For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಹೆಚ್ಚಾಗುತ್ತಿದೆ ಅಧಿಕ ರಕ್ತದೊತ್ತಡ ಸಮಸ್ಯೆ: ಅಪಾಯವೇನು, ನಿಯಂತ್ರಿಸುವುದು ಹೇಗೆ?

|

ಅತೀ ಹೆಚ್ಚು ಮಧುಮೇಹ ಸಮಸ್ಯೆ ಹೊಂದಿರುವವರಲ್ಲಿ ಭಾರತ ನಂ. 1 ಸ್ಥಾನದಲ್ಲಿದೆ. ಇದೀಗ ಒಂದು ಅಧ್ಯಯನವೂ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಜನರು ಹೈಪರ್‌ ಟೆನ್ಷನ್‌ (ಅಧಿಕ ರಕ್ತದೊತ್ತಡ) ಹೊಂದಿದ್ದಾರೆ. ಅದರಲ್ಲೂ ಈ ಕಾಯಿಲೆ ಇರುವವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚು, ಆದರೆ ಅಚ್ಚರಿಯ ಸಂಗತಿ ಎಂದರೆ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದಂತೆ! ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

2019ರಿಂದ ಲ್ಯಾನ್ಸೆಂಟ್ ನಡೆಸುತ್ತಿದ್ದ ಅಧ್ಯಯನ ವರದಿ ಇದೀಗ ಬಂದಿದ್ದು ಅದರ ಪ್ರಕಾರ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಭಾರತದಲ್ಲಿ ಅಧಿಕವೇ ಇದೆ. ಶೇ.32ರಷ್ಟು ಪುರುಷರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಶೇ.30ರಷ್ಟು ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಇದೆ. ಅದರಲ್ಲಿ ಶೇ.35ರಷ್ಟು ಮಹಿಳೆಯರು ಚಿಕಿತ್ಸೆ ಪಡೆದರೆ, ಶೇ.25ರಷ್ಟು ಪುರುಷ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಮದು ಅಧ್ಯಯನ ವರದಿ ಹೇಳಿದೆ.

ಮಹಿಳೆಯರೇ ಹೆಚ್ಚಾಗಿ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಏಕೆ?

ಮಹಿಳೆಯರೇ ಹೆಚ್ಚಾಗಿ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಏಕೆ?

ಅಧಿಕ ರಕ್ತದೊತ್ತಡ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಅದಿಕ. ಆದರೆ ಹೆಚ್ಚಿನ ಪುರುಷರು ಪ್ರಾರಂಭದಲ್ಲಿ ಪರೀಕ್ಷೆ ಮಾಡಲು ಹೋಗುವುದಿಲ್ಲ. ತುಂಬಾ ಆರೋಗ್ಯ ಸಮಸ್ಯೆ ಕಾಡಿದಾಗ ಮಾತ್ರ ಪರೀಕ್ಷೆ ಮಾಡಿಸುತ್ತಾರೆ, ಇದರಿಂದಾಗಿ ಹೆಚ್ಚಿನವರು ತಕ್ಕ ಸಮಯಕ್ಕೆ ಚಿಕಿತ್ಸೆ ಪಡೆಯುತ್ತಿಲ್ಲ.

ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ, ಶಸ್ತ್ರ ಚಿಕಿತ್ಸೆ ಸಮಯದಲ್ಲಿ ರಕ್ತ ಪರೀಕ್ಷೆ ಮಾಡಲಾಗುವುದು. ಹೀಗಾಗಿ ರಕ್ತದೊತ್ತಡ ಸಮಸ್ಯೆ ಇದ್ದರೆ ಬೇಗನೆ ತಿಳಿದು ಬರುವುದು.

ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ?

ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ?

ಅಧಿಕ ರಕ್ತದೊತ್ತಡ ಇರುವವರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಹೃದಯಾಘಾತ, ಪಾರ್ಶ್ವವಾಯು, ಎದೆ ನೋವು, ಕಿಡ್ನಿಗೆ ಹಾನಿ, ದೃಷ್ಟಿ ದೋಷ, ಲೈಂಗಿಕ ಆಸಕ್ತಿ ಕುಂದುವುದು ಮುಂತಾದ ಸಮಸ್ಯೆ ಉಂಟಾಗುವುದು.

ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚು

ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚು

ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಗರ್ಭಾವಸ್ಥೆಯಲ್ಲಿ ತೊಂದರೆಯಾಗುವುದು. ಇನ್ನೂ ವಯಸ್ಸಾದಂತೆ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚು, ಅಲ್ಲದೆ ಇಟೋ ಇಮ್ಯೂನೆ ಕಾಯಿಲೆ ಉಂಟು ಮಾಡುವುದು.

ಕಳೆದ 30 ವರ್ಷಗಳಿಗೆ ಹೋಲಿಸಿದರೆ ರಕ್ತದೊತ್ತಡ ಹೊದಿರುವ ಸಂಖ್ಯೆ ಹೆಚ್ಚಾಗಿದ್ದು 1990ರಲ್ಲಿ ಶೇ. 29ರಷ್ಟು ಪುರುಷರಿಗೆ, ಸೇ.28ರಷ್ಟು ಮಹಿಳೆಯರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ 2019ರ ಸಮೀಕ್ಷೆಯಲ್ಲಿ ಶೇ. 30ರಷ್ಟು ಪುರುಷರು, ಶೇ. 32ರಷ್ಟು ಮಹಿಳೆಯರು ರಕ್ತದೊತ್ತಡ ಸಮಸ್ಯೆ ಹೊಂದಿದ್ದಾರೆ ಎಂಬುವುದು ತಿಳಿದು ಬಂದಿದೆ. ಅದರಲ್ಲಿ ಶೇ. 53ರಷ್ಟು ಮಹಿಳೆಯರು ಹಾಗೂ ಶೇ. 62ರಷ್ಟು ಪುರುಷರಿಗೆ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯದೆ ಇತರ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ.

ಅಧಿಕ ರಕ್ತದೊತ್ತಡದ ಲಕ್ಷಣಗಳು

ಅಧಿಕ ರಕ್ತದೊತ್ತಡದ ಲಕ್ಷಣಗಳು

* ಕಣ್ಣುಗಳು ಮಂಜಾಗುವುದು

* ತಲೆಸುತ್ತು

*ತಲೆನೋವು

* ತಲೆಬಾರವಾಗುವುದು

* ಮೂಗಿನಲ್ಲಿ ರಕ್ತಸ್ರಾವ

* ಉಸಿರಾಟದಲ್ಲಿ ತೊಂದರೆ

* ಎದೆಯಲ್ಲಿ ನೋವು

* ಅತಿಯಾದ ಮಾನಸಿಕ ಒತ್ತಡ

ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ?

ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ?

* ಬೊಜ್ಜು ಮೈ ಕರಗಿಸಿ

* ಪ್ರತಿದಿನ ವ್ಯಾಯಾಮ ಮಾಡಿ

* ಆರೋಗ್ಯಕರ ಆಹಾರ ಸೇವಿಸಿ

* ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಿ

* ಮದ್ಯ ಮಿತಿಯಲ್ಲಿ ಸೇವಿಸಿ

* ಧೂಮಪಾನ ಬಿಡಿ

* ಕೆಫೀನ್‌ (ಕಾಫಿ) ಕಡಿಮೆ ಮಾಡಿ

* ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ

* ರಕ್ತದೊತ್ತಡ ನಿಯಮಿತವಾಗಿ ಪರೀಕ್ಷಿಸಿ.

English summary

One-Third Of Indian Men And Women Suffer From Hypertension But More Women Get Treatment Says Study

One-third of Indian men and women suffer from hypertension but more women get treatment says study, read on...
Story first published: Thursday, August 26, 2021, 17:45 [IST]
X
Desktop Bottom Promotion