For Quick Alerts
ALLOW NOTIFICATIONS  
For Daily Alerts

ನಿಮ್ಮ ಘ್ರಾಣೇಂದ್ರಿಯದ ಸಾಮರ್ಥ್ಯ ಹೆಚ್ಚಿಸುವುದು ಹೇಗೆ?

|

ವಾಸನೆ ನೋಡುವ ಸಾಮರ್ಥ್ಯವನ್ನು ನೀವು ಸುಧಾರಿಸಲು ಬಯಸುತ್ತಿದ್ದೀರಾ? ಹಾಗಾದರೆ ಅದಕ್ಕಾಗಿ ನಿಮಗೆ ಹಲವಾರು ಕಾರಣಗಳು ಸಿಗುತ್ತವೆ. ಒಂದು ವಿಚಾರವೇನೆಂದರೆ ಈ ವಾಸನೆಯನ್ನು ಗ್ರಹಿಸುವ ಇಂದ್ರಿಯವು ರುಚಿಯನ್ನು ತಿಳಿಯುವ ಇಂದ್ರಿಯದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಹಾಗಾದರೆ ನಿಮ್ಮ ಮೂಗನ್ನು ಚಿವುಟಿ ಆಹಾರದ ರುಚಿಯನ್ನು ನೋಡಲು ಪ್ರಯತ್ನಿಸಿ ನೋಡಿ. ಇದರ ಜೊತೆಗೆ ಈ ವಾಸನೆ ನೋಡುವ ಕೌಶಲ್ಯವು ವೈನ್, ಬೀರ್, ಕಾಫಿ ಮತ್ತು ಟೀ ಗಳ ಪರಿಮಳವನ್ನು ವರ್ಣಿಸಲು ಆಗತ್ಯವಾಗಿ ಬೇಕಾಗುತ್ತದೆ.

ಸಾಮಾನ್ಯವಾಗಿ ಒಂದು ಹೂವಿನ ಸುವಾಸನೆ ತಿಳಿಯಲು ಅಥವಾ ಯಾರದಾದರು ಚರ್ಮದ ವಾಸನೆ ತಿಳಿಯಲು, ಅಥವಾ ಶರದೃತುವಿನ ಎಲೆಗಳ ಕಂಪು ತಿಳಿಯಲು, ಅಲ್ಲದೆ ಯಾವಾಗಲಾದರು ಅತ್ಯಂತ ಸಂತಸ ಪಡೆಯುವ ಗೂಢಾರ್ಥವನ್ನು, ಈ ವಾಸನೆ ಹಿಡಿಯುವ ಶಕ್ತಿ ನಮಗೆ ಒದಗಿಸುತ್ತದೆ. ನಿಮಗೆ ಗೊತ್ತೇ? ಒಬ್ಬ ಸಾಮಾನ್ಯ ಮನುಷ್ಯನ ಮೂಗು ಸುಮಾರು 10,000 ಬಗೆಯ ಪರಿಮಳಗಳನ್ನು ಗುರುತಿಸಬಲ್ಲದು.

How to Improve Your Sense of Smell

1.ನೀವು ಈಗಾಗಲೆ ವಾಸನೆ ನೋಡಿರುವ ಅಂಶಗಳಿಗೆ ಹೆಚ್ಚಿನ ಗಮನ ಕೊಡಿ. ಜನರು ಆಗಾಗ ಹೇಳುತ್ತಿರುತ್ತಾರೆ " ಬಳಸಿಕೊಳ್ಳಿ ಇಲ್ಲವೆ ಕಳೆದುಕೊಳ್ಳಿ " ಎಂದು ಈ ಮಾತು ನಿಮ್ಮ ಙ್ಞಾನೇಂದ್ರಿಯಗಳಿಗೆ ಸಹ ಅನ್ವಯಿಸುತ್ತದೆ. ನಿಮ್ಮ ಙ್ಞಾನೇಂದ್ರಿಯಗಳನ್ನು ನೀವು ಬಳಸಿದಷ್ಟೂ, ಅದರಿಂದ ನೀವು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ವಾಸನೆಗಳನ್ನು ವರ್ಣಿಸಲು ಕಲಿಯಿರಿ. ಹೆಚ್ಚಿನ ಅಭ್ಯಾಸಕ್ಕಾಗಿ ನಿಮ್ಮ ಕಣ್ಣುಗಳನ್ನು ಕಟ್ಟಿಕೊಳ್ಳಿ. ಯಾರಾದರು ನಿಮ್ಮ ಮೂಗಿನ ಬಳಿ ಕೆಲವು ವಸ್ತುಗಳನ್ನು ಹಿಡಿಯುವಂತೆ ತಿಳಿಸಿ. ಹೀಗೆ ವಿವಿಧ ಬಗೆಯ ವಸ್ತುಗಳ ವಾಸನೆ ಗ್ರಹಿಸಲು ಪ್ರಯತ್ನಿಸಿ.

2. ನೀವು ಎಷ್ಟು ವಸ್ತುಗಳನ್ನು ವಾಸನೆಯಿಂದ ನಿಖರವಾಗಿ ಗುರುತಿಸಿದಿರೆಂದು ಲೆಕ್ಕ ಮಾಡಿ. ವಾಸನೆ ಗ್ರಹಿಸುವ ನರಗಳು ಮೆದುಳಿನಲ್ಲಿ ಭಾವನೆಗಳನ್ನು ಉಂಟು ಮಾಡುವ ಭಾಗದೊಂದಿಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ. ಇವು ನಿಮ್ಮ ಲೆಕ್ಕಚಾರದ ವಿಚಾರಗಳಿಂದ ಹೊರಬರಲು ಇವು ಸಹಕರಿಸುತ್ತವೆ. ಸಂಶೋಧನೆಗಳ ಪ್ರಕಾರ ಫಾಸ್ಟ್ ಪುಡ್ ಹೊದಿಕೆಗಳು, ತಾಜಾ ಬ್ರೆಡ್ ಅಥವಾ ಪೇಸ್ಟ್ರಿ ವಾಸನೆಗಳು ಸಿಡುಕು ಸ್ವಭಾವವನ್ನು ಹೆಚ್ಚಿಸುವ ಸಂಭವನೀಯತೆ ಇದೆ: ಪೆಪ್ಪರ್ ಮಿಂಟ್ ಮತ್ತು ಚಕ್ಕೆಯು ಚಾಲಕರಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಕಿರಿಕಿರಿಯನ್ನು ತಗ್ಗಿಸುತ್ತವೆ: ನಿಂಬೆ ಮತ್ತ ಕಾಫಿಯು ಸಾಮಾನ್ಯವಾಗಿ ಸ್ಪಷ್ಟ ಚಿಂತನೆಯನ್ನು ಮತ್ತು ಅತ್ಯುನ್ನತ ಏಕಾಗ್ರತೆಯ ಹಂತವನ್ನು ತಲುಪಲು ನೆರವಾಗುತ್ತವೆ.

3. ಅತಿಯಾದ ಸಿಂಬಳವನ್ನುಂಟು ಮಾಡುವ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ. ನಿಮಗೆ ನೆಗಡಿಯಾದಾಗ ನಿಮ್ಮ ವಾಸನೆ ಹಿಡಿಯುವ ಶಕ್ತಿ ಕುಂದುವುದನ್ನು, ಅಥವಾ ಸಂಪೂರ್ಣವಾಗಿ ವಾಸನೆಯೆ ಗೊತ್ತಾಗದೆ ಇರಬಹುದು. ಮೂಗು ಕಟ್ಟಿಕೊಂಡಾಗ ಮೂಗಿನ ಒಳಗಿನ ಪೊರೆಯಲ್ಲಿರುವ ವಾಸನೆ ಗ್ರಹಿಸುವ ನರಗಳು ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಶೀತವುಂಟು ಮಾಡುವ ಆಹಾರಗಳನ್ನು( ಹಾಲು, ಚೀಸ್, ಯೋಗರ್ಥ ಮತ್ತು ಐಸ್ ಕ್ರೀಮ್) ತ್ಯಜಿಸಿದರೆ ಉತ್ತಮ.

ಇವು ನಿಮ್ಮ ಮೂಗಿನಿಂದ ಹಿಡಿದು ಗಂಟಲಿನ ಹಿಂಭಾಗದವರೆಗೆ ಇರುವ ನಾಳಕ್ಕೆ ಹಾನಿ ಮಾಡಿ, ನಿಮ್ಮ ರುಚಿ ನೋಡುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತವೆ. ಒಂದು ವೇಳೆ ಈ ನಾಳವೇನಾದರು ಮುಚ್ಚಿ ಹೋದರೆ ನೀವು ಆಹಾರವನ್ನು ರುಚಿ ನೋಡುವ ಸಾಮರ್ಥ್ಯ ಕುಂದುತ್ತದೆ.

4. ನಿಮ್ಮ ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಕುಂದಿಸುವ ಆಹಾರವನ್ನು ಸೇವಿಸಬೇಡಿ. ಕೆಲವು ತಂಪಾದ ಔಷಧಿಗಳು ಸಹ ಘ್ರಾಣ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಧೂಮಪಾನವು ಸಹ ನಿಮ್ಮ ವಾಸನೆ ಗ್ರಹಿಸುವ ಕಾರ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ನೀವು ಮದ್ಯಪಾನ ಮಾಡುವವರಾಗಿದ್ದರೆ, ಅದನ್ನು ನಿಯಂತ್ರಣದಲ್ಲಿಡಿ. ಏಕೆಂದರೆ ರಕ್ತದಲ್ಲಿ ಆಲ್ಕೋಹಾಲ್ ಮಟ್ಟ ಹೆಚ್ಚಾದಂತೆಲ್ಲ ನಿಮ್ಮ ವಾಸನೆ ಗ್ರಹಿಸುವ ಸಾಮರ್ಥ್ಯವು ಕುಂಠಿತಗೊಳ್ಳುತ್ತ ಸಾಗುತ್ತದೆ.

5.ನಿಮ್ಮ ಆಹಾರದಲ್ಲಿ ಸತುವನ್ನು ಹೆಚ್ಚಾಗಿ ಸೇವಿಸಿ. ಹೈಪೊಸ್ಮಿಯ ( ವೈಧ್ಯಕೀಯ ಪರಿಭಾಷೆಯಲ್ಲಿ ವಾಸನೆ ನೋಡುವ ಸಾಮರ್ಥ್ಯ ಕಳೆದು ಕೊಂಡದ್ದು ಎಂದರ್ಥ.) ಎಂಬುದು ಸತುವಿನ ಕೊರತೆಯಿಂದ ಉಂಟಾಗುವ ನ್ಯೂನತೆಯಾಗಿದೆ. ನಿಮ್ಮ ವಾಸನೆ ಹಿಡಿಯುವ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು, ಸತು ಹೆಚ್ಚಾಗಿ ಇರುವ ಆಹಾರ ಸೇವಿಸಿ ( ಮಸೂರ ಅವರೆ, ಸೂರ್ಯಕಾಂತಿ ಬೀಜ, ಪೆಕಾನ್ ಮತ್ತು ಮೃದ್ವಂಗಿಗಳು) ಮತ್ತು ಪ್ರತಿದಿನ ವಿವಿಧ ವಿಟಮಿನ್ ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿ. ಅದರಲ್ಲಿ ಕನಿಷ್ಟ 7ಮಿ.ಗ್ರಾಂ ಸತು ಇರುವಂತೆ ನೋಡಿಕೊಳ್ಳಿ.

6. ವ್ಯಾಯಾಮ: ಸಂಶೋಧನೆಗಳ ಪ್ರಕಾರ ನಮ್ಮ ವಾಸನೆ ಗ್ರಹಿಸುವ ಸಾಮರ್ಥ್ಯವು ವ್ಯಾಯಾಮ ಮಾಡಿದ ನಂತರ ಚುರುಕಾಗುತ್ತದೆಯಂತೆ. ಹಾಗಾಗಿ ನಾವು ಸದೃಢವಾಗಿರಲು ಮತ್ತೊಂದು ಕಾರಣ ದೊರೆಯಿತು.

7. ಒಂದು ಹ್ಯುಮಿಡಿಫೈಯರ್ ಅನ್ನು ಬಳಸಿ. ಗಾಳಿಯಲ್ಲಿರುವ ತೇವಾಂಶವು ನಿಮ್ಮ ಮೂಗಿನಲ್ಲಿನ ತೇವಾಂಶವನ್ನು ಅಧಿಕಗೊಳಿಸುತ್ತದೆ. ಇದು ನಿಮ್ಮ ವಾಸನೆಗ್ರಹಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.

8. ಕೊಳೆತು ನಾರುವ ವಸ್ತುಗಳಿಂದ ದೂರವಿರಿ.ಸದಾ ಗಬ್ಬು ವಾಸನೆಯನ್ನು ಸೇವಿಸುತ್ತಿದ್ದರೆ, ಕಾಲ ಕ್ರಮೇಣವಾಗಿ ನಿಮ್ಮ ವಾಸನೆ ನೋಡುವ ಸಾಮರ್ಥ್ಯವು ಜಡಗೊಳ್ಳುತ್ತದೆ.

9. ನೀವು ವಾಸನೆಯನ್ನು ಪರೀಕ್ಷಿಸಬೇಕಾದರೆ ದೀರ್ಘವಾಗಿ ವಾಸನೆ ನೋಡುವ ಬದಲಿಗೆ ಸಣ್ಣ ಮಟ್ಟದಲ್ಲಿ ಮೂಸಿ ನೋಡಿ. ನೀವು ಗಮನಿಸಿರಬಹುದು, ಬೆಕ್ಕುಗಳು ಮತ್ತು ನಾಯಿಗಳು ಹೀಗೆಯೆ ಮೂಸಿ ನೋಡುವುದನ್ನು ನೀವು ಕಂಡಿರುತ್ತೀರಿ. ಈ ಅಭ್ಯಾಸವು ಸುವಾಸನೆಯನ್ನು ಆಸ್ವಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

10. ನೀವು ಆಹಾರ ವಸ್ತುಗಳ ವ್ಯಾಪಾರಕ್ಕಾಗಿ ಹೋದಾಗ, ಹೆಚ್ಚಾಗಿ ಉತ್ತಮ ಸುವಾಸನೆ ಬೀರುವ ವಸ್ತುಗಳನ್ನುಕೊಳ್ಳಲು ನಿಮ್ಮ ಕೈ ಮುಂದಾಗುವುದನ್ನು ಗಮನಿಸಿ. ನೀವು ಎಂದಾದರು ಆಹಾರ ವಸ್ತುಗಳನ್ನು ಕೊಳ್ಳುವಾಗ, ನಿಮಗೆ ಮೆಚ್ಚುಗೆಯಾದ ಪರಿಮಳವಿರುವ ವಸ್ತುಗಳನ್ನು ನೋಡಿ ಕೊಳ್ಳಿ. ಉದಾಹರಣೆಗೆ ಸಣ್ಣ ಗೋಧಿಯಿಂದ ಮಾಡಿದ ಬ್ರೆಡ್ ಅಥವಾ ಚೀಸ್ ಕೊಳ್ಳುವುದಿದ್ದಾಗ ಒಮ್ಮೆ ಮೂಸಿ ನೋಡಿ. ಆ ನಂತರ ನಿಮಗೆ ಯಾವ ವಸ್ತುವಿನ ವಾಸನೆ ಹೆಚ್ಚು ಪ್ರಿಯವಾಗುತ್ತದೊ ಆ ವಸ್ತುವನ್ನೆ ಕೊಳ್ಳಿ.

ಅಂದ ಹಾಗೆ ಯಾವ ವಸ್ತುವಿನ ವಾಸನೆ ನಿಮಗೆ ಪ್ರಿಯವಾಗುತ್ತದೊ, ಅದೇ ವಸ್ತುವನ್ನು ನಿಮ್ಮ ದೇಹ ಹೆಚ್ಚು ಬಯಸುತ್ತದೆ ಎಂಬುದನ್ನು ಮನಗಾಣಿರಿ. ಅಷ್ಟೇ ಅಲ್ಲದೆ ಔಷಧಿ ವಸ್ತುಗಳನ್ನು ಮತ್ತು ವಿಟಮಿನ್ ಬಾಟಲ್ ಗಳನ್ನು ಮೂಸಿ ನೋಡುವುದರಿಂದ ಸಹ, ನಿಮ್ಮ ದೇಹಕ್ಕೆ ಅಗತ್ಯವಿರುವ ಔಷಧಿ ಅಥವಾ ವಿಟಮಿನ್ ಗಳನ್ನು ಪತ್ತೆ ಹಚ್ಚಬಹುದು, ಆದರೂ ಔಷಧಿ ಅಥವಾ ವಿಟಮಿನ್ ಗಳನ್ನು ತೆಗೆದುಕೊಳ್ಳುವ ಮೊದಲು ವೈಧ್ಯರನ್ನು ಕಾಣುವುದು ಅಗತ್ಯವೆಂಬುದನ್ನು ಮರೆಯಬೇಡಿ.

English summary

How to Improve Your Sense of Smell | How To Do Tips | ನಿಮ್ಮ ಘ್ರಾಣೇಂದ್ರಿಯದ ಸಾಮರ್ಥ್ಯ ಹೆಚ್ಚಿಸುವುದು ಹೇಗೆ?

There are many reasons you may wish to improve your sense of smell. For one thing, it's closely linked to your sense of taste. Try tasting food with your nose pinched! It is also a required skill to describe aromas in food.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more