ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

Posted By: Deepu
Subscribe to Boldsky

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇಲಿನ ಭಾರವನ್ನು ಹೆಚ್ಚಿಸುತ್ತೇವೆ. ವಿಶೇಷವಾಗಿ ಕೊಬ್ಬು ಹೆಚ್ಚಿರುವ ಆಹಾರಗಳ ಸೇವನೆಯಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಎಂಬ ಜಿಡ್ಡಿನ ಪ್ರಮಾಣ ಹೆಚ್ಚುತ್ತಾ ಕವಲು ಮತ್ತು ತಿರುವು ಗಳಿರುವಲ್ಲೆಲ್ಲಾ ಒಳಭಾಗದಲ್ಲಿ ಅಂಟಿಕೊಂಡು ಇಲ್ಲಿನ ವ್ಯಾಸವನ್ನು ಕಿರಿದಾಗಿಸಿ ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತವೆ.

ಈ ರಕ್ತವನ್ನು ಈ ಕಿರಿದಾದ ದಾರಿಯಲ್ಲಿ ಮುಂದೆ ಸಾಗಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಇದೇ ಅಧಿಕ ಹೃದಯದೊತ್ತಡ. ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ.

ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯಘಾತ ಸೂಚನೆ- ಪುರುಷರಿಗೂ ಮಹಿಳೆಯರಿಗೂ ಬೇರೆ ಬೇರೆಯಾಗಿರುತ್ತದೆಯೇ?

ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು. ಚಿಕ್ಕ ವಯಸ್ಸಿನಿಂದಲೇ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮವಾದ ಆರೋಗ್ಯ ಪಡೆಯಬಹುದು ಹಾಗೂ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು. ಈ ಆಹಾರಗಳು ಯಾವುದೆಂದು ನೋಡೋಣ... 

ಬಾರ್ಲಿ ನೀರು

ಬಾರ್ಲಿ ನೀರು

ಬಾರ್ಲಿ ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಅಡುಗೆ ಎಣ್ಣೆ ವಿಷಯದಲ್ಲಿ ಎಚ್ಚರಿಕೆ!

ಅಡುಗೆ ಎಣ್ಣೆ ವಿಷಯದಲ್ಲಿ ಎಚ್ಚರಿಕೆ!

ಕರಿದ ಪದಾರ್ಥಗಳೇ ಹೆಚ್ಚಿನವರಿಗೆ ಇಷ್ಟವಾಗುವ ಕಾರಣದಿಂದ ಎಣ್ಣೆಯು ಅತಿಯಾಗಿ ನಮ್ಮ ದೇಹವನ್ನು ಸೇರಿಕೊಳ್ಳುವುದು. ಇದರಿಂದ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗಿರುತ್ತದೆ. ದೈನಂದಿನ ಆಹಾರ ಕ್ರಮದಲ್ಲಿ ಮೂರರಿಂದ ನಾಲ್ಕು ಚಮಚಕ್ಕಿಂತ ಹೆಚ್ಚಿನ ಎಣ್ಣೆ ಬಳಸಬೇಡಿ. ಅಲ್ಲದೆ 3-4 ತಿಂಗಳಿಗೊಮ್ಮೆ ಎಣ್ಣೆ ಬದಲಾಯಿಸುತ್ತಾ ಇರಿ. ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಬದಲಾಯಿಸುತ್ತಾ ಇದ್ದರೆ ವಿವಿಧ ರೀತಿಯ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.

ಊಟದ ಬಳಿಕ ಸಿಹಿ ತಿನ್ನಬೇಡಿ!

ಊಟದ ಬಳಿಕ ಸಿಹಿ ತಿನ್ನಬೇಡಿ!

ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಹೃದಯಕ್ಕೆ ಅತ್ಯುತ್ತಮವಾದ ಆಹಾರ ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಸಾಲ್ಮನ್ ಮೀನು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಒಮೆಗಾ - 3 ಕೊಬ್ಬಿನ ತೈಲವೇ ಇದಕ್ಕೆ ಕಾರಣ. ಈ ತೈಲ ಹೃದಯದೊತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನೆಯ ಏರುಪೇರುಗಳನ್ನು ಸರಿಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಮಾರಕವಾಗಿರುವ ಟ್ರೈಗ್ಲಿಸರೈಡ್ ಗಳೆಂಬ ಕಣಗಳನ್ನೂ ನಿವಾರಿಸಿ ಹೃದಯದ ಉರಿಯನ್ನು ಶಮನಗೊಳಿಸುತ್ತದೆ. ವಾರಕ್ಕೆ ಕನಿಷ್ಟ ಎರಡು ತುಂಡು ಸಾಲ್ಮನ್ ಮೀನಿನ್ನು ಸೇವಿಸಲು ಅಮೇರಿಕಾದ ಹೃದಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ.

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು.

ಬೀಜಗಳು

ಬೀಜಗಳು

ಬೀಜಗಳು ತುಂಬಾ ಆರೋಗ್ಯಕಾರಿ ಆಹಾರವಾಗಿದೆ. ಇದು ಕೊಬ್ಬಿನಾಮ್ಲಗಳು, ಅಪರ್ಯಾಪ್ತ ಕೊಬ್ಬು ಮತ್ತು ಒಮೆಗಾ3 ಕೊಬ್ಬಿನಾಮ್ಲವು ಬೀಜಗಳಲ್ಲಿ ಇದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುವುದು ಮಾತ್ರವಲ್ಲದೆ ಗಂಟು ಹಾಗೂ ಹೃದಯದ ಆರೋಗ್ಯವು ಚೆನ್ನಾಗಿರುವುದು.

ಗ್ರೀನ್ ಟೀ

ಗ್ರೀನ್ ಟೀ

ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಗ್ರೀನ್ ಟೀ. ಗ್ರೀನ್ ಟೀಯಲ್ಲಿರುವ ಕಾಟೆಚಿನ್ ಎನ್ನುವ ಅಂಶವು ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಹೃದಯವನ್ನು ಕಾಪಾಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುವುದು. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ ಫಲಿತಾಂಶ ನೀಡುವುದು.

ಕೆಂಪು ವೈನ್

ಕೆಂಪು ವೈನ್

ರಕ್ತನಾಳಗಳ ಒಳಗೆ ಅಂಟಿಕೊಂಡಿರುವ ಕೊಬ್ಬಿನ ಕಣಗಳನ್ನು ಸಡಿಲಿಸಿ ರಕ್ತ ಸಂಚಾರವನ್ನು ಸುಗಮಗೊಳಿಸಲು ಕೆಂಪು ವೈನ್ ಸಹಾ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ, ತೂಕ ಇಳಿಸಲು ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುವ ಮೂಲಕ ಹೃದಯಕ್ಕೆ ಪರೋಕ್ಷ ನೆರವು ನೀಡುತ್ತದೆ. ಆದರೆ ಕೆಂಪು ವೈನ್ ಮಾದಕ ಪಾನೀಯವೂ ಆಗಿರುವ ಕಾರಣ ಇದರ ಪ್ರಮಾಣ ಅತ್ಯಂತ ಕಡಿಮೆ ಇರಬೇಕು. ಈ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಗರಿಷ್ಟ 147.8 ಮಿಲೀ ಸೇವಿಸಬಹುದು. ಇದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ.

ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್

ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್

ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್ ಎಂಬ ಹೆಸರಿನಿಂದ ಸಿಗುವ ಆಲಿವ್ ಎಣ್ಣೆಯನ್ನು ತಣ್ಣಗಿದ್ದಂತೆಯೇ ಹಿಂಡಿ ತೆಗೆದಿರುವ ಕಾರಣ ಕೊಂಚ ದುಬಾರಿಯಾಗಿದ್ದರೂ ಅತ್ಯಂತ ಆರೋಗ್ಯಕರವಾಗಿದೆ. ದಿನಕ್ಕೆ ಕೆಲವು ತೊಟ್ಟುಗಳಷ್ಟು ಎಣ್ಣೆಯನ್ನು ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಿ ಸಕ್ಕರೆಯ ಪ್ರಮಾಣವನ್ನು ಸಂತುಲಿತವಾಗಿರಿಸಲು ನೆರವಾಗುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಸುಮಾರು 60-70% ರಷ್ಟು ಕೋಕೋ ಇರುವ ಕಪ್ಪು ಚಾಕಲೇಟು ಅಧಿಕ ರಕ್ತದೊತ್ತಡವನ್ನು ಸೂಕ್ತ ಮಿತಿಗಳಲ್ಲಿರಿಸಲು ನೆರವಾಗುತ್ತದೆ. ವಿಶೇಷವಾಗಿ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟದೇ ಇರಲು ಹಾಗೂ ಉರಿಯೂತವಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಮೂಲಕ ಕಪ್ಪು ಚಾಕಲೇಟು ಹೃದಯದ ಸ್ನೇಹಿತನಾಗಿದೆ.

English summary

Foods That Reduce Your Heart Attack Risk

Did you know that almost half of the young adults between the ages of 18 and 24 have at least one coronary heart risk factor, such as a high blood pressure, stress or an unhealthy diet? Even having a slightly high level of blood pressure in your 20s can increase the risk of developing clogged arteries in the later years. Hence, it is important that you start including heart healthy foods in your diet at the earliest. In this article we have listed some of the best foods to take care of your heart. Read further to know about the best foods for your heart's health.
Story first published: Friday, March 23, 2018, 16:59 [IST]