For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗಾಗಿ ಯೋಗ ಅಭ್ಯಾಸ ಮಾಡುತ್ತಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ

|

ನೀವು ತೂಕ ಇಳಿಕೆ ಮಾಡಬೇಕೆಂದು ಬಯಸುವುದಾದರೆ ಯೋಗ ಅತ್ಯುತ್ತಮವಾದ ಪುರಾತನ ಕಲೆಯಾಗಿದೆ. ಜಿಮ್‌ಗೆ ಹೋಗಿ ಮೈ ದಂಡಿಸುವಂತೆ ಯೋಗದಲ್ಲಿ ಮೈ ದಂಡಿಸಬೇಕಾಗಿಲ್ಲ, ಅನಾರೋಗ್ಯಕರ ಕ್ರಾಷ್‌ ಡಯಟ್ ಮಾಡಬೇಕಾಗಿಲ್ಲ. ನಿಯಮಿತವಾಗಿ ಯೋಗ ಕಲೆ ಅಭ್ಯಾಸ ಮಾಡಿದರೆ ಸಾಕು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗುವುದರಲ್ಲಿ ಸಂದೇಹವೇ ಇಲ್ಲ.

Yoga for weight loss

ಆದರೆ ಯೋಗ ಅಭ್ಯಾಸ ಮಾಡುವ ಮುನ್ನ ಕೆಲವೊಂದು ಅಂಶಗಳನ್ನು ತಿಳಿದರಬೇಕು. ಕೆಲವರು ವೀಡಿಯೋ ನೋಡಿ ಯೋಗ ಅಭ್ಯಾಸ ಮಾಡುತ್ತಾರೆ. ಆದರೆ ಹೀಗೆ ವೀಡಿಯೋ ನೋಡಿ ಕಲಿಯುವಾಗ ನಿಮಗೆ ಉಸಿರಾಟದ ಬಗ್ಗೆ ಹೆಚ್ಚಿನ ಜ್ಞಾನ ಇರುವುದಿಲ್ಲ. ಯೋಗ ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಅದರ ಪ್ರಯೋಜನ ಸಿಗುವುದಿಲ್ಲ.

ಇತರ ವ್ಯಾಯಾಮಗಳಂತೆ ಯೋಗ ಭಂಗಿಗಳೆಂದರೆ ನಿರಂತರವಾಗಿ ಒಂದು ಗಂಟೆ ಮಾಡಿಕೊಂಡು ಹೋಗುವುದಲ್ಲ, ಪ್ರತಿಯೊಂದು ಭಂಗಿಯ ನಂತರವೂ ಸ್ವಲ್ಪ ವಿಶ್ರಾಂತಿ ನೀಡಲಾಗುವುದು. ಇನ್ನು ಉಸಿರಾಟ ಕೂಡ ಲಯಬದ್ಧವಾಗಿರಬೇಕು. ಇವೆಲ್ಲಾ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ನೀವು ತೂಕ ಇಳಿಕೆಗೆ ಯೋಗ ಅಭ್ಯಾಸ ಮಾಡ ಬಯಸುವುದಾದರೆ ಈ ಅಂಶಗಳು ಗಮನದಲ್ಲಿರಲಿ:

ಪ್ರಾರಂಭದಲ್ಲಿ ಸರಳವಾದ ಭಂಗಿಗಳನ್ನು ಅಭ್ಯಾಸ ಮಾಡಿ

ಪ್ರಾರಂಭದಲ್ಲಿ ಸರಳವಾದ ಭಂಗಿಗಳನ್ನು ಅಭ್ಯಾಸ ಮಾಡಿ

ಪ್ರಾರಂಭದಲ್ಲಿ ಕಷ್ಟದ ಆಸನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ದೇಹವನ್ನು ನಿಧಾನಕ್ಕೆ ಸಿದ್ಧಗೊಳಿಸಬೇಕು. ಒಂದೇ ದಿನದಲ್ಲಿ 12 ಬಾರಿ ಸೂರ್ಯ ನಮಸ್ಕಾರ ಮಾಡುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ನಮ್ಮ ದೇಹಕ್ಕೆ ಸುಸ್ತು ಆದಾಗ ನಾವು ವಿಶ್ರಾಂತಿ ನೀಡಬೇಕು. ಪ್ರಾರಂಭದಲ್ಲಿ ಆಸನಗಳನ್ನು ಅಭ್ಯಾಸ ಮಾಡುವಾಗ ಸುಕಭವಾದ ಆಸನಗಳನ್ನು ಅಭ್ಯಾಸ ಮಾಡಿ. ನಿಧಾನಕ್ಕೆ ಕ್ಲಿಷ್ಟಕರವಾದ ಆಸನಗಳನ್ನು ಸೇರಿಸುತ್ತಾ ಹೋಗಿ.

ವ್ಯಾಯಾಮ ಮಾಡುವ ಮುನ್ನ ವಾರ್ಮ್ ಅಪ್ ಮಾಡಿ

ವ್ಯಾಯಾಮ ಮಾಡುವ ಮುನ್ನ ವಾರ್ಮ್ ಅಪ್ ಮಾಡಿ

ನೀವು ಒಂದು ಗಂಟೆ ಯೋಗ ಅಭ್ಯಾಸ ಮಾಡುವುದಾದರೆ ಅದರಲ್ಲಿ 20 ನಿಮಿಷ ವಾರ್ಮ್ ಅಪ್‌ಗೆ ಮೀಸಲಿಡಿ. ಇದು ತೂಕ ಇಳಿಕೆಗೆ ತುಂಬಾ ಸಹಕಾರಿ. 20 ನಿಮಿಷ ಸೈಕ್ಲಿಂಗ್, ಸ್ಕಿ, ಪುಶ್‌ ಅಪ್ ಮುಂತಾದ ವ್ಯಾಯಾಮ ಮಾಡಿ. ಇದು ಸ್ನಾಯುಗಳ ಬಿಗಿ ಕಡಿಮೆ ಮಾಡುತ್ತದೆ, ಇದರಿಂದ ಯೋಗ ಭಂಗಿಗಳನ್ನು ಆರಾಮವಾಗಿ ಮಾಡಬಹುದು.

ಉಸಿರಾಟದ ಕಲೆ ತಿಳಿದುಕೊಳ್ಳಿ

ಉಸಿರಾಟದ ಕಲೆ ತಿಳಿದುಕೊಳ್ಳಿ

ಯೋಗ ಮಾಡುವಾಗ ಪ್ರಮುಖವಾಗಿ ನೀವು ಉಸಿರಾಟದ ಕಲೆ ತಿಳಿದುಕೊಳ್ಳಬೇಕು. ಉಸಿರನ್ನು ಯಾವಾಗ ನಿಧಾನಕ್ಕೆ ತೆಗೆಯಬೇಕು, ಯಾವಾಗ ವೇಗವೇಗಿ ಬಿಡಬೇಕು ಮುಂ

ಸರಿಯಾದ ಉಡುಗೆ ಧರಿಸಿ

ಸರಿಯಾದ ಉಡುಗೆ ಧರಿಸಿ

ತುಂಬಾ ಬಿಗಿಯಾದ ಉಡುಪು ಧರಿಸಬೇಡಿ. ಯೋಗ ಭಂಗಿಗೆ ಅನುಕೂಲಕರವಾದ ಹಾಗೂ ಸಡಿಲವಾದ ಉಡುಪು ಧರಿಸಿ. ಯೋಗ ಮಾಡುವಾಗ ಹತ್ತಿಯ ಬಟ್ಟೆ ಧರಿಸುವುದು ಒಳ್ಳೆಯದು.

 ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಿ

ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯೋಗ ಅಭ್ಯಾಸ ಮಾಡುವುದು ತುಂಬಾ ಪರಿಣಾಮಕಾರಿ. ಇನ್ನು ಸಂಜೆ ಹೊತ್ತು ಯೋಗ ಮಾಡುವುದಾದರೆ ಯೋಗಾಭ್ಯಾಸದ 3 ಗಂಟೆ ಮುಂಚೆ ಏನೂ ತಿನ್ನಬೇಡಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ತೂಕ ಇಳಿಕೆಯ ಜೊತೆಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

English summary

Things To Keep In Mind While Doing Yoga for Weight Loss

Yoga is the best way to loose weight, here are tips to keep in mind while practicing yoga for weight loss, have a look...
X
Desktop Bottom Promotion