For Quick Alerts
ALLOW NOTIFICATIONS  
For Daily Alerts

ಮಧುಮೇಹ ಇದ್ದವರಿಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತಾ?

|

ಮಧುಮೇಹ ಮತ್ತು ಹೃದ್ರೋಗಕ್ಕೆ ಅವಿನಾಭಾವ ಸಂಬಂಧವಿದೆ. ಹೌದು, ನಿಮಗ ಮಧಮೇಹ ಇದ್ದರೆ ನೀಮಗೆ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಯಾಕೆಂದರೆ ಮಧುಮೇಹ ಹೊಂದಿರುವ ಜನರು ಹೆಚ್ಚಿನ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್ ನಂತಹ ಅಪಾಯಕಾರಿ ಅಂಶಗಳನ್ನು ಮೈಗೂಡಿಸಿಕೊಂಡಿರುತ್ತಾರೆ.

diabetes increases heart disease

ಹೀಗಾಗಿ ಅವರಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಜಾಸ್ತಿ ಎಂದು ಹೇಳುತ್ತಾರೆ. ಹಾಗಾದರೆ ಮಧುಮೇಹ ಎಂದರೆ ಏನು? ಹೃದಯ ಸಂಬಂಧಿ ಕಾಯಿಗಳು ಎಂದರೆ ಏನು? ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವೆ ಇರುವ ವ್ಯತ್ಯಾಸವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಧುಮೇಹ ಅಥವಾ ಡಯಾಬಿಟಿಸ್ ಎಂದರೇನು?

ಮಧುಮೇಹ ಅಥವಾ ಡಯಾಬಿಟಿಸ್ ಎಂದರೇನು?

ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷದಿಂದ ಬರುವ ಕಾಯಿಲೆ. ಸಾಮಾನ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಒದಗಿಸುವಲ್ಲಿ ಪ್ಯಾಂಕ್ರಿಯಾಸ್ ವಿಫಲವಾದರೆ ಅಥವಾ ಇನ್ಸುಲಿನ್ ತನ್ನ ಕಾರ್ಯನಿರ್ವಹಿಸುವಲ್ಲಿ ವೈಫಲ್ಯ ಕಂಡರೆ ಡಯಾಬಿಟಿಸ್ ಉಂಟಾಗುತ್ತದೆ.

ಹೃದ್ರೋಗ ಎಂದರೇನು?

ಹೃದ್ರೋಗ ಎಂದರೇನು?

ಹೃದ್ರೋಗ ಅಂದರೆ ಹೃದಯ ಸಂಬಂಧಿ ಕಾಯಿಲೆ ಎಂದು ಕರೆಯುತ್ತೇವೆ. ಹೃದಯಾಘಾತ, ಹೃದಯ ಸ್ಥಂಭನ, ಹೃದಯದಲ್ಲಿ ಏರುಪೇರು ಇವುಗಳೆಲ್ಲ ಹೃದಯ ಸಂಬಂಧಿ ಕಾಯಿಲೆಯಾಗಿದೆ. ಈ ಎಲ್ಲಾ ಸಮಸ್ಯೆ

ಮಧುಮೇಹ ಮತ್ತು ಹೃದ್ರೋಗಕ್ಕಿರುವ ಸಂಬಂಧವೇನು?

ಮಧುಮೇಹ ಮತ್ತು ಹೃದ್ರೋಗಕ್ಕಿರುವ ಸಂಬಂಧವೇನು?

ಈಗಾಗಲೇ ಹೇಳಿದ ಹಾಗೇ ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷದಿಂದ ಬರುವ ಕಾಯಿಲೆಯಾಗಿದೆ. ಈ ಗ್ಲುಕೋಸ್ ಅನ್ನುವುದು ಹೃದ್ರೋಗಕ್ಕು ಸಂಬಂಧಪಟ್ಟದ್ದು. ಹೌದು, ಮಧುಮೇಹದಿಂದ ಅಧಿಕ ರಕ್ತದ ಗ್ಲೂಕೋಸ್ ನಿಮ್ಮ ರಕ್ತನಾಳಗಳು ಮತ್ತು ನಿಮ್ಮ ಹೃದಯ ಮತ್ತು ರಕ್ತನಾಳಗಳನ್ನು ನಿಯಂತ್ರಿಸುವ ನರಗಳನ್ನು ಹಾನಿಗೊಳಿಸುತ್ತದೆ. ಕಾಲಾನಂತರದಲ್ಲಿ, ಈ ಹಾನಿಯು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಮಧುಮೇಹವನ್ನು ನೀವು ತಡೆದರೆ ಹೃದಯ ಸಂಬಂಧಿ ಕಾಯಿಲೆಯಿಂದಲೂ ನೀವು ದೂರ ಇರಬಹುದಾಗಿದೆ.

ಮಧುಮೇಹ ಇದ್ದವರು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ!

ಮಧುಮೇಹ ಇದ್ದವರು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ!

ಧೂಮಪಾನ!

ನಿಮಗೆ ಮಧುಮೇಹ ಇದೆ ಅಂದರೆ ಖಂಡಿತವಾಗ್ಲು ಧೂಮಪಾನ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ. ಹೌದು, ಧೂಮಪಾನವು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಮಧುಮೇಹ ಮಾಡುವವರಾದರೆ, ಧೂಮಪಾನವನ್ನು ನಿಲ್ಲಿಸುವುದು ಅತೀ ಮುಖ್ಯ. ಏಕೆಂದರೆ ಧೂಮಪಾನ ಮತ್ತು ಮಧುಮೇಹ, ಎರಡೂ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಧೂಮಪಾನವು ನಿಮ್ಮ ಇತರ ದೀರ್ಘಾವಧಿಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡ!

ಅಧಿಕ ರಕ್ತದೊತ್ತಡ!

ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ ನಿಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸುತ್ತದೆ. ಅಧಿಕ ರಕ್ತದೊತ್ತಡವು ನಿಮ್ಮ ಹೃದಯವನ್ನುಕುಗ್ಗಿಸಬಹುದು, ರಕ್ತನಾಳಗಳನ್ನು ಹಾನಿಗೊಳಿಸಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ನಿಮ್ಮ ವೈದ್ಯರ ಸಲಹೆ ಪಡಿ ಈ ಮೂಲಕ ಹೃದಯಾಘಾತದಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಅಸಹಜ ಕೊಲೆಸ್ಟ್ರಾಲ್

ಅಸಹಜ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಕೊಬ್ಬು, ಇದು ನಿಮ್ಮ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ ಮತ್ತು ನಿಮ್ಮ ರಕ್ತದಲ್ಲಿ ಕಂಡುಬರುತ್ತದೆ. ಇಂತಹ ಅಸಹಜ ಕೊಲೆಸ್ಟಾಲ್ ಕೂಡ ನಿಮಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಂದಿಡುತ್ತದೆ. ಇದರಿಂದ ಹೃದಯಾಘಾತದಂತಹ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯದು.

ಕೌಟುಂಬಿಕವಾಗಿ ಹೃದಯಘಾತದ ಸಮಸ್ಯೆ ಇದ್ದರೆ!

ಕೌಟುಂಬಿಕವಾಗಿ ಹೃದಯಘಾತದ ಸಮಸ್ಯೆ ಇದ್ದರೆ!

ಕುಟುಂಭದ ಹಿರಿಯರಲ್ಲಿ ಹೃದಯಘಾತದ ಸಮಸ್ಯೆ ಇದ್ದರೆ ನೀವು ಜಾಗರೂಕತೆಯಿಂದ ಇರುವುದು ಒಳ್ಳೆಯದು. ಒಂದು ವೇಳೆ ನಿಮಗೆ ಮಧುಮೇಹ ಇದ್ದರೆ ನಿಮ್ಮ ಕುಟುಂಬದವರಿಗೆ ಹೃದಯಾಘಾತದ ಇತಿಹಾಸ ಇದ್ದರೆ ನಿಮಗೂ ಹೃದಯಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಜಾಗರೂಕತೆಯಿಂದ ಇರುವುದು ಒಳ್ಳೆಯದು.

ಮಧುಮೇಹದ ನಿಯಂತ್ರಣ ಮಾಡುವುದು ಹೇಗೆ?

ಮಧುಮೇಹದ ನಿಯಂತ್ರಣ ಮಾಡುವುದು ಹೇಗೆ?

ದೈಹಿಕ ಚಟುವಟಿಕೆಯ ಕೊರತೆ, ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಕಳಪೆ ಪೋಷಣೆ, ಕರಿದ ಆಹಾರಗಳು, ಹೆಚ್ಚಿನ ಕೊಬ್ಬಿನ ಆಹಾರಗಳು, ಮಾಂಸ, ಬೇಕರಿ ಉತ್ಪನ್ನಗಳು, ಸಂಗ್ರಹಿಸಿದ ಉಪ್ಪಿನಕಾಯಿ, ಸಿಹಿತಿಂಡಿಗಳು ಮತ್ತು ಕೆಲವು ಔಷಧಿಗಳಿಂದ ಮಧುಮೇಹ ಹೆಚ್ಚಾಗುತ್ತದೆ. ಹೀಗಾಗಿ ನೀವು ಆಹಾರ ಪದ್ದತಿ ಹಾಗೂ ಜೀವನಪದ್ದತಿ ಅತ್ಯಂತ ನಿಯಂತ್ರಣ ರೂಪದಲ್ಲಿ ಇರಬೇಕು. ಅಂದರೆ ಯೋಗ, ವ್ಯಾಯಾಮಗಳನ್ನು ಮಾಡಬೇಕು, ಬೆಳ್ಳುಳ್ಳಿ ಮಧುಮೇಹಕ್ಕೆ ರಾಮಬಾಣ ಎಂದು ಹೇಳುತ್ತಾರೆ. ಹೀಗಾಗಿ ಬೆಳ್ಳುಳ್ಳಿ ಸೇವನೆ ಮಾಡಬೇಕು. ಇನ್ನು ಹಸಿ ತರಕಾರಿ ಅಂದರೆ ಭೂಮಿಯ ಮೇಲಿನ ಹಸಿ ತರಕಾರಿಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು. ರಾತ್ರಿ, ಮಧ್ಯಾಹ್ನ, ಬೆಳಗ್ಗೆ ಯಾವ ರೀತಿಯ ಆಹಾರ ಸೇವಿಸಬೇಕು ಎಂದು ನಿಮ್ಮ ವೈದ್ಯರ ಜೊತೆ ಸಮಾಲೋಚನೆ ನಡೆಸುವುದು ಉತ್ತಮ.

English summary

How Does Diabetes Increases Heart Disease Risk in kannada

How does diabetes increases heart disease risk in kannada , read on.
X
Desktop Bottom Promotion