For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಪ್ಪಿಸುತ್ತೆ ವಿಟಮಿನ್ ಸಿ, ಇದರ ಸಪ್ಲಿಮೆಂಟ್‌ ತೆಗೆದುಕೊಳ್ಳಬಹುದಾ?

|

ಈ ವರ್ಷ ಮಳೆಗಾಲ ತುಸು ಬೇಗನೆ ಪ್ರಾರಂಭವಾಗಿದೆ. ಜೂನ್‌ ತಿಂಗಳಿನಲ್ಲಿ ಚಿರಿಪಿರಿ ಬರುತ್ತಿದ್ದ ಮಳೆ ಇದೀಗ ಮೇ ತಿಂಗಳಿನಲ್ಲಿಯೇ ಧೋ ಅಂತ ಸುರಿಯಲಾರಂಭಿಸಿದೆ. ಮಳೆಗಾಲ ಶುರುವಾಯ್ತು ಅಂದರೆ ನೆಗಡಿ, ಕೆಮ್ಮು, ಜ್ವರ ಈ ಬಗೆಯ ಸಾಮಾನ್ಯ ಸಮಸ್ಯೆಗಳು ಶುರುವಾಗುವುದು.

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಜೊತೆಗೆ ಜೀರ್ಣಶಕ್ತಿಯ ಸಾಮರ್ಥ್ಯ ಕೂಡ ನಿಧಾನವಾಗಿರುತ್ತೆ. ಇದರಿಂದಾಗಿ ತ್ವಚೆ ಅಲರ್ಜಿ, ಗಂಟಲಿನಲ್ಲಿ ಕೆರೆತ ಕೂದಲು ಉದುರುವುದು, ಹೊಟ್ಟೆ ಸಂಬಂಧಿತ ಸಮಸ್ಯೆ ಇವೆಲ್ಲಾ ಕಾಣಿಸಿಕೊಳ್ಳುತ್ತದೆ.

ಮಳೆಗಾಲದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆ ಬೀಳುವುದನ್ನು ತಡೆಗಟ್ಟಲು ವಿಟಮಿನ್‌ ಸಿ ತುಂಬಾನೇ ಸಹಕಾರಿಯಾಗಿದೆ. ವಿಟಮಿನ್‌ ಸಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ರಾಮಬಾಣವಾಗಿದೆ.

ವಿಟಮಿನ್‌ ಸಿ ಪ್ರಯೋಜನಗಳು

ವಿಟಮಿನ್‌ ಸಿ ಪ್ರಯೋಜನಗಳು

ಗಂಭೀರ ಆರೋಗ್ಯ ಸಮಸ್ಯೆ ತಡೆಗಟ್ಟುತ್ತೆ

ವಿಟಮಿನ್ ಸಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಿರುತ್ತದೆ, ಇದು ಜೀವಕಣಗಳನ್ನು ಅಪಾಯಕಾರಿ ಕಣಗಳಿಂದ ರಕ್ಷಣೆ ಮಾಡುತ್ತೆ ಅಲ್ಲದೆ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಸಹಕಾರಿಯಾಗಿದೆ. ಯಾರು ವಿಟಮಿನ್‌ ಸಿ ಇರುವ ಆಹಾರ ಅಧಿಕ ಸೇವಿಸುತ್ತಾರೋ ಅವರ ರಕ್ತದಲ್ಲಿ ಆ್ಯಂಟಿಆಕ್ಸಿಡೆಂಟ್‌ ಶೇ. 30ರಷ್ಟು ಅಧಿಕವಿರುತ್ತದೆ, ಇದರಿಂದ ದೇಹವು ಸ್ವಾಭಾವಿಕವಾಗಿ ಸಾಮಾನ್ಯ ವೈರಸ್ ಹಾಗೂ ಬ್ಯಾಕ್ಟಿರಿಯಾ ವಿರುದ್ಧ ಹೋರಾಡಿ ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತೆ.

ರೋಗ ನಿರೊಧಕ ಶಕ್ತಿ ಹೆಚ್ಚಿಸುತ್ತೆ

ರೋಗ ನಿರೊಧಕ ಶಕ್ತಿ ಹೆಚ್ಚಿಸುತ್ತೆ

* ಜನರು ವಿಟಮಿನ್‌ ಸಿ ಸಪ್ಲಿಮೆಂಟ್‌ ತೆಗೆದುಕೊಳ್ಳಲು ಪ್ರಮುಖ ಕಾರಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

* ರೋಗಾಣುಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಉತ್ಪತ್ತಿಗೆ ವಿಟಮಿನ್‌ ಸಿ ಸಹಕಾರಿಯಾಗಿದೆ.

* ವಿಟಮಿನ್‌ ಸಿ ರೋಗಾಣುಗಳು ಬಿಳಿ ರಕ್ತ ಕಣದ ಮೇಲೆ ದಾಳಿ ಮಾಡದಂತೆ ಅದಕ್ಕೆ ರಕ್ಷಣೆಯನ್ನು ಒದಗಿಸುತ್ತೆ

* ವಿಟಮಿನ್‌ ಸಿ ದೇಹದ ಒಳಗಡೆ ಇರುವ ಕಶ್ಮಲವನ್ನು ಹೊರಹಾಕುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ವಿಟಮಿನ್ ಸಿ ಕೊರತೆಯಾದರೆ ಕಳಪೆ ಆರೋಗ್ಯ ಇರುತ್ತದೆ. ಯಾರಲ್ಲಿ ವಿಟಮಿನ್‌ ಸಿ ಕಡಿಮೆ ಇರುತ್ತದೋ ಅವರಲ್ಲಿ ಆರೋಗ್ಯ ಸಮಸ್ಯೆ ಕೂಡ ಇರುತ್ತದೆ. ಯಾರು ವಿಟಮಿನ್‌ ಸಿ ಕಡಿಮೆ ಸೇವಿಸುತ್ತಾರೋ ಅವರಿಗೆ ನ್ಯೂಮೋನಿಯಾ ಅಪಾಯ ಹೆಚ್ಚು.

ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ವಿಟಮಿನ್‌ ಸಿ ಅವಶ್ಯಕ

ವಿಟಮಿನ್ ಸಿ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ವಿಟಮಿನ್‌ ಸಿ ಅವಶ್ಯಕ.

ವಿಟಮಿನ್‌ ಸಿ ಇರುವ ಆಹಾರಗಳು

ವಿಟಮಿನ್‌ ಸಿ ಇರುವ ಆಹಾರಗಳು

* ಸಿಟ್ರಸ್ ಹಣ್ಣುಗಳು (ಕಿತ್ತಳೆ, ಮೂಸಂಬಿ, ಸ್ಟ್ರಾಬೆರ್ರಿ..)

* ಕಾಳು ಮೆಣಸು

* ಬ್ರೊಕೋಲಿ

* ಮೊಳಕೆ ಬರಿಸಿದ ಕಾಳುಗಳು

* ಆಲೂಗಡ್ಡೆ

* ಕಿವಿಹಣ್ಣು

* ದುಂಡು ಮೆಣಸಿನಕಾಯಿ

* ಪಪ್ಪಾಯಿ

* ಟೊಮೆಟೊ

* ಸೀಬೆಕಾಯಿ

ವಿಟಮಿನ್‌ ಸಿ ಸಪ್ಲಿಮೆಂಟ್‌ ದಿನಾ ತೆಗೆದುಕೊಳ್ಳಬಹುದಾ?

ವಿಟಮಿನ್‌ ಸಿ ಸಪ್ಲಿಮೆಂಟ್‌ ದಿನಾ ತೆಗೆದುಕೊಳ್ಳಬಹುದಾ?

ಯಾವುದೇ ವಿಟಮಿನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವ ಮುನ್ನ ನೀವು ವೈದ್ಯರ ಸಲಹೆ ಪಡೆಯಲೇಬೇಕು.

ವಿಟಮಿನ್ ಸಿ ಸಪ್ಲಿಮೆಂಟ್‌ ನಿಮ್ಮ ದೇಹ ಕಬ್ಬಿಣದಂಶ ಹೀರಿಕೊಳ್ಳಲು ಸಹಕಾರಿ.

ದಿನದಲ್ಲಿ ಒಬ್ಬ ವ್ಯಕ್ತಿಗೆ ಎಷ್ಟು ಸಪ್ಲಿಮೆಂಟ್‌ ಅವಶ್ಯಕ?

ಮಹಿಳೆಯರಿಗೆ ಪ್ರತಿದಿನ 90ಮಿಗ್ರಾಂನಷ್ಟು ವಿಟಮಿನ್ ಸಿ ಅವಶ್ಯಕ

ಮಹಿಳೆಯರಿಗಾದರೆ ಪ್ರತಿದಿನ 90ಮಿಗ್ರಾಂನಷ್ಟು ವಿಟಮಿನ್ ಸಿ ಬೇಕಾಗುತ್ತದೆ.

ಗರ್ಭಿಣಿಯರಿಗೆ ದಿನದಲ್ಲಿ 120 ಮಿಗ್ರಾಂ ಬೇಕಾಗುತ್ತದೆ.

ವಿಟಮಿನ್‌ ಸಿ ಸಪ್ಲಿಮೆಂಟ್‌ ಅಧಿಕವಾದರೆ ಅಡ್ಡಪರಿಣಾಮಗಳೇನು?

ವಿಟಮಿನ್‌ ಸಿ ಸಪ್ಲಿಮೆಂಟ್‌ ಅಧಿಕವಾದರೆ ಅಡ್ಡಪರಿಣಾಮಗಳೇನು?

ವಿಟಮಿನ್ ಸಿ ಅಧಿಕವಾದರೆ ಬೇಧಿ

ತಲೆಸುತ್ತು , ಎದೆ ಉರಿ, ತಲೆನೋವು ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು. ಆದ್ದರಿಂದ ನೀವು ಸ್ವತಃ ವಿಟಮಿನ್‌ ಸಿ ಸಪ್ಲಿಮೆಂಟ್‌ ತೆಗೆದುಕೊಳ್ಳಬೇಡಿ.

ಸಪ್ಲಿಮೆಂಟ್‌ ಇಲ್ಲದೆ ವಿಟಮಿನ್‌ ಸಿ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಹೇಗೆ?

ಸಪ್ಲಿಮೆಂಟ್‌ ಇಲ್ಲದೆ ವಿಟಮಿನ್‌ ಸಿ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಹೇಗೆ?

ನೀವು ನಿಮ್ಮ ಆಹಾರದಲ್ಲಿ ವಿಟಮಿನ್‌ ಸಿ ಇರುವ ಆಹಾರಗಳನ್ನು ಸೇರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

English summary

Vitamin C Preferred Immunity Booster During Monsoon

Vitamin C Preferred Immunity Booster During Monsoon, Read on.. .
Story first published: Wednesday, May 18, 2022, 17:58 [IST]
X
Desktop Bottom Promotion