ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?

By: Arshad
Subscribe to Boldsky

ಹೃದಯ ಬಡಿತದ ಗತಿ ಏರುಪೇರಾಗಲು ದೈಹಿಕವಾಗಿ ಎಷ್ಟು ಕಾರಣಗಳಿವೆಯೋ, ಅಷ್ಟೇ ಮಾನಸಿಕವಾಗಿಯೂ ಇವೆ. ವೇಗವಾಗಿ ಓಡಾಡಿದಾಗ, ಮೆಟ್ಟಿಲೇರಿ ಬಂದಾಗ ಎಲ್ಲಾ ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುವುದರಿಂದ ಹೃದಯ ಹೆಚ್ಚಿನ ಗತಿಯಲ್ಲಿ ರಕ್ತವನ್ನು ಒದಗಿಸಬೇಕಾಗುತ್ತದೆ. ಈ ಏರಿಕೆ ದೈಹಿಕ ಕಾರಣಗಳಾಗಿವೆ. ಇನ್ನು ಮಾನಸಿಕ ಕಾರಣಗಳಾದ ಒತ್ತಡ, ಬೇಗುದಿ, ದುಃಖ, ಹತಾಶೆ ಮೊದಲಾದವುಗಳಿಗೆ ಮೆದುಳಿಗೆ ಹೆಚ್ಚಿನ ರಕ್ತ ಒದಗಿಸಬೇಕಾದ ಕಾರಣವೂ ಹೃದಯದ ಬಡಿತ ಹೆಚ್ಚುಕಡಿಮೆಯಾಗಬಹುದು.

ಆರೋಗ್ಯತಜ್ಞರ ಪ್ರಕಾರ ಹೃದಯಬಡಿತ ಹೆಚ್ಚಿದ್ದರೆ ಉದ್ವೇಗವೂ ಹೆಚ್ಚಿರುತ್ತದೆ. ಹೆಚ್ಚಿನ ಉದ್ವೇಗದಿಂದ ಹಲವು ಪರೋಕ್ಷ ಪರಿಣಾಮಗಳಾಗಬಹುದು. ಬಡಿತ ಹೆಚ್ಚಿದ್ದಾಗ ಹೃದಯಭಾಗದಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಂಡರೆ ಇದು ಹೃದಯಸಂಬಂಧಿ ಕಾಯಿಲೆಯ ಲಕ್ಷಣವೂ ಆಗಿರಬಹುದು.  ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

ನೀವು ಸೇವಿಸಿದ ಕೆಲವು ಆಹಾರಗಳ ಪ್ರಭಾವವೂ ಆಗಿರಬಹುದು, ಅಷ್ಟೇ ಏಕೆ, ನಿಮ್ಮ ಊಟದಲ್ಲಿ ಉಪ್ಪು ಹೆಚ್ಚಾದರೂ ಹೃದಯದೊತ್ತಡ ಹೆಚ್ಚಾಗಿ ಹೃದಯಬಡಿತವೂ ಹೆಚ್ಚಾಗಬಹುದು. ಹಾಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಬಗ್ಗೆ ನಮ್ಮಲ್ಲಿ ಅರಿವು ಮೂಡುವುದು ಅಗತ್ಯವಾಗಿದೆ...

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಹೃದಯದ ಬಡಿತವನ್ನು ಏರಿಸಲು ಮಾನಸಿಕ ಒತ್ತಡ ಮುಖ್ಯ ಕಾರಣವಾಗಿದೆ. ಏಕೆಂದರೆ ಸಾಮಾನ್ಯ ಸ್ಥಿತಿಯಲ್ಲಿಯೇ ಮೆದುಳಿಗೆ ಹೃದಯದಿಂದ ಹೆಚ್ಚಿನ ಪ್ರಮಾಣದ ರಕ್ತ ರವಾನೆಯಾಗುತ್ತಿರುತ್ತದೆ. ಮಾನಸಿಕ ಒತ್ತಡದ ಸಮಯದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ರಕ್ತ ಮೆದುಳಿಗೆ ಅಗತ್ಯವಿದೆ. ಹಾಗಾಗಿ ಹೃದಯಕ್ಕೆ ಅನಿವಾರ್ಯವಾಗಿ ಹೆಚ್ಚಿನ ರಕ್ತವನ್ನು ನೀಡಲೇಬೇಕಾಗುತ್ತದೆ, ಇದಕ್ಕಾಗಿ ಹೃದಯಬಡಿತ ಹೆಚ್ಚಾಗುವುದು ಸಹಜವಾಗಿದೆ. ಭಯ, ಉದ್ವೇಗ, ಆತಂಕ ಮೊದಲಾದ ಮನಸ್ಸಿಗೆ ಸಂಬಂಧಿಸಿದ ಅಂಶಗಳೆಲ್ಲವೂ ಹೃದಯಬಡಿತವನ್ನು ಏರಿಸುತ್ತದೆ. ಈ ಸಮಯದಲ್ಲಿ ಸಾಕಷ್ಟು ಸಾವಧಾನವಾಗಿರುವುದು ಅಗತ್ಯ. ನಿಮ್ಮ ಇಷ್ಟದೇವರ ಸ್ಮರಣೆಯಿಂದ ಮೆದುಳಿನ ಭಾರವನ್ನು ಹೊರಳಿಸುವುದು ಸಾಧ್ಯವಾದುದರಿಂದ ಏರುವ ಹೃದಯಬಡಿತವನ್ನು ನಿಯಂತ್ರಿಸಬಹುದು.

ಜ್ವರ

ಜ್ವರ

ಯಾವುದಾದರೂ ವೈರಸ್ಸು ಅಥವಾ ಬ್ಯಾಕ್ಟೀರಿಯಾ ದೇಹದ ಮೇಲೆ ಧಾಳಿ ನಡೆಸಿದಾಗ ದೇಹದ ರೋಗನಿರೋಧಕ ವ್ಯವಸ್ಥೆ ಶರೀರದ ತಾಪಮಾನವನ್ನು ಹೆಚ್ಚಿಸಿ ಈ ವೈರಸ್ಸುಗಳನ್ನು ಹೊಡೆದೋಡಿಸಲು ರಣರಂಗವನ್ನು ಸಿದ್ಧಪಡಿಸುತ್ತದೆ. ಇದೇ ಜ್ವರ. ಈ ಕಾರ್ಯಕ್ಕೆ ಹೆಚ್ಚಿನ ಶಕ್ತಿ ಅಗತ್ಯವಾದುದರಿಂದ, ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವೂ ಇರುತ್ತದೆ. ಇದು ಹೃದಯದ ಬಡಿತದ ಏರಿಕೆಗೆ ಕಾರಣವಾಗುತ್ತದೆ. ವಿವಿಧ ರೀತಿಯ ಸೋಂಕುಗಳಿಗೂ ದೇಹ ಇದೇ ರೀತಿಯಾಗಿ ಸ್ಪಂದಿಸುತ್ತದೆ. ಜ್ವರಕ್ಕೆ ಕಾರಣವಾಗ ಬ್ಯಾಕ್ಟೀರಿಯಾಗಳನ್ನು ಸದೆಬಡಿದಂತೆ ಹೃದಯಬಡಿತ ಸಾಮಾನ್ಯಸ್ಥಿತಿಗೆ ಬರುತ್ತದೆ.

ಪಾರ್ಟಿ ಡ್ರಗ್ಸ್

ಪಾರ್ಟಿ ಡ್ರಗ್ಸ್

ರಾತ್ರಿಯಿಡೀ ನಡೆಯುವ ಕುಣಿತ ಇರುವ ಕೂಟಗಳಲ್ಲಿ ತಮ್ಮ ಪ್ರದರ್ಶನ ಉತ್ತಮವಾಗಿರಬೇಕೆಂದು ಕೆಲವರು ಕೆಲವು ಔಷಧಿಗಳನ್ನು ಸೇವಿಸುತ್ತಾರೆ. ಇವುಗಳಲ್ಲಿ ಸಾಮಾನ್ಯವಾದವು Amyl nitrates (butyl nitrate, poppers, rush, hardware, locker room, aroma of man) Ketamine hydrochloride (Ketalar, special K, vitamin K, cat Valium) MDMA ಮೊದಲಾದವು. ಇವುಗಳ ಸೇವನೆಯಿಂದ ಕುಣಿತ ಭರ್ಜರಿಯಾಗಬಹುದೇ ವಿನಃ ಆರೋಗ್ಯವಲ್ಲ. ಇವುಗಳ ಸೇವನೆ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ಹೃದಯಬಡಿತವನ್ನೂ ಏರಿಸುತ್ತವೆ.

ವ್ಯಾಯಾಮಗಳು

ವ್ಯಾಯಾಮಗಳು

ಸ್ವಾಭಾವಿಕವಾಗಿ ಯಾವುದೇ ಶಾರೀರಿಕ ವ್ಯಾಯಾಮ ಮಾಡಿದಾಗ ಹೃದಯಬಡಿತ ಏರುತ್ತದೆ. ಆದರೆ ಇಂದು ವ್ಯಾಯಾಮ ಮಾಡುವ ಉದ್ದೇಶ ಆರೋಗ್ಯಕರ ಶರೀರ ಹೊಂದುವುದಕ್ಕಿಂತ ಹೆಚ್ಚಾಗಿ ಸ್ನಾಯುಗಳ ಕಟ್ಟುಮಸ್ತುತನವನ್ನು ಪ್ರದರ್ಶಿಸುವುದೇ ಆಗಿದೆ. ಇದಕ್ಕಾಗಿ ಕೆಲವು ಸ್ನಾಯುಗಳ ಮೇಲೆ ಅತೀವ ಒತ್ತಡ ನೀಡುವಂತೆ ಸತತವಾಗಿ ವ್ಯಾಯಾಮ ಮಾಡುವುದನ್ನೇ ಇಂದಿನ ಜಿಮ್ ಗಳು ಮೂಲಮಂತ್ರವಾಗಿಸಿವೆ. ಈ ಪತಿ ಎಷ್ಟು ಹೆಚ್ಚುತ್ತದೆಯೋ ಅಷ್ಟೇ ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹೃದಯಬಡಿತವೂ ಹೆಚ್ಚಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳು

ಹೃದಯ ಸಂಬಂಧಿ ಕಾಯಿಲೆಗಳು

ಯಾವುದೇ ಹೃದಯ ಸಂಬಂಧಿ ಕಾಯಿಲೆ ಹೃದಯಬಡಿತದ ಮೇಲೆ ನೇರಪರಿಣಾಮ ಬೀರುತ್ತದೆ. ಇದು ಹಲವು ಪ್ರತ್ಯಕ್ಷ ಮತ್ತು ಪರೋಕ್ಷ ತೊಂದರೆಗಳಿಗೆ ಕಾರಣವಾಗುತ್ತದೆ. ವಿವಿಧ ಪರೀಕ್ಷೆಗಳ ಮೂಲಕ ಮಾತ್ರ ಇದರ ಕಾರಣವನ್ನು ಕಂಡುಹಿಡಿಯಬಹುದೇ ವಿನಃ ಅಂದಾಜಿಸುವುದು ಸಾಧ್ಯವಿಲ್ಲ. ಆದ್ದರಿಂದ ಹೃದಯರೋಗಿಗಳು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಮೀರಿ ಔಷದಿ, ಆಹಾರ ಸೇವಿಸುವುದು,ಶಾರೀರಿಕ ದಂಡನೆ, ಮಾನಸಿಕ ಉದ್ವೇಗಕ್ಕೊಳಗಾಗುವುದನ್ನು ಮಾಡಬಾರದು.

ಇತರ ಕಾರಣಗಳು

ಇತರ ಕಾರಣಗಳು

ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹೃದಯಬಡಿತ ಏರಲು ಇನ್ನೊಂದು ಕಾರಣ, ನಿಮ್ಮ ಆಹಾರದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರಗಳಿವೆಯೋ ಪರಿಶೀಲಿಸಿ. ಇಂದೇ ಆಗಬೇಕೆಂದೇನಿಲ್ಲ, ಎಷ್ಟೋ ವರ್ಷಗಳ ಹಿಂದೆ ಸೇವಿಸಿದ್ದ ಆಹಾರದ ಮೂಲಕ ರಕ್ತ ಪ್ರವೇಶಿಸಿದ್ದ ಕೆಟ್ಟ ಕೊಲೆಸ್ಟ್ರಾಲ್ (LDL -Low density Lipoproteins) ಸಹಾ ನಿಧಾನಕ್ಕೆ ಸಂಗ್ರಹವಾಗುತ್ತಾ ಒಂದು ಹಂತದಲ್ಲಿ ನರಗಳ ಒಳಭಾಗವನ್ನು ಸಾಕಷ್ಟು ಕಿರಿದಾಗಿಸಿರುತ್ತವೆ. ಇದರ ಮೂಲಕ ರಕ್ತವನ್ನು ದೂಡಲು ಹೃದಯಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಅದರಲ್ಲೂ ಪ್ರಾಣಿಗಳ ಮೆದುಳಿನ ಖಾದ್ಯ (ಭೇಜಾ ಫ್ರೈ) ಸೇವಿಸಿರುವವರ ರಕ್ತದಲ್ಲಿ ಈ ಪ್ರಮಾಣ ಅತ್ಯಧಿಕವಾಗಿರುತ್ತದೆ. ಆಹಾರದಲ್ಲಿ ಉಪ್ಪಿನಂಶ ಅತಿ ಹೆಚ್ಚಿರುವುದು ಇನ್ನೊಂದು ಕಾರಣ. ಸ್ಥೂಲಕಾಯ, ಬಟ್ಟೆಗಳನ್ನು ಅತಿ ಬಿಗಿಯಾಗಿ ತೊಡುವುದು, ಶರೀರದಲ್ಲಿ ಗ್ಲೈಕೋಜೆನ್ ಪ್ರಮಾಣ ಕಡಿಮೆ ಇರುವುದು, ಬಹಳ ಹೊತ್ತು ನೀರು ಕುಡಿಯದೇ ಇರುವುದು, ಗರ್ಭಾವಸ್ಥೆಯಲ್ಲಿ, ಬಾಣಂತಿ ದಿನಗಳಲ್ಲಿ ರಕ್ತದೊತ್ತಡ ಏರುಪೇರಾಗಲು ಕಾರಣಗಳಾಗಿವೆ.

English summary

Factors That Affect Your Heart Rate

Understanding the factors that affect your heart rate is important in today's stressful world. If your heart rate is high, your risk of developing certain types of heart problems might increase. Also, a higher heart rate signifies stress within your system. When your body is in a state of rest, your heart is supposed to beat at a normal rate.
Please Wait while comments are loading...
Subscribe Newsletter