಲಾ ನಮ್ಮ ದೇಹದಲ್ಲಿ ಕಶ್ಮಲ ಸಂಗ್ರಹವಾಗುವಂತೆ ಮಾಡುತ್ತದೆ. ಇದರ ಪರಿಣಾಮ ಅಲರ್ಜಿ, ಮೈಕೈ ನೋವು, ಊತ, ಖಿನ್ನತೆ, ಅಟೋ ಇಮ್ಯೂನ್ ಡಿಸಾರ್ಡರ್ (ರೋಗ ನಿರೋಧಕ ವ್ಯವಸ್ಥೆಯ ಅಸಮತೋಲನ) ಉಂಟಾಗುವುದು. ಈ ಕರ್ಕಟ ಚಿಕಿತ್ಸೆ ದೇಹದಲ್ಲಿರುವ ರಾಸಾಯನಿಕಗಳನ್ನು ಹೊರಹಾಕಲು ಪರಿಣಾಮಕಾರಿ.

2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈ ಚಿಕಿತ್ಸೆಯಲ್ಲಿ ವಿಶೇಷ ಗಂಜಿ ಮಾಡಿ ಕುಡಿಯಲಾಗುವುದು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಇನ್ನು ಅಲರ್ಜಿ ಸಂಬಂಧಿಸಿದ ಸಮಸ್ಯೆಗಳು ಬಾರದಂತೆ ದೇಹವನ್ನು ರಕ್ಷಣೆ ಮಾಡುತ್ತದೆ. ಈ ಗಂಜಿಯನ್ನು ಮೆಂತೆ ಹಾಗೂ ಇತರ ಆಯುರ್ವೇದ ಔಷಧಗಳನನ್ನು ಹಾಕಿ ತಯಾರಿಸಲಾಗುವುದು.

3. ದೇಹದಲ್ಲಿ ನವೋಲ್ಲಾಸ ಮೂಡುವುದು

3. ದೇಹದಲ್ಲಿ ನವೋಲ್ಲಾಸ ಮೂಡುವುದು

ಈ ಚಿಕಿತ್ಸೆ ವಿಧಾನದಲ್ಲಿ ಮಸಾಜ್, ಅಭ್ಯಂಗನ ಎಲ್ಲಾ ಇರುತ್ತದೆ. ಅಲ್ಲದೆ ಎಣ್ಣೆಗೆ ಕೆಲವೊಂದು ಔಷಧಿ ಬೆರೆಸಿ ಮಸಾಜ್ ಮಾಡುವುದು. ಇದರಿಂದಾಗಿ ಮೈಕೈ ನೋವು ಕಡಿಮೆಯಾಗುವುದು ಹಾಗೂ ದೇಹದಲ್ಲಿ ನವೋಲ್ಲಾಸ ತುಂಬುವುದು.

4. ತೂಕ ಇಳಿಕೆಗೆ ಸಹಕಾರಿ

4. ತೂಕ ಇಳಿಕೆಗೆ ಸಹಕಾರಿ

ಈ ಚಿಕಿತ್ಸೆ ಪಡೆಯುವುದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ತೂಕ ಇಳಿಕೆಗೆ ಸಹಕಾರಿ. ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಈ ಚಿಕಿತ್ಸೆ ಪಡೆಯುವುದರಿಂದ ಮೈಕಾಂತಿ ಹೆಚ್ಚುವುದು.

5. ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತೆ

5. ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತೆ

ಈಗಾಗಲೇ ಇತರ ಆರೋಗ್ಯ ಸಮಸ್ಯೆ ಇರುವವರು ಈ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಅಲರ್ಜಿ, ಮೈಕೈ ನೋವು, ಊತ, ಖಿನ್ನತೆ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿಯೂ ಸಹಕಾರಿ.

ಮಳೆಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಪಾಲಿಸಿ:

ಮಳೆಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಪಾಲಿಸಿ:

  • ಕಡಿಮೆಯೆಂದರೂ 2 ಲೀಟರ್‌ ಬಿಸಿ ನೀರು ಕುಡಿಯಿರಿ
  • ಕರಿದ ಪದಾರ್ಥಗಳು, ಧೂಮಪಾನ, ಮದ್ಯ ಇವುಗಳಿಂದ ದೂರವಿರಿ. ಮಾಂಸಾಹಾರ ಮಿತಿಯಲ್ಲಿ ಸೇವಿಸಿ.
  • ಬೆಳಗ್ಗೆ ಬೇಗ ಎದ್ದೇಳಿ 10 ಗಂಟೆ ಹೊತ್ತಿಗೆಲ್ಲಾ ನಿದ್ದೆ ಮಾಡಿ.
  • ಉಸಿರಾಟದ ವ್ಯಾಯಾಮ ಮಾಡಿ.
English summary

Benefits Of Karkidaka Chikitsa Or Ayurvedic Monsoon Therapy

Here are benefits of kardidaka chikitsa or ayurvedic monsoon therapy, Read on,
Story first published: Tuesday, August 4, 2020, 16:00 [IST]
X