For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಟಿಪ್ಸ್

|

ಇದೀಗ ಕೊರೊನಾ ಎರಡನೇ ಅಲೆಯ ಆತಂಕ ಶುರುವಾಗಿದೆ. ಮೊದಲನೇಯ ಅಲೆಯೇ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಮತ್ತೊಮ್ಮೆ ಕೊರೊನಾ ಹೆಚ್ಚಾಗುತ್ತಿರುವುದರಿಂದ ಜನರು ಈ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು. ಒಂದು ಚಿಕ್ಕ ನಿರ್ಲಕ್ಷ್ಯ ದೊಡ್ಡ ಆಪತ್ತು ತರಬಹುದು.

Ayurveda’s immunity boosting tips

ಇನ್ನು ಇದರ ಜೊತೆಗೆ ನಾವು ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆಯೂ ಗಮನ ನೀಡಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಕೋವಿಡ್ 19 ತಗುಲುವ ಅಪಾಯ ಕಡಿಮೆ ಎಂದು ಸಂಶೋಧನೆಗಳು ಹೇಳಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಗಿಡ ಮೂಲಿಕೆಯ ಔಷಧಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ವ್ಯಕ್ತಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಇಲಾಖೆ ಕೂಡ ಕೆಲವೊಂದು ಮಾರ್ಗದರ್ಶನ ನೀಡಿದೆ. ಅವುಗಳೇನು ಎಂದು ನೋಡೋಣ:

 ಸಾಮಾನ್ಯವಾಗಿ ನೀವು ಮಾಡಬೇಕಾಗಿರುವುದು

ಸಾಮಾನ್ಯವಾಗಿ ನೀವು ಮಾಡಬೇಕಾಗಿರುವುದು

* ಬಿಸಿ ಬಿಸಿಯಾದ ನೀರು ಕುಡಿಯಿರಿ.

* ದಿನಾ 30 ನಿಮಿಷ ಯೋಗಾಸನ, ಪ್ರಾಣಯಾಮ, ಧ್ಯಾನ ಮಾಡಿ.

* ಆಹಾರದಲ್ಲಿ ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ ಮತ್ತು ಬೆಳ್ಳುಳ್ಳಿ ಬಳಸಿ.

 ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು

* ದಿನಾ ಬೆಳಗ್ಗೆ 1 ಚಮಚ ಚವ್ಯನಪ್ರಾಶ ತೆಗೆದುಕೊಳ್ಳಿ. ಮಧುಮೇಹ ಇರುವವರು ಶುಗರ್‌ಲೆಸ್‌ ಚವ್ಯನಪ್ರಾಶ ತೆಗೆದುಕೊಳ್ಳಿ.

* ಹರ್ಬಲ್ ಟೀ ಕುಡಿಯಿರಿ,

* ಕಷಾಯ ಮಾಡಿ ಕುಡಿಯಿರಿ.

* ನಿಂಬೆ ಪಾನೀಯ ಮಾಡಿ ಕುಡಿಯಿರಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ವಿಧಾನಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ವಿಧಾನಗಳು

* ಮೂಗಿಗೆ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಹಾಗೂ ಸಂಜೆ ಸವರಿ.

* ಆಯಿಲ್‌ ಪುಲ್ಲಿಂಗ್‌ ಅಂದ್ರೆ 1 ಚಮಚ ಎಣ್ಣೆ ಹಾಕಿ ಬಾಯಿ ಮುಕ್ಕಳಿಸಿ. ಇದರಿಂದ ಬಾರಿಯಲ್ಲಿರುವ ಕೀಟಾಣುಗಳನ್ನು ಕೊಲ್ಲಬಹುದು. ಇದರಲ್ಲಿ ಒಂದು ಚಮಚ ಎಣ್ಣೆ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಬೇಕು, ಆದ್ರೆ ನುಂಗಬಾರದು. 2-3 ನಿಮಿಷ ಬಾಯಿ ಮುಕ್ಕಳಿಸಿ. ನಂತರ ಬಾಯಿಗೆ ನೀರು ಹಾಕಿ, ಬಾಯಿ ಮುಕ್ಕಳಿಸಿ. ಈ ರೀತಿ ದಿನದಲ್ಲಿ ಒಂದು ಬಾರಿ ಮಾಡಿ.

* ಕುದಿಯುವ ನೀರಿಗೆ ಪುದೀನಾ ಎಲೆ ಅಥವಾ ಅಜ್ವೈನ್ ಹಾಕಿ ಹಬೆ ತೆಗೆದುಕೊಳ್ಳಿ, ಈ ರೀತಿ ದಿನದಲ್ಲಿ ಒಮ್ಮೆ ಮಾಡಿ.

* ಒಣಕೆಮ್ಮು, ಗಂಟಲು ಕೆರೆತ ಇದ್ರೆ ಲವಂಗ ಪುಡಿಯನ್ನುಒಂದು ಚಮಚ ಜೇನಿನಲ್ಲಿ ಮಿಶ್ರ ಮಾಡಿ ದಿನದಲ್ಲಿ ಒಮ್ಮೆ ತೆಗೆದುಕೊಳ್ಳಿ.

ಕಷಾಯ ಮಾಡುವುದು ಹೇಗೆ?

ಕಷಾಯ ಮಾಡುವುದು ಹೇಗೆ?

ಒಂದು ಲೀಟರ್ ಜೀರಿಗೆ, ಚಕ್ಕೆ, ಲವಂಗ, ಒಣ ಶುಂಠಿ, ಒಣ ದ್ರಾಕ್ಷಿ, ಬೆಲ್ಲ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರು ಒಂದೊಮದು ಲೋಟ ಕುಡಿಯರಿ.

ಸೂಚನೆ: ಇವುಗಳು ಕೊರೊನಾಗೆ ಔಷಧಿಯಲ್ಲ, ಇವುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಅಷ್ಟೇ.

English summary

Ayurveda’s Immunity Boosting Measures For Self Care During COVID 19 Pandemic

Ayurveda’s immunity boosting measures for self care during COVID 19 pandemic, Have a look...
Story first published: Tuesday, March 23, 2021, 11:45 [IST]
X
Desktop Bottom Promotion