For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯದಲ್ಲಿಯೇ ಹೃದಯಾಘಾತ: ಇದನ್ನು ತಡೆಗಟ್ಟಲು ಆಯುರ್ವೇದ ಟಿಪ್ಸ್

|

ಪುನೀತ್‌ ರಾಜ್‌ಕುಮಾರ್‌ ಸಾವಿನ ಬಳಿಕ ಜನರು ಹೃದಯದ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿವಹಿಸುತ್ತಿದ್ದಾರೆ. ಹೃದಯ ಪರೀಕ್ಷೆಗೆ ಬರುವವರ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ತಜ್ಞರು ಹೇಳುತ್ತಿದ್ದಾರೆ. ಚಿರಂಜೀವಿ ಸರ್ಜಾ, ಹಿಂದಿ ಬಿಗ್‌ಬಾಸ್‌ ವಿನ್ನರ್ ಆಗಿದ್ದ ಸಿದ್ಧಾರ್ಥ್‌ ಶುಕ್ಲ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿದಾಗ ಅಷ್ಟೊಂದು ಫಿಟ್‌ ಆಗಿದ್ದವರಿಗೆ ಹೃದಯಾಘಾತ ಬರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಸಾವು ದೊಡ್ಡ ಶಾಕ್ ಅನ್ನೇ ನೀಡಿದೆ. ನಮಗೇನೂ ತೊಂದರೆಯಿಲ್ಲ ಆರಾಮವಾಗಿದ್ದೇವೆ ಎಂದು ಅಂದುಕೊಂಡವರು ಕೂಡ ತಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ತಿಳಿದುಬಿಡೋಣ ಎಂದ ಪರೀಕ್ಷೆ ಮಾಡಿಸುತ್ತಿದ್ದಾರೆ.

ತುಂಬಾ ಚಿಕ್ಕ ಪ್ರಾಯದಲ್ಲಿ ಹೃದಯಕ್ಕೆ ಹಾನಿಯುಂಟಾಗದಂತೆ ಹೃದಯವನ್ನು ಜೋಪಾನ ಮಾಡಲು ಆಯುರ್ವೇದ ಕೆಲವೊಂದು ಟಿಪ್ಸ್ ನೀಡಿ, ಅದೇನೆಂದು ನೋಡೋಣ ಬನ್ನಿ:

ಹೃದಯಾಘಾತಕ್ಕೆ ಕಾರಣವೇನು?

ಹೃದಯಾಘಾತಕ್ಕೆ ಕಾರಣವೇನು?

ಹೃದಯದ ನಾಳಗಳಲ್ಲಿ ರಕ್ತ ಸಂಚಾರಕ್ಕೆ ವ್ಯತ್ಯಾಸ ಉಂಟಾದರೆ ಅಂದರೆ ಸರಿಯಾಗಿ ರಕ್ತ ಪೂರೈಕೆಯಾಗದೇ ಹೋದಾಗ ರಕ್ತ ಸಂಚಾರವಾಗುವುದು. ಅದಿಕ ಕೊಲೆಸ್ಟ್ರಾಲ್, ಒಬೆಸಿಟಿ, ಮಧುಮೇಹ, ಕುಟುಂಬದಲ್ಲಿ ಹೃದಯ ಸಮಸ್ಯೆಯ ಇತಿಹಾಸ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು. ಅಧಿಕ ಕೊಬ್ಬಿನಂಶದ ಆಹಾರ ಸೇವನೆ, ಅಧಿಕ ಸೋಡಿಯಂ ಇರುವ ಆಹಾರಗಳ ಸೇವನೆ, ಧೂಮಪಾನ ಇವೆಲ್ಲಾ ಹೃದಯಾಘಾತವನ್ನು ಉಂಟು ಮಾಡಬಹುದು.

ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಕೆಲವೊಂದು ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕೆಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಹೃದಯಾಘಾತ ನಿಮ್ಮ ಆಹಾರಕ್ರಮದಲ್ಲಿ ಸೇರಿಸಬೇಕಾದ ಆಹಾರಗಳು

ಹೃದಯಾಘಾತ ನಿಮ್ಮ ಆಹಾರಕ್ರಮದಲ್ಲಿ ಸೇರಿಸಬೇಕಾದ ಆಹಾರಗಳು

ಹೊಳೆ ಮತ್ತಿ, ತೊರೆ ಮತ್ತಿ(Terminalia Arjuna, Arjuna Tree)

ಕೊಲೆಸ್ಟ್ರಾಲ್‌ ಪ್ರಮಾಣ ನಿಯಂತ್ರಣದಲ್ಲಿಡಲು ಇದು ತುಂಬಾನೇ ಸಹಕಾರಿ. ಇದನ್ನು ಬಳಸುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

ಚಕ್ಕೆ

ಚಕ್ಕೆ

ಭಾರತೀಯರ ಅಡುಗೆಯಲ್ಲಿ ಚಕ್ಕೆ ಇದ್ದೇ ಇರುತ್ತದೆ. ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಹೃದಯ ಸಮಸ್ಯೆ ಇರುವವರು ಬೆಳಗ್ಗೆ ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಚಕ್ಕೆ ಪುಡಿ ಹಾಕಿ ಕುಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಪಪ್ಪಾಯಿ

ಪಪ್ಪಾಯಿ

ಪ್ರತಿದಿನ ಒಂದು ಬೌಲ್‌ ಪಪ್ಪಾಯಿ ತಿಂದರೆ ಹೃದಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಸಿ, ಇ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಅಲ್ಲದೆ ಹೃದಯ ನಾಳಗಳಲ್ಲಿ ಬ್ಲಾಕ್ ಉಂಟಾಗದಂತೆ ತಡೆಗಟ್ಟುತ್ತೆ.

ಅಶ್ವಗಂಧ

ಅಶ್ವಗಂಧ

ಅಶ್ವಗಂಧವನ್ನು ಆಯುರ್ವೇದದಲ್ಲಿ ತುಂಬಾ ವ್ಯಾಪಕವಾಗಿ ಬಳಸಲಾಗುವುದು. ಅಶ್ವಗಂಧದಲ್ಲಿ ಹಲವು ಬಗೆಯ ಔಷಧೀಯ ಗುಣಗಳಿದ್ದು ಇದನ್ನು ಪ್ರತಿದಿನ ಬಳಸುವುದರಿಂದ ಹೃದಯದ ಸ್ವಾಸ್ಥ್ಯ ಹೆಚ್ಚುವುದು. ಇದು ಒತ್ತಡದ ಹಾರ್ಮೋನ್‌ ಬಿಡುಗಡೆಯನ್ನು ಕಡಿಮೆ ಮಾಡುತ್ತೆ, ಕೊಲೆಸ್ಟ್ರಾಲ್‌ ನಿಯಂತ್ರಿಸುತ್ತದೆ.

English summary

Heart Attack In Young Age: Ayurvedic Tips For A Healthy Heart

Heart Attack In Young Age: Ayurvedic Tips For A Healthy Heart, read on....
Story first published: Saturday, November 6, 2021, 17:31 [IST]
X
Desktop Bottom Promotion