For Quick Alerts
ALLOW NOTIFICATIONS  
For Daily Alerts

ಹೆಚ್ಚುತ್ತಿರುವ ಡೆಂಗ್ಯೂ ಕಾಟ: ಮಕ್ಕಳನ್ನು ಕಾಪಾಡಲು ಇಲ್ಲಿದೆ ಟಿಪ್ಸ್

|

ಮಳೆಗಾಲ ಬಂತೆಂದರೆ ಸಾಮಾನ್ಯ ಶೀತ, ಜ್ವರ, ಕೆಮ್ಮು ಜೊತೆಗೆ ಡೆಂಗ್ಯೂ, ಮಲೇರಿಯಾ ಮುಂತಾದ ಮಾರಾಣಾಂತಿಕ ರೋಗಗಳು ಕಾಡಲಾರಂಭಿಸುತ್ತದೆ. ಆದರೆ ಈ ವರ್ಷದ ಪರಿಸ್ಥಿತಿ ಸಂಪೂರ್ಣ ಭಿನ್ನ ಎಲ್ಲಾ ರೋಗಕ್ಕಿಂತ ತುಂಬಾ ಭಯಾನಕವಾಗಿ ಕೊರೊನಾವೈರಸ್‌ ಮನುಕುಲವನ್ನು ಕಾಡುತ್ತಿದೆ.

How To Prevent Mosquito To Avoid Dengue

ಕೊರೊನಾವೈರಸ್‌ ಬಾರದಂತೆ ಎಚ್ಚರಿಕೆವಹಿಸುವುದರ ಜೊತೆಗೆ ಮಳೆಗಾಲದಲ್ಲಿ ಕಾಡುವ ಇತರ ಕಾಯಿಲೆ ಬಗ್ಗೆಯೂ ನಾವು ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಾಗಿದೆ. ಕೆಲವು ಕಡೆ ಡೆಂಗ್ಯೂ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಜ್ವರ ಅಂತ ಆಸ್ಪತ್ರೆಗೆ ಹೋದರೆ ಮೊದಲು ಕಳುಹಿಸುವುದೇ ಕೋವಿಡ್ 19 ಪರೀಕ್ಷೆ ಮಾಡಿಸಲು. ಆದ್ದರಿಂದ ಯಾವುದೇ ಜ್ವರ ಬರದಂತೆ ತುಂಬಾ ಎಚ್ಚರಿಕೆವಹಿಸುವುದು ಒಳ್ಳೆಯದು

ಡೆಂಗ್ಯೂ ಕಾಯಿಲೆ ಸೊಳ್ಳೆಗಳ ಮೂಲಕ ಹರಡುವುದರಿಂದ ಸೊಳ್ಳೆ ಕಚ್ಚದಂತೆ ಎಚ್ಚರಿಕೆವಹಿಸಬೇಕು. ಇಲ್ಲಿ ನಾವು ಸೊಳ್ಳೆ ಕಚ್ಚುವುದು ತಡೆಗಟ್ಟುವುದು ಹೇಗೆ? ಮಕ್ಕಳನ್ನು ಸೊಳ್ಳೆ ಕಡಿತದಿಂದ ರಕ್ಷಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಪ್ರತೀವರ್ಷ 400 ಮಿಲಿಯನ್‌ಗೂ ಅಧಿಕ ಜನರಿಗೆ ಡೆಂಗ್ಯೂ ಉಂಟಾದರೆ ಅದರಲ್ಲಿ 100 ಮಿಲಿಯನ್‌ಗೂ ಅಧಿಕ ಜನರ ಆರೋಗ್ಯ ಸ್ಥಿತಿ ಗಂಭೀರವಾಗುತ್ತದೆ. ಡೆಂಗ್ಯೂ ಸೊಳ್ಳೆ ಕಚ್ಚಿದರಿಗೆ ಕೆಲವರಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ, ಡೆಂಗ್ಯೂ ಸೊಳ್ಳೆ ಕಚ್ಚಿದ ನಾಲ್ವರಲ್ಲಿ ಒಬ್ಬರಿಗೆ ಮಾತ್ರ ಡೆಂಗ್ಯೂ ಲಕ್ಷಣಗಳು ಕಂಡು ಬರುವುದು.

ಡೆಂಗ್ಯೂ ಲಕ್ಷಣಗಳು

ಡೆಂಗ್ಯೂ ಲಕ್ಷಣಗಳು

ಡೆಂಗ್ಯೂ ಸಾಮಾನ್ಯ ಲಕ್ಷಣಗಳೆಂದರೆ ಜ್ವರ ಹಾಗೂ ಈ ಕೆಳಗಿನವುಗಳಲ್ಲಿ ಒಂದು ಲಕ್ಷಣ ಕಂಡು ಬರುವುದು, ಕೆಲವರಲ್ಲಿ ಜ್ವರ ಕಡಿಮೆಯಾದ ಬಳಿಕ ಈ ಲಕ್ಷಣಗಳು ಕಂಡು ಬರುವುದು:

  • ತಲೆನೋವು
  • ಕಣ್ಣುನೋವು
  • ಸ್ನಾಯುಗಳಲ್ಲಿ ನೋವು
  • ಮೈಯಲ್ಲಿ ಗುಳ್ಳೆಗಳು ಏಳುವುದು
  • ತಲೆಸುತ್ತು ಮತ್ತು ವಾಂತಿ
  • ವಸಡುಗಳಲ್ಲಿ ರಕ್ತಸ್ರಾವ, ತ್ವಚೆಯಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುವುದು
  • ಗಂಭೀರ ಲಕ್ಷಣಗಳು
  • ರಕ್ತವಾಂತಿ, ಮಲದಲ್ಲಿ ರಕ್ತ
  • ತುಂಬಾ ವಾಂತಿ
  • ಮೂಗು,ವಸಡುಗಳಲ್ಲಿ ರಕ್ತಸ್ರಾವ
  • ಕೆಳಹೊಟ್ಟೆ ನೋವು
  • ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಿಗೆ ತೋರಿಸಿ.

    ಡೆಂಗ್ಯೂ ತಡೆಗಟ್ಟುವುದು ಹೇಗೆ?

    ಡೆಂಗ್ಯೂ ತಡೆಗಟ್ಟುವುದು ಹೇಗೆ?

    • ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ಡೆಪ್ಲೆಂಟ್ಸ್ (ಸೊಳ್ಳೆ ಬತ್ತಿಗಳು, ಸ್ಪ್ರೇ ) ಬಳಸಬಹುದು. EPA ನೋಂದಾಯಿತ ರೆಪ್ಲೆಂಟ್ಸ್ ಅನ್ನು ಮಕ್ಕಳು ಹಾಗೂ ಗರ್ಭಿಣಿಯರು ಬಳಸಲು ಸೂಕ್ತವಾಗಿದೆ.
    • ರೆಪ್ಲೆಂಟ್‌ ಕೊಳ್ಳುವಾಗ ಅದರಲ್ಲಿ ಬರದಿರುವ ಸೂಚನೆಗಳನ್ನು ಓದಿ
    • ಸ್ಪ್ರೇ ಅನ್ನು ಬಟ್ಟೆಗೆ ಹಾಕಬೇಕು, ತ್ವಚೆಗೆ ಹಾಕಬೇಡಿ
    • ಸನ್‌ ಸ್ಕ್ರೀನ್ ಲೋಷನ್ ಬಳಸುವುದಾದರೆ ಮೊದಲು ಸನ್‌ಸ್ಕ್ರೀನ್ ಲೋಷನ್ ಹಚ್ಚಿ, ನಂತರ ಸೊಳ್ಳೆ ಕಚ್ಚದಿರಲು ಕ್ರೀಮ್ ಬಳಸಬಹುದು.
    • ಶಿಶು ಹಾಗೂ ಮಕ್ಕಳನ್ನು ಸೊಳ್ಳೆಯಿಂದ ರಕ್ಷಿಸುವುದು ಹೇಗೆ?

      ಶಿಶು ಹಾಗೂ ಮಕ್ಕಳನ್ನು ಸೊಳ್ಳೆಯಿಂದ ರಕ್ಷಿಸುವುದು ಹೇಗೆ?

      • ಮಕ್ಕಳಿಗೆ ಸಡಿಲವಾದ ಹಾಗೂ ಕೈ, ಕಾಲುಗಳು ಮುಚ್ಚುವಂಥ ಉಡುಪು ಹಾಕಿ.
      • ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವಾಗ ಸೊಳ್ಳೆ ಬರದಂತೆ ಸೊಳ್ಳೆ ಬರದೆ ಬಳಸಿ
      • ಮಗುವಿಗೆ ರೆಪ್ಲೆಂಟ್ ಬಳಸುವಾಗ
      • ಲೇಬಲ್ ಮೇಲೆ ಬರೆದಿರುವ ಸೂಚನೆಗಳನ್ನು ತಪ್ಪದೆ ಓದಬೇಕು
      • 3 ವರ್ಷದ ಕೆಳಗಿನ ಮಕ್ಕಳಿಗೆ ನೀಲಗಿರಿ ಎಣ್ಣೆಯ ಅಂಶವಿರುವ ವಸ್ತು ಬಳಸಬೇಡಿ
      • ಇನ್ನು ಸೊಳ್ಳೆಕಚ್ಚದಂತೆ ಮಕ್ಕಳಿಗೆ ಕ್ರೀಮ್ ಅಥವಾ ಲೋಷನ್ ಹಚ್ಚುವಾಗ ಕಣ್ಣು, ಬಾಯಿ, ಕೈ ಹಾಗೂ ಕಾಲುಗಳಿಗೆ ಹಚ್ಚ ಬೇಡಿ, ಮಕ್ಕಳು ಕೈ, ಕಾಲು ಬಾಯಿಗೆ ಹಾಕುವಾಗ ಈ ರಾಸಾಯನಿಕಗಳು ಮಕ್ಕಳ ಹೊಟ್ಟೆ ಸೇರುತ್ತದೆ.
      • ಸೂಚನೆ: ಮಗುವಿಗೆ ಹಾಕುವ ಮುನ್ನ ನಿಮ್ಮ ಕೈಗಳಿಗೆ ಮೊದಲು ಹಾಕಿ, ನಂತರ ಮಗುವಿನ ಮುಖಕ್ಕೆ ಹಚ್ಚಬೇಕು.

        ಮನೆಯಿಂದ ಹೊರಗೆ ಹಾಗೂ ಒಳಗೆ ಸೊಳ್ಳೆ ನಿಯಂತ್ರಣಕ್ಕೆ ಟಿಪ್ಸ್

        ಮನೆಯಿಂದ ಹೊರಗೆ ಹಾಗೂ ಒಳಗೆ ಸೊಳ್ಳೆ ನಿಯಂತ್ರಣಕ್ಕೆ ಟಿಪ್ಸ್

        • ಕಿಟಕಿಗಳಿಗೆ ಸೊಳ್ಳೆ ಬಾರದಂತೆ ಸೊಳ್ಳೆ ನೆಟ್ ಹಾಕಿಸಿ
        • ಏರ್‌ ಕಂಡೀಷನರ್‌ ಕೋಣೆಯಲ್ಲಿ ಸೊಳ್ಳೆ ಬಕಾಟ ಇರುವುದಿಲ್ಲ, ಏರ್‌ ಕಂಡೀಷನರ್ ಇಲ್ಲದ ಕೋಣೆಯಲ್ಲಿ ಸೊಳ್ಳೆ ಪರದೆ ಬಳಸಿ.
        • ವಾರಕ್ಕೊಮ್ಮೆ ಕೋಣೆಯಲ್ಲಿರುವ ವಸ್ತುಗಳನ್ನೆಲ್ಲಾ ಎಳೆದು ಹೊರಹಾಕಿ ಸ್ವಚ್ಛ ಮಾಡಿ ನಂತರ ಜೋಡಿಸಿ.
        • ಮನೆ ಸುತ್ತ ನೀರು ನಿಲ್ಲಲು ಬಿಡಬೇಡಿ, ಹಳೆಯ ಟೈರ್, ಬಕೆಟ್, ಆಟಿಕೆಗಳು ಇವುಗಳೆನ್ನೆಲ್ಲಾ ಮನೆ ಸುತ್ತು ಗುಡ್ಡೆ ಹಾಕಬೇಡಿ. ಇನ್ನು ಬಕೆಟ್, ಡ್ರಮ್‌ಗಳಲ್ಲಿ ನೀರು ತುಂಬಿ ಬಳಸದೆ ತುಂಬಾ ದಿನ ಹಾಗೇ ಇಡಬೇಡಿ, ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕುತ್ತವೆ.
        • ಕಪ್ಪು ಬಣ್ಣದ ಬಟ್ಟೆಗಿಂತ ಲೈಟ್‌ ಕಲರ್‌ ಬಟ್ಟೆ ಧರಿಸಿ, ಕಪ್ಪು ಬಣ್ಣ ಸೊಳ್ಳೆಗಳನ್ನು ಬೇಗನೆ ಆಕರ್ಷಿಸುತ್ತವೆ.
        •  ಪ್ರಯಾಣ ಮಾಡುತ್ತಿದ್ದೀರಾ?

          ಪ್ರಯಾಣ ಮಾಡುತ್ತಿದ್ದೀರಾ?

          ನೀವು ಪ್ರಯಾಣ ಮಾಡುವಾಗ ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಪ್ರಯಾಣ ಮಾಡುವುದಾದರೆ ಸೊಳ್ಳೆಗಳ ಬಗ್ಗೆ ಮುನ್ನೆಚ್ಚರಿಕೆಕ್ರಮಗಳನ್ನು ವಹಿಸಲೇಬೇಕು. ರಿಪ್ಲೆಂಟ್, ಸೊಳ್ಳೆ ಪರದೆ, ಸೊಳ್ಳೆ ಬ್ಯಾಟ್ ಜೊತೆಗೇ ಕೊಂಡೊಯ್ಯಿರಿ.

English summary

Avoid Dengue by Preventing Mosquito Bites

Use insect repellent, wear long-sleeved shirts and long pants, and control mosquitoes inside and outside your home.
X
Desktop Bottom Promotion