For Quick Alerts
ALLOW NOTIFICATIONS  
For Daily Alerts

ಕೋವಿಡ್19 ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಯಾವ ಆಹಾರ ಸೇವಿಸಬೇಕು, ಯಾವುದು ಸೇವಿಸಬಾರದು?

|

ಕೊರೊನಾ ಎರಡನೇ ಅಲೆ ಶುರುವಾದ ಮೇಲೆ ಕೋವಿಡ್ 19 ವ್ಯಾಕ್ಸಿನ್ ಪಡೆಯಲು ಜನರು ತುಂಬಾನೇ ಉತ್ಸಾಹ ತೋರುತ್ತಿದ್ದಾರೆ. ಕೋವಿಡ್ 19 ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ ಎಂಬುವುದು ಈಗಾಗಲೇ ಸಾಬೀತಾಗೊದೆ.

Corona Vaccine ತೆಗೆದುಕೊಳ್ಳೋಕೆ ಮುಂಚೆ ಹಾಗೂ ತೆಗೆದುಕೊಂಡ ಮೇಲೆ ಇದನ್ನ ಫಾಲೋ ಮಾಡಿ | Oneindia Kannada

ಈ ಕಾರಣದಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರು ಕೂಡ ಈಗ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ನೀವು ಲಸಿಕೆ ಪಡೆಯಲು ಶೆಡ್ಯೂಲ್ ಮಾಡಿದ್ದರೆ ಲಸಿಕೆ ಪಡೆಯುವ ಮುನ್ನ ಹಾಗೂ ಪಡೆದ ನಂತರ ಯಾವ ಆಹಾರಗಳನ್ನು ಸೇವಿಸಬೇಕು, ಏನನ್ನು ಸೇವಿಸಬಾರದು ಎಂಬುವುದನ್ನು ನೋಡೋಣ:

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ದಿನಕ್ಕೆ 8 ಲೋಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದ್ದರಿಂದ ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಸಾಕಷ್ಟು ನೀರು ಕುಡಿಯಬೇಕು. ಬಿಸಿ- ಬಿಸಿ ನೀರು ಕುಡಿಯಿರಿ. ಹಣ್ಣುಗಳ ಜ್ಯೂಸ್‌ ಮಾಡಿ ಕುಡಿಯಿರಿ. ಇನ್ನು ನೀರಿಗೆ ಅರಿಶಿಣ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ನಿಂಬು ಪಾನೀಯ ಕುಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಮದ್ಯ ಮುಟ್ಟಬಾರದು

ಮದ್ಯ ಮುಟ್ಟಬಾರದು

ಮದ್ಯ ಕುಡಿಯುವುದರಿಂದ ಡೀಹೈಡ್ರೇಷನ್ (ನಿರ್ಜಲೀಕರಣ) ಉಂಟಾಗುವುದು. ಈ ಕಾರಣಕ್ಕೆ ಲಸಿಕೆ ಪಡೆಯುವ ಮುನ್ನ, ಪಡೆದ ನಂತರ ಮದ್ಯ ಸೇವಿಸಬೇಡಿ. ಅಲ್ಲದೆ ಮದ್ಯ ಸೇವಿಸುವುದರಿಮದ ರೋಗ ನಿರೋಧಕ ಸಾಮರ್ಥ್ಯ ಕುಗ್ಗಿಸುತ್ತೆ ಎಂದು ಸಂಶೋಧನೆಗಳು ಕೂಡ ಹೇಳಿವೆ.

ಸಂಸ್ಕರಿಸಿದ ಧಾನ್ಯಗಳನ್ನು ಬಳಸಿ

ಸಂಸ್ಕರಿಸಿದ ಧಾನ್ಯಗಳನ್ನು ಬಳಸಿ

ಬ್ರಿಟಷ್‌ ಜರ್ನಲ್ ಆಫ್‌ ನ್ಯೂಟ್ರಿಷಿಯನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸ್ಕರಿಸಿದ ಧಾನ್ಯಗಳಿಗಿಂತ ಇಡೀ ಧಾನ್ಯಗಳ ಬಳಕೆ ಒಳ್ಳೆಯದು ಎಂದು ಹೇಳಿದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ತುಂಬಾನೇ ಒಳ್ಳೆಯದು. ಸಂಸ್ಕರಿಸಿದ ಆಹಾರದಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿ ಇರುವುದರಿಂದ ಅಂಥ ಆಹಾರಗಳನ್ನು ದೂರವಿಡಿ.

ನಾರಿನಂಶವಿರುವ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಮಾಡಿ

ನಾರಿನಂಶವಿರುವ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಮಾಡಿ

ಲಸಿಕೆ ಪಡೆಯುವ ಮುನ್ನ ಹಾಗೂ ಲಸಿಕೆ ಪಡೆದ ಬಳಿಕ ಹಣ್ಣುಗಳನ್ನು ಸೇವಿಸಿ, ತರಕಾರಿಗಳನ್ನು ತಿನ್ನಿ.

ಲಸಿಕೆಗೆ ಮುನ್ನ ಸಮತೋಲಿತ ಆಹಾರ ಸೇವಿಸಿ

ಲಸಿಕೆಗೆ ಮುನ್ನ ಸಮತೋಲಿತ ಆಹಾರ ಸೇವಿಸಿ

ಕೋವಿಡ್‌ 19 ಲಸಿಕೆ ಪಡೆದ ಕೆಲವರಲ್ಲಿ ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳು ಕಂಡು ಬರುವುದು. ಇದನ್ನು ತಡೆಗಟ್ಟುವಲ್ಲಿ ಸಮತೋಲಿತ ಆಹಾರ ಸೇವನೆ ಸಹಾಯ ಮಾಡುತ್ತೆ. ಲಸಿಕೆ ಪಡೆಯುವ ಮುನ್ನ ಆರೋಗ್ಯಕರವಾದ ಆಹಾರ ಸೇವಿಸಿ, ನೀರು ಕುಡಿದು ಹೋಗಿ.

ಲಸಿಕೆ ಪಡೆದ ದಿನ ಈ ಆಹಾರ ಸೇವಿಸಬೇಡಿ

ಲಸಿಕೆ ಪಡೆದ ದಿನ ಈ ಆಹಾರ ಸೇವಿಸಬೇಡಿ

ನೀವು ಲಸಿಕೆ ಪಡೆದು ಬಂದು ಮೇಲೆ ಪಿಜ್ಜಾ, ನೂಡಲ್ಸ್, ಬನ್‌, ಮ್ಯಾಗಿ ಈ ರೀತಿಯ ಆಹಾರಗಳನ್ನು ಸೇವಿಸಬೇಡಿ. ಬದಲಿಗೆ ಭಾರತೀಯ ಶೈಲೀಯ ಆಹಾರ ಗಂಜಿ, ಕಿಚಡಿ ಈ ರೀತಿಯ ಆರೋಗ್ಯಕರ ಆಹಾರ ಸೇವಿಸಿ. ಫಾಸ್ಟ್‌ ಫುಡ್‌ಗಳಿಂದ ದೂರವಿರಿ.

ವಿಟಮಿನ್ ಸಿ, ಸತುವಿನಂಶ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಾದರೆ

ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಾದರೆ

ಲಸಿಕೆ ಪಡೆದ ಬಳಿಕ ಒಮದು ವೇಳೆ ಅಡ್ಡ ಪರಿಣಾಮ ಉಂಟಾದರೆ 48 ಗಂಟೆಯಾದರೂ ಅದರ ಲಕ್ಷಣಗಳು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.

English summary

What You Should Eat Before And After Getting Your COVID Vaccine, As Per Experts

what you should eat before and after getting your COVID vaccine, as per experts, read on...
X
Desktop Bottom Promotion