For Quick Alerts
ALLOW NOTIFICATIONS  
For Daily Alerts

ಹೃದ್ರೋಗ ಬರದಂತೆ ತಡೆಯಲು ಟಿಪ್ಸ್

|

ಭಾರದತಲ್ಲಿ ಹೃದ್ರೋಗಿಗಳ ಸಂಖ್ಯೆಯು 10 ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈ ರೀತಿ ಹೃದ್ರೋಗ ಹೆಚ್ಚಾಗಲು ಕಾರಣವೇನು? ಉತ್ತರ ಮಾತ್ರ ತುಂಬಾ ಸರಳ, ನಮ್ಮ ಜೀವನ ಶೈಲಿ.

ಈಗೆಲ್ಲಾ ನಾವು ಫಾಸ್ಟ್ ಫುಡ್ಸ್ ಇಷ್ಟಪಡುತ್ತೇವೆ. ಅದರಿಂದ ದೇಹದ ಕೊಲೆಸ್ಟ್ರಾಲ್ ಹೆಚ್ಚಾಗುವುದಲ್ಲದೇ ಮತ್ಯಾವುದೇ ಪ್ರಯೋಜನವಿಲ್ಲ. ಕೆಲವರಿಗೆ ವ್ಯಾಯಾಮ ಮಾಡಲು ಉದಾಸೀನ, ಮತ್ತೆ ಕೆಲವರು ವ್ಯಾಯಾಮ ಮಾಡಲು ಪುರುಸೊತ್ತು ಇಲ್ಲವೆಂದು ದೈಹಿಕ ವ್ಯಾಯಾಮ ಮಾಡುವುದಿಲ್ಲ, ಇದರ ಪರಿಣಾಮ ದೇಹದ ಮೇಲೆ ಬೀರುತ್ತದೆ.

ನಗರ ಪ್ರದೇಶದಲ್ಲಿ ಹೆಚ್ಚಿನವರದು ಒಂದು ಕಡೆ ಕೂತು ಮಾಡುವ ಕೆಲಸವಾಗಿರುತ್ತದೆ. ಈ ರೀತಿ ಕೆಲಸ ಮಾಡುವವರಿಗೆ ದೈಹಿಕ ವ್ಯಾಯಾಮ ಅವಶ್ಯಕ. ಆಹಾರಕ್ರಮದ ಬಗ್ಗೆ ಎಚ್ಚರಿಕೆವಹಿಸಿಬೇಕು.

ಹೃದಯದ ಆರೋಗ್ಯವನ್ನು ಕಾಪಾಡುವ ಸಾಮರ್ಥ್ಯ ಈ ಕೆಳಗಿನ ಆಹಾರಗಳಿಗಿವೆ:

ಕಪ್ಪು ಬೀನ್ಸ್

ಕಪ್ಪು ಬೀನ್ಸ್

ಇದರಲ್ಲಿ ಫೋಲೆಟ್, antioxidants, ಮ್ಯಾಗ್ನಿಷಿಯಂ ಹಾಗೂ ನಾರಿನಂಶ ಅಧಿಕವಿದೆ. ಇದು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ.

ರೆಡ್ ವೈನ್

ರೆಡ್ ವೈನ್

ಪ್ರತೀದಿನ ಸ್ವಲ್ಪ ರೆಡ್ ವೈನ್ ಕುಡಿದರೆ ರಕ್ತ ಶುದ್ದೀಯಾಗಿರುತ್ತದೆ, ಹೃದಯದ ಸ್ವಾಸ್ಥ್ಯವೂ ಹೆಚ್ಚಾಗುವುದು, ನೆನೆಪಿಡಿ ಮಿತಿ ಮೀರಿ ಕುಡಿದರೆ ರೆಡ್ ವೈನ್ ಕೂಡ ಒಳ್ಳೆಯದಲ್ಲ.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಹೃದ್ರೋಗಿ ಬಳಸಬುದಾದ ಸೂಕ್ತವಾದ ಎಣ್ಣೆಯೆಂದರೆ ಆಲೀವ್ ಎಣ್ಣೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಬಾಯಿಗೆ ರುಚಿಯನ್ನೂ ನೀಡುತ್ತದೆ.

ವಾಲ್ ನಟ್ಸ್

ವಾಲ್ ನಟ್ಸ್

ಪ್ರತೀದಿನ ಸ್ವಲ್ಪ ವಾಲ್ ನೆಟ್ಸ್ ತಿಂದರೆ ಹೃದಯದ ಆರೋಗ್ಯ ಹೆಚ್ಚಾಗುವುದು.

 ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾದರೆ ಮಧುಮೇಹ ಬರುವ ಸಾಧ್ಯತೆಯೂ ಕಡಿಮೆಯಾಗುವುದು.

 ಟೋಫು

ಟೋಫು

ಟೋಫು ನಲ್ಲಿ ಹೃದಯದ ಆರೋಗ್ಯಕ್ಕೆ ಅಗ್ಯತವಿರುವ ಖನಿಜಾಂಶವಿದೆ, ಅಲ್ಲದೆ ಇದು ಹೃದಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸು ಕೂಡ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳು ಕೂಡ ಮಿತಿಯಲ್ಲಿ ತಿನ್ನಬಹುದು. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನೆ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

 ಕಿತ್ತಳೆ

ಕಿತ್ತಳೆ

ಪ್ರತೀದಿನ ಒಂದು ಕಿತ್ತಳೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಇದ್ದು, ದೇಹದಲ್ಲಿ ಬೇಡದ ಕೊಬ್ಬಿನಂಶ ಶೇಖರವಾಗುವುದನ್ನು ತಡೆಯುತ್ತದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಸಿಹಿಯಾಗಿದ್ದರೂ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ, ಇದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು.

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸು ಕೂಡ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳು ಕೂಡ ಮಿತಿಯಲ್ಲಿ ತಿನ್ನಬಹುದು. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನೆ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

ಅಗಸದ ಬೀಜ(flaxseed)

ಅಗಸದ ಬೀಜ(flaxseed)

ಅಗಸದ ಬೀಜದಲ್ಲಿ ಒಮೆಗಾ 3 ಕೊಬ್ಬಿನಂಶವಿದೆ, ಇದನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

 ಓಟ್ಸ್

ಓಟ್ಸ್

ಓಟ್ಸ್ ತಿಂದರೆ ಸಣ್ಣಗಾಗುವಿರಿ ಮಾತ್ರವಲ್ಲ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಕಾಫಿ

ಕಾಫಿ

ಕಾಫಿಯಲ್ಲಿರುವ ಕೆಫೀನ್ ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ದಿನದಲ್ಲಿ 2 ಲೋಟಕ್ಕಿಂತ ಹೆಚ್ಚಿನ ಕಾಫಿ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಚೆರ್ರಿ

ಚೆರ್ರಿ

ಚೆರ್ರಿ ಹಣ್ಣಿನಲ್ಲಿರುವ antioxidants ರಕ್ತ ಕಣಗಳಿಗೆ ಹಾನಿಯಾಗದಂತೆ ಕಾಪಾಡಿ ಹೈದಯ ಆರೋಗ್ಯವಾಗಿರುವಂತೆ ಮಾಡುತ್ತದೆ.

English summary

Food For Heart Health | Tips For Health | ಹೃದಯದ ಆರೋಗ್ಯ ಹೆಚ್ಚಿಸುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

The top foods for heart health go beyond cholesterol busters to edamame, nuts, salmon, even coffee, in this list from boldsky. These foods can save your heart. So, do include them in your diet.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more