For Quick Alerts
ALLOW NOTIFICATIONS  
For Daily Alerts

ವ್ಯಾಯಾಮ ಅತಿಯಾದರೆ ಹೃದಯಾಘಾತವಾಗಬಹುದೇ?

|

ನಾವು ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ಮಾಡಬೇಕು, ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ ದೇಹಕ್ಕೆ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಇನ್ನು ನಮ್ಮ ಫಿಟ್ನೆಸ್‌ಗೇ ಅಮತ ನೋರಾರು ಬಗೆಯ ವ್ಯಾಯಾಮಗಳಿವೆ. ಆರೋಗ್ಯಕ್ಕೆ ಮಾಡುವ ವ್ಯಾಯಾಮ ಅತಿಯಾದರೆ ಅಪಾಯಕಾರಿಯೇ? ಇಂಥ ಪ್ರಶ್ನೆ ಕೆಲವೊಂದು ಘಟನೆಗಳನ್ನು ನೋಡುವಾಗ ಅನಿಸಿದೆ ಇರಲ್ಲ.

ಅಕ್ಟೋಬರ್‌ 29ಕ್ಕೆ ಕನ್ನಡದ ಪ್ರತಿಭಾವಂತ ನಟ ಜಿಮ್‌ನಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರದ್ದು ಫಿಟ್ನೆಸ್ ದೇಹ, ಶಿಸ್ತುಬದ್ಧವಾದ ಆರೋಗ್ಯಕರ ಡಯಟ್‌. ಇಷ್ಟೆಲ್ಲಾ ಮಾಡಿದರೂ ಅಷ್ಟು ಚಿಕ್ಕ ಪ್ರಾಯದಲ್ಲಿ ಹೃದಯಾಘಾತವಾಗಿರುವುದನ್ನು ನೋಡಿ ಇಡೀ ಕರ್ನಾಟಕವೇ ಶಾಕ್‌ಗೆ ಒಳಗಾಗಿದೆ. ಅಷ್ಟೊಂದು ಆರೋಗ್ಯವಾಗಿದ್ದ ವ್ಯಕ್ತಿ ಹೃದಯಾಘಾತವಾಗಿ ಸಾವನ್ನಪ್ಪಿರುವುದನ್ನು ನೋಡಿದಾಗ ಹೀಗೆಲ್ಲಾ ಆಗಲು ಹೇಗೆ ಸಾಧ್ಯ ಎಂದು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವಂತಾಗಿದೆ.

ಜುಲೈ 7, 2020 ಸ್ಯಾಂಡಲ್‌ವುಡ್‌ ಇಂಥದ್ದೇ ಶಾಕ್‌ಗೆ ಒಳಗಾಗಿತ್ತು. ಫಿಟ್ನೆಸ್‌ ಕಡೆ ತುಂಬಾ ಗಮನ ಕೊಡುತ್ತಿದ್ದ ಚಿರಂಜೀವಿ ಸರ್ಜಾ ಹೃದಯಾಘಾತದಿಂದಾಗಿ ಚಿರ ನಿದ್ರೆಗೆ ಜಾರಿದರು. ಇತ್ತೀಚೆಗೆ ಹಿಂದಿ ಬಿಗ್‌ಬಾಸ್‌ ವಿನ್ನರ್ ಸಿದ್ಧಾರ್ಥ್ ಶುಕ್ಲ ಕೂಡ ತುಂಬಾ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.

ಫಿಟ್ನೆಸ್‌ ಮೈಕಟ್ಟು ಇದ್ದ ಇವರೆಲ್ಲಾ ಹೃದಯಾಘಾತಕ್ಕೆ ಒಳಗಾಗಿರುವುದನ್ನು ನೋಡಿದಾಗ ಅತಿಯಾದ ವ್ಯಾಯಾಮ ಹೃದಯಕ್ಕೆ ಹಾನಿಕಾರಿಯೇ ಎಂಬ ಪ್ರಶ್ನೆ ಉಂಟಾಗುತ್ತದೆ. ಇದರ ಕುರಿತು ತಜ್ಞರು ಏನು ಹೇಳುತ್ತಾರೆ ಎಂದು ನೋಡೋಣ ಬನ್ನಿ:

ಅತೀಯಾದ ವ್ಯಾಯಾಮ ಹೃದಯಕ್ಕೆ ಒಳ್ಳೆಯದಲ್ಲ

ಅತೀಯಾದ ವ್ಯಾಯಾಮ ಹೃದಯಕ್ಕೆ ಒಳ್ಳೆಯದಲ್ಲ

ಅತೀಯಾದ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಹಾನಿಯುಂಟಾಗುವುದು, ಅದರಲ್ಲೂ ವಂಶಪಾರಂಪರ್ಯವಾಗಿ ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಇದು ತುಂಬಾನೇ ಅಪಾಯಕಾರಿ ಎಂಬುವುದಾಗಿ ತಜ್ಞರು ಹೇಳುತ್ತಾರೆ.

ಹಾಗಂತ ವ್ಯಾಯಾಮನೇ ಮಾಡಬಾರದು ಎಂದಲ್ಲ, ವ್ಯಾಯಾಮ ಹೃದಯದ ಆರೋಗ್ಯಕ್ಕೆ ಬೇಕೇಬೇಕು, ಆದರೆ ಮಿತಿಯಲ್ಲಿ ಮಾಡಬೇಕು. ಮಿತಿಯಾದ ವ್ಯಾಯಾಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಹಾಗಂತ ಒಂದು ಗುರಿಯಿಟ್ಟು ವರ್ಕೌಟ್‌ ಮಾಡುತ್ತಿರುವ ಅಥ್ಲೇಟ್ ತಮ್ಮ ವ್ಯಾಯಾಮ ಬಿಡಬೇಕಾಗಿಲ್ಲ ಎಂದು ಹೃದ್ರೋಗ ತಜ್ಞೆ ತಮ್ಮನ್ನಾ ಸಿಂಗ್‌ , ಎಂಡಿ ಹೇಳಿದ್ದಾರೆ.

ಹೃದಯದ ಆರೋಗ್ಯ ಹಾಗೂ ಅತಿಯಾದ ವ್ಯಾಯಾಮದ ನಡುವೆ ಇರುವ ಸಂಬಂಧ

ಹೃದಯದ ಆರೋಗ್ಯ ಹಾಗೂ ಅತಿಯಾದ ವ್ಯಾಯಾಮದ ನಡುವೆ ಇರುವ ಸಂಬಂಧ

ಕೆಲವರು ವೀಕೆಂಡ್‌ಗೆ ಹೋಗಿ ಸ್ವಲ್ಪ ಹೊತ್ತು ವರ್ಕೌಟ್ ಮಾಡುತ್ತಾರೆ, ಇನ್ನು ಕೆಲವರು ಪ್ರತಿದಿನ ಸ್ವಲ್ಪ ಹೊತ್ತು ವರ್ಕೌಟ್‌ ಮಾಡುತ್ತಾರೆ. ಆದರೆ ಕೆಲವರು ಪ್ರತಿದಿನ ತಮ್ಮ ಗುರಿ ಮುಟ್ಟಲು ಕಷ್ಟಪಡುತ್ತಾರೆ. ಇವತ್ತು 10 ಪುಶ್‌ ಅಪ್‌ ತೆಗೆದರೆ ದಿನ ಕಳೆದಂತೆ ಆ ನಂಬರ್‌ ಹೆಚ್ಚಾಗುತ್ತಾ ಹೋಗಬೇಕು ಎಂದು ಬಯಸುತ್ತಾರೆ, ಕಷ್ಟದ ವರ್ಕೌಟ್‌ ಮಾಡುವುದರಿಂದ ಬೇಗನೆ ತಾವು ಬಯಸಿದ ಮೈಕಟ್ಟು ಹೊಂದಬಹುದು ಎಂದು ಬಯಸುತ್ತಾರೆ. ಆದರೆ ಈ ರೀತಿ ಅತಿಯಾದ ವ್ಯಾಯಾಮ ಮಾಡುವುದರಿಂದ ಹೃದಯದ ವ್ಯವಸ್ಥೆಗೆ ಹಾನಿಯುಂಟಾಗುತ್ತದೆ ಎಮದು ಡಾ. ಸಿಂಗ್‌ ಹೇಳುತ್ತಾರೆ.

ಒಂದು ಅಧ್ಯಯನದ ಪ್ರಕಾರ ಮ್ಯಾರಾಥಾನ್‌ ಓಟದ ಸ್ಪರ್ಧೆ ಮುಗಿದ ಬಳಿಕ ಓಟಗಾರರ ರಕ್ತದ ಸ್ಯಾಂಪಲ್‌ ತೆಗೆಯಲಾಯಿತು, ಆಗ ಹೃದಯಕ್ಕೆ ಹಾನಿಯಾಗಿರುವುದು ಅವರ ರಕ್ತದಿಂದ ತಿಳಿದು ಬಂತು.

ಅತೀಯಾದ ವ್ಯಾಯಾಮ ಮಾಡುವುದರಿಂದ ಹೃದಯ ಸ್ತಂಭನ ಉಂಟಾಗಿ ವ್ಯಕ್ತಿ ಸಾವನ್ನಪ್ಪಬಹುದು ಎಂಬುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ.

ಅತೀಯಾದ ವ್ಯಾಯಾಮ ಹಾಗೂ ವ್ಯಾಯಾಮ ಮಾಡದೇ ಇರುವುದು

ಅತೀಯಾದ ವ್ಯಾಯಾಮ ಹಾಗೂ ವ್ಯಾಯಾಮ ಮಾಡದೇ ಇರುವುದು

ಅತೀಯಾದ ವ್ಯಾಯಾಮ ಹೇಗೆ ಒಳ್ಳೆಯದಲ್ಲವೋ ಅದೇ ರೀತಿ ವ್ಯಾಯಾಮ ಮಾಡದೇ ಇರುವುದು ಕೂಡ ಒಳ್ಳೆಯದಲ್ಲ. ವ್ಯಾಯಾಮ ಮಾಡದೆ ಇದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಇದರಿಂದ ಹೃದಯಕ್ಕೆ ಹಾನಿಯುಂಟಾಗುವುದು. ಇನ್ನು ವ್ಯಾಯಾಮ ಮಾಡದೇ ಇರುವವರನ್ನು ಅತೀಯಾದ ವ್ಯಾಯಾಮ ಮಾಡುವವರ ಜೊತೆ ಹೋಲಿಕೆ ಮಾಡಿದಾಗ, ಅತೀಯಾದ ವ್ಯಾಯಾಮ ಮಾಡುವವರ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಬೇಗ.

ವ್ಯಾಯಾಮದ ಬಗ್ಗೆ ಗಮನದಲ್ಲಿರಬೇಕಾದ ಅಂಶಗಳು:

ವ್ಯಾಯಾಮದ ಬಗ್ಗೆ ಗಮನದಲ್ಲಿರಬೇಕಾದ ಅಂಶಗಳು:

* ವ್ಯಾಯಾಮ ಮಾಡುವುದರಿಂದ ನಿಮ್ಮ ಶಕ್ತಿ ಹೆಚ್ಚುವುದು, ರಕ್ತದೊತ್ತಡ ಕಡಿಮೆಯಾಗುವುದು, ಒಳ್ಳೆಯ ನಿದ್ದೆ ಬರುವುದು, ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ, ತೂಕ ಹೆಚ್ಚಾಗುವುದಿಲ್ಲ, ಮರೆವಿನ ಸಮಸ್ಯೆ ಕಾಡಲ್ಲ.

* ವ್ಯಾಯಾಮವನ್ನು ಮಿತಿಯಲ್ಲಿ ಮಾಡಿ. ಅತೀಯಾದ ವ್ಯಾಯಾಮದಿಂದ ನಿಮ್ಮ ದೇಹಕ್ಕೆ ದಣಿವು ಉಂಟಾಗುತ್ತಿದ್ದರೆ ನಿಮ್ಮ ಹೃದಯದ ಮಾತು ಕೇಳಿ.

* ಮನೆಯಲ್ಲಿ ಯಾರಿಗಾದರೂ ಹೃದಯ ಸಂಬಂಧಿ ಸಮಸ್ಯೆಯ ಇತಿಹಾಸ ಇದ್ದರೆ ನೀವು ಅತೀಯಾದ ವ್ಯಾಯಾಮ ಮಾಡಬೇಡಿ.

* ಇನ್ನು ಸ್ಪೋರ್ಟ್ಸ್‌ನಲ್ಲಿರುವವರು ಹಾಗೂ ಫಿಟ್ನೆಸ್‌ಗಾಗಿ ಅತೀಯಾದ ವರ್ಕೌಟ್‌ ಮಾಡುವವರು ಜಿಮ್‌ ಟ್ರೈಯನರ್‌ ಸಲಹೆ ಜೊತೆಗೆ ವೈದ್ಯರ ಸಲಹೆಯನ್ನೂ ಪಡೆಯಿರಿ.

English summary

Can Exercising Too Much Cause Heart Health Problems? explained in kannada

Can Exercising Too Much Cause Heart Health Problems? explained in kannada, Read on...
Story first published: Friday, October 29, 2021, 18:16 [IST]
X
Desktop Bottom Promotion