For Quick Alerts
ALLOW NOTIFICATIONS  
For Daily Alerts

ದೇಹದ ರಕ್ತನಾಳ ಮತ್ತು ಹೃದಯ ಶುದ್ಧಗೊಳಿಸುವ ಕೆಲವು ಆಹಾರಗಳು

By Arshad
|

ಒಂದು ಹಳೆಯ ಚೀನೀ ಸುಭಾಷಿತ ಹೀಗೆನ್ನುತ್ತದೆ :"ಎಲ್ಲಿಯವರೆಗೆ ಹೃದಯದ ಒತ್ತಡ ಹೆಚ್ಚಿರುವುದಿಲ್ಲವೋ, ಅಲ್ಲಿಯವರೆಗೆ ದೇಹವೂ ಆರೋಗ್ಯಕರವಾಗಿರುತ್ತದೆ" ಈ ಸುಭಾಷಿತ ಅಪ್ಪಟ ಸತ್ಯವಾಗಿದೆ. ಏಕೆಂದರೆ ಹೃದಯ ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದ್ದು ಒಂದು ಕ್ಷಣವೂ ಕಾರ್ಯರಹಿತವಾಗಿರಲು ಸಾಧ್ಯವಿಲ್ಲ. ಹೃದಯದ ತೊಂದರೆ ಇತರ ಎಲ್ಲಾ ಅಂಗಗಳ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹೃದಯಕ್ಕೆ ಚಿಕ್ಕದೇ ಆದ ಯಾವುದೇ ಅನಾರೋಗ್ಯವುಂಟಾದರೂ ದೇಹದ ಇತರ ಭಾಗಗಳು
ಬಾಧೆಗೊಳಗಾಗಬಹುದು ಹಾಗೂ ಹಲವಾರು ಅಡ್ಡಪರಿಣಾಮಗಳನ್ನೂ ಅನುಭವಿಸಬೇಕಾಗಿ ಬರಬಹುದು.

ಹೃದಯಘಾತ ಸೂಚನೆ- ಪುರುಷರಿಗೂ ಮಹಿಳೆಯರಿಗೂ ಬೇರೆ ಬೇರೆಯಾಗಿರುತ್ತದೆಯೇ?

ನಮ್ಮ ದೇಹದ ವಿವಿಧ ಭಾಗದಿಂದ ಕಲ್ಮಶಗಳನ್ನು ಹೊತ್ತ ಮಲಿನ ರಕ್ತವನ್ನು ಸಂಗ್ರಹಿಸಿ ಶ್ವಾಸಕೋಶದ ಮೂಲಕ ಈ ರಕ್ತವನ್ನು ಶುದ್ಧೀಕರಿಸಿ ಮತ್ತೆ ಹೊಸರಕ್ತವನ್ನು ನರವ್ಯವಸ್ಥೆಯ ಮೂಲಕ ದೇಹದ ಎಲ್ಲಾ ಭಾಗಕ್ಕೆ ತಲುಪುವಂತೆ ಮಾಡುವುದು ಹೃದಯದ ಪ್ರಮುಖ ಕೆಲಸವಾಗಿದೆ. ಒಂದು ವೇಳೆ ರಕ್ತದ ಮೂಲಕ ಆಮ್ಲಜನಕ ದೇಹದ ಇತರ ಭಾಗಗಳಿಗೆ ತಲುಪದೇ ಇದ್ದರೆ ಯಾವ ಅಂಗವೂ ಸೂಕ್ತವಾಗಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಹಲವಾರು ತೊಂದರೆಗಳು ಎದುರಾಗುವುದು ನಿಶ್ಚಿತ.

Foods That Clean Your Arteries And Heart

ಕೆಲವೊಮ್ಮೆ ಈ ರಕ್ತ ಹಾದುಹೋಗುವ ರಕ್ತನಾಳಗಳ ಒಳಭಾಗದಲ್ಲಿ ಕಲ್ಮಶ, ಕೊಲೆಸ್ಟ್ರಾಲ್, ಕೊಬ್ಬು ಮೊದಲಾದ ಜಿಡ್ಡು ಅಥವಾ ಇತರ ಕಲ್ಮಶಗಳು ಅಂಟಿಕೊಳ್ಳುತ್ತದೆ. ಇವು ರಕ್ತದ ಸರಾಗವಾದ ಹರಿಯುವಿಕೆಗೆ ತಡೆಯೊಡ್ಡುತ್ತವೆ. ಆರೋಗ್ಯ ಉತ್ತಮವಾಗಿರಬೇಕೆಂದರೆ ಈ ತಡೆಗಳನ್ನು ನಿವಾರಿಸುವುದು ಅಗತ್ಯ.

ಈ ಜಿಡ್ಡುಗಳನ್ನು ನಿವಾರಿಸಲು ಕೆಲವು ಆಹಾರಗಳು ಸಮರ್ಥವಾಗಿದ್ದು ಇವುಗಳನ್ನು ಸಾಧ್ಯವಾದಷ್ಟು ಸೇವಿಸುವ ಮೂಲಕ ರಕ್ತನಾಳಗಳ ಒಳಗಣ ಕಲ್ಮಶಗಳು ನಿವಾರಣೆಗೊಂಡು ಹೃದಯದ ಆರೋಗ್ಯವನ್ನು ಉಳಿಸಿಕೊಳ್ಳುವ ಮೂಲಕ ದೈಹಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬಟರ್ ಫ್ರೂಟ್ ಎಂದೇ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬೆಣ್ಣೆಹಣ್ಣು ಒಂದು ಸುಪರ್ ಫುಡ್ ಅಥವಾ ಅದ್ಭುತ ಆಹಾರವೆಂದೇ ಪರಿಗಣಿಸಲ್ಪಟ್ಟಿದೆ. ಈ ಪಟ್ಟ ಪಡೆಯಲು ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇ ಕಾರಣ. ಇದರಲ್ಲಿ ಪ್ರಮುಖವಾದುದೆಂದರೆ ದೇಹದ ಕಲ್ಮಶಗಳನ್ನು ಹಾಗೂ ವಿಶೇಷವಾಗಿ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಜಿಡ್ಡನ್ನು ನಿವಾರಿಸುವುದು. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

ಬ್ರೋಕೋಲಿ

ಬ್ರೋಕೋಲಿ

ಸಾಮಾನ್ಯವಾಗಿ ಬ್ರೋಕೋಲಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಮಕ್ಕಳಂತೂ ಇದನ್ನು ನೋಡಿದರೇ ಮೂಗು ಮುರಿಯುತ್ತಾರೆ. ಏಕೆಂದರೆ ಇದರ ರುಚಿ ಇತರ ತರಕಾರಿಗಳಷ್ಟು ಹಿತವಲ್ಲದಿರುವುದೇ ಇದಕ್ಕೆ ಕಾರಣ. ಆದರೆ ನಿತ್ಯದ ಆಹಾರದಲ್ಲಿ ಬ್ರೋಕೋಲಿಯನ್ನು ಸೇರಿಸಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಬ್ರೋಕೋಲಿಯಲ್ಲಿರುವ ವಿಟಮಿನ್ ಕೆ ರಕ್ತನಾಳಗಳನ್ನು ಶುದ್ಧೀಕರಿಸಲು ಹಾಗೂ ರಕ್ತನಾಳಗಳ ಗೋಡೆಗಳನ್ನು ಇನ್ನಷ್ಟು ಬಲಪಡಿಸಲು ನೆರವಾಗುತ್ತದೆ.

ಟ್ಯೂನಾ ಮೀನು

ಟ್ಯೂನಾ ಮೀನು

ಮೀನು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ ಎಂದು ನಾವೆಲ್ಲರೂ ಅರಿತಿದ್ದೇವೆ. ಇದರಲ್ಲಿರುವ ಹಲವು ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುತ್ತವೆ. ವಿಶೇಷವಾಗಿ ಟ್ಯೂನಾಮೀನಿನಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ದೇಹದಲ್ಲಿರುವ ಟ್ರೈಗ್ಲಿಸರೈಡುಗಳ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ. ತನ್ಮೂಲಕ ಕೊಲೆಸ್ಟ್ರಾಲ್ ಮಟ್ಟಗಳನ್ನೂ ಆರೋಗ್ಯಕರ ಮಿತಿಗಳಿಗೆ ಇಳಿಸಲು ಹಾಗೂ ರಕ್ತನಾಳಗಳ ಒಳಭಾಗದಲ್ಲಿ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಜಿಡ್ಡುಗಳನ್ನು ನಿವಾರಿಸಲು ನೆರವಾಗುತ್ತದೆ. ಹಾಗಾಗಿ ನಿಯಮಿತವಾಗಿ ಟ್ಯೂನಾ ಮೀನನ್ನು ಸೇವಿಸುವ ಮೂಲಕ ಹೃದಯವನ್ನೂ ಆರೋಗ್ಯಕರವಾಗಿರಿಸಿಕೊಳ್ಳಬಹುದು.

ಒಣಫಲಗಳು

ಒಣಫಲಗಳು

ಒಂದು ವೇಳೆ ನಿಮಗೆ ದಿನದ ವಿವಿಧ ಅವಧಿಗಳಲ್ಲಿ ಅನಾರೋಗ್ಯಕರ ಆಹಾರಗಳನ್ನು ಸೇವಿಸುವ ವ್ಯಸನವಿದ್ದರೆ ಈ ವ್ಯಸನವನ್ನು ಕೊನೆಗಾಣಿಸಲು ಈ ಆಹಾರಗಳ ಬದಲಿಗೆ ಒಣಫಲಗಳನ್ನು ಸೇವಿಸುವುದು ಉತ್ತಮ ಪರ್ಯಾಯವಾಗಿದೆ. ಬಾದಾಮಿ, ಗೋಡಂಬಿ, ಅಕ್ರೋಟು, ಪಿಸ್ತಾ ಮೊದಲಾದವುಗಳಲ್ಲಿ ಹಲವು ಅವಶ್ಯಕ ಪೋಷಕಾಂಶಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ವಿಟಮಿನ್ ಇ ಇವೆ. ಇವು ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಜಿಡ್ಡುಗಳನ್ನು ಹಾಗೂ ಇತರ ಕಲ್ಮಶಗಳನ್ನು ನಿವಾರಿಸಿ ರಕ್ತಪರಿಚಲನೆಯನ್ನು ಸರಾಗಗೊಳಿಸುತ್ತವೆ. ತನ್ಮೂಲಕ ಆಮ್ಲಜನಕ ಹೊತ್ತ ರಕ್ತಕಣಗಳು ಯಾವುದೇ ತಡೆಯಿಲ್ಲದೇ ದೇಹದ ವಿವಿಧ ಭಾಗಗಳಿಗೆ ರವಾನೆಯಾಗುತ್ತದೆ ಹಾಗೂ ಹೃದಯದ ಮೇಲಿನ ಒತ್ತಡವನ್ನೂ ತಗ್ಗಿಸುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಅರಿಶಿನದ ಆರೋಗ್ಯಕರ ಪ್ರಯೋಜನಗಳಿಂದಾಗಿಯೇ ಭಾರತದ ಸಂಸ್ಕೃತಿಯಲ್ಲಿ ಅರಿಶಿನ ಪವಿತ್ರ ಸಾಮಾಗ್ರಿಯಾಗಿ ಪರಿಗಣಿಸಲ್ಪಟ್ಟಿದೆ. ಇದೇ ರೀತಿಯಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಆಲಿವ್ ಎಣ್ಣೆಗೂ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಆಲಿವ್ ಎಣ್ಣೆಯ ಸೇವನೆಯಿಂದ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಜಿಡ್ಡು ನಿವರಣೆಯಾಗುತ್ತದೆ ಹಾಗೂ ಹೃದಯವನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟುಗಳುಗಳು ಸಮೃದ್ದವಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾತ್ರವೇ ಸಿಗುವ ಕಲ್ಲಂಗಡಿ ಹಣ್ಣು ಭಾರತ ಸಹಿತ ಹೆಚ್ಚಿನ ಸಮಶೀತೋಷ್ಣ ವಲಯದಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಬೇಸಿಗೆಯಲ್ಲಿ ಅಗ್ಗವಾಗುವ ಸಮಯದಲ್ಲಿ ನಾವೆಲ್ಲರೂ ಈ ಹಣ್ಣನ್ನು ಸಾಕಷ್ಟು ಸೇವಿಸುತ್ತೇವೆ. ಇದರಲ್ಲಿ ನೀರಿನ ಪ್ರಮಾಣ ಅತಿ ಹೆಚ್ಚಾಗಿದ್ದು ದೇಹವನ್ನು ತಂಪಾಗಿರಿಸಲು ನೆರವಾಗುವ ಜೊತೆಗೇ ಹೃದಯವನ್ನೂ ಆರೋಗ್ಯಕರವಾಗಿರಿಸುತ್ತದೆ. ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಲು ಕಲ್ಲಂಗಡಿ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಕಲ್ಲಂಗಡಿಯಲ್ಲಿರುವ ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಅತ್ಯುತ್ತಮವಾಗಿ ಸ್ವಚ್ಛಗೊಳಿಸುತ್ತದೆ.

ಅರಿಶಿನ

ಅರಿಶಿನ

ಅರಿಶಿನದ ಆರೋಗ್ಯಕರ ಪ್ರಯೋಜನಗಳಿಂದಾಗಿ ಭಾರತದಲ್ಲಿ ಇದಕ್ಕೆ ಪವಿತ್ರ ಸ್ಥಾನವಿದೆ ಎಂದು ಈಗಾಗಲೇ ತಿಳಿದುಕೊಂಡಿದ್ದೇವೆ. ಇದರ ಆರೋಗ್ಯಕರ ಪ್ರಯೋಜನಗಳಲ್ಲಿ ಸುಟ್ಟಗಾಯಗಳನ್ನು ಸರಿಪಡಿಸುವುದು, ಸೋಂಕನ್ನು ನಿವಾರಿಸುವುದು, ಉರಿಯೂತ ಕಡಿಮೆಗೊಳಿಸುವುದು, ಅಜೀರ್ಣತೆಯನ್ನು ನಿವಾರಿಸುವುದು ಮೊದಲಾದವು ಪ್ರಮುಖವಾಗಿವೆ. ಇದರಲ್ಲಿರುವ ವಿಟಮಿನ್ ಬಿ6 ರಕ್ತನಾಳಗಳಲ್ಲಿ ಕಟ್ಟಿಕೊಂಡಿದ್ದ ಜಿಡ್ಡನ್ನು ನಿವಾರಿಸಲು ನೆರಾವಾಗುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಮಾನವರ ಸೇವನೆಗೆ ಅತ್ಯುತ್ತಮವಾದ ಹಸಿರು ಎಲೆಗಳೆಂದರೆ ಪಾಲಕ್ ಹಾಗೂ ಬಸಲೆ ಎಂದು ಈಗಾಗಲೇ ನಿರೂಪಿತವಾಗಿದೆ. ಇದರಲ್ಲಿ ಕಬ್ಬಿಣ, ಆಂಟಿ ಆಕ್ಸಿಡೆಂಟುಗಳು ಹಾಗೂ ಪ್ರೋಟೀನ್ ಸಹಿತ ಇತರ ಪೋಷಕಾಂಶಗಳಿವೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ನಿತ್ಯವೂ ಪಾಲಕ್ ಸೊಪ್ಪನ್ನು ಸೇವಿಸುವ ಮೂಲಕ ರಕ್ತದಲ್ಲಿ ಹೋಮೋಸಿಸ್ಟ್ರೈನ್ ಎಂಬ ಪೋಷಕಾಂಶದ ಮಟ್ಟ ಕಡಿಮೆಗೊಳಿಸಬಹುದು ಹಾಗೂ ಈ ಮೂಲಕ ರಕ್ತನಾಳಗಳಲ್ಲಿ ಅಂಟಿಕೊಳ್ಳುವ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ತೆಂಗಿನ ಎಣ್ಣೆಯಿಂದಲೂ ಆರೋಗ್ಯಕ್ಕೆ ಕೆಲವಾರು ಪ್ರಯೋಜನಗಳಿವೆ. ನಿತ್ಯವೂ ಕೊಬ್ಬರಿ ಎಣ್ಣೆಯನ್ನು ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೇ ಇದರ ಸೇವನೆಯಿಂದ ರಕ್ತನಾಳ ಒಳಗಿನ ಕಲ್ಮಶ ನಿವಾರಣೆಯಾಗುತ್ತದೆ ಹಾಗೂ ಹೃದಯದ ಕ್ಷಮತೆಯೂ ಹೆಚ್ಚುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ವಿಟಮಿನ್ ಇ ಈ ಕೆಲಸದಲ್ಲಿ ನೆರವಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು

English summary

Foods That Clean Your Arteries And Heart

The heart is a vital organ that is responsible for filtering out the carbon dioxide from the blood and circulating healthy, oxygenated blood to all the other parts of the body, through the arteries. So, without the heart circulating oxygenated blood to the other organs, their functioning could be affected too, giving rise to a number of health issues. Here are a few foods which can cleanse your arteries naturally and protect your heart's health.
X
Desktop Bottom Promotion