For Quick Alerts
ALLOW NOTIFICATIONS  
For Daily Alerts

ಹೃದಯ ಸಮಸ್ಯೆ ಇರುವವರು ರಕ್ತ ಹೆಪ್ಪುಗಟ್ಟದಿರಲು ಈ ಆಹಾರ ತಿಂದರೆ ಒಳ್ಳೆಯದು

|

Blood is thicker than water ಎಂಬುದೊಂದು ಬಹಳ ಹಳೆಯ ಸುಭಾಶಿತ. ನಮ್ಮ ದೇಹದ ಪ್ರತಿ ಅಗತ್ಯಕ್ಕೂ ರಕ್ತ ಬೇಕೇ ಬೇಕಾಗುತ್ತದೆ ಮತ್ತು ಇದರ ಸಾಂದ್ರತೆ ಮತ್ತು ಸ್ನಿಗ್ಧತೆ ಇದರಲ್ಲಿ ಅಡಕಗೊಂಡಿರುವ ಹಲವಾರು ಅಂಶಗಳನ್ನು ಆಧರಿಸಿರುತ್ತದೆ.

What Are Blood Thinners? What Are Blood Thinner Foods

ಒಂದು ಮಿತಿಗಿಂತ ರಕ್ತ ತನ್ನ ಸ್ನಿಗ್ಧತೆಯನ್ನು ಕಳೆದುಕೊಳ್ಳಬಾರದು. ಇದಕ್ಕೂ ಹೆಚ್ಚಾದರೆ ದೊಡ್ದ ಮತ್ತು ಮುಖ್ಯ ನರಗಳಲ್ಲಿಯೇ ಪರಿಚಲನೆ ಕಷ್ಟಸಾಧ್ಯವಾಗುತ್ತದೆ ಮತ್ತು ತೀರಾ ಸಪೂರವಿರುವ ನರಗಳಲ್ಲಂತೂ ಮುಂದೆ ಹೋಗದೇ ನಿಂತೇ ಬಿಡುತ್ತದೆ. ಉದಾಹರಣೆಗೆ ನೀರು ಹಾಯುವ ಸಪೂರ ಪೈಪ್ ನಲ್ಲಿ ಹರಳೆಣ್ಣೆ ಹಾಯಿಸಿದರೆ ಹೇಗೆ ಬರಬಹುದು? ಹಾಗಾಗಿ, ರಕ್ತ ಒಂದು ವೇಳೆ ಅಗತ್ಯಕ್ಕೂ ಹೆಚ್ಚಿನ ಸ್ನಿಗ್ಧತೆಯನ್ನು ಪಡೆದರೆ ಇದನ್ನು ತೆಳುವಾಗಿಸುವುದು ಅಗತ್ಯ.

ಈ ಕೆಲಸವನ್ನು ನಿರ್ವಹಿಸುವ ದ್ರವಗಳಿಗೆ ರಕ್ತ ತೆಳುಕಾರಕ (blood thinners) ಎಂದು ಕರೆಯುತ್ತೇವೆ. ಹೃದಯದ ವಿಷಯಕ್ಕೆ ಬಂದಾಗ ಮತ್ತು ನಮ್ಮ ಜೀವನದ ವೆಚ್ಚದಲ್ಲಿ, ರಕ್ತ ತೆಳುವಾಗಿಸುವುದು ಅಗತ್ಯವಾದರೆ ರಕ್ತ ತೆಳುಕಾರಕ ಆಹಾರ ಮತ್ತು ಔಷಧಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನೀವು ಹೃದಯದ ತೊಂದರೆಗಳು ಮತ್ತು ತೊಡಕುಗಳಿಂದ ಬಳಲುತ್ತಿದ್ದರೆ, ನೈಸರ್ಗಿಕ ರಕ್ತ ತೆಳುಕಾರಕ ಗುಣಗಳನ್ನು ಹೊಂದಿರುವ ಆಹಾರವನ್ನು ನೀವು ಸೇವಿಸಲು ಪ್ರಾರಂಭಿಸಬೇಕು ಎಂದು ವೈದ್ಯರು ಸಲಹೆ ಮಾಡುತ್ತಾರೆ.

 ರಕ್ತ ತೆಳುಕಾರಕಗಳು ಎಂದರೇನು?

ರಕ್ತ ತೆಳುಕಾರಕಗಳು ಎಂದರೇನು?

ರಕ್ತ ತೆಳುಕಾರಕಗಳು ಎಂದರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಬಾಯಿಯ ಮೂಲಕ ಅಥವಾ ನರಗಳಿಗೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವ ಔಷಧಿಗಳಾಗಿವೆ. ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾಗಿ ಹಾನಿಕಾರಕವಲ್ಲ ಆದರೆ ಕೆಲವು ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯು ಹೃದಯ, ಶ್ವಾಸಕೋಶ ಅಥವಾ ಮೆದುಳಿಗೆ ರಕ್ತದ ಪೂರೈಕೆಯನ್ನು ಸ್ಥಗಿತಗೊಳಿಸುತ್ತದೆ. ಇದರ ಪರಿಣಾಮವಾಗಿ ಪಾರ್ಶ್ವವಾಯು ಅಥವಾ ಹೃದಯಾಘಾತವಾಗುತ್ತದೆ.

ವಾಸ್ತವದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ನಮ್ಮ ದೇಹದ ರಕ್ತಸ್ರಾವದಿಂದ ನಮ್ಮನ್ನು ರಕ್ಷಿಸುವ ವಿಧಾನವೇ ಆಗಿದೆ. ಈ ಗುಣವಿಲ್ಲದೇ ಇದ್ದರೆ ಚಿಕ್ಕ ಗಾಯವಾದರೂ ಹೊರಹರಿಯುವ ರಕ್ತ ನಿಲ್ಲದೇ ಸಾವಿಗೆ ಕಾರಣವಾಗಬಹುದಿತ್ತು. ಆದರೆ ರಕ್ತದಲ್ಲಿರುವ ವಿಟಮಿನ್ ಕೆ ಮತ್ತು ಪ್ಲೇಟ್ಲೆಟ್ ಗಳು ಗಾಳಿಯ ಸಂಪರ್ಕಕ್ಕೆ ಬಂದೊಡನೆಯೇ ಒಂದಕ್ಕೊಂದು ಅಂಟಿಕೊಂಡು ಗಟ್ಟಿಯಾಗಿಬಿಡುತ್ತವೆ. ಈ ಮೂಲಕ ಇನ್ನಷ್ಟು ರಕ್ತವನ್ನು ಹರಿಯಲು ಬಿಡದೇ ಗೋಡೆಯಂತೆ ರಕ್ಷಣೆ ನೀಡುತ್ತವೆ. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎಂದು ಕರೆಯುತ್ತೇವೆ (blood clotting).

ನಮ್ಮ ರಕ್ತದಲ್ಲಿ ಈ ಪ್ಲೇಟ್ಲೆಟ್ ಗಳು ಬರೆಯ ಹತ್ತು ದಿನ ಜೀವಂತವಿರುತ್ತವೆ. ಬಳಿಕ ಇವು ಸತ್ತು ಹೊಸತು ಹುಟ್ಟುತ್ತಲೇ ಇರುತ್ತವೆ. ಇವುಗಳ ಕ್ಷಮತೆ ವಿಟಮಿನ್ ಕೆ ಯನ್ನು ಅವಲಂಬಿಸಿದೆ. ಈ ವಿಟಮಿನ್ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಇರುವುದು ಅತಿ ಅವಶ್ಯಕ.

ಕಡಿಮೆಯಾದರೆ ಹೆಪ್ಪುಗಟ್ಟುವಿಕೆ ಸಾಧ್ಯವಾಗುವುದಿಲ್ಲ ಅಥವಾ ಅತಿ ನಿಧಾನವಾಗುತ್ತದೆ. (ಮಧುಮೇಹಿಗಳಿಗೆ ಈ ತೊಂದರೆ ಸಾಮಾನ್ಯವಾಗಿದೆ) ಹೆಚ್ಚಾದರೆ ಅನಾವಶ್ಯಕವಾಗಿ ರಕ್ತ ಹೆಪ್ಪುಗಟ್ಟತೊಡಗುತ್ತದೆ. ಇದನ್ನೇ ರಕ್ತ ದಪ್ಪಗಾಗುವುದು ಎಂದು ಕರೆಯುತ್ತೇವೆ. ಒಂದು ವೇಳೆ ಈ ಪ್ರಕ್ರಿಯೆ ಕಂಡುಬಂದರೆ ವೈದ್ಯರು ರಕ್ತ ತೆಳುಕಾರಕಗಳನ್ನು ಬಾಯಿಯಿಂದ ಸೇವಿಸುವ ಅಥವಾ ನರಕ್ಕೆ ಚುಚ್ಚುವ ಔಷಧಿಗಳ ಮೂಲಕ ನೀಡಿ ರಕ್ತದ ಸ್ನಿಗ್ಧತೆಯನ್ನು ಸರಿಪಡಿಸಲು ಚಿಕಿತ್ಸೆ ನೀಡುತ್ತಾರೆ.

ರಕ್ತದ ಸ್ನಿಗ್ಧತೆ ಹೆಚ್ಚಿದ್ದರೆ ಕೇವಲ ಪ್ಲೇಟ್ಲೆಟ್ ಗಳು ಮಾತ್ರವಲ್ಲ, ಇತರ ಕೋಶಗಳೂ ಪರಸ್ಪರ ಅಂಟಿಕೊಳ್ಳುವುದು ಅಥವಾ ನರಗಳ ಮತ್ತು ಧಮನಿಗಳ ಒಳಗೋಡೆಗಳಿಗೆ ಅಂಡಿಕೊಂಡು ರಕ್ತವನ್ನು ಹೆಪ್ಪುಗಟ್ಟಿಸಬಹುದು. ಪರಿಣಾಮವಾಗಿ ಇವು ರಕ್ತದ ಸುಗಮ ಹರಿವಿಗೆ ತಡೆಯೊಡ್ಡುತ್ತವೆ ಮತ್ತು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಿ ಕೊಡಬೇಕಾಗಿ ಬಂದು ಹೃದಯದ ಒತ್ತಡ ಹೆಚ್ಚುತ್ತದೆ.

ಅಷ್ಟೇ ಅಲ್ಲ, ಒಂದು ವೇಳೆ ಗಾಯವಾದರೆ ಸಾಕಷ್ಟು ಪ್ರಮಾಣದ ಪ್ಲೇಟ್ಲೆಟ್ ಗಳು ಅಲ್ಲಿ ಲಭ್ಯವಾಗದೇ ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈ ಗುಣದಿಂದಾಗಿ ಮಧುಮೇಹ ಇಲ್ಲದ ವ್ಯಕ್ತಿಗಳಿಗೂ ಮಧುಮೇಹ ಇರುವ ಅನುಮಾನ ಬರುವಂತಾಗುತ್ತದೆ.

ಅನಿಯಮಿತ ಹೃದಯ ಬಡಿತ ಅಥವಾ ಜನ್ಮಜಾತ ಹೃದಯ ದೋಷದಂತಹ ಕೆಲವು ಅನಾರೋಗ್ಯಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ರಕ್ತ ತೆಳುವಾಗಿಸುವ ಔಷಧಿಗಳ ಅಗತ್ಯವಿರುತ್ತದೆ. ಅಂದರೆ, ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವವರಿಗೆ ರಕ್ತ ತೆಳುಕಾರಕಗಳನ್ನು ಶಿಫಾರಸ್ಸು ಮಾಡಲಾಗುತ್ತದೆ.

ರಕ್ತ ತೆಳುಕಾರಕಗಳು ರಕ್ತ ಹೆಪ್ಪುಗಟ್ಟುವಿಕೆಯ ಆಕ್ರಮಣವನ್ನು ಸೀಮಿತಗೊಳಿಸುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ನೀವು ಒಳಗಾಗುವ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಔಷಧಿಗಳ ಹೊರತಾಗಿ, ರಕ್ತ ತೆಳುವಾಗಿಸುವ ಗುಣಗಳನ್ನು ಹೊಂದಿರುವ ಕೆಲವು ಆಹಾರಗಳೂ ಇವೆ, ಇವೂ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗಮನಿಸಿ: ನಿಮಗೆ ಸಲಹೆ ಮಾಡಲಾಗಿರುವ ರಕ್ತ ತೆಳುಕಾರಕ ಔಷಧಿಗಳ ಬದಲಿಗೆ ಅಥವಾ ಈ ನೈಸರ್ಗಿಕ ರಕ್ತ ತೆಳುಗೊಳಿಸುವಿಕೆಯನ್ನು ಬಳಸುವ ಮುನ್ನ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿ ವೈದ್ಯರ ಅನುಮತಿ ಪಡೆದೇ ಇವನ್ನು ಅನುಸರಿಸಬೇಕೇ ವಿನಃ ಸ್ವತಃ ಯಾವುದೇ ನಿರ್ಧಾರವನ್ನು ಕೈಗೊಳ್ಳದಿರಿ.

1. ದಾಲ್ಚಿನ್ನಿ

1. ದಾಲ್ಚಿನ್ನಿ

ದಾಲ್ಚಿನ್ನಿ ಕೌಮರಿನ್ (coumarin) ಎಂಬ ಸಂಯುಕ್ತವಸ್ತುವನ್ನು ಹೊಂದಿದೆ., ಇದು ಅತ್ಯುತ್ತಮ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಕ್ಷಮತೆ ಹೊಂದಿದೆ. (anticoagulant) ದಾಲ್ಚಿನ್ನಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಮಸಾಲೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಸಂಧಿವಾತ ಮತ್ತು ಇತರ ಉರಿಯೂತದ ಪರಿಣಾಮಗಳಿಂದ ಉಂಟಾಗುವ ಉರಿಯೂತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ದಾಲ್ಚಿನ್ನಿಯನ್ನು ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದನ್ನು ತಪ್ಪಿಸಿ ಏಕೆಂದರೆ ಅದು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ.

2. ಶುಂಠಿ

2. ಶುಂಠಿ

ಶುಂಠಿಯು ಉತ್ತಮ ರಕ್ತ ತೆಳುಕಾರಕವಾಗಿದ್ದು, ಇದರಲ್ಲಿ ಸ್ಯಾಲಿಸೈಲೇಟ್ ಎಂಬ ನೈಸರ್ಗಿಕ ರಾಸಾಯನಿಕವಿದೆ, ಇದು ಅನೇಕ ಸಸ್ಯಗಳಲ್ಲಿ ಕಂಡುಬರುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ರಕ್ತ ತೆಳುಕಾರಕ ಗುಣದ ವಿಷಯಕ್ಕೆ ಬಂದಾಗ, ಶುಂಠಿ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನರಗಳನ್ನು ಸಡಿಲಗೊಳಿಸುತ್ತದೆ, ಮತ್ತು ಔಷಧಿಗಳಿಗೆ ಹೋಲಿಸಿದರೆ ಶುಂಠಿಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಮತ್ತು ಸಾಬೀತುಪಡಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ.

3. ಕೆಂಪುಮೆಣಸು (Cayenne Pepper)

3. ಕೆಂಪುಮೆಣಸು (Cayenne Pepper)

ಕೆಂಪುಮೆಣಸು ಅತ್ಯುತ್ತಮ ರಕ್ತ ತೆಳುಕಾರಕ ಪರಿಣಾಮವನ್ನು ಹೊಂದಿದೆ, ಇದು ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಮೆಣಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಲಿಸೈಲೇಟ್‌ಗಳು ಇರುವುದರಿಂದ ಇದು ದೇಹದಲ್ಲಿ ರಕ್ತದ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ

4. ಬೆಳ್ಳುಳ್ಳಿ

4. ಬೆಳ್ಳುಳ್ಳಿ

ಬೆಳ್ಳುಳ್ಳಿ ದೇಹದಲ್ಲಿ ಎದುರಾಗಿರುವ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಜೀವಕೋಶಗಳಿಗೆ ಎದುರಾಗುವ ಹಾನಿಯನ್ನು ತಡೆಯುತ್ತದೆ. ಇದು ದೇಹದಲ್ಲಿ ಪ್ಲೇಟ್‌ಲೆಟ್ ಸಂಖ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಅತ್ಯುತ್ತಮ ತೆಳಿಕಾರಕ ಗುಣದ ಜೊತೆಗೇ, ಬೆಳ್ಳುಳ್ಳಿ ದೇಹದಲ್ಲಿ ರಕ್ತ ಪರಿಚಲನೆಯನ್ನೂ ಉತ್ತಮಗೊಳಿಸುತ್ತದೆ. ಬೆಳ್ಳುಳ್ಳಿ ರಕ್ತಹೆಪ್ಪುಗಟ್ಟುವಿಕೆ ತಡೆಗಟ್ಟುವ (antithrombotic) ಚಟುವಟಿಕೆಯನ್ನು ತೋರಿಸುತ್ತದೆ ಎಂದು ಸಾಬೀತಾಗಿದೆ, ಅಂದರೆ, ರಕ್ತ ಹೆಪ್ಪುಗಟ್ಟುವುದನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಹಾಯಕನಾಗಿದೆ. ಈ ಗುಣವನ್ನು ವೈದ್ಯವಿಜ್ಞಾನ ಆಂಟಿಥ್ರೊಂಬೋಟಿಕ್ ಏಜೆಂಟ್ ಎಂದು ಕರೆಯುತ್ತದೆ.

5. ಅರಿಶಿನ

5. ಅರಿಶಿನ

ಅರಿಶಿನದ ಪ್ರಮುಖ ಪೋಷಕಾಂಶಗಳಲ್ಲಿ ಪ್ರಮುಖವಾದ ಕರ್ಕ್ಯುಮಿನ್ ಹೆಪ್ಪುಗಟ್ಟುವಿಕೆಯನ್ನು ತಡೆಯುವ (anticoagulant) ಪ್ರತಿಕಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಜಿಡ್ಡುಗಳಿಂದ ರಕ್ತವನ್ನು ಶುದ್ದೀಕರಿಸಿ ರಕ್ತವನ್ನು ತೆಳ್ಳಗಾಗಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

6. ವಿಟಮಿನ್ ಇ

6. ವಿಟಮಿನ್ ಇ

ವಿಟಮಿನ್ ಇ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ ಮತ್ತು ಇದು ವಿಟಮಿನ್ ಇ ಸೇವಿಸುವ ಪ್ರಮಾಣವನ್ನು ಅವಲಂಬಿಸಿರುತ್ತದೆ. ರಕ್ತವನ್ನು ತೆಳುಗೊಳಿಸಲು ವಿಟಮಿನ್ ಎಷ್ಟು ಪ್ರಮಾಣವು ಸಹಾಯ ಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ದಿನಕ್ಕೆ 400 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಘಟಕಗಳ (ಐಯು) ಪ್ರಮಾಣ ಅಗತ್ಯವಿರುತ್ತದೆ. ಹೆಚ್ಚುವರಿ ಆಹಾರದಿಂದ ವಿಟಮಿನ್ ಇ ಪಡೆಯುವುದು ಸುರಕ್ಷಿತವಾಗಬಹುದು. ವಿಟಮಿನ್ ಇ ಸಮೃದ್ಧವಾಗಿರುವ ಆಹಾರವೆಂದರೆ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಇಡಿಯ ಧಾನ್ಯಗಳು ಇತ್ಯಾದಿ.

7. ದ್ರಾಕ್ಷಿ ಬೀಜದ ಸಾರ (Grape Seed Extract)

7. ದ್ರಾಕ್ಷಿ ಬೀಜದ ಸಾರ (Grape Seed Extract)

ಕೆಲವು ಅಧ್ಯಯನಗಳ ಮೂಲಕ ದ್ರಾಕ್ಷಿ ಬೀಜದ ಸಾರವು ಹಲವಾರು ಹೃದಯ ಮತ್ತು ರಕ್ತದ ಸ್ಥಿತಿಗಳಿಗೆ ಸಂಭಾವ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಕಂಡುಬಂದಿದೆ. ಬೀಜದ ಸಾರವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ರಕ್ತನಾಳಗಳನ್ನು ರಕ್ಷಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ ಮತ್ತು ರಕ್ತ ತೆಳುಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.

 8. ಗಿಂಕ್ಗೊ ಬೈಲೋಬಾ (Ginkgo Biloba)

8. ಗಿಂಕ್ಗೊ ಬೈಲೋಬಾ (Ginkgo Biloba)

ಗಿಂಕ್ಗೊ ಬಿಲೋಬಾ ಬೀಜ ಮತ್ತು ಒಣಗಿದ ಎಲೆಗಳನ್ನು ಸಾಂಪ್ರದಾಯಿಕ ಚೀನೀ ಔಷಧಗಳಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಸಸ್ಯದ ಸಾರದಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಸಂಯುಕ್ತಗಳ ವಿಶಿಷ್ಟ ಸಂಯೋಜನೆಯು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆ ನೀಡಲು ಬಳಸುವ ಸ್ಟ್ರೆಪ್ಟೊಕಿನೇಸ್ (streptokinase) ಎಂಬ ಔಷಧಿಗೆ ಗಿಂಕ್ಗೊ ಬಿಲೋಬಾ ಸಾರವು ಪರಿಣಾಮ ಬೀರುತ್ತದೆ ಎಂದು ಒಂದು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ.

ಇತರ ರಕ್ತ ತೆಳುಕಾರಕ ಆಹಾರಗಳು:

ಇತರ ರಕ್ತ ತೆಳುಕಾರಕ ಆಹಾರಗಳು:

ಕೆಲವು ನೈಸರ್ಗಿಕ ಆಹಾರಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಬಹುದು, ಆದರೆ ನೈಸರ್ಗಿಕ ಪರಿಹಾರಗಳು ರಕ್ತ ತೆಳುಕಾರಕ ಔಷಧಿಗಳಷ್ಟು ಪರಿಣಾಮಕಾರಿಯಾಗುವ ಸಾಧ್ಯತೆಯಿಲ್ಲ. ಯಾವುದೇ ನೈಸರ್ಗಿಕ ಆಹಾರವನ್ನು ರಕ್ತ ತೆಳುಕಾರಕವಾಗಿ ಪರಿಗಣಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಇಲ್ಲಿ ಇನ್ನೂ ಕೆಲವು ನೈಸರ್ಗಿಕ ರಕ್ತ ತೆಳುಕಾರಕ ಗುಣವುಳ್ಳ ಆಹಾರಗಳೆಂದು ಅನುಭವದ ಮೂಲಕ ಕಂಡುಕೊಳ್ಳಲಾಗಿದೆ. ಆದರೆ ಇವುಗಳನ್ನು ಇದುವರೆಗೂ ಯಾವುದೇ ವೈಜ್ಞಾನಿಕ ಅಧ್ಯಯನಗಳು ಅಥವಾ ಸಂಶೋಧನೆಗಳು ದೃಢೀಕರಿಸಿಲ್ಲ.

  • ಸಾಲ್ಮನ್
  • ಕೆಂಪು ವೈನ್
  • ಬಾದಾಮಿ
  • ಆಲಿವ್ ಎಣ್ಣೆ
  • ಅನಾನಸ್ (ಬ್ರೊಮೆಲೈನ್ ಕಿಣ್ವ)
  • ಜಿನ್ಸೆಂಗ್ (ಡಾಂಗ್ ಕ್ವಾಯ್)
  • ಕ್ಯಾಮೋಮೈಲ್ ಚಹಾ
  • ಬೆಣ್ಣೆ ಹಣ್ಣು (ಅವೋಕ್ಯಾಡೋ)
  • ಚೆರ್‍ರಿ ಹಣ್ಣುಗಳು
  • ಅಂತಿಮವಾಗಿ:

    ಅಂತಿಮವಾಗಿ:

    ಹಲವಾರು ನೈಸರ್ಗಿಕ ರಕ್ತ ತೆಳುಕಾರಕ ಆಹಾರಗಳು ಲಭ್ಯವಿದ್ದರೂ, ಮೊದಲು ನಿಮ್ಮ ವೈದ್ಯರೊಂದಿಗೆ ಸಲಹೆ ಪಡೆಯದೇ ಅವುಗಳನ್ನು ಬಳಸಲು ಪ್ರಾರಂಭಿಸಬೇಡಿ. ಈ ನೈಸರ್ಗಿಕ ರಕ್ತ ತೆಳುಕಾರಕಗಳು ನೀವು ಈಗ ಸೇವಿಸುತ್ತಿರುವ ಔಷಧಿಗಳಿಗೆ ಅಡ್ಡಿಯಾಗಬಹುದು ಅಥವಾ ರಕ್ತಸ್ರಾವದ ಸಾಧ್ಯತೆಯನ್ನು ಹೆಚ್ಚಿಸಬಹುದು. ಅಲ್ಲದೆ, ಈ ನೈಸರ್ಗಿಕ ಪರಿಹಾರಗಳು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೆಪ್ಪುಗಟ್ಟುವಿಕೆಯ ರಚನೆಯ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ವೈದ್ಯರ ಅನುಮತಿ ಇಲ್ಲದೇ ಸ್ವತಃ ರಕ್ತ ತೆಳುಕಾರಕಗಳನ್ನು ಸೇವಿಸದಿರಿ.

English summary

What Are Blood Thinners? What Are Blood Thinner Foods

Blood thinners are medications taken orally or intravenously to prevent a blood clot [1]. Blood clots normally are not harmful but in some cases, blood clots can stop the flow of blood to the heart, lungs, or brain, resulting in a stroke or heart attack
X
Desktop Bottom Promotion