For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ದಿನಾ ಅರ್ಧ ಗಂಟೆ ಸೈಕ್ಲಿಂಗ್‌ ಸಾಕಾ? ಇನ್ನೂ ಮಾಡ್ಬೇಕಾ?

|

ಇದೀಗ ಹೆಚ್ಚಿನವರು ಸೈಕ್ಲಿಂಗ್ ಕಡೆ ಒಲವು ತೋರಿಸುತ್ತಿದ್ದಾರೆ. ಅದಕ್ಕೆ ಕಾರಣ ಬೊಜ್ಜು ದೇಹದಿಮದ ಮುಕ್ತಿ ಪಡೆಯಲು. ಬದಲಾಗಿರುವ ಜೀವನ ಶೈಲಿ, ಆಹಾರ ಶೈಲಿ ಇವೆಲ್ಲಾ ನಮ್ಮ ದೇಹದ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ. ತುಂಬಾ ಹೊತ್ತು ಕೂತು ಕೆಲಸ ಮಾಡುವ ರೀತಿ, ಸ್ಯಾಚುರೇಟಡ್‌, ಕೊಬ್ಬಿನಂಶ, ಫಾಸ್ಟ್‌ಫುಡ್‌ಗಳ ಸೇವನೆ ನಮ್ಮ ದೇಹದಲ್ಲಿ ಕೊಬ್ಬಿನಂಶ ಹೆಚ್ಚಿಸುತ್ತಾ ಹೋಗುವುದು, ಇದರಿಂದ ಮೈ ತೂಕ ಹೆಚ್ಚಾಗುವುದು.

ದಿನಾ ವ್ಯಾಯಾಮ ಮಾಡಿದರೆ ಕೊಬ್ಬನ್ನು ಕಂಟ್ರೋಲ್‌ನಲ್ಲಿ ಇಡಬಹುದು, ಆದರೆ ಕೆಲವರು ವ್ಯಾಯಾಮ ಮಾಡಲು ಉದಾಸೀನ ತೋರುತ್ತಾರೆ ಅಂಥವರಿಗೆ ಬೆಸ್ಟ್ ಆಪ್ಷನ್ ಎಂದ್ರೆ ಸೈಕ್ಲಿಂಗ್‌. ಸೈಕ್ಲಿಂಗ್‌ ಮಾಡುವುದರಿಂದ ಮನಸ್ಸಿಗೆ ತುಂಬಾ ಖುಷಿ ಸಿಗುವುದು, ಕಾಲುಗಳಿಗೆ ಉತ್ತಮ ವ್ಯಾಯಾಮ, ಬೊಜ್ಜು ಕೂಡ ಕಡಿಮೆಯಾಗುವುದು. ಸೈಕ್ಲಿಂಗ್‌ ಅಂದ್ರೆ ಒಂದೇ ಕಡೆ ವ್ಯಾಯಾಮ ಮಾಡಬೇಕಾಗಿಲ್ಲ, ಸೈಕಲ್‌ ತುಳಿಯುತ್ತಾ ಒಂದು ರೌಂಡ್‌ ಹೋಗಿ ಬರಬಹುದು. ಇದರಿಂದ ಹೊರಗಡೆ ಏನು ನಡೆಯುತ್ತಿದೆ ಎಂದು ತಿಳಿಯಬಹುದು, ಮನೆಗೆ ಬೇಕಾದ ಹಾಲು, ಪೇಪರ್‌ ಮುಂತಾದ ವಸ್ತುಗಳನ್ನು ತರಬಹುದು, ದೇಹವೂ ತುಂಬಾ ಫ್ಲೆಕ್ಸಿಬಲ್‌ ಆಗಿರುತ್ತದೆ.

ಇತ್ತೀಚೆಗೆ ಸಿಟಿಗಳಲ್ಲಿ ಕೆಲವರು ಬೈಕ್, ಕಾರು ಸೈಕಲೇರಿ ಆಫೀಸ್‌ಗೆ ಹೋಗುವುದನ್ನು ಶುರು ಮಾಡಿದ್ದಾರೆ, ಇವೆಲ್ಲಾ ಆರೋಗ್ಯದ ಬಗ್ಗೆ ಕಾಳಜಿಯಿಂದಾಗಿದೆ.

ಸೈಕಲ್‌ ಬಳಸುವುದರಿಂದ ಆರೋಗ್ಯವನ್ನು ಪಡೆಯುವುದು ಮಾತ್ರವಲ್ಲ, ಪರಿಸರ ಮಾಲಿನ್ಯ ಕಡಿಮೆಯಾಗುವುದು. ಜೂನ್‌ 3. ವಿಶ್ವ ಸೈಕಲ್‌ ದಿನ. ಈ ದಿನದ ವಿಶೇಷವಾಗಿ ಸೈಕ್ಲಿಂಗ್‌ ಮಾಡುವುದರಿಂದ ಆರೋಗ್ಯಕ್ಕೆ ದೊರೆಯುವ ಗುಣಗಳು ಹಾಗೂ ತೂಕ ಇಳಿಕೆಗೆ ಅರ್ಧ ಗಂಟೆ ಸೈಕ್ಲಿಂಗ್ ಸಾಕಾ ಅಥವಾ ಇನ್ನು ಮಾಡ್ಬೇಕಾ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ.

ಸಮ್‌ಥಿಂಗ್‌ ಈಸ್‌ ಬೆಟರ್ ದ್ಯಾನ್ ನಥಿಂಗ್

ಸಮ್‌ಥಿಂಗ್‌ ಈಸ್‌ ಬೆಟರ್ ದ್ಯಾನ್ ನಥಿಂಗ್

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ ಸಮ್‌ಥಿಂಗ್‌ ಈಸ್‌ ಬೆಟರ್ ದ್ಯಾನ್ ನಂಥಿಂಗ್ ಅಂತ. ಅಂದ್ರೆ ಏನೂ ಮಾಡದೇ ಇರುವುದಕ್ಕಿಂತ ಸ್ವಲ್ಪವಾದರೂ ಏನಾದರೂ ಮಾಡುವುದು ಒಳ್ಳೆಯದು. ಬೆಳಗ್ಗೆ ವಾಕ್ ಇಲ್ಲ, ವ್ಯಾಯಾಮ ಇಲ್ಲ, ಜಿಮ್ ಇಲ್ಲ, ಯೋಗ ಇಲ್ಲ ಒಟ್ಟಿನಲ್ಲಿ ದೈಹಿಕ ಚಟುವಟಿಕೆ ಏನೂ ಇಲ್ಲ.... ಕೆಲಸ, ಮೊಬೈಲ್, ಟಿವಿ ಅಂತ ಇದ್ದರೆ ಖಂಡಿತ ಆರೋಗ್ಯ ಸಮಸ್ಯೆ ಬಂದೇ ಬರುತ್ತದೆ.

ಅದಕ್ಕಿಂತ ಸ್ವಲ್ಪ ಹೊತ್ತು ಸೈಕಲ್‌ ತುಳಿಯುವುದು ಲೇಸು ಅಲ್ಲವೇ?.

ದಿನದಲ್ಲಿ 30 ನಿಮಿಷ ಸೈಕಲ್‌ ತುಳಿದರೆ ಸಾಕಾಗುತ್ತಾ?

ದಿನದಲ್ಲಿ 30 ನಿಮಿಷ ಸೈಕಲ್‌ ತುಳಿದರೆ ಸಾಕಾಗುತ್ತಾ?

ಪ್ರತಿದಿನ ನೀವು 30 ನಿಮಿಷ ಸೈಕಲ್‌ ತುಳಿದರೆ ನಿಮ್ಮ ದೇಹ ಫಿಟ್‌ ಆಗಿರಲು ಮತ್ತೇನು ಮಾಡಬೇಕಾಗಿಲ್ಲ, ಆದರೆ ಇದನ್ನು ಪ್ರತಿದಿನ ಮಾಡಬೇಕು ಅಷ್ಟೇ, ಒಂದು ದಿನ ಮಾಡಿ ಮತ್ತೊಂದು ದಿನ ಮಾಡದೇ ಹೋದರೆ ಏನೂ ಪ್ರಯೋಜನ ಸಿಗಲ್ಲ.

ಪ್ರತಿದಿನ 30 ನಿಮಿಷ ಸೈಕ್ಲಿಂಗ್‌ ಮಾಡಿದರೆ ಸಾಕು ಮೈ ಬೊಜ್ಜು ಇರಲ್ಲ, ದೇಹ ಫಿಟ್‌ ಆಗಿರುತ್ತೆ, ದೇಹದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು.

ಅತೀ ಹೆಚ್ಚು ಮಾಡಿದರೆ ಏನಾಗುತ್ತೆ?

ಅತೀ ಹೆಚ್ಚು ಮಾಡಿದರೆ ಏನಾಗುತ್ತೆ?

ಕೆಲವರಿಗೆ ಒಂದು ಆಲೋಚನೆ ಇರುತ್ತದೆ ಅರ್ಧ ಗಂಟೆ ಏಕೆ ಅದರ ಬದಲಿಗೆ ಒಂದು ಗಂಟೆ, ಒಂದೂವರೆ ಗಂಟೆ ಸೈಕ್ಲಿಂಗ್ ಮಾಡಿದರೆ ಬೇಗನೆ ತೆಳ್ಳಗಾಗಬಹುದು ಅಲ್ವಾ ಅಂತ... ಇದರಲ್ಲಿ ಒಂದು ಗಂಟೆ ಮಾಡಿದರೆ ಪರ್ವಾಗಿಲ್ಲ, ಅದಕ್ಕಿಂತ ಜಾಸ್ತಿ ಮಾಡಲು ಪ್ರಯತ್ನಿಸಿದರೆ ಇದರಿಂದ ಒಳಿತಾಗುವ ಬದಲಿಗೆ ಕೆಡಕಾಗುವುದೇ ಜಾಸ್ತಿ. ಸ್ನಾಯುಗಳಿಗೆ ಪೆಟ್ಟಾಗುವುದು.

ಸೈಕ್ಲಿಂಗ್ ಮಾಡುವುದರಿಂದ ತೂಕ ಇಳಿಕೆ ಜೊತೆಗೆ ದೊರೆಯುವ ಇತರ ಪ್ರಯೋಜನಗಳು

ಸೈಕ್ಲಿಂಗ್ ಮಾಡುವುದರಿಂದ ತೂಕ ಇಳಿಕೆ ಜೊತೆಗೆ ದೊರೆಯುವ ಇತರ ಪ್ರಯೋಜನಗಳು

* ಹಸಿವು ನಿಯಂತ್ರಿಸುತ್ತದೆ

* ರಾತ್ರಿ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುತ್ತೆ (ನಿದ್ದೆ ಬರಲ್ಲ ಎಂದು ಒದ್ದಾಡುವವರು ಸೈಕ್ಲಿಂಗ್ ಮಾಡಿ)

* ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುತ್ತದೆ.

* ಕೊಲೆಸ್ಟ್ರಾಲ್

* ರಕ್ತದೊತ್ತಡ ನಿಯಂತ್ರಿಸುತ್ತದೆ

* ಸ್ನಾಯುಗಳು ಬಲವಾಗುವುದು

* ಸೋಮಾರಿತನ ದೂರವಾಗುವುದು.

ಸೈಕ್ಲಿಂಗ್‌ನಿಂದ ಫಲಿತಾಂಶ ದೊರೆಯಲು ಎಷ್ಟು ಸಮಯ ಬೇಕಾಗುತ್ತೆ?

ಸೈಕ್ಲಿಂಗ್‌ನಿಂದ ಫಲಿತಾಂಶ ದೊರೆಯಲು ಎಷ್ಟು ಸಮಯ ಬೇಕಾಗುತ್ತೆ?

* ಮೊದಲ ರೈಡ್‌: ಮೊದಲ ರೈಡ್‌ನಲ್ಲಿ ಅದೂ ಸ್ವಲ್ಪ ಕಾಡು ಇರುವ ಪ್ರದೇಶಕ್ಕೆ ಹೋದರೆ ಮನಸ್ಸಿಗೆ ಖುಷಿ ಸಿಗುವುದು, ಅದೇ ಮೊದಲ ಬಾರಿ ಅಷ್ಟು ವ್ಯಾಯಾಮ ಮಾಡಿರುವುದರಿಂದ ಸ್ವಲ್ಪ ಕೈಕಾಲುಗಳಲ್ಲಿ ನೋವು ಕಂಡು ಬರುವುದು.

* ಕೆಲವು ವಾರಗಳ ಬಳಿಕ: ಸೈಕ್ಲಿಂಗ್‌ ಮಾಡಲು ಆರಂಭಿಸಿದ ಮೇಲೂ ನಿಮ್ಮ ಹೃದಯ ಹಾಗೂ ರಕ್ತನಾಳಗಳು ಮತ್ತಷ್ಟು ಚೆನ್ನಾಗಿ ಕೆಲಸ ಮಾಡಲಾರಂಭಿಸುತ್ತದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಅಲ್ಲದೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುತ್ತದೆ, ಮಾನಸಿಕ ಒತ್ತಡ ಕಡಿಮೆಯಾಗುವುದು.

* ತಿಂಗಳ ಬಳಿಕ: ನೀವು ಎತ್ತರದ ಬೆಟ್ಟ, ಗುಡ್ಡ ಯಾವುದೇ ಆಯಾಸವಿಲ್ಲದೆ ಹತ್ತಬಹುದು, ದಿನನಿತ್ಯ ತುಂಬಾ ಚಟುವಟಿಕೆಯಿಂದ ಇರುವಿರಿ, ನಿಮಗೆ ಈ ಹಿಂದೆ ಇರುವುದಕ್ಕೂ, ಈಗ ಇರುವುದಕ್ಕೂ ತುಂಬಾ ವ್ಯತ್ಯಾಸ ಫೀಲ್ ಆಗುವುದು.

* ಕೆಲವು ತಿಂಗಳಗಳ ಬಳಿಕ: ದೇಹದಲ್ಲಿ ನಿಧಾನಕ್ಕೆ ಬದಲಾವಣೆ ಕಂಡು ಬಂದಿರುತ್ತದೆ, ಮೈ ತೂಕ ಕಡಿಮೆಯಾಗಿರುತ್ತದೆ, ಕಾಲುಗಳ ಸ್ನಾಯುಗಳು ಬಿಗಿಯಾಗಿರುತ್ತದೆ, ಹೊಟ್ಟೆ ಕರಗಲಾರಂಭಿಸಿರುತ್ತದೆ.

* ವರ್ಷದ ಬಳಿಕ: ಒಂದು ವರ್ಷದಲ್ಲಿ ನೀಬವು ಬಯಸಿದ ದೇಹದ ಆಕಾರ ನಿಮ್ಮದಾಗಿರುತ್ತದೆ. ಮನಸ್ಸು, ಆರೋಗ್ಯ ಎರಡೂ ಉತ್ತಮವಾಗಿರುತ್ತದೆ.

English summary

World Bicycle Day 2021: Will Cycling For A 1/2 hr A Day Help Keep You Fit Or Is It Not enough?

World Bicycle Day 2021: Will cycling for a 1/2 hr a day help keep you fit or is it not enough?, read on
X