For Quick Alerts
ALLOW NOTIFICATIONS  
For Daily Alerts

ಹೈಪರ್‌ಥೈರಾಯ್ಡ್‌: ಗ್ರೇವ್ಸ್ ಕಾಯಿಲೆಯ ಅಪಾಯಗಳೇನು?

|

ಹೈಪರ್‌ ಥೈರಾಯ್ಡ್‌ಗೆ ಪ್ರಮುಖ ಕಾರಣವೆಂದರೆ ಗ್ರೇವ್ ಡಿಸೀಜ್‌. ಇಮ್ಯೂನ್‌ ಸಿಸ್ಟಮ್ ಥೈರಾಯ್ಡ್‌ ಗ್ರಂಥಿ ಮೇಲೆ ದಾಳಿ ಮಾಡಿದಾಗ ಥೈರಾಯ್ಡ್ ಗ್ರಂಥಿ ಅಧಿಕ ಥೈರಾಯ್ಡ್ ಹಾರ್ಮೋನ್‌ ಉತ್ಪತ್ತಿ ಮಾಡುತ್ತೆ . ಇದರಿಂದಾಗಿ ಸೆಕೆ ಸಹಿಸಲು ಅಸಾಧ್ಯವಾಗುವುದು, ತೂಕ ಇಳಿಕೆಯಾಗುವುದು, ನಿದ್ದೆ ಬರುವುದಿಲ್ಲ ಮತ್ತಿತರ ಸಮಸ್ಯೆಗಳು ಉಂಟಾಗುವುದು.

ಗ್ರೇವ್ಸ್ ಡಿಸೀಜ್‌ ಉಂಟಾದರೆ ಚಿಕಿತ್ಸೆ ಪಡೆಯಲೇಬೇಕು. ಇಲ್ಲದಿದ್ದರೆ ತುಂಬಾ ತುಂಬಾ ತೊಂದರೆ ಉಂಟಾಗುವುದು. ಇದರಿಂದ ತ್ವಚೆ, ಕಣ್ಣು ಹಾಗೂ ಹೃದಯಕ್ಕೆ ತೊಂದರೆ ಉಂಟು ಮಾಡುವುದು.

ಗ್ರೇವ್ಸ್ ಡಿಸೀಜ್‌ನಿಂದ ಉಂಟಾಗುವ ತೊಂದರೆಗಳು ಹಾಗೂ ಇದರ ಅಪಾಯವನ್ನು ತಪ್ಪಿಸುವುದು ಹೇಗೆ ಎಂದು ಹೇಳಲಾಗಿದೆ ನೋಡಿ:

1, ಗ್ರೇವ್ಸ್ ಕಣ್ಣಿನ ಕಾಯಿಲೆ

1, ಗ್ರೇವ್ಸ್ ಕಣ್ಣಿನ ಕಾಯಿಲೆ

ಅಮೆರಿಕನ್ ಥೈರಾಯ್ಡ್‌ ಅಸೋಷಿಯೇಷನ್‌ ಪ್ರಕಾರ 3ನೇ ಒಂದು ಭಾಗದಷ್ಟು ಜನರಿಗೆ ಕಣ್ಣಿನ ತೊಂದರೆ ಉಂಟಾಗುವುದು. ಇಮ್ಯೂನೆ ಸಿಸ್ಟಮ್‌ ಕಣ್ಣಿನ ನರಗಳಿಗೆ ಹಾನಿಯುಂಟು ಮಾಡುವುದು.

ಇದರಿಂದ ಕಣ್ಣು ಒಣಗುವುದು, ಕಿರಿಕಿರಿ ಉಂಟಾಗುವುದು, ಹಾಗೂ ಲೈಟ್‌ ನೋಡಲು ಸಾಧ್ಯವಾಗುವುದಿಲ್ಲ. ಥೈರಾಯ್ಡ್‌ಗೆ ಚಿಕಿತ್ಸೆ ಪಡೆದರೆ 3-6 ತಿಂಗಳಿನಲ್ಲಿ ಕಣ್ಣಿನ ಸಮಸ್ಯೆ ದೂರಾಗುವುದು.

ಅದರ ಜೊತೆಗೆ ಈ ಟಿಪ್ಸ್ ಕಣ್ಣಿನ ಸಮಸ್ಯೆ ಹೋಗಲಾಡಿಸಲು ಸಹಕಾರಿಯಾಗಿದೆ.

* ಲ್ಯೂಬ್ರಿಕೇಟಿಂಗ್‌ ಐ ಡ್ರಾಪ್‌ ಬಳಸುವುದು

* ಲೈಟ್‌ಗೆ ಕಣ್ಣು ಸೆನ್ಸಿಟಿವ್‌ ಆಗಿದ್ದರೆ ಸನ್‌ಗ್ಲಾಸ್‌ ಬಳಸುವುದು

* ಡಬಲ್ ವಿಷನ್ ಇದ್ದರೆ ಸ್ಪೆಷಲ್‌ ಗ್ಲಾಸ್‌ ಬಳಸಿ.

* ಎತ್ತರದ ತಲೆ ದಿಂಬು ಬಳಸುವುದರಿಂದ ಕಣ್ಣಿನ ಭಾಗ ಊತ ಕಡಿಮೆಯಾಗುವುದು

* ಕಣ್ಣಿನ ಮೇಲೆ ಕೋಲ್ಡ್ ಕಂಪ್ರೆಸ್‌ ಬಳಸುವುದು.

2. ತ್ವಚೆ ಸಮಸ್ಯೆ

2. ತ್ವಚೆ ಸಮಸ್ಯೆ

ಕೆಲವರಿಗೆ ತ್ವಚೆ ಸಮಸ್ಯೆ ಉಂಟಾಗುವುದು, ಪಾದಗಳು ಕೆಂಪಾಗುವುದು, ಊತ ಕಂಡು ಬರುವುದು ಹಾಗೂ ತ್ವಚೆ ದಪ್ಪಗಾಗುವುದು. ಚಿಕಿತ್ಸೆ ಪಡೆಯುತ್ತಿದ್ದರೆ ಎರಡು ವರ್ಷದಲ್ಲಿ ತ್ವಚೆ ಸಮಸ್ಯೆ ಸರಿ ಹೋಗುವುದು.

3. ಥೈರಾಯ್ಡ್‌ ಸ್ಟ್ರೋಮ್‌

3. ಥೈರಾಯ್ಡ್‌ ಸ್ಟ್ರೋಮ್‌

ಇದು ಅತ್ಯಂತ ಅಪಾಯಕಾರಿಯಾ ಕಂಡೀಷನ್ ಆಗಿದೆ. ದೇಹಕ್ಕೆ ತುಂಬಾ ಒತ್ತಡ ಉಂಟಾದಾಗ, ಹೃದಯಾಘಾತ ಅಥವಾ ಸೋಂಕು ತಗುಲಿದಾಗ ಉಂಟಾಗಬಹುದು, ತುಂಬಾ ಸಮಯದಿಂದ ಹೈಪರ್‌ ಥೈರಾಯ್ಡ್‌ ಸಮಸ್ಯೆ ಇದ್ದರೆ ಉಂಟಾಗುವುದು. ಹೈಪರ್‌ ಥೈರಾಯ್ಡ್‌ಗೆ ರೇಡಿಯೋ ಆಕ್ಟವ್‌ ಅಯೋಡಿಯನ್‌ ಥೆರಪಿ ಪಡೆದುಕೊಂಡಾಗ ಅಥವಾ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಈ ರೀತಿ ಉಂಟಾಗುವುದು.

ಥೈರಾಯ್ಡ್ ಸ್ಟ್ರೋಮ್‌ ಉಂಟಾದಾಗ ಕಂಡು ಬರುವ ಲಕ್ಷಣಗಳು

* ಹೃದಯ ಬಡಿತ ಹೆಚ್ಚುವುದು

* ಮೈಯಲ್ಲಿ ನಡುಕ

* ಮೈ ಬೆವರುವುದು

* ಹಿಂಜರಿಕೆ

* ಒಂದು ರೀತಿಯ ಗೊಂದಲ

4. ಹೃದಯಾಘಾತ

4. ಹೃದಯಾಘಾತ

ನಿಮ್ಮ ಹರದಯ ಬಡಿತವನ್ನು ಥೈರಾಯ್ಡ್ ಹಾರ್ಮೋನ್‌ ನಿಯಂತ್ರಿಸುತ್ತದೆ. ಹೈಪರ್‌ಥೈರಾಯ್ಡ್ ಇರುವರಲ್ಲಿ ಹೃದಯ ಬಡಿತ ವೇಗವಾಗಿ ಇರುತ್ತದೆ, ಇದರಿಂದ ಹೃದಯಾಘಾತ, ಸ್ಟ್ರೋಕ್ ಉಂಟಾಗುವ ಸಾಧ್ಯತೆ ಹೆಚ್ಚು.

5. ಸಂಧಿವಾತ

5. ಸಂಧಿವಾತ

ಹೈಪರ್‌ಥೈರಾಯ್ಡ್‌ ಸಮಸ್ಯೆಯಿದ್ದರೆ ಮೂಳೆಗಳು ದುರ್ಬಲವಾಗುತ್ತದೆ. ಹೈಪರ್‌ಥೈರಾಯ್ಡ್‌ಗೆ ಚಿಕಿತ್ಸೆ ಪಡೆಯದೇ ಇದ್ದರೆ ಸಂಧಿವಾತ, ಮೆನೋಪಾಸ್‌ ಬಳಿಕ ತುಂಬಾ ಸಮಸ್ಯೆ ಉಂಟಾಗುವುದು.

ಹೈಪರ್‌ಥೈರಾಯ್ಡ್‌ ಇದ್ದರೆ ಹಾಗೇ ಬಿಡಬೇಡಿ, ಚಿಕಿತ್ಸೆ ಪಡೆಯಿರಿ, ಇದರಿಂದ ಆರೋಗ್ಯದ ಅಪಾಯವನ್ನು ಕಡಿಮೆ ಮಾಡಬಹುದು.

English summary

What Are Complications Of untreated Graves Disease in kannada

What are complications of untreated Graves disease in kannada...
Story first published: Friday, March 18, 2022, 11:36 [IST]
X
Desktop Bottom Promotion