For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಸೇಬು ಬಿಪಿ -ಹೃದಯ ಕಾಯಿಲೆಗಳನ್ನು ದೂರವಿಡುವುದು

By Arshad
|

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಕಾಡುವ ಅಧಿಕ ರಕ್ತದೊತ್ತಡ ಅಥವಾ ಬಿಪಿಯ ಸಮಸ್ಯೆಯು ಹಲವು ತೊಂದರೆಗಳಿಗೆ ಕಾರಣಾಗಬಹುದು ಇದರಲ್ಲಿ ಪ್ರಮುಖವಾದುದು ಹೃದಯದ ಕಾಯಿಲೆಗಳು ಮತ್ತು ಮೂತ್ರಪಿಂಡದ ಕಾಯಿಲೆ. ಆದ್ದರಿಂದ ಬೀಪಿಯನ್ನು 120/80 mm Hg ರ ಮಟ್ಟದಲ್ಲಿಯೇ ಇರಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳಲು ಅತಿ ಅಗತ್ಯ.

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಂತುಲಿತ ಆಹಾರ ಮತ್ತು ಸೂಕ್ತಮಟ್ಟದ ವ್ಯಾಯಾಮ ಎರಡೂ ಅಗತ್ಯ. ಆದರೂ ಅಧಿಕ ರಕ್ತದೊತ್ತಡ ಕೆಲವೊಮ್ಮೆ ತಹಬಂದಿಗೆ ಬರುವುದೇ ಇಲ್ಲ. ಆಗ ವೈದ್ಯರು ಕೆಲವು ಔಷಧಿಗಳನ್ನು ಬರೆದು ನೀಡುತ್ತಾರೆ. ಆದರೆ ಔಷಧಿಗೆ ಗುಲಾಮರಾಗುವ ಮುನ್ನ ನಿಸರ್ಗ ನೀಡಿರುವ ಈ ಅದ್ಭುತ ಔಷಧಿಯನ್ನೇಕೆ ಪ್ರಯತ್ನಿಸಬಾರದು? ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ

Apple

ಇದೇ ಎಲ್ಲರ ನೆಚ್ಚಿನ ಸೇಬು ಹಣ್ಣು. ಸರಿಸುಮಾರು ವರ್ಷವಿಡೀ ಲಭ್ಯವಿರುವ ಈ ಸೇಬು ಹಣ್ಣು ಒಂದು ಔಷಧದ ರೂಪದಲ್ಲಿ ನಿತ್ಯವೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಒಂದು ಕಪ್ ಸೇಬುಹಣ್ಣಿನ ತಿರುಳಿನಲ್ಲಿ 117 mg ಪೊಟ್ಯಾಶಿಯಂ ಇದ್ದು ದೇಹದ ದ್ರವಕ್ಕೆ ಅಗತ್ಯವಾಗಿ ಬೇಕಾದ ಎಲೆಕ್ಟ್ರೋಲೈಟುಗಳ ಕೊರತೆಯನ್ನು ತುಂಬಿಸುತ್ತದೆ. ಇದೊಂದು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರದ ಪ್ರಮಾಣ ಹೆಚ್ಚಿಸುವ ಮೂಲಕ ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತದೆ. ನೈಸರ್ಗಿಕವಾಗಿ ಬಿಪಿ ತಗ್ಗಿಸುವ ವಿಧಾನಗಳು

ಸೇಬಿನಲ್ಲಿರುವ ಪೋಷಕಾಂಶಗಳು ನಮ್ಮ ರಕ್ತದಲ್ಲಿನ ಉಪ್ಪಿನ ಅಂಶ ಅಥವಾ ವಿಶೇಷವಾಗಿ ಸೋಡಿಯಂ ಲವಣದ ಪ್ರಮಾಣವನ್ನು ತಗ್ಗಿಸುತ್ತವೆ. ಕಠಿಣವಾಗಿ ನಿವಾರಿಸಬೇಕಾದ ಸೋಡಿಯಂ ಅನ್ನು ಸುಲಭವಾಗಿ ನಿವಾರಿಸುವ ಮೂಲಕ ದೇಹದಲ್ಲಿ ದ್ರವದ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಸೇಬಿನ ಗ್ಲೈಸೆಮಿಕ್ ಇಂಡೆಕ್ಸ್ ಅಥವಾ ಜೀರ್ಣಗೊಂಡು ರಕ್ತಕ್ಕೆ ಬರುವ ಕೋಷ್ಟಕದ ಸಂಖ್ಯೆ 40, ಅಂದರೆ ತಿಂದ ಬಳಿಕ ಆರಾಮವಾಗಿ ರಕ್ತಕ್ಕೆ ಬರುತ್ತದೆ.

ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸಂಖ್ಯೆಯಾಗಿದ್ದು ಸೇಬು ಮಧುಮೇಹಿಗಳಿಗೆ ತಕ್ಕ ಆಹಾರವಾಗಿದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಗ್ರಹಿಸಿ ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ.

ನಿತ್ಯವೂ ಸೇಬುಹಣ್ಣೊಂದನ್ನು ತಿನ್ನಲು ಕೆಲವು ಸಲಹೆಗಳು
* ಪ್ರತಿದಿನ ನಿಮ್ಮ ಮಧ್ಯಾಹ್ನದ ಊಟದ ಡಬ್ಬಿಯಲ್ಲಿ ಸೇಬುಹಣ್ಣೊಂದನ್ನು ಸೇರಿಸಿ. ಈ ಹಣ್ಣನ್ನು ಆಫೀಸ್‌ನಲ್ಲಿ ಮುಂಜಾನೆಯ ಮತ್ತು ಮಧ್ಯಾಹ್ನದ ಊಟದ ನಡುವೆ ಹಸಿವಾದಾಗ ತಿನ್ನಲು ಅಥವಾ ಉಪಾಹಾರದ ಬಳಿಕ ತಿನ್ನಲು ಉಪಯೋಗಿಸಿ. ಬೆಳಿಗ್ಗೆ ತಿಂದರೇ ಸೇಬುಹಣ್ಣಿನ ಹೆಚ್ಚು ಫಲಗಳನ್ನು ಪಡೆದಂತಾಗುತ್ತದೆ.
* ಇನ್ನೊಂದು ವಿಧಾನವೆಂದರೆ ನಿಮ್ಮ ನಿತ್ಯದ ಸಾಲಾಡ್‌ನೊಂದಿಗೆ ಚಿಕ್ಕ ತುಂಡುಗಳನ್ನಾಗಿಸಿ ಸೇರಿಸಿ ಸೇವಿಸಿ.


* ಸೇಬು ಹಣ್ಣನ್ನು ಇಡಿಯಾಗಿಯೇ ಸೇವಿಸುವುದೇ ಉತ್ತಮ. ಇದರ ರಸ ಅಷ್ಟೊಂದು ಉತ್ತಮವಲ್ಲ. ಮಾರುಕಟ್ಟೆಯಲ್ಲಿ ಸೇಬಿನ ರಸ ಎಂದು ಸಿಗುವ ಜ್ಯೂಸ್ ಸಹಾ ನಿಜವಾದ ಸೇಬಿನ ರಸ ಅಲ್ಲವೇ ಅಲ್ಲ, ಕೇವಲ ಐದೋ ಹತ್ತು ಶೇಖಡಾ ಸೇಬಿನ ರಸವಿದ್ದು ಉಳಿದದ್ದೆಲ್ಲಾ ಕೃತಕ ರುಚಿಕಾರಕ (flavour) ಗಳನ್ನು ಸೇರಿಸಿದ ಜ್ಯೂಸ್ ಕೆಟ್ಟದ್ದನ್ನೇ ಮಾಡುವುದು ಹೆಚ್ಚು.
* ಸೇಬು ಹಣ್ಣನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಜ್ಯೂಸ್ ಮಾಡುವುದೂ ಸರಿಯಲ್ಲ, ಈ ಸಂದರ್ಭದಲ್ಲಿ ಕೆಲವು ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ* ಸೇಬು ಹಣ್ಣನ್ನು ಸಿಪ್ಪೆ ಸಹಿತವೇ ತಿನ್ನಬೇಕು. ಏಕೆಂದರೆ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಫೈಟೋ ಕೆಮಿಕಲ್ಸ್ ಕಣಗಳಿದ್ದು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ.
English summary

An apple a day keeps high blood pressure and heart diseases away!

Hence, it is important to maintain your blood pressure within 120/80 mm Hg. Although diet and exercise form the first line of action when it comes to controlling hypertension, along with medications, including apples in the diet might further improve your condition. Wondering how? Here goes.
X
Desktop Bottom Promotion