For Quick Alerts
ALLOW NOTIFICATIONS  
For Daily Alerts

ಸಹಿಸಲು ಅಸಾಧ್ಯವಾದ ಮುಟ್ಟಿನ ನೋವು ಥಟ್ಟನೆ ನಿಲ್ಲಿಸುವ ಮನೆಮದ್ದು

|

ಮುಟ್ಟು ಎಂಬುವುದು ಹದಿ ಹರೆಯದ ಪ್ರಾಯದಿಂದ ಮೆನೋಪಾಸ್‌ವರೆಗೆ ಪ್ರತೀ ತಿಂಗಳು ನೈಸರ್ಗಿಕ ಪ್ರಕ್ರಿಯೆ. ಈ ಸಮಯದಲ್ಲಿ ಕೆಲವರಿಗೆ ಕಿರಿಕಿರಿ ಅನಿಸಿದರೆ ಇನ್ನು ಕೆಲವರಿಗೆ ತುಂಬಾ ಹೊಟ್ಟೆ ನೋವು ಉಂಟಾಗುವುದು. ಈ ನೋವು ಶಮನವಾಗಲು ಮಾತ್ರೆ ತೆಗೆದುಕೊಳ್ಳುತ್ತಾರೆ, ಆದರೆ ಮಾತ್ರೆ ತೆಗೆದುಕೊಳ್ಳುವುದು ಆರೊಗ್ಯಕರವಲ್ಲ, ಅದರ ಬದಲಿಗೆ ನೈಸರ್ಗಿಕ ಮನೆಮದ್ದುಗಳನ್ನು ಮಾಡಬೇಕು.

ಮುಟಟಿನ ಹೊಟ್ಟೆನೋವು ಕಡಿಮೆ ಮಾಡಲು ಅನೇಕ ಮನೆಮದ್ದುಗಳಿವೆ, ಇಲ್ಲಿ ನಾವು ಅಂಥದ್ದೇ ಮನೆಮದ್ದು ಹೇಳಿದ್ದೇವೆ. ಈ ಮನೆಮದ್ದು ಕುಡಿದರೆ ನಿಮ್ಮ ಮುಟ್ಟಿನ ನೋವು ಕೆಲವೇ ಹೊತ್ತಿನಲ್ಲಿ ಮಾಯವಾಗುವುದು. ಆ ಮನೆಮದ್ದು ಯಾವುದು, ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ:

ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಅಜ್ವೈನ್‌ ತುಂಬಾ ಪರಿಣಾಮಕಾರಿ. ಅಜ್ವೈನ್‌ ಟೀ ಮಾಡಿ ಕುಡಿಯಬೇಕು, ಅದನ್ನು ತಯಾರಿಸುವುದು ಹೇಗೆ? ಈ ಅಜ್ವೈನ್‌ ಟೀ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೇನು? ಎಂದು ನೋಡೋಣ ಬನ್ನಿ:

ಅಜ್ವೈನ್‌ ಟೀಗೆ ಬೇಕಾಗುವ ಸಾಮಗ್ರಿ ಹಾಗೂ ಅದರ ಗುಣಗಳು

ಅಜ್ವೈನ್‌ ಟೀಗೆ ಬೇಕಾಗುವ ಸಾಮಗ್ರಿ ಹಾಗೂ ಅದರ ಗುಣಗಳು

1.ಅಜ್ವೈನ್‌

2.ಟೀ ಎಲೆ

3. ಬೆಲ್ಲ

4. ತುಪ್ಪ

ಅಜ್ವೈನ್‌:

ಅಜ್ವೈನ್‌:

ಅಜ್ವೈನ್‌ನಲ್ಲಿ ನಾರಿನಂಶ ಅಧಿಕವಿದ್ದು, ವಿಟಮಿನ್ಸ್, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಇದ್ದು ಇದು ನೋವನ್ನು ಕಡಿಮೆ ಮಾಡುವುದು.

ಟೀ ಎಲೆ:

ಟೀ ಎಲೆ:

ಪಾಲಿಫೀನೋಲ್ಸ್ , ಟೀ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಾದ ಕ್ಯಾಟೆಚಿನ್‌ಗಳು, ಪಾಲಿಫೀನೋಲ್ಸ್ ಇದ್ದು ಇದು ಚಯಪಚಯ ಕ್ರಿಯೆಗೆ ಸಹಕಾರಿ, ಇದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಮುಟ್ಟು ಕಡಿಮೆಯಾಗುವುದು.

ಬೆಲ್ಲ:

ಬೆಲ್ಲ:

ಬೆಲ್ಲ ತಿನ್ನುವುದರಿಂದ ಹೀಮೋಗ್ಲೋಬಿನ್‌ ಹೆಚ್ಚುವುದು, ರಕ್ತ ಹೀನತೆ, ಸ್ನಾಯು ಸೆಳೆತ, ತಲೆಸುತ್ತು, ಅನಿಯಮಿತ ಮುಟ್ಟು ಇವುಗಳನ್ನು ತಡೆಗಟ್ಟುವಲ್ಲಿ ಬೆಲ್ಲ ಪ್ರಯೋಜನಕಾರಿ.

ತುಪ್ಪ:

ತುಪ್ಪ:

ತುಪ್ಪದಲ್ಲಿ ವಿಟಮಿನ್ ಎ, ಇ, ಡಿ ಇದ್ದು ಇದು ದೇಹವು ಖನಿಜಾಂಶಗಳು, ಕೊಬ್ಬಿನ ಆಮ್ಲಗಳು ಇವುಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ ಹಾಗೂ ಮುಟ್ಟಿನ ಸಮಯದಲ್ಲಿ ಕಾಡುವ ಸ್ನಾಯು ಸೆಳೆತ ಕಡಿಮೆ ಮಾಡುವುದು.

ಅಜ್ವೈನ್ ಟೀ ಮಾಡುವುದು ಹೇಗೆ?

ಅಜ್ವೈನ್ ಟೀ ಮಾಡುವುದು ಹೇಗೆ?

* ಒಂದು ಕಪ್‌ ನೀರಿಗೆ ಬೆಲ್ಲ ಹಾಕಿ ಕುದಿಸಿ

* ಅದಕ್ಕೆ 1/2 ಚಮಚ ಅಜ್ವೈನ್ ಹಾಕಿ ಕುದಿಸಿ

* ನಂತರ ಸ್ವಲ್ಪ ಟೀ ಎಲೆ ಹಾಕಿ ಕುದಿಸಿ.

* ನಂತರ ಟೀಯನ್ನು ಸೋಸಿ ಅದಕ್ಕೆ ಅರ್ಧ ಚಮಚ ತುಪ್ಪ ಹಾಕಿ ಕುಡಿಯಿರಿ.

ಈ ಟೀ ಕುಡಿದ ಅರ್ಧ ಗಂಟೆಗೆಲ್ಲಾ ನಿಮ್ಮ ಹೊಟ್ಟೆ ನೋವು, ಸ್ನಾಯು ಸೆಳೆತ, ಸುಸ್ತು ದೂರ ಓಡಿರುತ್ತದೆ.

English summary

Ajwain Tea Recipe To Relieve Period Pain/Menstrual pain in kannada

Ajwain tea recipe to relieve Period Pain/Menstrual pain in kannada....
Story first published: Wednesday, February 16, 2022, 12:16 [IST]
X
Desktop Bottom Promotion