For Quick Alerts
ALLOW NOTIFICATIONS  
For Daily Alerts

ಕೋವಿಡ್‌19ಗೂ ಹೆಚ್ಚುತ್ತಿರುವ ಹೃದಯಾಘಾತಕ್ಕೂ ಸಂಬಂಧವಿದೆಯೇ?

|

ಕೋವಿಡ್‌ 19 ಬಳಿಕ ಹೃದಯಾಘಾತ ಹೆಚ್ಚಾಗುತ್ತಿದೆಯೇ? ಹೀಗೊಂದು ಪ್ರಶ್ನೆ ಜನರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಹೃದಯಾಘಾತ. ತುಂಬಾ ಚಿಕ್ಕ ಪ್ರಾಯದವರಿಗೆ, ತುಂಬಾ ಫಿಟ್‌ ಆಗಿರುವವರಿಗೂ ಹೃದಯಾಘಾತ ಕಂಡು ಬರುತ್ತದೆ. ಹೆಚ್ಚಾಗುತ್ತಿರುವ ಹೃದಯಾಘಾತಕ್ಕೂ ಕೋವಿಡ್‌ 19ಗೂ ಸಂಬಂಧವಿದೆಯೇ? ಇದರ ಬಗ್ಗೆ ತಜ್ಞರು ಹೇಳುವುದೇನು? ಎಂದು ನೋಡೋಣ ಬನ್ನಿ:

ಅಧ್ಯಯನದಿಂದ ತಿಳಿದು ಬಂದಿರುವುದೇನು?

ಅಧ್ಯಯನದಿಂದ ತಿಳಿದು ಬಂದಿರುವುದೇನು?

ಕೋವಿಡ್‌ 19 ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿವೆ, ಅದರಲ್ಲೂ ಕೋವಿಡ್‌ 19 ಸೋಂಕು ತಗುಲುವ ಮುನ್ನವೇ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಆ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವುದಾಗಿ ಅಧ್ಯಯನಗಳ ವರದಿಗಳು ಹೇಳಿವೆ.

ಹೃದಯ ಅಪಧಮನಿ ತುಂಬಾ ದುರ್ಬಲವಾಗಿದ್ದಾ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ರಕ್ತ ಹೆಪ್ಪುಗಟ್ಟುವುದು, ಇದರಿಂದ ಹೃದಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ, ಹೃದಯದ ಸ್ನಾಯುಗಳಿಗೆ ಹಾನಿಯುಂಟಾಗಿ ಉರಿಯೂತ ಉಂಟಾಗಿ ಹೃದಯಾಘಾತ ಸಂಬಂಧಿಸುವುದು.

ಕೋವಿಡ್‌ 19ನಿಂದಾಗಿ ಹೃದಯದ ಸ್ನಾಯುಗಳಿಗೆ ಉರಿಯೂತ ಉಂಟಾಗುವುದು

ಕೋವಿಡ್‌ 19ನಿಂದಾಗಿ ಹೃದಯದ ಸ್ನಾಯುಗಳಿಗೆ ಉರಿಯೂತ ಉಂಟಾಗುವುದು

ಉರಿಯೂತದ ಸಮಸ್ಯೆಯಿದ್ದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚುವುದು, ಇದರಿಂದ ಹೃದಯದ ನರಗಳಿಗೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ. ಇದರಿಂದಾಗಿ ಹೃದಯದ ಮೇಲೆ ಒತ್ತಡ ಅಧಿಕವಾಗಿ ಮಯೋಕಾರ್ಡಿಟಿಸ್ ಉಂಟಾಗುವುದು, ಅಂದರೆ ರಕ್ತದೊತ್ತಡ ಕಡಿಮೆಯಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ.

ಅಸಹಜ ಹೃದಯ ಬಡಿತ'

ಅಸಹಜ ಹೃದಯ ಬಡಿತ'

ಕೋವಿಡ್‌ 19 ಕೆಲವರಲ್ಲಿ ಅನಿಯಮಿತ ಹೃದಯಬಡಿತ ಉಂಟು ಮಾಡುವುದು. ಹೃದಯ ತುಂಬಾ ವೇಗನೆ ಬಡಿದುಕೊಳ್ಳುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕ ಪೂರೈಕೆ ಕಡಿಮೆಯಾಗಿ ಹೃದಯಾಘಾತ ಸಂಭವಿಸುವುದು.

ಪಲ್ಸ್ ರೇಟ್‌ನಲ್ಲಿ ವ್ಯತ್ಯಾಸ ಉಂಟಾಗುವುದು

ಪಲ್ಸ್ ರೇಟ್‌ನಲ್ಲಿ ವ್ಯತ್ಯಾಸ ಉಂಟಾಗುವುದು

ಕೊರೊನಾ 2ನೇ ಅಲೆಯ ಬಳಿಕ ಕೆಲವರಲ್ಲಿ ಕಡಿಮೆ ಪಲ್ಸ್‌ ರೇಟ್‌ ಕಂಡು ಬರುತ್ತಿರುವುದಾಗಿ ತಜ್ಞರು ತಿಳಿಸಿದ್ದಾರೆ. ಕೊರೊನಾವೈರಸ್‌ ರಕ್ತ ಹೆಪ್ಪುಗಟ್ಟುವಿಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು, ಇದರಿಂದಾಗಿ ಹೃದಯದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.

ಕೋವಿಡ್‌ 19 ವೈರಸ್‌ನಿಂದಾಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗುವುದು

ಕೋವಿಡ್‌ 19 ವೈರಸ್‌ನಿಂದಾಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗುವುದು

ಕೋವಿಡ್‌ 19 ತಗುಲಿದಾಗ ಈ ಸೋಂಕಿನಿಂದಾಗಿ ದೇಹ ಕ್ಯಾಟೆಕೊಲಮೈನ್‌ಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತೆ, ಇದರಿಂದಾಗಿ ಹೃದಯದ ಮೇಲೆ ಒತ್ತಡ ಹೆಚ್ಚಿ ಹೃದಯ ತನ್ನ ಕಾರ್ಯವನ್ನೇ ನಿಲ್ಲಿಸಬಹುದು.

ಹೃದಯ ಸಮಸ್ಯೆ ಇರುವವರಿಗೆ ಕೋವಿಡ್‌ 19 ಬಳಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು

ಹೃದಯ ಸಮಸ್ಯೆ ಇರುವವರಿಗೆ ಕೋವಿಡ್‌ 19 ಬಳಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು

ಕೋವಿಡ್ 9 ವೈರಸ್‌ ತಗುಲಿದಾಗ ಉರಿಯೂತ ಉಂಟಾಗಿ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ, ಇದರಿಂದ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು. ಆಗ ದೇಹಕ್ಕೆ ರಕ್ತ ಸಂಚಾರ ಮಾಡಲು ಹೃದಯ ಮತ್ತಷ್ಟು ಹೆಚ್ಚು ಒತ್ತಡ ತೆಗೆದುಕೊಳ್ಳಬೇಕಾಗುತ್ತದೆ, ಹೃದಯಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾದಾಗ ಹೃದಯ ತನ್ನ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

 ಕೋವಿಡ್‌ 19 ಚಿಕಿತ್ಸೆಗೆ ನೀಡಿದ ಸ್ಟಿರಾಯ್ಡ್‌ಗಳಿಂದಲೂ ಹೃದಯಕ್ಕೆ ಹಾನಿ

ಕೋವಿಡ್‌ 19 ಚಿಕಿತ್ಸೆಗೆ ನೀಡಿದ ಸ್ಟಿರಾಯ್ಡ್‌ಗಳಿಂದಲೂ ಹೃದಯಕ್ಕೆ ಹಾನಿ

ಕೋವಿಡ್‌ 19 ಸೋಂಕು ತಗುಲಿದಾಗ ಗುಣಪಡಿಸಲು ನೀಡಿರುವ ಸ್ಟಿರಾಯ್ಡ್‌ಗಳ ಅಡ್ಡಪರಿಣಾಮದಿಂ ಕೂಡ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೋವಿಡ್ 19ಗೆ ದೀರ್ಘಕಾಲ ಚಿಕಿತ್ಸೆ ಪಡೆದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಹೃದಯಾಘಾತದ ಮುನ್ಸೂಚನೆಗಳನ್ನು ಕಡೆಗಣಿಸಬೇಡಿ

ಹೃದಯಾಘಾತಕ್ಕೆ ಕೆಲವೊಂದು ಮುನ್ಸೂಚನೆಗಳು ಕಂಡು ಬರುತ್ತದೆ, ಆದರೆ ಇದನ್ನು ನಿರ್ಲಕ್ಷ್ಯ ಮಾಡಿದಾಗ ಹೃದಯಾಘಾತದಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚುವುದು.

ಹೃದಯಾಘಾತದ ಮುನ್ಸೂಚನೆಗಳು

* ಎದೆನೋವು, ಎದೆ ಹಿಡಿದಂತಾಗುವುದು

* ತಲೆಸುತ್ತು

*ಕುತ್ತಿಗೆ, ಗಲ್ಲ, ಬೆನ್ನಿನ ಭಾಗದಲ್ಲಿ ನೋವು

* ಭುಜದಲ್ಲಿ ನೋವು

* ಮೈ ಬೆವರುವುದು

* ಉಸಿರಾಟಕ್ಕೆ ತೊಂದರೆ

ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.

English summary

World Heart Day 2022:Is There Any Link Between Covid 19 and Heart attack, what Expert Says

Is there any link between heart attack and covid 19, what reaserch says, why heart attck increasing after corona, read on...
Story first published: Thursday, September 29, 2022, 17:01 [IST]
X
Desktop Bottom Promotion