For Quick Alerts
ALLOW NOTIFICATIONS  
For Daily Alerts

ಗ್ಯಾಸ್‌, ಹೊಟ್ಟೆ ಉಬ್ಬುವಿಕೆ, ಕಾಲು ನೋವು ಹೋಗಲಾಡಿಸುವ ಸರಳ ಆಸನಗಳಿವು

|

ವರ್ಕ್‌ ಫ್ರಂ ಹೋಂ, ಕೊರೊನಾ ಲಾಕ್‌ ಡೌನ್‌ ಇವೆಲ್ಲಾ ಬಹುತೇಕರಲ್ಲಿ ದೈಹಿಕ ಚಟುವಟಿಕೆ ಕಡಿಮೆ ಮಾಡಿದೆ. ಕೊರೊನಾವೈರಸ್‌ ಎರಡನೇ ಅಲೆಯಲ್ಲಿ ತುಂಬಾವೇ ವೇಗವಾಗಿ ಸೋಂಕು ಹರಡುತ್ತಿರುವುದರಿಮದ ಈ ದಿನಗಳಲ್ಲಿ ಜಿಮ್‌, ವಾಕ್‌ ಅಂತ ಹೊರಗಡೆ ಅಡ್ಡಾಡುವುದು ಸುರಕ್ಷಿತವಲ್ಲ. ಅಲ್ಲದೆ ಸರಕಾರವೂ ಜನತಾ ಕರ್ಪ್ಯೂ ಹಾಕಿರುವುದರಿಂದ ನಿಯಮ ಮೀರಿ ಹೊರಗಡೆ ಹೋಗಲೂ ಬಾರದು.

ಆದರೆ ಮನೆಯ ಒಳಗಡೆಯೇ ಇರುವುದು ಆರೋಗ್ಯಕ್ಕೆ ಒಳ್ಳೆಯದೇ? ಖಂಡಿತ ಅಲ್ಲ. ಕಂಪ್ಯೂಟರ್ ಮುಂದೆ ತುಂಬಾ ಹೊತ್ತು ಕೂರುವುದು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದು, ಯಾವುದೇ ದೈಹಿಕ ವ್ಯಾಯಾಮ ಇಲ್ಲದೇ ಇರುವುದು ಇವೆಲ್ಲಾ ದೇಹಕ್ಕೆ ಕಾಯಿಲೆಯನ್ನು ತರುತ್ತದೆ.

ನೀವು ಈಗಾಗಲೇ ಗಮನಿಸಿರಬಹುದು ತುಂಬಾ ಹೊತ್ತು ಕೂತು ಕೆಲಸ ಮಾಡುತ್ತಿರುವುದರಿಂದ ಕಾಲುಗಳಲ್ಲಿ ನೋವು, ಗ್ಯಾಸ್‌ ಸಮಸ್ಯೆ , ಮೈಗ್ರೇನ್, ಸೊಂಟ ನೋವು ಮುಂತಾದ ಸಮಸ್ಯೆ ಕಂಡು ಬಂದಿರುತ್ತದೆ.

ತುಂಬಾ ಹೊತ್ತು ಕೂತಲ್ಲಿಯೇ ಕೂರುವುದರಿಂದ ಅಜೀರ್ಣ ಕೂಡ ಉಂಟಾಗುವುದು, ಇವೆಲ್ಲದಕ್ಕೆ ರುಜುತಾ ದ್ವಿವೇಕರ್‌ ಯಾವ ಆಸನ ಪರಿಣಾಮಕಾರಿ ಎಂದು ಹೇಳಿದ್ದಾರೆ. ರುಜುತಾ ದ್ವಿವೇಕರ್ ಒಬ್ಬ ಪ್ರಸಿದ್ಧ ಸೆಲೆಬ್ರಿಟಿ ಡಯಟಿಷಿಯನ್. ಕರೀನಾ ಕಪೂರ್‌ ಸೇರಿ ಹಲವಾರು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಇವರೇ ಡಯಟಿಷಿಯನ್. ಇನ್‌ಸ್ಟ್ರಾಗ್ರಾಂನಲ್ಲಿ ಸಾಕಷ್ಟು ಉಪಯುಕ್ತ ವೀಡಿಯೋ ಹಂಚುವ ಇವರು ಇದೀಗ ಯಾವ ೩ ಆಸನ ತುಂಬಾ ಹೊತ್ತು ಕೂತು ಕೆಲಸ ಮಾಡುವವರಿಗೆ ಒಳ್ಳೆಯದು ಎಂಬುವುದಾಗಿ ತಿಳಿಸಿಕೊಟ್ಟಿದ್ದಾರೆ.

1. ವಿಪರೀತ ಕರಣಿ ಆಸನ

1. ವಿಪರೀತ ಕರಣಿ ಆಸನ

ಯೋಗದಲ್ಲಿ ಈ ಆಸನದ ಪ್ರಯೋಜನ ತುಂಬಾನೇ ಇದೆ. ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕಾರಿ ಅಲ್ಲದೆ ಕಾಲು ನೋವು, ಸೊಂಟ ನೋವು ಈ ರೀತಿಯ ಸಮಸ್ಯೆ ನಿವಾರಣೆಗೆ ಕೂಡ ಸಹಕಾರಿ.

ಈ ಆಸನವನ್ನು ಮಾಡುವುದು ಸುಲಭ. ನೀವು ಮ್ಯಾಟ್‌ ಮೇಲೆ ಮಲಗಿ ಚಿತ್ರದಲ್ಲಿ ತೋರಿಸಿರುವಂತೆ ಎರಡೂ ಕಾಲುಗಳನ್ನು ಗೋಡೆಯ ಮೇಲೆ ಇಡಿ. ಕೈಗಳನ್ನು ದೇಹದ ಪಕ್ಕದಲ್ಲಿ ಅಥವಾ ಹೊಟ್ಟೆಯ ಮೇಲೆ ಇಡಿ. ಈ ರೀತಿ 5 ನಿಮಿಷ ಇರಿ.

2. ವಿಪರೀಕ ಕರಣಿಯಲ್ಲ ಕಾಲುಗಳನ್ನು ಅಗಲ ಮಾಡುವುದು

2. ವಿಪರೀಕ ಕರಣಿಯಲ್ಲ ಕಾಲುಗಳನ್ನು ಅಗಲ ಮಾಡುವುದು

ಈ ಆಸನದಲ್ಲಿ ನೀವು ಕಾಲುಗಳನ್ನು ಅಗಲ ಮಾಡಬೇಕು, ಎಷ್ಟು ಸಾಧ್ಯವೋ ಷ್ಟು ಮಾಡಿ, ತೊಡೆ ಸಂದುಗಳಲ್ಲಿ ಸ್ವಲ್ಪ ನೋವು ಬರುತ್ತದೆ, ಅಷ್ಟು ಅಗಲ ಮಾಡ ಒಂದೆರಡು ನಿಮಿಷ ಇರಿ.

3. ವಿಪರೀತ ಕರಣಿಯಲ್ಲಿ ಸುಪ್ತ ಬದ್ಧ ಕೋನಾಸನ

3. ವಿಪರೀತ ಕರಣಿಯಲ್ಲಿ ಸುಪ್ತ ಬದ್ಧ ಕೋನಾಸನ

ನೀವು 2ನೇ ಆಸ ಮಾಡಿದ ಬಳಿಕ ನಿಧಾನವಾಗಿ ಕಾಲುಗಳನ್ನು ಜೋಡಿಸಿ, ನಂತರ ಸುಪ್ತ ಬದ್ಧ ಆಕಾರಕ್ಕೆ ತನ್ನಿ. ಈ ಭಂಗಿಯಲ್ಲಿ 2-3 ನಿಮಿಷ ಇರಿ.

ನಂತರ ನಿಧಾನಕ್ಕೆ ಕಾಲುಗಳನ್ನು ನೀಡಿ, ನಂತರ ಮಡಚಿ ಎಡಕ್ಕೆ ತಿರುಗಿ ಕಾಲುಗಳನ್ನು ಎದೆಗೆ ಒತ್ತ ಹಿಡಿದು 2 ನಿಮಿಷ ವಿಶ್ರಾಂತಿ ತೆಗೆಯಿರಿ, ನಾವು ಕಾಲುಗಳನ್ನು ಮಡಚಿ ಒಂದು ಬದಿ ತಿರುಗಿ ಮಲಗುತ್ತೇವೆ ಅಲ್ಲ ಹಾಗೇ, ನಂತರ ನಿಧಾನಕ್ಕೆ ಎದ್ದು ಕುಳಿತುಕೊಳ್ಳಿ.

ನೀವು ಈ ರೀತಿ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗುತ್ತದೆ, ತುಂಬಾ ಹೊತ್ತು ಕೂತು ಕೆಲಸ ಮಾಡುವುದರಿಂದ ಉಂಟಾದ ಕಾಲು ನೋವು, ಸೊಂಟ ನೋವು ಕಡಿಮೆಯಾಗುವುದು.

ಸೂಚನೆ:

ಸೂಚನೆ:

ಈ ಆಸನವನ್ನು ಮುಟ್ಟಿನ ಸಮಯದಲ್ಲಿ ಹೊರತು ಪಡಿಸಿ ಯಾವಾಗ ಬೇಕಾದರೂ ಮಾಡಬಹುದು, ಮುಟ್ಟಿನ ಸಮಯದಲ್ಲಿ ಕಾಲುಗಳನ್ನು ಮೇಲಕ್ಕೆ ಎತ್ತಿ ಮಾಡುವ ಯಾವುದೇ ಆಸನ ಮಾಡಬಾರದು.

English summary

Yoga Poses To Ease Gas And Bloating in Kannada

Yoga Poses to Ease Gas and Bloating, have a look,
X
Desktop Bottom Promotion