For Quick Alerts
ALLOW NOTIFICATIONS  
For Daily Alerts

ಹೈ ಬಿಪಿ ರೋಗದ ಸಮಸ್ಯೆಯಿದ್ದವರು, ಆದಷ್ಟು ಇಂತಹ ಆಹಾರಗಳಿಂದ ದೂರವಿರಿ!

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ನಿಮಗೂ ಈ ತೊಂದರೆ ಕಾಡುವ ಸಾಧ್ಯತೆ ಹೆಚ್ಚು. ಅದರಲ್ಲೂ ಕೆಲವು ಆಹಾರಗಳು ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಕಾರಣವಾಗುತ್ತವೆ!

By Manu
|

ರಕ್ತದೊತ್ತಡ (ಬಿಪಿ) ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದ್ದರೂ ತೊಂದರೆ, ಹೆಚ್ಚಿದ್ದರೂ ತೊಂದರೆ. ಅದರಲ್ಲೂ ಅಧಿಕ ರಕ್ತದೊತ್ತಡ ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರಿ ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುವ ಕಾರಣ ಹೆಚ್ಚು ಅಪಾಯಕಾರಿಯಾಗಿದ್ದು ಒಂದು ರೀತಿಯಲ್ಲಿ ನಿಧಾನವಾಗಿ ಕೊಲ್ಲುವ ವಿಷವಾಗಿದೆ.

ರಕ್ತದ ಒತ್ತಡವನ್ನು ರಕ್ತನಾಳಗಳ ಒಳಗೆ ಹರಿಯುತ್ತಿರುವ ರಕ್ತ ನಾಳದ ಒಳಗೋಡೆಗಳ ಮೇಲೆ ಒತ್ತುವ ಒತ್ತಡವನ್ನು ಅಳೆಯುವ ಮೂಲಕ ಕಂಡುಕೊಳ್ಳಬಹುದು. ಇದನ್ನು ಸಂಕುಚನ ಮತ್ತು ವ್ಯಾಕೋಚನ (systolic pressure and diastolic pressure) ಒತ್ತಡಗಳ ಮೂಲಕ ಅಳೆಯಲಾಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಇದು 120/80 mmHg ಪ್ರಮಾಣದಲ್ಲಿರಬೇಕು.

ಇಂದಿನ ದಿನದಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದನ್ನು ನಿತ್ಯದ ಸಾಮಾನ್ಯ ಪರೀಕ್ಷೆಗಳ ಮೂಲಕ ಕಂಡುಕೊಳ್ಳಲಾಗಿದೆ. ಅಧಿಕ ರಕ್ತದೊತ್ತಡಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿರುವುದರಿಂದ ಸೂಕ್ತ ಪರೀಕ್ಷೆಯ ಹೊರತಾಗಿ ಇದನ್ನು ಹೀಗೇ ಎಂಬ ಕಾರಣದಿಂದ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಅಧಿಕ ರಕ್ತದೊತ್ತಡವನ್ನು ಜೀವನಶೈಲಿಯಲ್ಲಿ ಕೆಲವು ಸುಲಭ ಬದಲಾವಣೆಗಳ ಮೂಲಕ ನಿಯಂತ್ರಣದಲ್ಲಿರಿಸಬಹುದು.
ಇದನ್ನೂ ಓದಿ - ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ನಿಮಗೂ ಈ ತೊಂದರೆ ಕಾಡುವ ಸಾಧ್ಯತೆ ಹೆಚ್ಚು. ಅದರಲ್ಲೂ ಕೆಲವು ಆಹಾರಗಳು ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಕಾರಣವಾಗುತ್ತವೆ. ದುರದೃಷ್ಟಕರವೆಂದರೆ ಈ ಎಲ್ಲಾ ಆಹಾರಗಳು ನಿಮ್ಮ ನೆಚ್ಚಿನ ಆಹಾರಗಳೇ ಆಗಿವೆ.

ವಿಶೇಷವಾಗಿ ಖಾದ್ಯಗಳಿಗೆ ಹೆಚ್ಚಿನ ರುಚಿ ಬರುವಂತೆ ಮಾಡಲು ಸೇರಿಸಲಾಗಿರುವ ರುಚಿಕಾರಕಗಳು ಮತ್ತು ಹೆಚ್ಚಿನ ಪ್ರಮಾಣದ ಎಣ್ಣೆ, ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಬನ್ನಿ, ರಕ್ತದೊತ್ತಡ ಹೆಚ್ಚಿಸುವ ಅಹಾರಗಳು ಯಾವುದು ಎಂಬುದನ್ನು ಕಂಡುಕೊಂಡು ಇವುಗಳ ಸೇವನೆಯನ್ನು ಕನಿಷ್ಠಕ್ಕಿಳಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ....

ಉಪ್ಪಿನಕಾಯಿ

ಉಪ್ಪಿನಕಾಯಿ

ಹೆಸರು ಕೇಳಿದರೇ ಬಾಯಿಯಲ್ಲಿ ನೀರೂರಿಸುವ ಉಪ್ಪಿನಕಾಯಿ ಅಧಿಕ ರಕ್ತದೊತ್ತಡದ ಪ್ರಮುಖ ಕಾರಣವಾಗಿದೆ. ಹೆಸರೇ ಹೇಳುವಂತೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಉಪ್ಪಿನಕಾಯಿ

ಉಪ್ಪಿನಕಾಯಿ

ಅಂದರೆ ದೇಹವನ್ನು ಸೇರಿದ ಈ ಹೆಚ್ಚುವರಿ ಉಪ್ಪನ್ನು ಹೊರಹಾಕಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳು ಆರೋಗ್ಯಕ್ಕಾಗಿಯಾದರೂ ಉಪ್ಪಿನಕಾಯಿಯ ರುಚಿಯನ್ನು ತ್ಯಜಿಸುವುದೇ ಉತ್ತಮ.

ಉಪ್ಪಿನಕಾಯಿ ಮಿತವಾಗಿ ಸೇವಿಸಿ, ಇಲ್ಲಾಂದ್ರೆ ಆಪತ್ತು ಖಚಿತ!!

ಬೇಕರಿ ಉತ್ಪನ್ನಗಳು

ಬೇಕರಿ ಉತ್ಪನ್ನಗಳು

ಬ್ರೆಡ್, ಬನ್, ಪಿಜ್ಜಾ ಮೊದಲಾದ ಬೇಕರಿ ಉತ್ಪನ್ನಗಳಲ್ಲಿ ಹಿಟ್ಟು ಉಬ್ಬಲು ಅಧಿಕ ಪ್ರಮಾಣದ ಉಪ್ಪನ್ನು ಬೆರೆಸಿರಲಾಗಿರುತ್ತದೆ. ಅಲ್ಲದೇ ರುಚಿ ಹೆಚ್ಚಿಸಲು ಉಪ್ಪನ್ನು ಅಧಿಕವಾಗಿ ಉಪಯೋಗಿಸಲಾಗುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡದಿಂದ ರಕ್ಷಣೆ ಪಡೆಯಬೇಕೆಂದರೆ ಈ ಉತ್ಪನ್ನಗಳನ್ನು ಸೇವಿಸದಿರುವುದು ಅಥವಾ ಕನಿಷ್ಟ ಪ್ರಮಾಣದಲ್ಲಿ ಮಾತ್ರವೇ ಸೇವಿಸುವುದು ಸೂಕ್ತ.

ಇದನ್ನೂ ಓದಿ- ಎಚ್ಚರ: ನೀವು ಅಂದುಕೊಂಡಷ್ಟು, ಬ್ರೆಡ್ ಆರೋಗ್ಯಕರವಲ್ಲ!

ಕೇಕ್ ಮತ್ತು ಪೇಸ್ಟ್ರಿಗಳು

ಕೇಕ್ ಮತ್ತು ಪೇಸ್ಟ್ರಿಗಳು

ಕೇಕ್‌ನಲ್ಲಿ ಕೇವಲ ಸಕ್ಕರೆ ಇದೆ ಎಂದು ಭಾವಿಸಬೇಡಿ. ಇದರಲ್ಲಿ ಕೊಂಚ ಹೆಚ್ಚೇ ಉಪ್ಪು ಇರುವ ಕಾರಣ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ. ಆದ್ದರಿಂದ ಅಧಿಕ ರಕ್ತದೊತ್ತಡವಿರುವವರು ಇವುಗಳನ್ನು ಕಣ್ಣಿನಲ್ಲಿ ನೋಡಿಕೊಂಡು ಮನಃತೃಪ್ತಿಪಟ್ಟುಕೊಂಡರೆ ಸಾಕು. ಉಳಿದವರು ಕನಿಷ್ಟ ಪ್ರಮಾಣವನ್ನು ಮಾತ್ರವೇ ಸೇವಿಸುವುದು ಸೂಕ್ತ.

ಉಪ್ಪಿನಾಂಶ ಹೆಚ್ಚಿರುವ ಖಾದ್ಯಗಳು

ಉಪ್ಪಿನಾಂಶ ಹೆಚ್ಚಿರುವ ಖಾದ್ಯಗಳು

ಅಧಿಕ ರಕ್ತದೊತ್ತಡಕ್ಕೆ ಉಪ್ಪು ನೇರವಾಗಿ ಕಾರಣವಾಗಿದೆ. ಆದ್ದರಿಂದ ಉಪ್ಪಿನ ಸೇವನೆಯ ಪ್ರಮಾಣ ದಿನಕ್ಕೆ 3.75 ಗ್ರಾಂ (ಅಂದರೆ ಸುಮಾರು ಮುಕ್ಕಾಲು ಚಿಕ್ಕ ಚಮಚ) ಮೀರದಂತೆ ನೋಡಿಕೊಳ್ಳಬೇಕು. ಈ ಪ್ರಮಾಣ ನಮಗೆ ನಮ್ಮ ನಿತ್ಯದ ಊಟದ ಮೂಲಕ ಲಭ್ಯವಾಗಿ ಬಿಡುತ್ತದೆ. ಆದ್ದರಿಂದ ಉಪ್ಪಿನಾಂಶ ಹೆಚ್ಚಿರುವ ಯಾವುದೇ ಖಾದ್ಯವನ್ನು ರುಚಿನೋಡಿದರೆ ಮಾತ್ರವೇ ಸಾಕು.

ಮದ್ಯ

ಮದ್ಯ

ಮದ್ಯಪಾನ ದೇಹಕ್ಕೂ, ಮೆದುಳಿಗೂ ಹಾನಿಕರ. ಅಷ್ಟೇ ಅಲ್ಲ, ಇದು ರಕ್ತದೊತ್ತಡವನ್ನು ಅಧಿಕಗೊಳಿಸುವ ಮೂಲಕ ನಿಧಾನವಿಷವೂ ಹೌದು. ಮದ್ಯಸೇವನೆಯ ಬಳಿಕ ಇದು ಹೊಟ್ಟೆಯಿಂದ ನೇರವಾಗಿ ರಕ್ತವನ್ನು ಸೇರಿ ಮೆದುಳಿನ ಸೂಚನೆಗಳನ್ನೆಲ್ಲಾ ಅಸ್ತವ್ಯಸ್ತಗೊಳಿಸುತ್ತದೆ. ಇದನ್ನೇ ವ್ಯಸನಿಗಳು ಅಮಲು ಎಂದು ತಿಳಿದುಕೊಳ್ಳುತ್ತಾರೆ.

ಮದ್ಯ

ಮದ್ಯ

ವಾಸ್ತವವಾಗಿ ಈ ಅಮಲಿನ ಅವಧಿಯಲ್ಲಿ ಮದ್ಯ ರಕ್ತನಾಳಗಳನ್ನು ನಿಧಾನವಾಗಿ ಶಿಥಿಲಗೊಳಿಸುತ್ತದೆ. ಇದರಿಂದ ಈಗಾಗಲೇ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳಿಂದ ಬಳಲುತ್ತಿರುವವರು ಇನ್ನೂ ಹೆಚ್ಚು ಬಳಲುತ್ತಾರೆ. ಅದರಲ್ಲಿಯೂ ಮದ್ಯದ ಜೊತೆ ಹುರಿದ ಪದಾರ್ಥಗಳನ್ನು ತಿನ್ನುವುದು ಅಧಿಕ ರಕ್ತದೊತ್ತಡವನ್ನು ನೂರುಪಟ್ಟು ಹೆಚ್ಚಿಸುತ್ತದೆ ಹಾಗೂ ಪ್ರಾಣಾಪಾಯವೂ ಎದುರಾಗಬಹುದು. ಆದ್ದರಿಂದ ಮದ್ಯಪಾನದಿಂದ ಹೊರಬರುವುದು ಅಗತ್ಯವಾಗಿದೆ.

ಇದನ್ನೂ ಓದಿ - ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ

English summary

Avoid These Foods To Prevent High Foods To Prevent High Blood Pressure

Hypertension is a controllable disease that can be managed by making minor changes in your diet plan and lifestyle. We have also listed a diet for those suffering from hypertension. Click here.
X
Desktop Bottom Promotion