For Quick Alerts
ALLOW NOTIFICATIONS  
For Daily Alerts

ಆಯುರ್ವೇದದಿಂದ ಮೈ ತೂಕ ಇಳಿಸುವುದು ಹೇಗೆ?

By Super
|

ಬೊಜ್ಜಿಗಾಗಿ ಆಯುರ್ವೇದ ಚಿಕಿತ್ಸೆ ಆರಂಭವಾಗುವುದು ದೇಹದಲ್ಲಿರುವ ಜೀವಾಣು ವಿಷವನ್ನು ಹೊರತೆಗೆಯುವುದರ ಮೂಲಕ. ಈ ಪ್ರಕ್ರಿಯೆಯನ್ನು ಅಮಾ' ಎಂದು ಕರೆಯಲಾಗುತ್ತದೆ ಮತ್ತು ಇದು ತೂಕ ಕಡಿಮೆ ಮಾಡುವ ಮೂಲಕ್ರಮ. ಒತ್ತಡದ ಜೀವನಶೈಲಿಯಲ್ಲಿ ಅಸ್ತವ್ಯಸ್ಥವಾಗಿರುವ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಮತ್ತು ತೀವ್ರ ಒತ್ತಡದಿಂದಾಗಿ ಕ್ರೋಢೀಕರಣಗೊಂಡ ಕಲ್ಮಶದಿಂದಾಗಿ ನಮ್ಮ ದೇಹದಲ್ಲಿರುವ ಜೀವಾಣು ವಿಷಗಳಿಗೆ ಕಾರಣವಾಗಿದೆ. ನೀರಿನಲ್ಲಿ ಕರಗುವ ಜೀವಾಣು ವಿಷಗಳು ಮೂತ್ರ, ಮಲ ಮತ್ತು ಬೆವರಿನ ಮೂಲಕ ಸುಲಭವಾಗಿ ಹೊರಹೋಗುತ್ತದೆ.

ಆದರೆ ಇತರ ಕೆಲವು ಹಾಗೆ ಮಾಡಲು ವಿಫಲವಾಗುತ್ತದೆ. ಸರಿಯಾದ ಪಥ್ಯಕ್ರಮ ಮತ್ತು ವ್ಯಾಯಾಮದಿಂದ ಇಂತ ಜೀವಾಣು ವಿಷವನ್ನು ಹೊರಹಾಕಬಹುದು. ಆದಾಗ್ಯೂ ಕೊಬ್ಬಿನಲ್ಲಿ ಕರಗುವ ಜೀವಾಣು ವಿಷವನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗದ ಕಾರಣ ಸಮಸ್ಯೆ ಆರಂಭವಾಗುತ್ತದೆ. ಈ ಕಲ್ಮಶಗಳು ಹೊಟ್ಟೆ, ಸೊಂಟ ಮತ್ತು ತೊಡೆಯಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಅಮಾ' ದೇಹದಲ್ಲಿರುವ ಜೀವಾಣು ವಿಷಗಳನ್ನು ಹೊರಹಾಕುತ್ತದೆ. ಕೊಬ್ಬಿನ ಕೋಶಗಳನ್ನು ಕುಗ್ಗಿಸುವ ಮೂಲಕ ಅದು ಪರಿಣಾಮಕಾರಿಯಾಗುತ್ತದೆ. ವಯಸ್ಸು ಹೆಚ್ಚಾದಂತೆ ಕೊಬ್ಬಿನ ಹೊರಹಾಕುವಿಕೆ ಅಧಿಕವಾಗುತ್ತದೆ. ಸತತವಾಗಿ ಈ ಚಿಕಿತ್ಸೆಯಿಂದಾಗಿ ದೇಹದಲ್ಲಿರುವ ಜೀವಾಣು ವಿಷಾಣುಗಳು ಮತ್ತು ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಭವಿಷ್ಯದಲ್ಲಿ ಹೆಚ್ಚುವರಿ ತೂಕವನ್ನು ಪಡೆಯುವುದನ್ನು ಇದು ತಡೆಯುತ್ತದೆ.

ಇದು ಸಾಮಾನ್ಯವೆಂದು ಅನಿಸಿದರೂ ಅತಿಯಾದ ತೂಕವನ್ನು ನಿಯಂತ್ರಿಸುವ ಆಯುರ್ವೇದ ಕ್ರಮವು ಆರೋಗ್ಯಕರ ಜೀವನಶೈಲಿಯೊಂದಿಗೆ ಆರಂಭವಾಗುತ್ತದೆ. ಇದಕ್ಕಾಗಿ ಬೆಳಗ್ಗೆ ಬೇಗನೆ ಏಳಬೇಕು ಮತ್ತು ರಾತ್ರಿ ಬೇಗನೆ ಮಲಗಬೇಕು. ನಮ್ಮ ದೇಹ ಕೂಡ ಒಂದು ಗಡಿಯಾರದಂತೆ ಕೆಲಸ ಮಾಡುತ್ತದೆ ಮತ್ತು ಇದಕ್ಕೆ ತೊಂದರೆಯಾದಾಗ ಅದು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತದೆ. ಆರೋಗ್ಯಕರ ಜೀವನಶೈಲಿಯಲ್ಲಿ ಆಹಾರ ಕ್ರಮವೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಯುರ್ವೇದದಲ್ಲಿ ತಜ್ಞರು ರೋಗಿಗಳಿಗೆ ಹಣ್ಣು ಹಾಗೂ ತರಕಾರಿಯನ್ನು ಅಧಿಕ ಸೇವನೆ ಮಾಡುವಂತೆ ಸೂಚಿಸುತ್ತಾರೆ. ನೈಸರ್ಗಿಕ ಆಹಾರ ಮತ್ತು ಪೋಷಕಾಂಶಗಳು ಅಧಿಕವಾಗಿರುವ ಹಣ್ಣುಗಳು ಇದರಲ್ಲಿ ಮುಖ್ಯವಾದದ್ದು. ಆಯುರ್ವೇದದ ಮೂಲಕ ತೂಕ ಇಳಿಸಿಕೊಳ್ಳುವಾಗ ಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರವನ್ನು ತ್ಯಜಿಸಬೇಕು.

ಅತಿಯಾದ ದೇಹ ತೂಕವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ಕೆಲವೊಂದು ಸಲಹೆಗಳು ಇಲ್ಲಿವೆ.

1.ಜೇನು ತುಪ್ಪ ಹಾಕಿದ ಲಿಂಬೆ ರಸ

1.ಜೇನು ತುಪ್ಪ ಹಾಕಿದ ಲಿಂಬೆ ರಸ

ಜೇನು ತುಪ್ಪ ಹಾಕಿದ ಲಿಂಬೆ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ. ಇದು ಒಳ್ಳೆಯ ಜೀವಾಣುವಿಷ ನಿಯಂತ್ರಕ ಮತ್ತು ಇದು ಪರಿಣಾಮಕಾರಿಯಾಗಿ ದೇಹದಲ್ಲಿರುವ ಜೀವಾಣು ವಿಷವನ್ನು ಹೊರಹಾಕುತ್ತದೆ.

2. ದಿನವಿಡಿ ಹಸಿ ಮತ್ತು ತಾಜಾ ಆಹಾರವನ್ನು ತಿನ್ನಲು ಪ್ರಯತ್ನಿಸಿ

2. ದಿನವಿಡಿ ಹಸಿ ಮತ್ತು ತಾಜಾ ಆಹಾರವನ್ನು ತಿನ್ನಲು ಪ್ರಯತ್ನಿಸಿ

ಒಮ್ಮೆಲೇ ತುಂಬಾ ತಿನ್ನುವ ಬದಲು ಸ್ವಲ್ಪ ಸ್ವಲ್ಪವೇ ಹಲವು ಸಲ ತಿನ್ನಿ. ದಿನದಲ್ಲಿ ಮೂರು ಸಲ ಊಟ ಮಾಡುತ್ತಿದ್ದರೆ ಅದನ್ನು ಆರು ಭಾಗಗಳಾಗಿ ಮಾಡಿ ತಿನ್ನಿ. ಇದು ತುಂಬಾ ವೇಗ ಹಾಗೂ ಪರಿಣಾಮ ಬೀರುತ್ತದೆ. ತುಂಬಾ ಪರಿಣಾಮಕಾರಿಯಾಗಲು ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.

3. ನಿದ್ದೆ

3. ನಿದ್ದೆ

ನಿಮ್ಮ ಜೀವನ ಎಷ್ಟೇ ಒತ್ತಡದಲ್ಲಿದ್ದರೂ ಕೂಡ ದಿನದಲ್ಲಿ ಕನಿಷ್ಠ 8 ಗಂಟೆ ನಿದ್ದೆ ಮಾಡಿ. ಪ್ರತೀ ದಿನ ಒಂದೇ ಸಮಯಕ್ಕೆ ನಿದ್ದೆ ಮಾಡಲು ಪ್ರಯತ್ನಿಸಿ.

4. ಸಂಸ್ಕರಿಸಿದ ಫುಡ್

4. ಸಂಸ್ಕರಿಸಿದ ಫುಡ್

ಸಂಸ್ಕರಿಸಿದ ಜಂಕ್ ಫುಡ್ ನ್ನು ತ್ಯಜಿಸಿ. ನಾರಿನಾಂಶ ಹೆಚ್ಚಾಗಿರುವ ಧಾನ್ಯಗಳು, ಮಸೂರವನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.

5. ಗಿಡಮೂಲಿಕೆಗಳು

5. ಗಿಡಮೂಲಿಕೆಗಳು

ಆಯುರ್ವೇದವು ತಾಜಾ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸು ರೀತಿಯ ಗಿಡಮೂಲಿಕೆಗಳು ಮೇಲೆ ಒತ್ತು ನೀಡುತ್ತದೆ. ಈ ಮಸಾಲೆಗಳು ಕೆಟ್ಟ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ ಮತ್ತು ಚಯಾಪಚಯಾ ಕ್ರಿಯೆಯನ್ನು ವರ್ಧಿಸುತ್ತದೆ.

6. ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ

6. ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ

6. ನೀವು ಪ್ರಾಮಾಣಿಕವಾಗಿ ಬೊಜ್ಜನ್ನು ನಿಯಂತ್ರಿಸಲು ಪ್ರಯತ್ನಿಸುವುದಾದರೆ ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ. ಪಥ್ಯದೊಂದಿಗೆ ವ್ಯಾಯಾಮವನ್ನು ಮಾಡಿ. ಅತಿಯಾದ ತೂಕವನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಕಡಿಮೆ ಮಾಡಲು ಯೋಗ ತುಂಬಾ ಶಕ್ತಿಶಾಲಿ ವಿಧಾನ.

7. ಆರೋಗ್ಯಕರ ಆಧುನಿಕ ಜೀವನ ಶೈಲಿ

7. ಆರೋಗ್ಯಕರ ಆಧುನಿಕ ಜೀವನ ಶೈಲಿ

ಆಧುನೀಕರಣದಲ್ಲಿ ಬದುಕಿ. ಆದರೆ ಜೀವನದಲ್ಲಿ ಒಂದು ಮಿತಿಯನ್ನು ಮೀರದಿರಿ. ಇದು ಆಯುರ್ವೇದದ ಮೂಲ ಮಂತ್ರ. ಮದ್ಯಪಾನವನ್ನು ಬಿಡಲು ಸಾಧ್ಯವಿಲ್ಲವೆಂದಾದರೆ ಅದನ್ನು ಒಂದು ಮಿತಿಯಲ್ಲಿ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀವನದ ಉಳಿದೆಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ.

English summary

How Does Ayurveda Help In Weight Loss?

The Ayurvedic treatment for obesity begins with triggering the toxins inside the body. The toxins in our bodies are accumulation of various impurities taking birth from chaotic dietary habits, environmental pollution, and chronic stress due to hectic lifestyles.
X
Desktop Bottom Promotion