For Quick Alerts
ALLOW NOTIFICATIONS  
For Daily Alerts

ಹೃದಯದ ಆರೋಗ್ಯ: ಸೇವಿಸುವ ಆಹಾರಗಳ ಬಗ್ಗೆ ಇರಲಿ ಎಚ್ಚರ!

By Manu
|

ದೇಶಕ್ಕೊಂದು ರಾಜಧಾನಿ ಹೇಗೆ ಮುಖ್ಯವೋ ಹಾಗೆಯೇ ದೇಹಕ್ಕೊಂದು ಹೃದಯ ಅತೀ ಅಗತ್ಯ. ಹೃದಯವು ದೇಹದ ಪ್ರತಿಯೊಂದು ಭಾಗಕ್ಕೂ ರಕ್ತವನ್ನು ಸರಬರಾಜು ಮಾಡುವುದು. ಹೃದಯಕ್ಕೆ ಯಾವುದೇ ಸಮಸ್ಯೆಯಾದರೂ ಅದರ ಪರಿಣಾಮ ದೇಹದ ಇತರ ಭಾಗಗಳ ಮೇಲಾಗುತ್ತದೆ.

ಹೃದಯ ತನ್ನ ಕೆಲಸವನ್ನು ನಿಲ್ಲಿಸಿದರೆ ದೇಹವು ನಿಶ್ಚಲವಾಗುವುದು. ಹೃದಯ ಅತೀ ಮುಖ್ಯವೆಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಹೃದಯದ ಆರೋಗ್ಯವನ್ನು ಕಾಪಾಡಲು ನಾವು ಏನಾದರೂ ಮಾಡಿದ್ದೇವೆಯಾ? ಹೃದಯದ ಬಗ್ಗೆ ನಾವು ಎಷ್ಟು ಕಾಳಜಿ ವಹಿಸುತ್ತೇವೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಯಾಕೆಂದರೆ ದೇಹದ ಹೊರಗೆ ಕಣ್ಣಿಗೆ ಕಾಣಿಸುವ ಭಾಗಗಳ ಬಗ್ಗೆ ಮಾತ್ರ ನಮಗೆ ಕಾಳಜಿ. ಇವೇ ಹೃದಯ ಸ್ತಂಭನದ ಲಕ್ಷಣಗಳು! ಯಾವುದಕ್ಕೂ ನಿರ್ಲಕ್ಷಿಸದಿರಿ....

Heart

ದೇಹದ ಒಳಗೆ ಇರುವ ಭಾಗಗಳ ಬಗ್ಗೆ ನಿರ್ಲಕ್ಷ್ಯ. ಇದರಿಂದ ಹೃದಯಾಘಾತದಂತಹ ಸಮಸ್ಯೆ ಇಂದು ಸಾಮಾನ್ಯವಾಗುತ್ತಿದೆ. ಹೃದಯದ ಕಾಯಿಲೆ ಇರುವವರು ಕೂಡ ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಮುಂದೆ ಬರುವಂತಹ ಸಮಸ್ಯೆಯನ್ನು ತಡೆಯಬಹುದು. ಹೃದಯದ ಕಾಯಿಲೆ ಇಲ್ಲದೆ ಇರುವವರು ಅದು ಬರದಂತೆ ತಡೆಯಬಹುದು.

ತರಕಾರಿಗಳು, ಧಾನ್ಯಗಳು, ಕೊಬ್ಬು ರಹಿತ ಹಾಲಿನ ಉತ್ಪನ್ನಗಳು, ಬೀನ್ಸ್, ಮೀನು ಮತ್ತು ಕೋಳಿ ಸೇವಿಸಬೇಕು. ಹೃದಯದ ಆರೋಗ್ಯವನ್ನು ಕಾಪಾಡಲು ಕೆಲವೊಂದು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅವು ಯಾವುದೆಂದು ಈ ಲೇಖನದಲ್ಲಿ ತಿಳಿಯಿರಿ.

ಸೋಡಾ
ಇದರಲ್ಲಿ ಅತಿಯಾಗಿ ಸಕ್ಕರೆಯಿರುವ ಕಾರಣದಿಂದ ಇದು ಹೃದಯನಾಳಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಸೋಡಾ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು ಮಾತ್ರವಲ್ಲದೆ ಹೃದಯಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ನಿಮಗೆ ಸೋಡಾ ಕುಡಿಯುವ ಹವ್ಯಾಸವಿದ್ದರೆ ಮುಂದಿನ ಸಲ ಅದನ್ನು ಸೇವಿಸುವ ಮೊದಲು ಎರಡೆರಡು ಸಲ ಯೋಚಿಸಿ.

ಸಿಹಿ ತಿಂಡಿಗಳು
ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದರಲ್ಲಿ ಅತಿಯಾದ ಸಕ್ಕರೆ ಅಂಶವಿರುತ್ತದೆ. ಇದು ಹೃದಯದಲ್ಲಿ ರಕ್ತ ತಡೆಯನ್ನು ಉಂಟುಮಾಡಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!

ಸಂಸ್ಕರಿಸಿದ ಆಹಾರಗಳು
ಸಂಸ್ಕರಿಸಿದ ಆಹಾರಗಳು ಹೃದಯಕ್ಕೆ ತುಂಬಾ ಕೆಟ್ಟದು. ಇದು ಹೃದಯದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಸಲಾಡ್‌ಗೆ ಹಾಕುವಂತಹ ಅಲಂಕಾರ, ಕೆಚಪ್, ಬ್ರೆಡ್, ಕೊಬ್ಬು ಕಡಿಮೆ ಇರುವ ಮೊಸರು, ಪಾಸ್ತಾ ಸಾಸ್, ಬಾರ್ಬೆಕ್ ಸಾಸ್ ಇತ್ಯಾದಿ ಸಂಸ್ಕರಿಸಿದ ಆಹಾರವನ್ನು ತ್ಯಜಿಸಬೇಕು. ಈ ಆಹಾರಗಳನ್ನು ನೀವು ಕಡ್ಡಾಯವಾಗಿ ತ್ಯಜಿಸಲೇಬೇಕು.


ಯಾಕೆಂದರೆ ಇದರಲ್ಲಿ ಅನಾರೋಗ್ಯಕಾರಿ ಟ್ರಾನ್ಸ್ ಕೊಬ್ಬು ಇದೆ. ಇದು ಅಪಧಮನಿಗಳಲ್ಲಿ ಸಮಸ್ಯೆಯನ್ನು ಉಂಟು ಮಾಡುವುದು. ಜಲಜನೀಕರಿಸಿದ ತೈಲವನ್ನು ಸೇವಿಸಬೇಡಿ. ಇದು ಹೃದಯಕ್ಕೆ ತುಂಬಾ ಅಪಾಯಕಾರಿ.
English summary

Some Of The Worst Foods For Your Heart

Today in this article we shall list certain foods that have been labelled as the worst foods for your heart.Everyone knows that maintaining an excellent diet is a healthful choice for each individual. So restraining your diet will be the key to lessening the potential danger of heart diseases as well as enhancing your symptoms if you are already affected by this disease.
Story first published: Monday, January 9, 2017, 19:33 [IST]
X
Desktop Bottom Promotion