For Quick Alerts
ALLOW NOTIFICATIONS  
For Daily Alerts

ಬ್ಯಾಕ್‌ ಟು ಆಫೀಸ್‌: ಕೊರೊನಾವೈರಸ್ ತಗುಲದಿರಲು ಈ ಟಿಪ್ಸ್ ಅನುಸರಿಸಿ

|

ಕೋವಿಡ್‌ 19 ಎರಡೂ ವರ್ಷಗಳಿಂದ ಈ ಜಗತ್ತನ್ನು ಕಾಡುತ್ತಲೇ ಇದೆ. ಈ ಮಹಾಮಾರಿ ಆದ ನಷ್ಟ ಅಷ್ಟಿಟ್ಟಲ್ಲ, ಈ ಕಾಯಿಲೆ ಮನುಷ್ಯರ ಆರೋಗ್ಯದ ಮೇಲಷ್ಟೇ ಕೆಟ್ಟ ಪರಿಣಾಮ ಬೀರಿಲ್ಲ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ ಎಲ್ಲದರ ಮೇಲೆ ಪರಿಣಾಮ ಬೀರಿದೆ, ಬೀರುತ್ತಲೇ ಇದೆ. ಕೊರೊನಾ 3ನೇ ಅಲೆಯ ಬಳಿಕ ಭಾರತದಲ್ಲಿ ಕೊರೊನಾ ಪ್ರಮಾಣ ಶೂನ್ಯಕ್ಕೆ ಇಳಿದಿತ್ತು, ಈಗ ಮತ್ತೆ ಕೊರೊನಾ ಆತಂಕ ಶುರುವಾಗಿದೆ, ಕೊರೊನೇ ನಾಲ್ಕನೇ ಅಲೆ ಶುರುವಾಗಿದೆ. ಕರ್ನಾಟಕದ ಆರೋಗ್ಯ ಮಂತ್ರಿ ಸುಧಾಕರ್ ಕೆ ತಮಗೆ ಕೊರೊನಾ ಪಾಸಿಟಿವ್‌ ದೃಢಪಟ್ಟೊರುವುದಾಗಿ ತಿಳಿಸಿದ್ದರು. ಅನೇಕ ಜನರಿಗೆ ಕೊರೊನಾ ಸೋಂಕು ತಗುಲುತ್ತಿದೆ.

ಕೊರೊನಾ ಸಂಪೂರ್ಣವಾಗಿ ಮಾಯವಾಗುವ ಲಕ್ಷಣ ಕಾಣುತ್ತಿಲ್ಲ, ಈ ಕಾರಣಕ್ಕೆ ಅದರ ಜೊತೆ ಸೆಣಸಾಡಿ ಅದನ್ನು ಸೋಲಿಸಿ ಬದುಕುವುದನ್ನು ಕಲಿಯಬೇಕು ಎಂದು ಕೆಲ ತಜ್ಞರು ಸಲಹೆ ನೀಡುತ್ತಿದ್ದಾರೆ.

ಎಷ್ಟೋ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆಫೀಸ್‌ಗೆ ಮರಳುವಂತೆ ಸೂಚಿಸುತ್ತಿದೆ. ಕೊರೊನಾ ನಾಲ್ಕನೇ ಅಲೆಯ ಆತಂಕ ಇರುವುದರಿಂದ ಹೊರಗಡೆ ಓಡಾಡುವಾಗ ಈ ಸುರಕ್ಷಿತಾ ಕ್ರಮಗಳಿಂದ ನಿಮ್ಮನ್ನು ಹಾಗೂ ಇತರರನ್ನು ರಕ್ಷಿಸಿ:

ಕೊರೊನಾ ಲಸಿಕೆ ಪಡೆಯಿರಿ:

ಕೊರೊನಾ ಲಸಿಕೆ ಪಡೆಯಿರಿ:

ಕೋವಿಡ್‌ 19 ಲಸಿಕೆ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಸಮರ್ಥವಾಗಿದೆ. ಈ ಲಸಿಕೆ ತೆಗೆದುಕೊಂಡವರಿಗೂ ಕೊರೊನಾ ಸೋಂಕು ಹರಡುತ್ತಿದೆ ಆದರೆ ರೋಗ ಸ್ಥಿತಿ ಗಂಭೀರವಾಗುವುದು, ಸಾವು ಸಂಭವಿಸುವುದು ಈ ರೀತಿ ಆಗುತ್ತಿಲ್ಲ, ಆದ್ದರಿಂದ ಕೊರೊನಾ ಲಸಿಕೆ ಸುರಕ್ಷಿತವಾಗಿದೆ.

ಮಾಸ್ಕ್‌ ಧರಿಸಿ

ಮಾಸ್ಕ್‌ ಧರಿಸಿ

* ಮನೆಯಿಂದ ಹೊರಗಡೆ ಕಾಲಿಡುವಾಗ ಮಾಸ್ಕ್‌ ಧರಿಸಿ.

ಈ ಇತರರು ಧರಿಸಿಲ್ಲ, ನಾನೂ ಧರಿಸಲ್ಲ ಎಂದು ಯೋಚಿಸಬೇಡಿ, ನಿಮ್ಮ ಸುರಕ್ಷತೆಗಾಗಿ ನೀವು ಮಾಸ್ಕ್‌ ಧರಿಸಿ.

* ಜನ ದಟ್ಟಣೆ ಇರುವ ಕಡೆ ಓಡಾಡುವಾಗ ಡಬಲ್‌ ಲೇಯರ್‌ ಮಾಸ್ಕ್‌ ಧರಿಸಿ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಹೊರಗಡೆ ನೂಕು-ನುಗ್ಗಲು ಇರುವ ಕಡೆ ಹೋಗಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅದರಲ್ಲೂ ನಿಮಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ತುಂಬಾನೇ ಎಚ್ಚರವಹಿಸಿ.

* ಇನ್‌ಡೋರ್‌ ಗಾಳಿಯಾಡುವಂತೆ ಇರಬೇಕು, ಆಫೀಸ್‌ನಲ್ಲಿ ಕಿಟಕಿಗಳನ್ನು ತೆರೆದಿಡುವುದು, ಗಾಳಿ ಹೆಚ್ಚು ಓಡಾಡುವಂತೆ ಇರುವುದು ಸುರಕ್ಷಿತ.

ರೋಗ ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕವಾಗಿ ಇತರರಿಗೆ ಹರಡದಂತೆ ಎಚ್ಚರವಹಿಸಿ

ರೋಗ ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕವಾಗಿ ಇತರರಿಗೆ ಹರಡದಂತೆ ಎಚ್ಚರವಹಿಸಿ

* ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಐಸೋಲೇಟ್ ಆಗಿ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟಿ.

* ಮನೆಯಲ್ಲಿಯೇ ಕಿಟ್‌ ಇದ್ದರೆ ಪರೀಕ್ಷೆ ಮಾಡಿ, ಇಲ್ಲದಿದ್ದರೆ ಸಮೀಪದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿ.

 ಕೈಗಳನ್ನು ಆಗಾಗ ತೊಳೆಯುತ್ತಾ ಇರಿ

ಕೈಗಳನ್ನು ಆಗಾಗ ತೊಳೆಯುತ್ತಾ ಇರಿ

* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.

* ಕೈಗಳಿಗೆ ಸ್ಯಾನಿಟೈಸ್ ಬಳಸಿ.

ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ

ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ

* ನೀವು ಯಾವಾಗಲೂ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ.

* ಕೆಮ್ಮಿದ ಮೇಲೆ, ಸೀನಿದ ಮೇಲೆ ಕೈಗಳನ್ನು ತೊಳೆಯಿರಿ.

 ಆಗಾಗ ಮುಟ್ಟುವ ವಸ್ತುಗಳನ್ನು ಸ್ವಚ್ಛ ಮಾಡಿ

ಆಗಾಗ ಮುಟ್ಟುವ ವಸ್ತುಗಳನ್ನು ಸ್ವಚ್ಛ ಮಾಡಿ

ನಿಮ್ಮ ವರ್ಕ್‌ ಡೆಸ್ಕ್‌, ಲ್ಯಾಪ್‌ ಟ್ಯಾಪ್‌, ಮೊಬೈಲ್‌ ಇವುಗಳ ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಿ.

ನಿಮ್ಮ ಅಕ್ಕ-ಪಕ್ಕ ಕೂರುವವರಿಗೆ ಕೋವಿಡ್‌ 19 ಬಂದರೆ ನಿಮಗೆ ರೋಗ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಿ.

English summary

Back to office: How To Protect Yourself And Others During This Covid 19 time in kannada

Back to office: How To Protect Yourself And Others During This Covid 19 time in kannada, read on...
Story first published: Saturday, June 4, 2022, 14:16 [IST]
X
Desktop Bottom Promotion