For Quick Alerts
ALLOW NOTIFICATIONS  
For Daily Alerts

ವಿಶ್ವ ತೆಂಗಿನಕಾಯಿ ದಿನ 2022: ಅಡುಗೆಗೆ ತೆಂಗಿನೆಣ್ಣೆ ಆಲೀವ್ ಎಣ್ಣೆಗಿಂತಲೂ ಬೆಸ್ಟ್‌ ಗೊತ್ತಾ?

|

ಸೆಪ್ಟೆಂಬರ್ 2 ವಿಶ್ವ ತೆಂಗಿನಕಾಯಿ ದಿನ. ಎಳನೀರು, ತೆಂಗಿನಕಾಯಿ, ತೆಂಗಿನೆಣ್ಣೆ ಇವೆಲ್ಲಾ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದರೆ ತೆಂಗಿನೆಣ್ಣೆ ಬಗ್ಗೆ ಹಲವಾರು ಕಾಂಟ್ರೋವರ್ಸಿಗಳಿವೆ. ತೆಂಗಿನೆಣ್ಣೆಯಲ್ಲಿ ಕೊಬ್ಬಿನಂಶ ಜಾಸ್ತಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬೆಲ್ಲಾ ವದಂತಿ ಇದೆ. ಆದರೆ ತೆಂಗಿನೆಣ್ಣೆ ಅಡುಗೆಗೆ ಬಳಸಬಹುದಾದ ಅತ್ಯುತ್ತಮವಾದ ಎಣ್ಣೆಗಳಲ್ಲಿ ಒಂದಾಗಿದೆ.

coconut oil

ಏಕೆ ತೆಂಗಿನೆಣ್ಣೆ ಅಡುಗೆಗೆ ಒಳ್ಳೆಯದು, ತೆಂಗಿನೆಣ್ಣೆ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ತೆಂಗಿನೆಣ್ಣೆಯಲ್ಲಿ ಲೌರಿಕ್ ಆಮ್ಲ ಅಧಿಕವಿದೆ

ತೆಂಗಿನೆಣ್ಣೆಯಲ್ಲಿ ಲೌರಿಕ್ ಆಮ್ಲ ಅಧಿಕವಿದೆ

ಲೌರಿಕ್ ಆಮ್ಲ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ, ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೃದಯಾಘಾತದ ಅಪಾಯ ಕಡಿಮೆಯಾಗುವುದು. ತೆಂಗಿನೆಣ್ಣೆ ಆಲೀವ್‌ ಎಣ್ಣೆಯಷ್ಟೇ ಪ್ರಯೋಜನಕಾರಿಯಾಗಿದೆ.

 ಬ್ಲಡ್‌ ಲಿಪಿಡ್‌ ಉತ್ತಮಪಡಿಸುತ್ತೆ

ಬ್ಲಡ್‌ ಲಿಪಿಡ್‌ ಉತ್ತಮಪಡಿಸುತ್ತೆ

ತೆಂಗಿನೆಣ್ಣೆ ಸೇವನೆ ಮಾಡಿದರೆ ಅದು ರಕ್ತದಲ್ಲಿರುವ ಲಿಪಿಡ್‌ ಅಂಶ ಹೆಚ್ಚಿಸುತ್ತೆ, ಇದರಿಂದ ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುವುದು. ತೆಂಗಿನೆಣ್ಣೆ ಸೇವನೆ ಮಾಡುವುದರಿಂದ ಬೆಣ್ಣೆ ಮತ್ತು ಎಕ್ಟ್ರಾ ವರ್ಜಿನ್ ಆಯಿಲ್‌ಗಿಂತ ಪ್ರಯೋಜನಕಾರಿಯಾಗಿದೆ ಎಂಬುವುದು ಸಂಶೋಧನೆಯಿಂದ ತಿಳಿದು ಬಂದಿದೆ.

ತೆಂಗಿನೆಣ್ಣೆ ತೂಕ ಇಳಿಕೆಗೂ ಸಹಕಾರಿ

ತೆಂಗಿನೆಣ್ಣೆ ತೂಕ ಇಳಿಕೆಗೂ ಸಹಕಾರಿ

ತೆಂಗಿನೆಣ್ಣೆಯಲ್ಲಿ ಕೊಬ್ಬಿನಂಶ ಇರುವುದರಿಂದ ತೂಕ ಹೆಚ್ಚಾಗುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ, ಆದರೆ ತೆಂಗಿನೆಣ್ಣೆ ಸೇವನೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ಅಡುಗೆಯಲ್ಲಿ ತೆಂಗಿನೆಣ್ಣೆ ಬಳಸಿದರೆ ಬೇಗನೆ ಹಸಿವು ಉಂಟಾಗಲ್ಲ, ಅಲ್ಲದೆ ಇದರಲ್ಲಿರುವುದು ಆರೋಗ್ಯಕರ ಕೊಬ್ಬಿನಂಶ, ಇದನ್ನು ಅಡುಗೆಗೆ ಬಳಸಿದರೆ ಆರೋಗ್ಯಕರ ಮೈತೂಕ ಹೊಂದಬಹುದು.

ತೆಂಗಿನೆಣ್ಣೆಯನ್ನು ಮಕ್ಕಳಿಗೆ ಕೊಡುವುದು ತುಂಬಾ ಒಳ್ಳೆಯದು

ತೆಂಗಿನೆಣ್ಣೆಯನ್ನು ಮಕ್ಕಳಿಗೆ ಕೊಡುವುದು ತುಂಬಾ ಒಳ್ಳೆಯದು

* ಮಕ್ಕಳ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು: ಸ್ವಲ್ಪ ತೆಂಗಿನೆಣ್ಣೆ ತೆಗೆದು ಮಕ್ಕಳ ಹಲ್ಲಿಗೆ ತಿಕ್ಕಿದರೆ ಹಲ್ಲು ಹುಳುಕಾಗುವುದನ್ನು ತಡೆಗಟ್ಟಬಹುದು.

* ತ್ವಚೆಗೆ ಒಳ್ಳೆಯದು: ತೆಂಗಿನೆಣ್ಣೆಯ ಮಸಾಜ್ ಹಾಗೂ ಆಹಾರದಲ್ಲಿ ತೆಂಗಿನೆಣ್ಣೆ ನೀಡುವುದರಿಂದ ಮಕ್ಕಳ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

* ಮಕ್ಕಳ ಮೈಗೆ ತೆಂಗಿನೆಣ್ಣೆ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ

* ಮಕ್ಕಳ ತಲೆಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು

* ಮಕ್ಕಳ ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಕೂಡ ತೆಂಗಿನೆಣ್ಣೆ ಒಳ್ಳೆಯದು.

 ತೆಂಗಿನೆಣ್ಣೆಯ ಗುಣಗಳು ಹಾಗೂ ಅದರ ಪ್ರಯೋಜನಗಳು

ತೆಂಗಿನೆಣ್ಣೆಯ ಗುಣಗಳು ಹಾಗೂ ಅದರ ಪ್ರಯೋಜನಗಳು

* ಆ್ಯಂಟಿವೈರಲ್‌: ಇದು ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡುತ್ತೆ

* ಆ್ಯಂಟಿಬ್ಯಾಕ್ಟಿರಿಯಾ: ದೇಹವನ್ನು ಹಾನಿಕಾರಕ ಬ್ಯಾಕ್ಟಿರಿಯಾಗಳಿಂದ ರಕ್ಷಣೆ ಮಾಡುತ್ತೆ

* ತೆಂಗಿನೆಣ್ಣೆ ಉರಿಯೂತ ಕಡಿಮೆ ಮಾಡುತ್ತೆ

* ಇದರ ಆ್ಯಂಟಿಮೈಕ್ರೋಬಯಲ್‌ ದೇಹದಲ್ಲಿ ಅಪಾಯಕಾರಿ ಗಡ್ಡೆಗಳು ಉಂಟಾಗುವುದನ್ನು ತಡೆಗಟ್ಟುತ್ತೆ

*ಲಿವರ್‌ನ ಆರೋಗ್ಯ ಕಾಪಾಡುತ್ತೆ

* ದೇಹದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್‌ ಕಾಪಾಡಲು ಸಹಕಾರಿ

* ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ

FAQ's
  • ದಿನದಲ್ಲಿ ಎಷ್ಟು ತೆಂಗಿನೆಣ್ಣೆ ಒಳ್ಳೆಯದು?

    ಮಕ್ಕಳಿಗೆ ದಿನದಲ್ಲಿ 1-2 ಸ್ಪೂನ್‌ ತೆಂಗಿನೆಣ್ಣೆ ಒಳ್ಳೆಯದು. ದೊಡ್ಡವರು 2-3 ಚಮಚ ಬಳಸಬಹುದು.

English summary

World Coconut Day:Why Coconut Oil Is A Healthy Oil for Cooking

World Coconut Day 2022: Why coconut oil is best for cooking, what are the health benefits read on...
X
Desktop Bottom Promotion