For Quick Alerts
ALLOW NOTIFICATIONS  
For Daily Alerts

ಹೃದಯಾಘಾತದ ಬಳಿಕ, ಸಣ್ಣ ವಿಷಯದಲ್ಲೂ ಎಚ್ಚರ ವಹಿಸುವಿರಿ!

By Vani Naik
|

ಹೃದಯಾಘಾತವನ್ನು ಮೈಯೋ ಕಾರ್ಡಿಯಲ್ ಇನಫಾರ್ಕ್ಷನ್ ಎಂದು ಕೂಡ ಕರೆಯುತ್ತಾರೆ. ಹೃದಯಕ್ಕೆ ಹೋಗುವ ರಕ್ತ ನಾಳದಲ್ಲಿ ತಡೆಯುಂಟಾಗಿ, ದೇಹದ ಮುಖ್ಯವಾದ ಅಂಗವಾದ ಹೃದಯಕ್ಕೆ ಆಮ್ಲಜನಕದ ಪೂರೈಕೆ ಆಗದಿದ್ದಾಗ ಹೃದಯಾಘಾತ ಸಂಭವಿಸುತ್ತದೆ.

ಅಪಧಮನಿ(ನಾಡಿ)ಯಲ್ಲಿ ಪ್ಲಾಖ್ ಸೇರಿಕೊಂಡಾಗ ರಕ್ತ ಹೆಪ್ಪುಕಟ್ಟುತ್ತದೆ. ಯಾವಾಗ ರಕ್ತ ನಾಳದ ಮುಖಾಂತರ ರಕ್ತ ಸರಾಗವಾಗಿ ಹರಿಯುವುದಿಲ್ಲವೋ ಹೃದಯದಲ್ಲಿನ ಜೀವಕೋಶಗಳು ಸಾಯುತ್ತವೆ. ಆಗ ಹೃದಯಕ್ಕೆ ತೀವ್ರವಾದ ತೊಂದರೆಯುಂಟಾಗುತ್ತದೆ.

How Your Life Changes After A Heart Attack

ಸಾಕಷ್ಟು ಕಾರಣಗಳಿಂದ ಹೃದಯಾಘಾತವಾಗಬಹುದು. ಅಳವಡಿಸಿಕೊಂಡಿರುವ ಜೀವನಶೈಲಿ, ಬೊಜ್ಜು, ದೇಹದಲ್ಲಿ ಹೆಚ್ಚಿದ ಕೊಬ್ಬಿನ ಅಂಶ, ಹೆಚ್ಚಿದ ರಕ್ತದೊತ್ತಡ ಮತ್ತು ಕೆಲವು ಔಷಧಿಗಳು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಯಾವುದೇ ವಿಧದ ಲಕ್ಷಣಗಳು ಕಂಡು ಬಂದರೂ ತಕ್ಷಣವೇ ಸರಿಯಾದ ಔಷಧೀಯ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಆ ಸಮಯದಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆಯೋ ಅದು ಬಹಳ ಮುಖ್ಯವಾಗಿರುತ್ತದೆ.

ಹೃದಯಾಘಾತ ಅಥವಾ ಮೈಯೋ ಕಾರ್ಡಿಯಲ್ ಇನಫಾರ್ಕ್ಷನ್ಗೆ ತಕ್ಷಣ ಕೊಡುವ ಚಿಕಿತ್ಸೆ ಎಂದರೆ, ಕಾರ್ಡಿಯೋ ಪಲ್ಮನರಿ ರಿಸಸ್ಸಿಟೇಷನ್ (ಮತ್ತೆ ಬದುಕಿಸುವುದು) ಎಂದರ್ಥ. ಇದನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗದವರಾಗಲಿ, ಬಿಕ್ಕಟ್ಟು ಬಗೆಹರಿಸುವ (ಕ್ರೈಸಿಸ್ ಟೀಮ್) ತಂಡವಾಗಲಿ ಆಸ್ಪರಿನ್ ಮತ್ತು ಇನ್ನಿತರ ರಕ್ತವನ್ನು ತೆಳುವಾಗಿಸುವ ಔಷಧಿಗಳನ್ನು, ಇನ್ನಷ್ಟು ಹೆಚ್ಚು ರಕ್ತಹೆಪ್ಪುಗಟ್ಟದೇ ಇರಲು ನೀಡುತ್ತಾರೆ.

ಒಮ್ಮೊಮ್ಮೆ, ಬೀಟಾ ಬ್ಲಾಕರ್ಸ್ ಅನ್ನು ಎದೆ ಬಡಿತದವನ್ನು ನಿಧಾನ ಮಾಡಲು ಕೊಡುತ್ತಾರೆ. ಅದರಿಂದಾಗಿ ಹೃದಯಕ್ಕಾಗುವ ಹೆಚ್ಚಿನ ಅನಾಹುತವನ್ನು ತಡೆಯಬಹುದು. ಕೆಲವು ರೋಗಿಗಳಿಗೆ, ಶಸ್ತ್ರ ಚಿಕಿತ್ಸೆಯೇ ಅನಿವಾರ್ಯವಾಗಬಹುದು.

ರಕ್ತನಾಳದಲ್ಲಿನ ಹೆಪ್ಪುಗಟ್ಟುವಿಕೆಯನ್ನು ಹೋಗಲಾಡಿಸಿ ರಕ್ತ ಸಂಚಾರವನ್ನು ಸರಾಗಗೊಳಿಸಲು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಅದನ್ನು ಹೃದಯಾಘಾತವಾದ ಮೇಲೆ ಹೆಚ್ಚಿನ ತೊಂದರೆ ಆಗದೇ ಇರಲು ಮಾಡುತ್ತಾರೆ.

ನಿಮ್ಮ ಜೀವನವು ಹೃದಯಾಘಾತವಾದ ಬಳಿಕ ಸಂಪೂರ್ಣವಾಗಿ ಬದಲಾಗುತ್ತದೆ. ನಿಮ್ಮ ಕಾಳಜಿಯನ್ನು ನೀವೇ ವಹಿಸುತ್ತೀರಿ. ಕೆಲಸದಷ್ಟೇ ವಿಶ್ರಾಮವೂ ಅಷ್ಟೇ ಮುಖ್ಯವೆಂದು ನಿಮಗೆ ಅರಿವಾಗುತ್ತದೆ. ನಿಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿಕೊಳ್ಳದಿರಲು ಪ್ರಯತ್ನಸುತ್ತೀರಿ.

ಸಣ್ಣ ಸಣ್ಣ ವಿಷಯಗಳಿಗೆ ಚಿಂತೆ ಮಾಡುವುದನ್ನು ನಿಲ್ಲಿಸುತ್ತೀರಿ. ಕೆಲಸದೊತ್ತಡ ನಿಮ್ಮನ್ನು ಕುಗ್ಗದೇ ಇರುವ ಹಾಗೆ ಎಚ್ಚರ ವಹಿಸುತ್ತೀರಿ. ನೀವು ನಿಮ್ಮ ಕೆಲಸಕ್ಕಿಂತ ನಿಮ್ಮ ಜೀವ ಹೆಚ್ಚು ಪ್ರಾಮುಖ್ಯವಾದದ್ದು ಎಂದು ಅರಿತುಕೊಳ್ಳುತ್ತೀರಿ.

ಗಡಿಬಿಡಿ ಮಾಡುವುದನ್ನು ಬಿಟ್ಟು ಮಲಗಿ ವಿಶ್ರಾಂತಿ ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ. ನೀವು ನಿಮ್ಮ ಬದುಕನ್ನು ಪ್ರಶಂಸನೀಯ ದೃಷ್ಟಿಯಿಂದ ನೋಡುತ್ತೀರಿ. ನಿಮ್ಮ ಆರೋಗ್ಯವನ್ನರಿತು ಒತ್ತಡಮಯ ಸಂದರ್ಭಗಳಿಂದ ದೂರ ಉಳಿಯುತ್ತೀರಿ. ನಿಯಮಿತವಾಗಿ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಳ್ಳುತ್ತೀರಿ. ಆತಂಕಕಾರಿ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂದು ಅರಿಯುತ್ತೀರಿ. ಇದೆಲ್ಲದರ ಜೊತೆಗೆ, ಜೀವನದ ಬೆಲೆ ಗೊತ್ತಾಗಿ ನಿಮ್ಮನ್ನು ನೀವು ಪ್ರೀತಿಸಲು ಪ್ರಾರಂಭಿಸುತ್ತೀರಿ.

English summary

How Your Life Changes After A Heart Attack

A myocardial infarction, also referred to as a heart attack, happens when a blood vessel which leads to the heart becomes totally blocked and may not carry oxygen throughout the blood stream to this vital organ. Blockages are often the result of the plaque buildup inside the artery which leads to a blood clot when blood cannot flow freely throughout the vessel. During a myocardial infarction, the cells of the heart muscle die, causing irreversible damage to the heart.
X
Desktop Bottom Promotion