For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ನಿಯಂತ್ರಿಸುವುದು ಹೇಗೆ?

|

ನೀವು ಮೊಟ್ಟೆಗಳನ್ನು ಮತ್ತು ಸೀಗಡಿಯಂತಹ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ನಿಯಂತ್ರಿಸುತ್ತಿದ್ದರೆ ಒಳ್ಳೆಯದು. ಏಕೆಂದರೆ ಇವುಗಳು ಕೊಲೆಸ್ಟ್ರಾಲಿನ ಪೆಡಂಭೂತಗಳಾಗಿವೆ. ಒಂದು ವೇಳೆ ನೀವು ಈ ಆಹಾರಗಳನ್ನು ತಿನ್ನುತ್ತಿದ್ದರೆ, ನಿಮ್ಮ ಕಾರ್ಯತಂತ್ರಗಳನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಪೌಷ್ಟಿಕಾಂಶದ ತಙ್ಞರ ಪ್ರಕಾರ ನಾವೆಲ್ಲರು ತಿನ್ನುವ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಅಧಿಕ ಪ್ರಮಾಣದಲ್ಲಿರುತ್ತದೆಯಂತೆ.

ಕೊಲೆಸ್ಟ್ರಾಲ್ ಗಳನ್ನು ಮಾನವನ ಆರೋಗ್ಯದ ನಿಜವಾದ ವೈರಿಗಳಾದ ಸ್ಯಾಚುರೇಟೆಡ್ ಫ್ಯಾಟ್ಸ್ ( ಪೂರ್ಣ ಪ್ರಮಾಣದ ಕೊಬ್ಬು) ಮತ್ತು ಟ್ರಾನ್ಸ್ ಫ್ಯಾಟ್ಸ್ ( ಸುಪ್ತ ಕೊಬ್ಬು)ಗಳಿಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಏಕೆಂದರೆ ಮೊಟ್ಟೆಯಂತಹ ಅತ್ಯಧಿಕ ಪ್ರಮಾಣದ ಕೊಲೆಸ್ಟ್ರಾಲ್ ಗಳು ಕಡಿಮೆ ಕೊಬ್ಬನ್ನು ಹೊಂದಿದ್ದು, ಆರೋಗ್ಯಕ್ಕೆ ಹಾನಿಕರವಲ್ಲದ ಪ್ರೋಟೀನ್ ಗಳನ್ನು ಹಾಗೂ ಇನ್ನಿತರ ಪೌಷ್ಟಿಕಾಂಶಗಳನ್ನು ಹೊಂದಿವೆ.

ದಿನನಿತ್ಯದ ಆಹಾರದಲ್ಲಿ ಕೊಲೆಸ್ಟ್ರಾಲ್ ( ಡಯಟೆರಿ ಕೊಲೆಸ್ಟ್ರಾಲ್) ಸೇವಿಸುವುದರಿಂದಾಗುವ ಪರಿಣಾಮಗಳು.

How To Control Cholesterol

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಡಯಟೆರಿ ಕೊಲೆಸ್ಟ್ರಾಲ್ ರಕ್ತದಲ್ಲಿ ಕೊಲೆಸ್ಟ್ರಾಲ್ ನ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಇದರ ಜೊತೆಗೆ ಇನ್ನಿತರ ಅಂಶಗಳನ್ನು ಗಮನಿಸುವುದು ಅತ್ಯಗತ್ಯ. ಬಹುತೇಕ ಮಂದಿಗೆ ಡಯಟೆರಿ ಕೊಲೆಸ್ಟ್ರಾಲ್ ರಕ್ತದಲ್ಲಿ ಕೊಲೆಸ್ಟ್ರಾಲಿನ ಮಟ್ಟವನ್ನು ನಾಟಕೀಯವಾಗಿ ಏರುಪೇರು ಮಾಡುವುದಿಲ್ಲ.

ಕೊಲೆಸ್ಟ್ರಾಲ್ ಎಂಬುದು ಒಂದು ಬಗೆಯ ಕೊಬ್ಬು. ಇದನ್ನು ಮಿತವಾಗಿ ತೆಗೆದು ಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವು ಪ್ರಮುಖವಾದ ಅಂಶವಾಗಿರುತ್ತದೆ. ಏಕೆಂದರೆ ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಗಳಿಗೆ ಮತ್ತು ಹೃದಯದ ಅಭಿದಮನಿಗಳಿಗೂ ಹಾಗು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರವಾದ ಸಂಬಂಧವಿದೆ. ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಧುಮೇಹ ಮತ್ತು ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹ ಹಾನಿಕಾರಕವಾಗಿರುತ್ತದೆ.

ರಾಷ್ಟ್ರೀಯ ಕೊಲೆಸ್ಟ್ರಾಲ್ ಶಿಕ್ಷಣ ಕಾರ್ಯಕ್ರಮವು 20 ವರ್ಷಕ್ಕಿಂತ ಹೆಚ್ಚಿನ ವಯಸ್ಕರು 200 ಮಿ.ಗ್ರಾಂ/ ಡಿ ಎಲ್ ನಷ್ಟು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿದೆ. ಪ್ರತಿ ಎಲ್ ಡಿ ಎಲ್ (ಲೋ ಡೆನ್ಸಿಟಿ ಲಿಪೊಪ್ರೋಟೀನ್-LDL) ಅಥವಾ ಹಾನಿಕಾರಕ ಎಂದು ಹೇಳಲಾಗುವ ಕೊಲೆಸ್ಟ್ರಾಲ್ ಗಳು 100 ಮಿ.ಗ್ರಾಂ/ ಡಿ ಎಲ್ ಇದ್ದರೆ, ಎಚ್,ಡಿ ಎಲ್ (ಹೈ ಡೆನ್ಸಿಟಿ ಲಿಪೊಪ್ರೋಟೀನ್- HDL) ಅಥವಾ "ಕೊಲೆಸ್ಟ್ರಾಲ್ ಮಟ್ಟ ಉತ್ತಮ"ವೆಂದು ಹೇಳಬೇಕೆಂದರೆ 60 ಮಿ.ಗ್ರಾಂ/ ಡಿ ಎಲ್ ಇರಬೇಕು. ಈ ಮಟ್ಟವು ನಮ್ಮನ್ನು ಹೃದಯ ಸಂಬಂಧಿ ರೋಗಗಳಿಂದ ಕಾಪಾಡುತ್ತದೆಯೆಂದು ಪರಿಗಣಿಸಲಾಗಿದೆ.

ಅಷ್ಟೇ ಅಲ್ಲದೆ ಟ್ರೈಗ್ಲಿಸೆರೈಡ್ಸ್, ಮತ್ತು ಇನ್ನಿತರ ಕೊಬ್ಬಿನಾಂಶಗಳು ಸಹ ಗಣನೀಯವಾದ ಪಾತ್ರವನ್ನು ವಹಿಸುತ್ತವೆ. ಬಹಳಷ್ಟು ಆರೋಗ್ಯವಂತ ವ್ಯಕ್ತಿಗಳಲ್ಲಿ ಟ್ರೈಗ್ಲಿಸೆರೈಡ್ಸ್ ಪ್ರಮಾಣ 150 ಮಿ.ಗ್ರಾಂ/ ಡಿ ಎಲ್ ಇರುತ್ತದೆ.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಆಹಾರದಲ್ಲಿ ಪಥ್ಯವನ್ನು ಅನುಸರಿಸುತ್ತಿರುವವರು ಪ್ರತಿದಿನ 300 ಮಿ.ಗ್ರಾಂ/ಡಿ ಎಲ್ ಗಿಂತ ಕಡಿಮೆ ಕೊಲೆಸ್ಟ್ರಾಲನ್ನು ಸೇವಿಸಬೇಕೆಂದು ಶಿಫಾರಸು ಮಾಡಿದೆ. ಹಾಗಾಗಿಯೆ ಮೊಟ್ಟೆ ಮತ್ತು ಸಿಗಡಿಗಳಂತಹ ಆಹಾರಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಒಂದು ದೊಡ್ಡ ಮೊಟ್ಟೆಯು 185 ಮಿ.ಗ್ರಾ/ ಡಿ ಎಲ್ ನಷ್ಟು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಹಾಗೆಯೆ 3 ಔನ್ಸ್ ಸೀಗಡಿಯು ಸುಮಾರು 100 ಮಿ.ಗ್ರಾಂ /ಡಿ ಎಲ್ ನಷ್ಟು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ.

ಒಟ್ಟಾರೆ ಕೊಬ್ಬಿನಂಶದ ಮೇಲೆ ನಿಗಾವಹಿಸುವುದು.

English summary

How To Control Cholesterol | How To Do Tips | ಕೊಲೆಸ್ಟ್ರಾಲ್ ನಿಯಂತ್ರಿಸುವುದು ಹೇಗೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Cholesterol is a fat, that is necessary for life and health in moderate amounts. The quantity of cholesterol in your blood is important because of the link between high blood cholesterol levels and cardiovascular problems, including heart disease.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more