Just In
Don't Miss
- Technology
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
- News
2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
A, B ಬ್ಲಡ್ ಗ್ರೂಪ್‌ನವರಿಗೆ ಹೃದಯಘಾತ ಸಾಧ್ಯತೆ ಹೆಚ್ಚು O ಬ್ಲಡ್ ಗ್ರೂಪ್‌ನವರಿಗೆ ಹೃದಯಘಾತ ಸಾಧ್ಯತೆ ಕಡಿಮೆ ಏಕೆ ಗೊತ್ತಾ?
ವಿಶ್ವದಲ್ಲಿ ಅತೀ ಹೆಚ್ಚಿನ ಜನರು ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಮೊದಲೆಲ್ಲಾ ಹೃದಯಾಘಾತ ಸ್ವಲ್ಪ ವಯಸ್ಸಾದವರಲ್ಲಿ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಹೃದಯಾಘಾತದ ಸಮಸ್ಯೆ ಕಂಡು ಬರುತ್ತಿದೆ.
ಹೃದಯಾಘಾತ ಅನೇಕ ಕಾರಣಗಳಿಂದ ಉಂಟಾಗುತ್ತಿದೆ ಬಹುಮುಖ್ಯವಾದ ಕಾರಣವೆಂದರೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡ. ಹೃದಯಾಘಾತಕ್ಕೆ ಕಾರಣವೇನು ಎಂಬುವುದರ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿವೆ. ಹೃದಯಾಘಾತ ಕೆಲವೊಂದು ಗುಂಪಿನ ರಕ್ತದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ.
ಯಾವ ರಕ್ತದ ಗುಂಪಿನವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ? ಯಾರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂಬುವುದು ನೋಡೋಣ:

ಯಾವ ರಕ್ತದ ಗುಂಪಿನವರಿಗೆ ಹೃದಯಾಘಾತದ ಅಪಾಯ ಹೆಚ್ಚು?
ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿರುವ ಅಂಶವೆಂದರೆ O ಗುಂಪಿನ ರಕ್ತದವರಿಗಿಂತ ಇತರ ಗುಂಪಿನ ರಕ್ತದವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಅಮೆರಿಕನ್ ಹಾರ್ಟ್ ಅಸೋಷಿಯೇಷನ್ 4 ಲಕ್ಷ ಜನರನ್ನು ಅಧ್ಯಯನ ಮಾಡಿ ಈ ವರದಿ ನೀಡಿದೆ. ಅದರಲ್ಲೂ A ಮತ್ತು B ಗುಂಪಿನ ರಕ್ತದವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂಬುವುದಾಗಿ ಅಧ್ಯಯನ ವರದಿ ಹೇಳಿದೆ.

ಮಯೋಕಾರ್ಡಿಯಲ್ ಇನ್‌ಫ್ರ್ಯಾಕ್ಷನ್ ಅಪಾಯ ಯಾರಿಗೆ ಹೆಚ್ಚು?
ಯುರೋಪಿಯನ್ ಸೊಸೈಟಿ ನಡೆಸಿದ ಮತ್ತೊಂದು ಅಧ್ಯಯನದಲ್ಲಿ O ಗುಂಪಿಯೇತರ ರಕ್ತವರಲ್ಲಿ ಹೃದಯ ಸಮಸ್ಯೆ ಅಂದರೆ ಹೃದಯಾಘಾತ ಶೇ.9ರಷ್ಟು ಅಧಿಕ ಎಂದು ಹೇಳಿದೆ.
ಅಧ್ಯಯನ ವರದಿ ಏನು ಹೇಳಿದೆ ಎಂದರೆ
* ಬಿ ಗುಂಪಿನ ರಕ್ತದವರಲ್ಲಿ ಹೃದಯಾಘಾತದ ಅಪಾಯ ತುಂಬಾನೇ ಹೆಚ್ಚು. ಬಿ ಗುಂಪಿನ ರಕ್ತದವರಲ್ಲಿ O ಗುಂಪಿನ ರಕ್ತದವರಿಗೆ ಹೋಲಿಸಿದರೆ ಹೃದಯಾಘಾತದ ಅಪಾಯ ಶೇ.15ರಷ್ಟು ಅಧಿಕ ಎಂಬುವುದಾಗಿ ಹೇಳಿದೆ.

ಯಾವ ಗುಂಪಿನ ರಕ್ತದವರಿಗೆ ಹಾರ್ಟ್‌ಫೈಲ್ಯೂರ್ ಹೆಚ್ಚಾಗಿ ಕಂಡು ಬರುವುದು?
ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ A ಗುಂಪಿನ ರಕ್ತದವರಲ್ಲಿ ಹಾರ್ಟ್ ಫೈಲ್ಯೂರ್ ಸಾಧ್ಯತೆ ಶೇ. 11ರಷ್ಟು ಅಧಿಕ ಎಂಬುವುದು ಅಧ್ಯಯನ ವರದಿ ಹೇಳಿದೆ.
ಹಾರ್ಟ್‌ಫೈಲ್ಯೂರ್ ಮತ್ತು ಹಾರ್ಟ್ ಅಟ್ಯಾಕ್ ಎರಡು ಬೇರೆ-ಬೇರೆ. ಆದರೆ ಹಾರ್ಟ್ ಫೈಲ್ಯೂರ್ ನಿಧಾನಕ್ಕೆ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಹಾರ್ಟ್ ಫೈಲ್ಯೂರ್ ಆದವರಿಗೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಬರಬಹುದು. ಇನ್ನು ಹೃದಯಾಘಾತವಾದರೆ ಹಾರ್ಟ್ ಪೈಲ್ಯೂರ್ ಆಗುವುದು.

ಏಕೆ O ಗುಂಪಿಯೇತರ ರಕ್ತದವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುವುದು?
O ಗುಂಪಿನ ರಕ್ತದವರನ್ನು ಹೊರತು ಪಡಿಸಿ ಉಳಿದವರಲ್ಲಿ ಏಕೆ ಹೃದಯಾಘಾತ ಹೆಚ್ಚಾಗಿ ಉಂಟಾಗುತ್ತದೆ ಎಂದು ನಿಮಗೆ ಅನಿಸಬಹುದು? ಇದರ ಬಗ್ಗೆ ತಜ್ಞರು ಹೇಳಿರುವುದು ಏನೆಂದರೆ O ಗುಂಪಿನ ರಕ್ತಗಿಂತ ಇತರ ಗುಂಪಿನ ರಕ್ತ ಬೇಗ ಹೆಪ್ಪುಗಟ್ಟುತ್ತದೆ. ಈ ಕಾರಣದಿಂದಾಗಿ ಅವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು.