For Quick Alerts
ALLOW NOTIFICATIONS  
For Daily Alerts

ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

ಲಘು ಹೃದಯಾಘಾತ ಯಾವುದೇ ಎಚ್ಚರಿಕೆ ನೀಡದೇ ಥಟ್ಟನೇ ಎದುರಾಗಿ ರೋಗಿಯನ್ನು ಕುಸಿದು ಬೀಳುವಂತೆ ಮಾಡುತ್ತದೆ. ಇದಕ್ಕೆ ಸೂಕ್ತ ಕಾರಣವನ್ನು ಒಂದೇ ಕ್ಷಣದಲ್ಲಿ ಹೇಳುವುದು ಸಾಧ್ಯವೇ ಇಲ್ಲ.

By Arshad
|

ಹೃದಯಾಘಾತ ಎಂದರೆ ಚೇತರಿಸಿಕೊಳ್ಳಲು ಸಮಯಾವಕಾಶವೇ ನೀಡದೇ ಮೃತ್ಯುವಿಗೆ ತುತ್ತಾಗುವ ಸಂಭವವಾಗಿದೆ. ಮರಣದ ಅಂಕಿ ಅಂಶಗಳಿಂದ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮರಣವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಮಾತ್ರ ಚಿಂತಾಕ್ರಾಂತವಾಗಿದೆ. ಹೃದಯಾಘಾತದ ಆಘಾತ ಸೌಮ್ಯದಿಂದ ಅತಿ ತೀವ್ರತರದ ನಡುವೆ ಹಲವು ಹಂತಗಳಲ್ಲಿರಬಹುದು. ಇದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ. ನೆನಪಿರಲಿ ಇರುವುದೊಂದೇ ಹೃದಯ, ನಿರ್ಲಕ್ಷಿಸದಿರಿ

Heart Attacks

ಇಂದಿನ ದಿನಗಳಲ್ಲಿ ಚಟುವಟಿಕೆಯ ಕೊರತೆಯ ಕಾರಣ ಎದುರಾಗುವ ಲಘು ಹೃದಯಾಘಾತ ಯಾವುದೇ ಎಚ್ಚರಿಕೆ ನೀಡದೇ ಥಟ್ಟನೇ ಎದುರಾಗಿ ರೋಗಿಯನ್ನು ಕುಸಿದು ಬೀಳುವಂತೆ ಮಾಡುತ್ತದೆ. ಇದಕ್ಕೆ ಸೂಕ್ತ ಕಾರಣವನ್ನು ಒಂದೇ ಕ್ಷಣದಲ್ಲಿ ಹೇಳುವುದು ಸಾಧ್ಯವೇ ಇಲ್ಲ. ಆದ್ದರಿಂದ ವೈದ್ಯರು ಕೆಲವಾರು ಪರೀಕ್ಷೆಗಳನ್ನು ನಡೆಸಿ ಇದಕ್ಕೆ ಕಾರಣವಾದ ನಿಕಟ ಸಾಧ್ಯತೆಯನ್ನು ಕಂಡುಕೊಳ್ಳುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಆಮ್ಲೀಯತೆಯ ಕಾರಣದಿಂದ ಎದುರಾಗುವ ಎದೆಯುರಿ ಎಂದೇ ತಿಳಿದು ರೋಗಿ ನಿರ್ಲಕ್ಷ್ಯ ವಹಿಸುವ ಕಾರಣ ಅಮೂಲ್ಯ ಸಮಯ ವ್ಯರ್ಥವಾಗಿ ಸುಲಭವಾಗಿ ಗುಣವಾಗಬಹುದಾಗಿದ್ದ ತೊಂದರೆ ಉಲ್ಬಣಗೊಂಡು ಇನ್ನೂ ಅಧಿಕ ಪ್ರಬಲತೆಯ ಹೃದಯಾಘಾತ ಎದುರಾಗಲು ಕಾರಣವಾಗುತ್ತದೆ. ಹೃದಯ ಜೋರಾಗಿ ಬಡಿದುಕೊಳ್ಳುವುದು ಒಳ್ಳೆಯದಲ್ಲ

ಲಘು ಹೃದಯಾಘಾತಕ್ಕೆ ಒಳಗಾಗುವ ವ್ಯಕ್ತಿಗಳ ಪಟ್ಟಿಯಲ್ಲಿ ಹಿಂದೊಮ್ಮೆ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳು, ಮಧುಮೇಹದ ರೋಗಿಗಳು, ಮಧ್ಯವಯಸ್ಸು ದಾಟಿದ ಸ್ಥೂಲದೇಹಿಗಳು, ಅರವತ್ತು ದಾಟಿದ ಹಿರಿಯ ನಾಗರಿಕರು ಸೇರಿದ್ದಾರೆ.

ಲಘು ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದರೆ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಸುವ ನಾಳಗಳಲ್ಲಿ ತೊಂದರೆಯಾಗುವುದು. ಲಘು ಅಪಘಾತಕ್ಕೆ ಒಳಗಾದ ಬಳಿಕ ವೈದ್ಯರು ನೀಡುವ ಚಿಕಿತ್ಸೆಯಲ್ಲಿ ಈ ನಾಳಗಳಲ್ಲಿ ರಕ್ತ ಸಂಚಾರ ಮತ್ತೆ ಮೊದಲಿನಂತಾಗಿಸುವುದು ಪ್ರಮುಖವಾಗಿದೆ. ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?

ಆದರೆ ಹೃದಯ ಪೂರ್ವಸ್ಥಿತಿಗೆ ಮರಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಕೆಲವು ಚಟುವಟಿಕೆ, ಆಹಾರ, ಔಷಧಗಳ ಪರಿಣಾಮದಿಂದ ಮತ್ತೆ ಆಘಾತಕ್ಕೆ ಒಳಗಾಗಬಹುದು. ಈ ಸೂಚನೆಯನ್ನು ಹೃದಯ ಸೂಕ್ಷ್ಮವಾಗಿ ಕೆಲವು ಸಂಜ್ಞೆಗಳ ಮೂಲಕ ನೀಡುತ್ತದೆ.

ಹೃದಯದಲ್ಲಿ ಸೂಜಿ ಚುಚ್ಚಿದಂತೆ ಉರಿಯಾಗುವುದು ಪ್ರಮುಖ ಲಕ್ಷಣವಾಗಿದೆ. ಹೆಚ್ಚಿನವರು ಈ ಉರಿಯನ್ನು ಗ್ಯಾಸ್ ನ ಉರಿ ಎಂದೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಎದೆಯ ಹೊರತಾಗಿ ಕೈಗಳು, ಕೆಳದವಡೆಯಲ್ಲಿಯೂ ಎಳೆದಂತೆ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ಸುಸ್ತು, ತಲೆ ತಿರುಗುವಿಕೆ, ಬೆವರುವುದು, ಶ್ವಾಸ ಪಡೆದುಕೊಳ್ಳಲು ಕಷ್ಟಪಡಬೇಕಾಗಿ ಬರುವುದು, ಎದುರಿನ ದೃಶ್ಯ ಓಲಾಡುತ್ತಿರುವಂತೆ ಭಾಸವಾಗುವುದು ಇವುಗಳಲ್ಲಿ ಕನಿಷ್ಠ ಒಂದಾದರೂ ಅನುಭವವಾಗುತ್ತದೆ.

ಅದರಲ್ಲೂ ಮಹಿಳೆಯರು ಈ ಸೂಚನೆಗಳನ್ನು ಪುರುಷರಿಗಿಂತ ಮುಂಚಿತವಾಗಿ ಮತ್ತು ಹೆಚ್ಚಾಗಿ ಪಡೆಯುತ್ತಾರೆ. ಅರವತ್ತೈದು ವರ್ಷ ದಾಟಿದ ಮತ್ತು ಮಧುಮೇಹವಿರುವ ಮಹಿಳೆಯರಿಗೆ ಹೃದಯಾಘಾತ ಯಾವುದೇ ಸೂಚನೆ ನೀಡದೇ ಎದುರಾಗಬಹುದು. ಮಹಿಳೆಯರಿಗೆ ರಜೋನಿವೃತ್ತಿಯ ದಿನಗಳು ದಾಟಿದ ಬಳಿಕ ಲಘು ಹೃದಯಾಘಾತದ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು

ಒಂದು ಸಂಶೋಧನೆಯಲ್ಲಿ ರಜೋನಿವೃತ್ತಿಯ ದಿನಗಳ ಬಳಿಕ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹಗೊಳ್ಳುತ್ತಾ ಹೋಗುತ್ತದೆ, ಇದೇ ಕ್ಯಾಲ್ಸಿಯಂ ಮುಂದಿನ ದಿನಗಳಲ್ಲಿ ಲಘು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದೇ ಸಂಶೋಧನೆಯ ಮೂಲಕ ಲಘು ಹೃದಯಾಘಾತದ ಸಂಭವದ ಸಾಧ್ಯತೆ ಯುವತಿಯರಲ್ಲಿಯೂ ಹಿಂದಿಗಿಂತ ಹೆಚ್ಚಿದೆ ಎಂದು ಕಂಡುಕೊಳ್ಳಲಾಗಿದೆ.

English summary

Facts You Need To Know About Silent Heart Attacks

The first and only sign of the silent heart attack might be sudden death! A study found the fact that death rates from silent attacks are increasing day by day. Silent heart attack signs are not typical as other heart problems. A silent heart attack is very difficult to discover and is generally discovered long after the event via a careful study of the health background, ECG and blood test to get cardiac enzymes.
X
Desktop Bottom Promotion