For Quick Alerts
ALLOW NOTIFICATIONS  
For Daily Alerts

ಯೋಗ ಮತ್ತು ಶಿವ: ಯೋಗ ಶಿವನಿಂದಾಗಿ ಹುಟ್ಟಿಕೊಂಡಿತೇ?

|

ಯೋಗ ಎಂಬ ಪದವು ಸಂಸ್ಕೃತದ ಯುಜ್ ಎಂಬ ಪದದಿಂದ ಬಂದಿದ್ದು, ಇದರ ಅರ್ಥ ಸೇರು ಅಥವಾ ಒಂದಾಗು ಎಂಬುವುದಾಗಿದೆ. ಯೋಗ ಸತ್‌ ಯೋಗ ಅಥವಾ ಸ್ವರ್ಣ ಯುಗದಲ್ಲಿ ಉಗಮವಾಯಿತು ಎಂದು ಹೇಳಲಾಗುತ್ತದೆ.

ಯೋಗ ಹೆಚ್ಚಾಗಿ ಬೆಳಕಿಗೆ ಬಂದಿದ್ದು ಸಿಂಧೂ ನಾಗರೀಕತೆಯ ಕಾಲಘಟ್ಟದಲ್ಲಿ. ಯೋಗ ಎಂಬುವುದು ಕೇವಲ ದೇಹವನ್ನು ವಿವಿಧ ಆಕಾರದಲ್ಲಿ ಭಾಗಿಸುವ ಒಂದು ಕ್ರಿಯೆ ಅಥವಾ ದೈಹಿಕ ವ್ಯಾಯಾಮವಲ್ಲ, ಅದಕ್ಕಿಂತ ಮಿಗಿಲಾದ ಅಂಶಗಳು ಯೋಗದಲ್ಲಿದೆ.

ಯೋಗವನ್ನು ಸುಮಾರು 5000 ಸಾವಿರ ವರ್ಷಗಳಷ್ಟು ಹಿಂದೆಯೇ ಸಿಂಧೂ ಕಣಿವೆಯಲ್ಲಿ ಆರ್ಯನ್‌ ನಾಗರಿಕತೆ ಸಮಯದಲ್ಲಿ ಅಭ್ಯಾಸ ಮಾಡುತ್ತಿದ್ದರು. ನಂತರ ಬಂದ ಹರಪ್ಪ ಮೊಹೆಂಜದಾರೋ ನಾಗರಿಕತೆ ಕಾಲದಲ್ಲಿ ಯೋಗ ಭಂಗಿಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು. ಹಾಗಾಗಿ ಯೋಗ 5000 ವರ್ಷಗಳ ಹಿಂದಿನಿಂದಲೂ ಇದೆ ಎಂದು ಹೇಳಬಹುದು. ನಂತರ ಪತಾಂಜಲಿ ಮಹರ್ಷಿಗಳು ಯೋಗಕ್ಕೆ 195 ಸೂತ್ರಗಳನ್ನು ಸೇರಿಸಿ ಅದನೊಂದು ವಿದ್ಯೆ ಅಥವಾ ಕಲೆಯನ್ನಾಗಿ ಮಾಡಿದರು. ನಂತರ ಸ್ವಾಮಿ ವಿವೇಕಾನಂದ, ಪರಮಹಂಸಾ ಯೋಗಾನಂದ, ರಮಣ ಮಹರ್ಷಿ ಮುಂತಾದ ಮಹಾನ್‌ ಪುರುಷರು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದರು.

ಯೋಗದ ಆದಿ ಪುರುಷ ಶಿವ

ಯೋಗದ ಆದಿ ಪುರುಷ ಶಿವ

ಶಿವನನ್ನು ಯೋಗದ ಆದಿ ಪುರುಷ ಎಂದು ಹೇಳಲಾಗುತ್ತದೆ. ಆತನೇ ಯೋಗದ ಮೊದಲ ಗುರು. ತ್ರಿಮೂರ್ತಿ ದೇವರುಗಳಲ್ಲಿ ಒಬ್ಬ ಶಿವ, ಉಳಿದಿಬ್ಬರು ಬ್ರಹ್ಮ, ವಿಷ್ಣು. ದೇಹಕ್ಕೆ ಭಸ್ಮ ಲೇಪಿಸಿ, ಮುಡಿಗೆ ಅರ್ಧ ಚಂದ್ರನನ್ನು ಮುಡಿದು, ಜ್ಞಾನದ ಮೂರನೇ ಕಣ್ಣನ್ನು ಹೊಂದಿರುವವನೇ ಶಿವ. ಹಾವನ್ನೇ ಹಾರವನ್ನಾಗಿ ಧರಿಸಿರುವ ನೀಲಕಂಠ ಕೈಯಲ್ಲಿ ಡಮರು ಹಾಗೂ ತ್ರಿಶೂಲವನ್ನೇ ಅಸ್ತ್ರವನ್ನಾಗಿ ಹಿಡಿದಿರುತ್ತಾನೆ. ಶಿವ ಕೋಪ ಬಂದಾಗ ತನ್ನ ಮೂರನೇ ಕಣ್ಣು ತೆಗೆಯುತ್ತಾನೆ ಆಗ ಎದುರುಗಿದ್ದ ಎಲ್ಲವೂ ಭಸ್ಮವಾಗುವುದು. ಈತನನ್ನು ಮಹಾದೇವ, ಮಹಾಯೋಗಿ, ಈಶ್ವರ, ನಟರಾಜ, ಭೈರವ, ವಿಶ್ವನಾಥ, ಬೋಲೇನಾಥ ಹೀಗೆ ಅನೇಕ ಹೆಸರಿನಿಂದ ಕರೆಯಲಾಗುವುದು. ಈತನೇ ಯೋಗದ ಮಹಾಪುರುಷ. ಈತ ಜಗತ್ತಿನ ಒಳಿತು ಮತ್ತು ಕೆಡಕು ನಿರ್ಧರಿಸುತ್ತಾನೆ. ಈತನನ್ನು ಸೃಷ್ಟಿಯ ಲಯಕರ್ತ ಎಂದು ಕೂಡ ಹೇಳಲಾಗುವುದು.

 ಯೋಗಹುಟ್ಟಿನ ಬಗ್ಗೆ ಕತೆ

ಯೋಗಹುಟ್ಟಿನ ಬಗ್ಗೆ ಕತೆ

ಶಾಸ್ತ್ರಗಳ ಪ್ರಕಾರ ಶಿವ ಮೊದಲ ಬಾರಿಗೆ ಯೋಗ ಹಾಗೂ ಧ್ಯಾನದ ಬಗ್ಗೆ ಜ್ಙಾನವನ್ನು ಪತ್ನಿ ಪಾರ್ವತಿಗೆ ಹೇಳುತ್ತಾನೆ, ಹಾಗಾಗಿ ಆತ ಯೋಗದ ಆದಿ ಗುರು ಎಂದು ಹೇಳಾಗುತ್ತದೆ. ಆತ ಪಾರ್ವತಿಗೆ ಯೋಗ 84 ಆಸನಗಳನ್ನು ತಿಳಿಸುತ್ತಾನೆ, ಅದು ವೇದಿಕ್ ಪರಂಪರೆಗೆ ಸೇರುತ್ತದೆ. ಶಿವ ಪಾರ್ವತಿಯನ್ನು ತುಂಬಾ ಪ್ರೀತಿಸುತ್ತಿದ್ದ, ಆದ್ದರಿಂದ ಆತ ಪಾರ್ವತಿಗೆ ಬಿಟ್ಟು ಮತ್ಯಾರಿಗೂ ಯೋಗದ ರಹಸ್ಯ ತಿಳಿಸಿರಲಿಲ್ಲ. ಆದರೆ ಪಾರ್ವತಿ ದೇವಿ ಜನರ ಸಂಕಟಕ್ಕೆ ಬೇಗನೆ ಮರುಗುತ್ತಾಳೆ, ಅವರಿಗೂ ತನಗೆ ತಿಳಿದಿರುವ ಯೋಗ ರಹಸ್ಯ ತಿಳಿಸಲು ಬಯಸುತ್ತಾಳೆ. ಆದ್ದರಿಂದ ಪತಿ ಬಳಿ ವೇದಿಕ್ ಯೋಗ ಸರಿಯಾದ ರೀತಿಯಲ್ಲಿ ಈ ಜಗತ್ತಿಗೆ ಹೇಳಿಕೊಡುವಂತೆ ಕೇಳುತ್ತಾಳೆ. ಪತ್ನಿಯ ಪ್ರೀತಿಯ ಬೇಡಿಕೆ ಶಿವನು ನಿರಾಕರಿಸುವುದಿಲ್ಲ.

ಸಪ್ತ ಋಷಿಗಳಿಗೆ ಯೋಗ ಸಿದ್ಧಿ ನೀಡಿದ ಶಿವ

ಸಪ್ತ ಋಷಿಗಳಿಗೆ ಯೋಗ ಸಿದ್ಧಿ ನೀಡಿದ ಶಿವ

ಯೋಗವನ್ನು ಜಗತ್ತಿಗೆ ಪರಿಚಯಿಸಲು ಸಪ್ತ ರಿಷಿಗಳನ್ನು ಸೃಷ್ಟಿಸುತ್ತಾನೆ. ಆ ಋಷಿಗಳಿಗೆ ಶಿವನೇ ಹದಿನೆಂಟು ಸಿದ್ಧಗಳನ್ನು ಕಲಿಸುತ್ತಾನೆ. ಏಳು ಋಷಿಗಳಿಗೆ ಕೇದರನಾಥ ಬಳಿಯ ಕಾಂತಿ ಸರೋವರದ ಸಮೀಪ ಸಿದ್ಧ ಹೇಳಿಕೊಟ್ಟಿದ್ದಾನೆ ಎಂಬ ಕತೆಯೂ ಇದೆ. ಶಿವನು ಸಪ್ತ ಋಷಿಗಳಿಗೆ ತನ್ನಲ್ಲಿರುವ ಯೋಗ ಸಿದ್ಧವನ್ನು ಹೇಳಿಕೊಟ್ಟ ದಿನ ಶಿವರಾತ್ರಿಯಾಗಿದೆ. ಈ ದಿನ ಯಾರು ಪೂರ್ವಕ್ಕೆ ದೃಷ್ಟಿಯನ್ನಿಟ್ಟು ಶಿವನ ಓಂಕಾರ ಹೇಳುತ್ತಾರೋ ಅವರಿಗೆ ಆಧ್ಯಾತ್ಮದ ಅನುಭವ ಉಂಟಾಗುವುದು.

ಓಂಕಾರದಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಓಂಕಾರದಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಯೋಗ ಮಾಡುವಾಗ ಹೇಳುವ ಓಂಕಾರ ಉಚ್ಛಾರಣೆ ಅದು ಬರೀ ಉಚ್ಛಾರಣೆವಲ್ಲ, ಅದೊಂದು ಶಕ್ತಿ. ಓಂಕಾರ ಉಚ್ಛಾರಣೆ ಮಾಡುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ.

  • ಏಕಾಗ್ರತೆ ಹೆಚ್ಚುವುದು
  • ಮಾನಸಿಕ ಒತ್ತಡ ಕಡಿಮೆಯಾಗುವುದು
  • ಮನಸ್ಸಿನಲ್ಲಿ ಲವಲವಿಕೆ ಉಂಟಾಗುವುದು
  • ಬೆನ್ನು ಮೂಳೆಗೆ ಶಕ್ತಿ ತುಂಬುವುದು
  • ದೇಹದಲ್ಲಿರುವ ಕಶ್ಮಲ ಹಾಗೂ ಮನಸ್ಸಿನಲ್ಲಿರುವ ಕಲ್ಮಶ ಹೊರ ಹಾಕುವುದು
  • ಹೃದಯ ಆರೋಗ್ಯಕ್ಕೆ ಒಳ್ಳೆಯದು
  • ಜೀರ್ಣಕ್ರಿಯೆಗೆ ಸಹಕಾರಿ
  • ಚಂಚಲತೆ ಇಲ್ಲವಾಗುವುದು
  • ಋಣಾತ್ಮಕ ಆಲೋಚನೆಗಳನ್ನು ಹೊರದೂಡುವ ಸಾಮಾರ್ಥ್ಯ ಬೆಳೆಯುವುದು
English summary

Episode 1: The Mythological Stories Of Yoga ; Shiva And Omkar

Explore the mythology and legends of yoga with us. In this new yoga series we bring to you exciting stories that will expand your mind. Yoga is not only about postures. Learn about the history of Yoga, asanas and how they came to be!
X
Desktop Bottom Promotion