For Quick Alerts
ALLOW NOTIFICATIONS  
For Daily Alerts

ಹೃದಯದ ಆರೋಗ್ಯದ ದೃಷ್ಟಿಯಿಂದ ಇಂತಹ ಆಹಾರಗಳಿಂದ ದೂರವಿರಿ

By Arshad
|

ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಹೃದಯಾಘಾತವೇ ಪ್ರಮುಖ ಕಾರಣವೆಂದು ನಿಮಗೆ ಗೊತ್ತಿತ್ತೇ? ಈ ಮಾರಕ ಕಾಯಿಲೆಗೆ ಒಳಗಾಗದಿರಲು ಅನಿವಾರ್ಯವಾಗಿಯಾದರೂ, ಇಷ್ಟವಿಲ್ಲದಿದ್ದರೂ ಸರಿ, ನಿಮ್ಮ ಆಹಾರದಲ್ಲಿ ಹಾಗೂ ಜೀವನಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲೇ ಬೇಕಾಗುತ್ತದೆ. ನಮ್ಮ ದೇಹದ ಅಂಗಗಳಲ್ಲಿಯೇ ಹೃದಯ ಅತ್ಯಂತ ಪ್ರಮುಖವಾದ ಅಂಗವಾಗಿದ್ದು ಒಂದು ಕ್ಷಣವೂ ನಿಲ್ಲದೇ ಮಿಡಿಯುತ್ತಿರುತ್ತದೆ.

ಈ ಹೃದಯದ ಬಗ್ಗೆ ಕಾಳಜಿ ವಹಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಯಾವಾಗ ಹೃದಯದ ಮೇಲೆ ಭಾರ ಹೆಚ್ಚಾಯಿತೋ, ಇದು ಹೃದಯದ ಒತ್ತಡದ ಮೂಲಕ ಸ್ಪಷ್ಟವಾಗಿಯೇ ತಿಳಿಸುತ್ತದೆ. ಈ ಒತ್ತಡವನ್ನು ತಿಳಿದುಕೊಂಡ ವೈದ್ಯರು ತಕ್ಷಣವೇ ನೀವು ತಿನ್ನಬೇಕಾದ ಆಹಾರಗಳಲ್ಲಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸುತ್ತಾರೆ. ಪ್ರಮುಖವಾಗಿ ಕೆಲವು ಆಹಾರಗಳನ್ನು ನಿಷೇಧಿಸುವುದು ಹಾಗೂ ದೈಹಿಕ ವ್ಯಾಯಾಮಗಳನ್ನು ಹೆಚ್ಚಿಸುವುದು ಈ ಬದಲಾವಣೆಗಳಲ್ಲಿ ಪ್ರಮುಖವಾಗಿವೆ.

ಹೃದಯ ರೋಗದ ಲಕ್ಷಣಗಳಿವು...ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಸಂಪೂರ್ಣ ಕೊಬ್ಬಿನಿಂದ ಕೂಡಿದ ಆಹಾರಗಳು, ಸೋಡಿಯಂ, ಹಾಗೂ ಕೊಲೆಸ್ಟ್ರಾಲ್ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ. ಹಲವು ಆಹಾರಗಳಲ್ಲಿ ಇವು ಹೆಚ್ಚಾಗಿದ್ದು ಈ ಆಹಾರಗಳನ್ನು ಈಗ ಅನಿವಾರ್ಯವಾಗಿ ವರ್ಜಿಸಬೇಕಾಗಿದೆ. ಬನ್ನಿ, ಯಾವ ಆಹಾರಗಳು ಹೃದಯ ಸ್ತಂಭನದ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂಬುದನ್ನು ನೋಡೋಣ....

ಹುರಿದ ಕೋಳಿಮಾಂಸ

ಹುರಿದ ಕೋಳಿಮಾಂಸ

ಮಸಾಲೆ ಹಚ್ಚಿ ಹುರಿದ ಕೋಳಿಮಾಂಸ ಅತಿ ರುಚಿಕರ. ಆದರೆ ಈ ರುಚಿಗೆ ಪ್ರಮುಖ ಕಾರಣ ಅತಿ ಹೆಚ್ಚಿನ ಕೊಬ್ಬು ಹಾಗೂ ಕೊಲೆಸ್ಟ್ರಾಲ್. ಈ ಮಾಂಸದ ಸೇವನೆಯಿಂದ ಅಗಾಧ ಪ್ರಮಾಣದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ರಕ್ತವನ್ನು ಸೇರುತ್ತದೆ. ಪರಿಣಾಮವಾಗಿ ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ.

ಸಾಸೇಜ್‌ಗಳು

ಸಾಸೇಜ್‌ಗಳು

ಮಾರುಕಟ್ಟೆಯಲ್ಲಿ ಸಿದ್ಧರೂಪದ ಸಾಸೇಜ್ ಗಳು ಸಿಗುತ್ತವೆ. ಸಾಮಾನ್ಯರಿಗೆ ಲಭ್ಯವಿರುವ ಜ್ಞಾನದ ಪ್ರಕಾರ ಇವುಗಳನ್ನು ಕೋಳಿ, ಕುರಿ, ಎತ್ತ್ತುಮತ್ತು ಇತರ ಪ್ರಾಣಿಗಳ ಮಾಂಸದಿಂದ ಮಾಡಿರುತ್ತಾರೆ. ವಾಸ್ತವವಾಗಿ ಇದು ಕೇವಲ ಅರ್ಧಸತ್ಯ. ಮಾಂಸವನ್ನು ಸಂಸ್ಕರಿಸುವ ಘಟಕಗಳಲ್ಲಿ ಅಗಾಧ ಪ್ರಮಾಣದ ಕರುಳುಗಳು ಸಂಗ್ರಹವಾಗುತ್ತವೆ. ಇವನ್ನು ಹಾಗೇ ಎಸೆಯದೇ ಸ್ವಚ್ಛಗೊಳಿಸಲಾಗುತ್ತದೆ. ಹೇಗಿದ್ದರೂ ಎಸೆಯುವ ಮೂಳೆಗಳಿಗೆ ಅಂಟಿಕೊಂಡಿರುವ ಮಾಂಸವನ್ನೂ ಕೆಲವು ಉಪಕರಣಗಳಿಂದ ಕೆರೆದು ಸಂಗ್ರಹಿಸಲಾಗುತ್ತದೆ. ಈ ಮಾಂಸ ಹಾಗೂ ಕರುಳು ಮತ್ತು ಬ್ರೆಡ್ ತುಣುಕುಗಳನ್ನು ಮಿಶ್ರಣ ಮಾಡಿ ಚಿಕ್ಕದಾಗಿ ಪುಡಿಯಾಗಿಸಿ ಇತರ ಸಂರಕ್ಷಕಗಳೊಂದಿಗೆ ಬೆರೆಸಿ ಯಂತ್ರಗಳ ಮೂಲಕ ಸಂಸ್ಕರಿಸಿ ಚಿಕ್ಕ ಚಿಕ್ಕ ಬಾಳೆಹಣ್ಣಿನ ರೂಪದಲ್ಲಿ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಪ್ರತಿ ತುಂಡಿನಲ್ಲಿ 22ಗ್ರಾಂ ಕೊಬ್ಬು ಹಾಗೂ ಕನಿಷ್ಟ 810 ಮಿಲಿಗ್ರಾಮ್ ಸೋಡಿಯಂ ಇರುತ್ತದೆ.

ಚೀಸ್ ಕೇಕ್

ಚೀಸ್ ಕೇಕ್

ಚೀಸ್ ಕೇಕ್ ಅತ್ಯಂತ ರುಚಿಕರವಾದ, ನಿರಾಕರಿಸಲು ಸಾಧ್ಯವೇ ಇಲ್ಲವಾದ ಸಿಹಿತಿಂಡಿಯಾಗಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ಕೊಬ್ಬು ಹಾಗೂ ಕಾರ್ಬೋಹೈಡ್ರೇಟುಗಳಿವೆ. ನಾಲಿಗೆಗೆ ರುಚಿಯಾದರೂ ಇವೆಲ್ಲವೂ ಹೃದಯಕ್ಕೆ ಮಾತ್ರ ಮಾರಕವಾಗಿವೆ. ಆದ್ದರಿಂದ ಈ ಕೇಕ್ ನ ಸೌಂದರ್ಯವನ್ನು ಮಾತ್ರ ಕಣ್ಣಿನಿಂದ ಆಸ್ವಾದಿಸಿ ಮನಃತೃಪ್ತಿಪಟ್ಟುಕೊಳ್ಳುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ.

 ಸ್ಟೀಕ್

ಸ್ಟೀಕ್

ಬೆಂಕಿಯಲ್ಲಿ ನೇರವಾಗಿ ಸುಟ್ಟ ಮಾಂಸದ ತುಂಡು ಅನಿವಾರ್ಯ ಸಂದರ್ಭಗಳಲ್ಲದೇ ಇತರ ಸಮಯದಲ್ಲಿ ತಿನ್ನಲು ಯೋಗ್ಯವಲ್ಲದ ಆಹಾರ. ಏಕೆಂದರೆ ಇದರಲ್ಲಿ ಅತಿ ಹೆಚ್ಚಿನ ಸಂತುಲಿತ ಕೊಬ್ಬು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಇದೆ. ಇದು ಹೃದಯಕ್ಕೆ ಅತಿ ಹೆಚ್ಚು ಅಪಾಯತರುವ ಆಹಾರವಾಗಿದೆ.

ಬರ್ಗರ್

ಬರ್ಗರ್

ಬರ್ಗರ್ ಎಂದರೆ ಎರಡು ಮೈದಾಹಿಟ್ಟಿನಿಂದ ಮಾಡಿದ ಬನ್ ನಡುವೆ ಮಾಂಸವನ್ನು ಅರೆದು ತಟ್ಟಿ ಹುರಿದ ವೃತ್ತಾಕಾರದ ರೊಟ್ಟಿಯನ್ನಿರಿಸಿ ಇದರ ಜೊತೆಗೆ ಟೊಮಾಟೋ ಹಾಗೂ ಇತರ ತರಕಾರಿಗಳನ್ನು ಕಲಾತ್ಮಕವಾಗಿರಿಸಿ ಬಡಿಸಲಾಗುತ್ತದೆ. ನೋಡಲು ಚೆನ್ನಾಗಿರುವ ಹಾಗೂ ರುಚಿಯಲ್ಲಿಯೂ ಅದ್ವಿತೀಯವಾಗಿರುವ ಈ ಬರ್ಗರ್ ಗಳು ಪಾಶ್ಚಾತ್ಯ ಸಂಸ್ಕೃತಿಯ ಕೊಡುಗೆಯಾಗಿದ್ದು ಈ ಆಹಾರದಲ್ಲಿ ಅತಿ ಹೆಚ್ಚಿನ ಸಂತುಲಿತ ಕೊಬ್ಬು ಇರುತ್ತದೆ. ಯಾವಾಗಲಾದರೊಮ್ಮೆ ರುಚಿ ತಡೆಯಲಾಗದೇ ತಿಂದರೆ ಪರವಾಗಿಲ್ಲ. ಆದರೆ ಇದು ನಿತ್ಯದ ಅಭ್ಯಾಸವಾದರೆ ಹೃದಯದ ಸ್ತಂಭನದ ಸಾಧ್ಯತೆಯನ್ನು ಈ ರುಚಿ ಹೆಚ್ಚಿಸುತ್ತದೆ.

ಪಿಜ್ಜಾ

ಪಿಜ್ಜಾ

ವೃತ್ತಾಕಾರದ ಮೈದಾಹಿಟ್ಟಿನ ದಪ್ಪ ರೊಟ್ಟಿಯ ಮೇಲೆ ದಪ್ಪನಾದ ಚೀಸ್ ಲೇಪಿಸಿ ನೋಡಲು ಚೆನ್ನಾಗಿರಲೆಂದು ಆಲಿವ್ ಹಾಗೂ ಇತರ ಘಟಕಗಳನ್ನು ಕಲಾತ್ಮಕವಾಗಿ ಇರಿಸಲಾಗಿರುತ್ತದೆ. ಒಂದು ತುಂಡು ಪಿಜ್ಜಾದಲ್ಲಿ 9.8ಗ್ರಾಂ ಕೊಬ್ಬು ಇರುತ್ತದೆ. ಆದರೆ ಯಾರಿಗೂ ಒಂದೇ ತುಂಡು ತಿಂದು ಮನ ತೃಪ್ತಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಕೊಬ್ಬು ಹೃದಯಕ್ಕೆ ಸರ್ವಥಾ ಒಳ್ಳೆಯದಲ್ಲ.

ಪಾಸ್ತಾ

ಪಾಸ್ತಾ

ಪಾಸ್ತಾದಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲೋರಿಗಳಿರುತ್ತವೆ ಹಾಗೂ ಇದರೊಂದಿಗೆ ಸಂತುಲಿತ ಕೊಬ್ಬು ಮತ್ತು ಸೋಡಿಯಂ ಸಹಾ ದೇಹ ತಾಳಬಲ್ಲುದಕ್ಕಿಂತ ಅತಿ ಹೆಚ್ಚೇ ಇರುತ್ತದೆ. ನಾಲಿಗೆಗೆ ರುಚಿಯಾದರೂ ಈ ಆಹಾರ ಹೃದಯಕ್ಕೆ ಕೆಟ್ಟದ್ದೇ ಆಗಿದೆ. ಈ ಆಹಾರ ನಿಯಮಿತವಾಗಿ ಸೇವಿಸುವವರಿಗೆ ಹೃದಯ ಸ್ತಂಭನದ ಸಾಧ್ಯತೆ ಇತರರಿಗಿಂತ ಹೆಚ್ಚಿರುತ್ತದೆ.

ಐಸ್ ಕ್ರೀಂ

ಐಸ್ ಕ್ರೀಂ

ಐಸ್ ಕ್ರೀಂ ನಲ್ಲಿ ಸರಿಸುಮಾರು ಅರ್ಧದಷ್ಟು ಪ್ರಮಾಣದ ಸಕ್ಕರೆ ಹಾಗೂ ಉಳಿದರ್ಧ ಸಂತುಲಿತ ಕೊಬ್ಬು ಇರುತ್ತದೆ. ಅಪರೂಪಕ್ಕೊಮ್ಮೆ ಕೊಂಚ ಪ್ರಮಾಣದಲ್ಲಿ ತಿಂದರೆ ಆರೋಗ್ಯಕರ. ಆದರೆ ಇದು ಹೆಚ್ಚಾದರೆ ಅಪಾಯಕರ. ಉತ್ತಮ ಗುಣಮಟ್ಟದ ಐಸ್ ಕ್ರೀಂ ಅನ್ನು ಆರೋಗ್ಯವಂತ ಪುರುಷರು ಒಂದೂವರೆ ಕಪ್ ಹಾಗೂ ಮಹಿಳೆಯರು ಒಂದು ಕಪ್ ಗಿಂತ ಹೆಚ್ಚು ಸೇವಿಸಬಾರದು. ಈ ಪ್ರಮಾಣ ಸಾಕಷ್ಟು ಪ್ರಮಾಣದ ವ್ಯಾಯಾಮ ಮಾಡುವವರಿಗೆ ಮಾತ್ರವೇ ಅನ್ವಯಿಸುತ್ತದೆ. ಉಳಿದವರು ಈ ಪ್ರಮಾಣದ ಅರ್ಧ ಮೀರಿದರೂ ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ.

English summary

Avoid these foods as these can increase risk of heart attack

Did you know that heart attack is the leading cause of death world over nowadays? The best thing that you can do to protect yourself from this killer disease is, you need to put in some serious effort in tweaking your diet. The heart is the most vital organ and you need to take the best care of it. When your heart is in danger, most of the doctors will tell you to watch what you eat. There are some foods that can put your heart in serious danger upon consuming these.
Story first published: Thursday, September 28, 2017, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more