For Quick Alerts
ALLOW NOTIFICATIONS  
For Daily Alerts

ಯೋಗ ಮಾಡುವಾಗ ಮಾಡುವ ಈ ಸಣ್ಣ ತಪ್ಪುಗಳಿಂದ ಆರೋಗ್ಯಕ್ಕೆ ಹಾನಿ, ಹುಷಾರ್!

|

'ಯೋಗ ಮಾಡುವವನಿಗೆ ರೋಗವಿಲ್ಲ' ಎಂಬ ಗಾದೆ ಮಾತಿದೆ.... ಯಾರು ಪ್ರತಿದಿನ ಅರ್ಧಗಂಟೆ ಯೋಗ ಮಾಡುತ್ತಿದ್ದರೋ ಅವರಿಗೆ ಯೋಗದ ಪ್ರಯೋಜನದ ಬಗ್ಗೆ ಖಂಡಿತ ಗೊತ್ತಿರುತ್ತದೆ. ಏಕೆಂದರೆ ಯೋಗ ಎಂಬುವುದು ಅದು ಜಸ್ಟ್‌ ಒಂದು ವ್ಯಾಯಾಮವಲ್ಲ, ಸರ್ವ ರೋಗಗಳಿಗೆ ರಾಮಬಾಣ.

ಹೌದು ಯೋಗದಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಎಷ್ಟೋ ಆರೊಗ್ಯ ಸಮಸ್ಯೆಗಳನ್ನು ಇದರಿಂದ ಗುಣಪಡಿಸಬಹುದಾಗಿದೆ. ಇದನ್ನು ಮಾಡುವುದರಿಂದ ಮಾನಸಿಕ ಆರೋಗ್ಯ ಹೆಚ್ಚುವುದು, ಮನಸ್ಸಿನಲ್ಲಿರುವ ಎಷ್ಟೋ ಗೊಂದಲುಗಳು ನಿವಾರಣೆಯಾಗುತ್ತೆ, ನಮ್ಮ ಗುರಿಯ ಕಡೆ ಫೋಕಸ್ ಮಾಡಲು ಸಾಧ್ಯವಾಗುವುದು.

ಯೋಗವನ್ನು ಪರಿಣಿತರ ಬಳಿಯಿಂದ ಕಲಿಯುವುದು ಒಳ್ಳೆಯದು. ಕೆಲವರು ಆನ್‌ಲೈನ್‌ ಮೂಲಕ ಕಲಿಯಲು ಹೋಗುತ್ತಾರೆ, ಆದರೆ ಯೋಗ ಮಾಡುವಾಗ ಮಾಡುವ ಕೆಲ ತಪ್ಪುಗಳಿಂದ ಆರೋಗ್ಯ ಹಾಳಾಗುತ್ತೆ, ಹುಷಾರ್‌! ಯೋಗ ಮಾಡುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಉಸಿರನ್ನು ತುಂಬಾ ಹೊತ್ತು ಬಿಗಿ ಹಿಡಿದುಕೊಳ್ಳುವುದು

ಉಸಿರನ್ನು ತುಂಬಾ ಹೊತ್ತು ಬಿಗಿ ಹಿಡಿದುಕೊಳ್ಳುವುದು

ಯೋಗದಲ್ಲಿ ಉಸಿರಾಟದ ನಿಯಮಗಳು ತುಂಬಾನೇ ಮುಖ್ಯವಾಗಿದೆ, ಉಸಿರನ್ನು ಹೇಗೆ ತೆಗೆದುಕೊಳ್ಳಬೇಕು, ಹೇಗೆ ಇಡಬೇಕು, ಯಾವಾಗ ದೀರ್ಘ ಉಸಿರು ತೆಗೆದು-ನಿಧಾನಕ್ಕೆ ಬಿಡಬೇಕು, ಯಾವಾಗ ಸಹಜವಾಗಿ ಉಸಿರಾಡಬೇಕು ಈ ಎಲ್ಲಾ ವಿಷಯಗಳನ್ನು ಮೊದಲು ತಿಳಿದುಕೊಳ್ಳಬೇಕು.

ನೀವು ಸ್ವಂತ ಕಲಿಯಲು ಹೋದರೆ ಇದೆಲ್ಲಾ ಗೊತ್ತಾಗುವುದಿಲ್ಲ, ಉಸಿರನ್ನು ತುಂಬಾ ಬಿಗಿ ಹಿಡಿಯಲು ಪ್ರಯತ್ನಿಸಬೇಡಿ, ಇದರಿಂದ ದೇಹಕ್ಕೆ ಹಾನಿ... ಇಷ್ಟು ಕೌಂಟ್‌ ಅಂತ ಇರುತ್ತೆ ಅದನ್ನು ನಿಮಗೆ ಯೋಗ ಎಕ್ಸ್‌ಪರ್ಟ್ ಅಷ್ಟೇ ತಿಳಿಸಲ ಸಾಧ್ಯ.

ನೆಲದ ಮೇಲೆ ಕೈಗಳನ್ನು ಸರಿಯಾಗಿ ಇಡದಿರುವುದು

ನೆಲದ ಮೇಲೆ ಕೈಗಳನ್ನು ಸರಿಯಾಗಿ ಇಡದಿರುವುದು

ಹೌದು ಯೋಗ ಮಾಡುವಾಗ ಕೈಗಳನ್ನು ಸರಿಯಾಗಿ ಇಡಬೇಕು, ಉದಾಹರಣೆಗೆ ದಂಡಾಸನ ಇದರಲ್ಲಿ ಕೈಗಳನ್ನು ನೆಲಕ್ಕೆ ಸರಿಯಾಗಿ ಊರಬೇಕು, ಇಲ್ಲದಿದ್ದರೆ ಭುಜದ ಮೇಲೆ ಒತ್ತಡ ಬಿದ್ದು ಭುಜಕ್ಕೆ ಹಾನಿಯಾಗುತ್ತೆ. ಇನ್ನು ಸರಳವಾಗಿ ಹೇಳಬೇಕೆಂದರೆ ಶವಾಸನ, ತುಂಬಾ ಸರಳವಾದ ಆಸನ ಇದು, ಆದರೆ ಇದರ ಪ್ರಯೋಜನಗಳು ಅನೇಕ ಇದೆ, ಇದರಲ್ಲಿ ನಿಮ್ಮ ಅಂಗೈ ಮೇಲ್ಭಾಗ ಇರಬೇಕು. ಹೀಗೆ ಯೋಗಸಾನದಲ್ಲಿ ಕೈಗಳನ್ನು ಇಡುವ ರೀತಿ ಕೂಡ ಮುಖ್ಯವಾಗಿರುತ್ತೆ.

ಪಾದಗಳನ್ನು ಮಂಡಿ ಮೇಲೆ ಅಥವಾ ತೊಡೆ ಮೇಲೆ ಇಡುವಾಗ ತಪ್ಪುಗಳು ಆಗದಿರಲಿ

ಪಾದಗಳನ್ನು ಮಂಡಿ ಮೇಲೆ ಅಥವಾ ತೊಡೆ ಮೇಲೆ ಇಡುವಾಗ ತಪ್ಪುಗಳು ಆಗದಿರಲಿ

ಕೆಲವೊಂದು ಯೋಗ ಪೋಸ್‌ಗಳಲ್ಲಿ ಇದು ತುಂಬಾನೇ ಮುಖ್ಯವಾಗಿರುತ್ತೆ. ಉದಾಹರಣೆಗೆ ವೃಕ್ಷಾಸನ. ಅದರಲ್ಲಿ ಋಷಿ ಮುನಿಗಳು ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುವ ಚಿತ್ರ ನೋಡಿರುತ್ತೀರಾ ಅಲ್ವಾ? ಆ ರೀತಿಯಲ್ಲಿ ನಿಲ್ಲಬೇಕು. ಅಂದರೆ ಒಂದು ಕಾಲಿನಲ್ಲಿ ನಿಂತು ಇನ್ನೊಂದು ಕಾಲನ್ನು ಮಂಡಿಯ ಮೇಲೆ, ತೊಡೆ ಭಾಗದಲ್ಲಿ ಇಡಬೇಕು. ತುಂಬಾ ಜನ ಮಂಡಿ ಮೇಲೆ ಇಡುವುದು ಅಥವಾ ತುಂಬಾ ಹಿಂದೆಕ್ಕೆ ಕಾಲು ತಂದು ಇಡುವುದು ಮಾಡುತ್ತಾರೆ. ಹೀಗೆ ಮಾಡಿದರೆ ಕಾಲಿನ ಮಂಡಿಗೆ, ತೊಡೆಯ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ.

ದಂಡಾಸನದಲ್ಲಿ ಹಿಂಬದಿ ಕೆಳಭಾಗಕ್ಕೆ ತರುವುದು

ದಂಡಾಸನದಲ್ಲಿ ಹಿಂಬದಿ ಕೆಳಭಾಗಕ್ಕೆ ತರುವುದು

ಚದುರಂಗ ದಂಡಾಸನ ಯೋಗದ ಪ್ರಮುಖ ಆಸನಗಳಲ್ಲಿ ಒಂದಾಗಿದೆ. ಇದರಿಂದ ದೇಹದ ಸ್ಟಮಿನಾ ಹೆಚ್ಚುವುದು, ಪ್ಲೆಕ್ಸಿಬಿಲಿಟಿ ಹೆಚ್ಚುವುದು, ಚಯಪಚಯ ಕ್ರಿಯೆ ಉತ್ತಮವಾಗುತ್ತೆ, ಮಾನಸಿಕ ಆರೋಗ್ಯ ಹೆಚ್ಚುವುದು, ಮೈ ತೂಕ ಕಡಿಮೆಯಾಗುವುದು ಹೀಗೆ ಅನೇಕ ಪ್ರಯೋಜನಗಳಿವೆ. ಆದರೆ ಭಂಗಿಗಳು ಸರಿಯಾದ ರೀತಿಯಲ್ಲಿ ಇರಬೇಕು ಅಷ್ಟೇ, ಚದುರಂಗ ಡಂಡಾಸನದಲ್ಲಿ ಹಿಂಬದಿ ತುಂಬಾ ಮೇಲಕ್ಕೆ ಎತ್ತುವುದು, ತುಂಬಾ ಕೆಳಗಡೆ ತರುವುದು ಮಾಡಬಾರದು.

English summary

Yoga Mistakes That Increase Your Risk of Injury in kannada

Yoga Mistakes That Increase Your Risk of Injury in kannada, read on...
X
Desktop Bottom Promotion