For Quick Alerts
ALLOW NOTIFICATIONS  
For Daily Alerts

ಸಣ್ಣ ಪ್ರಾಯದಲ್ಲಿಯೇ ಕಾಡುತ್ತಿರುವ ಸಂಧಿವಾತಕ್ಕೆ ಕಾರಣವೇನು?

|

ಪ್ರತಿವರ್ಷ ಮೇ 20ನ್ನು ಆಟೋ ಇಮ್ಯೂನ್ ಸಂಧಿವಾತದ ದಿನವನ್ನಾಗಿ ಆಚರಿಸಲಾಗುವುದು. ಜನರಲ್ಲಿ ಸಂಧಿವಾತ ತಡೆಗಟ್ಟುವುದು ಹೇಗೆ ಎಂದು ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು. ನಾವು ಈ ಲೇಖನದಲ್ಲಿ ಆಟೋ ಇಮ್ಯೂನ್ ಸಂಧಿವಾತಕ್ಕೆ ಕಾರಣ, ಅದರ ಲಕ್ಷಣಗಳು, ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಯೋಣ..

Autoimmune Arthritis: Causes, Symptoms, Diagnosis And Treatment

ಸಂಧಿವಾತದಲ್ಲಿ ಹಲವಾರು ವಿಧಗಳಿವೆ. ರುಮಟಾಯ್ಡ್‌ ಸಂಧಿವಾವನ್ನು ಆಟೋ ಇಮ್ಯೂನ್‌ ಸಂಧಿವಾತವೆಂದು ಕರೆಯಲಾಗುವುದು. ಈ ಕಾಯಿಲೆಯಲ್ಲಿ ಸಾಮಾನ್ಯವಾಗಿ ಹೊರಗಿನ ವಸ್ತುಗಳು, ಬ್ಯಾಕ್ಟೀರಿಯಾ, ವೈರಸ್‌ ಮುಂತಾದವುಗಳ ಮೇಲೆ ದಾಳಿ ಮಾಡಿ ಆರೋಗ್ಯವನ್ನು ಸಂರಕ್ಷಿಸುವ ಶರೀರದ ಪ್ರತಿರಕ್ಷಣಾ ವ್ಯವಸ್ಥೆಯು ಅಂದರೆ ಆ್ಯಂಟಿಬಾಡಿಗಳು ತಪ್ಪಾಗಿ ಕೀಲುಗಳ ಮೇಲೂ ದಾಳಿ ಮಾಡಿಬಿಡುತ್ತವೆ. ಇದರಿಂದಾಗಿ ಉರಿಯೂತದ ಸಮಸ್ಯೆ ಹೆಚ್ಚಾಗಿ ಕೀಲುಗಳ ಒಳಗಿನ ಲೈನ್‌ಗಳನ್ನು ದಪ್ಪಗೊಳಿಸುವ ಕೋಶಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಕೀಲುಗಳ ಸುತ್ತಲೂ ಊತ ಹಾಗೂ ನೋವು ಉಂಟು ಮಾಡುತ್ತದೆ.
ಸಣ್ಣ ಪ್ರಾಯದಲ್ಲಿಯೇ ಕಾಡುತ್ತಿರುವ ಸಂಧಿವಾತ

ಸಣ್ಣ ಪ್ರಾಯದಲ್ಲಿಯೇ ಕಾಡುತ್ತಿರುವ ಸಂಧಿವಾತ

ಸಂಧಿವಶತದ ಸಮಸ್ಯೆ ವಯಸ್ಸಾದವರಲ್ಲಿ ಮಾತ್ರವಲ್ಲ, ಸಣ್ಣ ಪ್ರಾಯದವರಲ್ಲೂ ಕಂಡು ಬರುತ್ತಿದೆ. ಸರಿಯಾಗಿ ವ್ಯಾಯಾಮ ಮಾಡದಿರುವ, ಕೂರುವ ಭಂಗಿ ಸರಿಯಾಗಿರದೆ ಇದ್ದರೆ, ಕಂಪ್ಯೂಟರ್ ಮುಂದೆ ತುಂಬಾ ಹೊತ್ತು ಕೂರುವುದು, ಅನಾರೋಗ್ಯಕರ ಆಹಾರಶೈಲಿ ಇವುಗಳೆಲ್ಲಾ ಸಂಧಿವಾತ ಬರಲು ಪ್ರಮುಖ ಕಾರಣಗಳಾಗಿವೆ. ಮಂಡಿ ಕೀಲಿನ ಸಂಧಿವಾತ ಹಾಗೂ ಇತರ ಕೀಲುಗಳು, ಲಿಗಮೆಂಟ್‌ ಸಮಸ್ಯೆಯಿಂದ ಬಳಲುತ್ತಿರುವ ಯುವಕರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯೇಆಗಿದೆ. ಚಿಕ್ಕ ಪ್ರಾಯದಲ್ಲಿಯೇ ಸಂಧಿವಾತದ ಸಮಸ್ಯೆ ಕಾಣಿಸಿದರೆ ಅದು ವರ್ಷಗಳು ಕಳೆಯುತ್ತಿದ್ದಂತೆ ನೋವು ಹೆಚ್ಚಾಗುತ್ತಾ ಹೋಗುವುದು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸೇ.15ರಷ್ಟು ಮಂದಿ ಸಂಧಿವಾತದ ಸಮಸ್ಯೆಯಿಮದ ಬಳಲುತ್ತಿದ್ದಾರೆ. ಇದು ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆಗಿಂತಲೂ ಅಧಿಕವಾಗಿದೆ. ಸಂಧಿವಾತದ ಸಮಸ್ಯೆ ಆ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ನೋವಿನಿಂದಾಗಿ ಖಿನ್ನತೆ ಅನುಭವಿಸುತ್ತಿದ್ದಾರೆ.

ಆಟೋ ಇಮ್ಯೂನ್ ಸಂಧಿವಾತದ ಲಕ್ಷಣಗಳು

ಆಟೋ ಇಮ್ಯೂನ್ ಸಂಧಿವಾತದ ಲಕ್ಷಣಗಳು

  • ಮಂಡಿಯ ಕೀಲುಗಳಲ್ಲಿ ನೋವು
  • ಕಾಲು ಅಲುಗಾಡಿಸಲು ಸಾಧ್ಯವಾಗದೇ ಇರುವುದು
  • ಬಾಯಿ ಒಣಗುವುದು
  • ನಿದ್ದೆ ಸರಿಯಾಗಿ ಬಾರದೇ ಇರುವುದು
  • ತಲೆಸುತ್ತು
  • ಜ್ವರ
  • ರಕ್ತಹೀನತೆ
  • ತೂಕ ಇಳಿಕೆ
  • ಸಂಧಿಗಳಲ್ಲಿ ಊತ
  • ಸಂಧಿಗಳಲ್ಲಿ ವಿಪರೀತ ನೋವು
  • ರುಮಟಾಯ್ಡ್ ಸಂಧಿವಾತ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ

    ರುಮಟಾಯ್ಡ್ ಸಂಧಿವಾತ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ

    • ವಯಸ್ಸಾದವರಲ್ಲಿ
    • ವಂಶಪಾರಂಪರ್ಯವಾಗಿಯೂ ಬರಬಹುದು
    • ಧೂಮಪಾನಿಗಳಲ್ಲಿ
    • ಅನಾರೋಗ್ಯ ಜೀವನಶೈಲಿ ಪಾಲಿಸುತ್ತಿರುವವರಲ್ಲಿ
    • ಪತ್ತೆ ಮತ್ತು ಚಿಕಿತ್ಸೆ

      ಪತ್ತೆ ಮತ್ತು ಚಿಕಿತ್ಸೆ

      ಸಂಧಿವಾತದ ಸಮಸ್ಯೆ ಕಾಣಿಸಿಕೊಂಡಾಗ ಎಕ್ಸ್ರೇ, CT ಸ್ಕ್ಯಾನ್‌, MRI ಸ್ಕ್ಯಾನ್‌ ಮಾಡಿಸಿ ಸಮಸ್ಯೆ ಪತ್ತೆ ಹಚ್ಚಬಹುದು. ರೋಗದ ತೀವ್ರತೆ ಮೇಲೆ ವೈದ್ಯರು ಯಾವ ಚಿಕಿತ್ಸೆ ಎಂದು ಸೂಚಿಸುತ್ತಾರೆ. ಇನ್ನು ಕೆಲವು ಥೆರಪಿಗಳ ಮೂಲಕ ಮಂಡಿನೋವು ಕಡಿಮೆಯಾಗುವುದು.

      ಆಟೋ ಇಮ್ಯೂನ್ ಸಂಧಿವಾತ ತಡೆಗಟ್ಟಲು ಜೀವನ ಶೈಲಿ ಹೀಗಿರಲಿ

      ಆಟೋ ಇಮ್ಯೂನ್ ಸಂಧಿವಾತ ತಡೆಗಟ್ಟಲು ಜೀವನ ಶೈಲಿ ಹೀಗಿರಲಿ

      • ವ್ಯಾಯಾಮ ಮಾಡಿ, ಮೈತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಮೈ ತೂಕ ಹೆಚ್ಚಾದರೆ ಮಂಡಿಯ ಮೇಲೆ ಒತ್ತಡ ಬೀಳುವುದು, ಇದರಿಂದ ಮಂಡಿನೋವು ಕಾಣಿಸಿಕೊಳ್ಳುವುದು.
      • ಸಾಕಷ್ಟು ನೀರು ಕುಡಿಯಿರಿ. ಇದರಿಂದಾಗಿಕೀಲುಗಳ ಕಾರ್ಟಿಲೇಜ್‌ ತೇವಾಂಶದಿಂದ ಕೂಡಿರುತ್ತದೆ ಮತ್ತು ಇದರ ಪರಿಣಾಮವಾಗಿ ಮೂಳೆಗಳು ಒಂದಕ್ಕೊಂದು ಘರ್ಷಿಸದಂತೆ ಆರೋಗ್ಯಪೂರ್ಣವಾಗಿರುತ್ತವೆ.
      • ಆಹಾರಕ್ರಮ ಹೀಗಿರಲಿ'ಪೌಷ್ಠಿಕಾಂಶದ ಆಹಾರಸೇವನೆ ಮಾಡಿ. ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಇರುವ ಆಹಾರಸೇವಿಸಿ.
      • ಗಾಯಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ವಯಸ್ಸು ಯಾವುದೇ ಇರಲಿ ಮಂಡಿಗೆ ಪೆಟ್ಟಾಗಿದ್ದರೆ ಬೇಗನೆ ಗುಣಪಡಿಸಿ. ಹರಿದ ಲಿಗಮೆಂಟ್‌, ಹರಿದ ಕಾರ್ಟಿಲೇಜ್‌ ಅಥವಾ ಮುರಿದ ಮೂಳೆಗಳು ಸಂಧಿವಾತಕ್ಕೆ ಕಾರಣವಾಗುತ್ತವೆ.
English summary

Autoimmune Arthritis: Causes, Symptoms, Diagnosis And Treatment

Autoimmune arthritis refers to a group of different types of arthritis conditions. Autoimmune arthritis occurs when the body's immune system mistakenly attacks the normal healthy cells, resulting in inflammation in the joints that can cause pain, stiffness and difficulty in movement.
X
Desktop Bottom Promotion