For Quick Alerts
ALLOW NOTIFICATIONS  
For Daily Alerts

ಎಷ್ಟೇ ಪ್ರಯತ್ನಿಸಿದರು ತೂಕ ಕಡಿಮೆಯಾಗಿಲ್ಲವೇ? ಈ ಕಾರಣಕ್ಕಿರಬಹುದು

|

ಮೈ ತೂಕ ಕಡಿಮೆಯಾಗಬೇಕೆಂದು ಕೆಲವರು ತುಂಬಾನೇ ಕಷ್ಟಪಡುತ್ತಾರೆ. ಆದರೆ ಬಯಸಿದ ಫಲಿತಾಂಶ ದೊರೆಯುವುದೇ ಇಲ್ಲ. 10 ಕೆಜಿ ಕಡಿಮೆಯಾಗಬೇಕೆಂದು ವರ್ಕೌಟ್‌, ಡಯಟ್‌ ಮಾಡಿದರೂ ಒಂದು ಅರ್ಧ ಕೆಜಿ ಕಡಿಮೆಯಾಗಿರುತ್ತೆ ಅಷ್ಟೇ, ಇದರಿಂದ ತುಂಬಾ ನಿರಾಸೆಯಾಗುತ್ತದೆ. ಇನ್ನು ಕೆಲವರಿಗೆ ಸ್ವಲ್ಪ ತೂಕ ಕಡಿಮೆಯಾಗುತ್ತದೆ, ಆದರೆ ಕೆಲವೇ ದಿನಗಳಲ್ಲಿಕಳೆದುಕೊಂಡ ತೂಕ ಮತ್ತೆ ಹೆಚ್ಚಾಗುವುದು. ಇದರಿಂದಾಗಿ ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬುವುದೇ ದೊಡ್ಡ ಚಿಂತೆಯಾಗಿರುತ್ತೆ..

ನೀವೆಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಿಲ್ಲ ಎಂದಾದರೆ ಏನೋ ಮಿಸ್ಟೇಕ್ಟ್ ಅಗುತ್ತಿದೆ ಎಂದರ್ಥ, ನಿಮ್ಮ ಐ ತೂಕ ಕಡಿಮೆಯಾಗದಿರಲು ಈ ಕಾರಣಗಳಿರಬಹುದು ನೋಡಿ:

1. ಪ್ರೊಟೀನ್ ಕಡಿಮೆ ತೆಗೆದುಕೊಳ್ಳುವುದು

1. ಪ್ರೊಟೀನ್ ಕಡಿಮೆ ತೆಗೆದುಕೊಳ್ಳುವುದು

ಕೆಲವರು ತೂಕ ಕಡಿಮೆಯಾಗಬೇಕೆಂದರೆ ಸ್ವಲ್ಪವೂ ತಿನ್ನಬೇಕು, ಒಂದು ಹೊತ್ತು ಉಪವಾಸವಿರಬೇಕು ಎಂದೆಲ್ಲಾ ಯೋಚಿಸುತ್ತಾರೆ, ಆದರೆ ಅದು ತಪ್ಪು, ನೀವು ಊಟ ಸರಿಯಾಗಿ ತಿನ್ನದಿದ್ದರೆ ತೂಕವೇನೂ ಕಡಿಮೆಯಾಗಲ್ಲ, ನೀವು ತೂಕ ಕಡಿಮೆಯಾಗಬೇಕೆಂದರೆ ಸಮತೋಲನದ ಆಹಾರ ತಿನ್ನಬೇಕು, ನಿಮ್ಮ ಮೈ ತೂಕಕ್ಕೆ ತಕ್ಕಂತೆ ಪ್ರೊಟೀನ್ ಇರುವ ಆಹಾರ ಸೇವನೆ ಮಾಡಬೇಕು. ಪ್ರೊಟೀನ್ ಇರುವ ಆಹಾರ ಸೇವನೆಯಿಂದ ಮೈ ತೂಕ ಕಡಿಮೆಯಾಗುವುದು, ಆರೋಗ್ಯವೂ ಚೆನ್ನಾಗಿರುತ್ತದೆ.

2. ಕುಳಿತುಕೊಂಡೇ ಇರುವುದು

2. ಕುಳಿತುಕೊಂಡೇ ಇರುವುದು

ನೀವು ಒಂದು ಗಂಟೆ ವರ್ಕೌಟ್ ಮಾಡುವುದು, ಡಯಟ್ ಮಾಡುವುದು ಎಲ್ಲಾ ಸರಿ, ಆದರೆ ನಿಮ್ಮ ಕೆಲಸ ಕೂತುಕೊಂಡೇ ಮಾಡುವಂಥದ್ದು ಆಗಿದ್ದರೆ ತೂಕ ಕಡಿಮೆಯಾಗುವುದು ಸ್ವಲ್ಪ ಕಷ್ಟವೇ, ತುಂಬಾ ಹೊತ್ತು ಕೂತುಕೊಂಡೇ ಮಾಡುವ ಕೆಲಸವಾದರೆ 2 ಅಥವಾ 3 ಗಂಟೆಗೊಮ್ಮೆ ಎದ್ದು 5 ನಿಮಿಷ ನಡೆಯಿರಿ. ಚೇರ್‌ನಲ್ಲಿ ಕೂತೇ ಸ್ಟ್ರೆಚಿಂಗ್ ಮಾಡಿ, ಇವೆಲ್ಲಾ ದೇಹಕ್ಕೆ ಸ್ವಲ್ಪ ಫ್ಲೆಕ್ಸಿಬಲ್‌ ನೀಡುವುದು. ನೀವು ತುಂಬಾ ಹೊತ್ತು ಕೆಲಸ ಮಾಡುವುದಾದರೆ ಬೆಳಗ್ಗೆ-ಸಂಜೆ ಅರ್ಧ ಗಂಟೆ ವ್ಯಾಯಾಮ ಮಾಡಿ.

3. ಮಾನಸಿಕ ಒತ್ತಡ

3. ಮಾನಸಿಕ ಒತ್ತಡ

ಮಾನಸಿಕ ಒತ್ತಡ ಕೆಲವರಲ್ಲಿ ಮೈ ತೂಕ ಕಡಿಮೆ ಮಾಡಿದರೆ ಇನ್ನುಕೆಲವರಲ್ಲಿ ಮೈ ತೂಕ ಹೆಚ್ಚಿಸುತ್ತದೆ. ಕೆಲವರಲ್ಲಿ ಒತ್ತಡದಲ್ಲಿದ್ದಾಗ ತುಂಬಾ ತಿನ್ನುತ್ತಾರೆ, ವರ್ಕೌಟ್‌ ಕಡೆ ಗಮನ ನೀಡುವುದಿಲ್ಲ, ಇವೆಲ್ಲಾ ಮೈ ತೂಕ ಹೆಚ್ಚಿಸುವುದು.

4. ಕಡಿಮೆ ನೀರು ಕುಡಿಯುವುದು

4. ಕಡಿಮೆ ನೀರು ಕುಡಿಯುವುದು

ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಾ? ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ ಎಂದಾದರೆ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದಿನದಲ್ಲಿ 3 ಲೀಟರ್ ನೀರು ಕುಡಿಯಿರಿ. ಬೆಳಗ್ಗೆ ಎದ್ದು ಬಿಸಿ ನೀರು ಕುಡಿಯಿರಿ, ಊಟಕ್ಕೆ ಮೊದಲು ನೀರು ಕುಡಿಯಿರಿ, ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ, ಇದರಿಂದ ಜೀರ್ಣಕ್ರಿಯೆಗೆ ಸಹಕಾರಿ.

5. ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ

5. ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ

ನೀವು ತೂಕ ಕಡಿಮೆ ಮಾಡಲು ಬಯಸುವುದಾದರೆ ನಾರಿನ ಪದಾರ್ಥಗಳ್ನು ಹೆಚ್ಚಾಗಿ ಸೇವಿಸಿ. ಸಲಾಡ್, ಪಲ್ಯ ಅಂತ ಹೆಚ್ಚಾಗಿ ಇವೆಲ್ಲಾ ತೂಕ ಇಳಿಕೆಗೆ ಸಹಕಾರಿಯಾಗಿದೆ.

English summary

Reasons Why You’re Not Losing Weight Despite All Efforts in kannada

Reasons Why You’re Not Losing Weight Despite All Efforts in kannada
X
Desktop Bottom Promotion