Just In
Don't Miss
- News
ಸಂತ್ರಸ್ತೆಯ ಜೀವವೇ ಹೋದ ಮೇಲೆ ಮನೆಗೆ ಭದ್ರತೆ, ಆಯುಧ
- Finance
ಜನವರಿಯಿಂದ ಹೀರೋ ಬೈಕ್, ಸ್ಕೂಟರ್ ದರ ಹೆಚ್ಚಳ
- Movies
ಕೇಳಲು ರೆಡಿಯಾಗಿ ಬರ್ತಿದೆ 'ಅವನೇ ಶ್ರೀಮನ್ನಾರಾಯಣ'ನ ಮೊದಲ ಹಾಡು
- Technology
ಅನಿಯಮಿತ ಕರೆ ಮತ್ತು ಅಧಿಕ ಡಾಟಾಗೆ ಇದುವೇ ಬೆಸ್ಟ್ ಪ್ಲ್ಯಾನ್!
- Automobiles
ಟ್ರೈಬರ್ ಎಂಪಿವಿನಲ್ಲಿ ಶೀಘ್ರದಲ್ಲೇ ಟರ್ಬೋ ಎಂಜಿನ್ ನೀಡಲಿದೆ ರೆನಾಲ್ಟ್
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಯಸ್ಸಾದಂತೆ ತೂಕ ಹೆಚ್ಚುವುದು ಏಕೆ ? ಇಲ್ಲಿದೆ ಕಾರಣಗಳು ಮತ್ತು ತೂಕ ಇಳಿಸಲು ಸಲಹೆಗಳು
ಪ್ರಕೃತಿ ಎನ್ನುವುದು ವಿಸ್ಮಯ. ಅದರಲ್ಲಿ ಇರುವ ಎಲ್ಲಾ ಜೀವಿಗಳೂ ವಿಭಿನ್ನವಾದ ವಿಶೇಷತೆಯನ್ನು ಪಡೆದುಕೊಂಡಿವೆ. ಆ ಸಮೂಹದಲ್ಲಿ ಮಾನವನು ಏನೂ ಹೊರತಾಗಿಲ್ಲ. ಮನುಷ್ಯನು ತನ್ನ ಜೀವಿತಾವಧಿ, ಜೀವನ ಶೈಲಿ ಹಾಗೂ ದೇಹದ ಸ್ಥಿತಿ-ಗತಿಯಲ್ಲಿ ಇತರ ಪ್ರಾಣಿಗಳಿಗಿಂತ ವಿಭಿನ್ನತೆಯನ್ನು ಪಡೆದುಕೊಂಡಿದ್ದಾನೆ. ಅವನ ಹುಟ್ಟು ಹೇಗೆ ಕ್ರಮಬದ್ಧವಾಗಿ ವಿಕಾಸವನ್ನು ಕಾಣುವುದೋ ಹಾಗೆಯೇ ಮಧ್ಯ ವಯಸ್ಸಿನಿಂದ ಇಳಿವಯಸ್ಸಿಗೆ ಹೋಗುವಾಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕ್ಷೀಣತೆಯನ್ನು ಅನುಭವಿಸುತ್ತಾನೆ. ಬಾಲ್ಯ, ಯವ್ವನ ಹಾಗೂ ಮಧ್ಯ ವಯಸ್ಸಿನಲ್ಲಿ ಸಾಕಷ್ಟು ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿ ಇರುತ್ತಾನೆ. ಅದೇ ಮಧ್ಯವಯಸ್ಸಿನಿಂದ ವೃದ್ಧಾಪ್ಯದ ಎಡೆಗೆ ವಯಸ್ಸು ಜಾರುತ್ತಿದ್ದಂತೆ ದೇಹದಲ್ಲಿ ಶಕ್ತಿಯು ಇಳಿಮುಖ ಆಗುವುದು. ಇದರೊಟ್ಟಿಗೆ ಬಹುತೇಕ ಮಂದಿ ತಮ್ಮ ಇಳಿವಯಸ್ಸಿನಲ್ಲಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ.
ತೂಕ ಹೆಚ್ಚಿಸುವ ಬೆಳಗ್ಗಿನ ಕೆಲವು ಕೆಟ್ಟ ಅಭ್ಯಾಸಗಳು
ಈ ಪ್ರಶ್ನೆ ಅನೇಕ ಮಂದಿಗೆ ಕಾಡಿರಬಹುದು. ಅಂತೆಯೇ ಇದಕ್ಕೆ ಕಾರಣವೇನು ಎನ್ನುವುದಕ್ಕೆ ಉತ್ತರವನ್ನು ಹುಡುಕಿರಬಹುದು. ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ವಿಶೇಷ ಸಂಗತಿಯನ್ನು ಮನದಟ್ಟು ಮಾಡಿಕೊಳ್ಳುವುದರ ಜೊತೆಗೆ ತೂಕದ ಏರಿಕೆ ಏಕೆ? ಎನ್ನುವುದನ್ನು ಕಂಡುಹಿಡಿದಿದೆ. ಹಾಗಾದರೆ ಆ ಸಂಗತಿಗಳು ಏನು? ಅದಕ್ಕೆ ಪರಿಹಾರ ಕ್ರಮ ಇದೆಯೇ? ಎನ್ನುವಂತಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮುಂದಿನ ಭಾಗ ವಿವರಿಸುವುದು.

ವಯಸ್ಸಾದಂತೆ ತೂಕ ಹೆಚ್ಚಾಗಲು ಕಾರಣಗಳು (H2 Tag)
ವಯಸ್ಸಾದಂತೆ ದೇಹದಲ್ಲಿ ಶಕ್ತಿ ಇಳಿಮುಖವಾಗುತ್ತದೆ. ಮಾನಸಿಕವಾಗಿಯೂ ಸಾಕಷ್ಟು ದಣಿವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಇರುವ ನಿಶ್ಯಕ್ತಿ ಸೋಮಾರಿತನದ ಭಾವನೆಯನ್ನು ಮೂಡಿಸುತ್ತದೆ. ವಯಸ್ಸಿನಲ್ಲಿ ಇರುವಾಗ ಇದ್ದ ಶಕ್ತಿ ಅಥವಾ ಓಡಾಟದ ಹುಮ್ಮಸ್ಸು ಇಲ್ಲದೆ ಹೋಗುವುದರಿಂದ ದೈಹಿಕ ಕಸರತ್ತುಗಳನ್ನು ನಿಲ್ಲಿಸಿರುತ್ತಾರೆ. ಎಲ್ಲಾ ಕೆಲಸ ಕಾರ್ಯಗಳನ್ನು ಆದಷ್ಟು ಕುಳಿತಲ್ಲಿ ಹಾಗೂ ಮಲಗಿದಲ್ಲಿಯೇ ಮಾಡಿ ಮುಗಿಸಲು ಬಯಸುವರು. ಇದರಿಂದ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜರ್ನಲ್ ನೇಚರ್ ಮೆಡಿಸಿನ್ ಸಂಸ್ಥೆಯೊಂದು ಅಧ್ಯಯನ ಕೈಗೊಳ್ಳುವುದರ ಮೂಲಕ ಕೆಲವು ಸಂಗತಿಯನ್ನು ಕಂಡು ಹಿಡಿದಿದೆ.

1. ಸಂಶೋಧನೆಯ ಪ್ರಕಾರ
ಮುಂಜಾನೆ ಇಂತಹ ಪಾನೀಯಗಳನ್ನು ಸೇವಿಸಲೇಬಾರದು, ಇಲ್ಲಾಂದ್ರೆ ತೂಕ ಹೆಚ್ಚಾಗುತ್ತದೆ

2. ಅಧ್ಯಯನದ ಸಂಗತಿ
ಸುದೀರ್ಘ 13 ವರ್ಷಗಳ ಅಧ್ಯಯನದಲ್ಲಿ ಸುಮಾರು 54 ವೃದ್ಧ ಮಹಿಳೆಯರು ಹಾಗೂ ಪುರುಷರ ಕೊಬ್ಬಿನ ಕೋಶವನ್ನು ಅಧ್ಯಯನ ಮಾಡಿದ್ದಾರೆ. ಅದರಲ್ಲಿ ಎಲ್ಲಾ ಕೋಶದಲ್ಲಿಯೂ ವಯಸ್ಸಿಗೆ ಅನುಗುಣವಾಗಿ ಲಿಪಿಡ್ ವಹಿವಾಟು ಅಥವಾ ಕೊಬ್ಬನ್ನು ಕರಗಿಸುವ ಕ್ರಿಯೆಯು ಇಳಿಮುಖವಾಗಿರುವುದು ಕಂಡುಬಂದಿದೆ. ಕಡಿಮೆ ಕ್ಯಾಲೋರಿ ಸೇವಿಸಿ, ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಮುಂದಾದವರಲ್ಲೂ ಶೇ. 20ರಷ್ಟು ತೂಕದ ಹೆಚ್ಚಳವನ್ನು ಕಂಡುಕೊಂಡಿದ್ದಾರೆ.

3. ಮಹಿಳೆಯರಲ್ಲಿ ಲಿಪಿಡ್ ಕೆಲಸ
ವಯಸ್ಸಾದ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆಯ ನಂತರ ಲಿಪಿಡ್ ಕೆಲಸವು ಅಂದರೆ ಕೊಬ್ಬನ್ನು ಕರಗಿಸುವ ಕ್ರಿಯೆಯು ಅತ್ಯಂತ ನಿಧಾನಗತಿಯನ್ನು ಹೊಂದಿರುತ್ತದೆ. ಅದರ ಪರಿಣಾಮದಿಂದ ದೇಹದಲ್ಲಿ ಅಧಿಕ ಕೊಬ್ಬು ಶೇಖರಣೆಯಾಗುವುದು. ಅದು ಅವರ ಹೊಟ್ಟೆ, ಸೊಂಟ, ತೊಡೆ ಹಾಗೂ ಭುಜಗಳ ಭಾಗದಲ್ಲಿ ಅಧಿಕವಾಗಿ ಇರುತ್ತದೆ ಎಂದು ಹೇಳಲಾಗುವುದು.

4. ಪುರುಷರಲ್ಲಿ ಕೊಬ್ಬು ಸಂಗ್ರಹಣೆಗೆ ಕಾರಣ
ಮಹಿಳೆಯರ ದೇಹದ ಸ್ಥಿತಿಯಂತೆ ಪುರುಷರ ದೇಹ ಸ್ಥಿತಿಯ ಸಾಮ್ಯತೆಯನ್ನು ಪಡೆದುಕೊಳ್ಳುವುದು. ಪುರುಷರಲ್ಲೂ ಸಹ ವಯಸ್ಸಾದಂತೆ ಕೊಬ್ಬನ್ನು ಕರಗಿಸುವ ಕ್ರಿಯೆ ನಿಧಾನವಾಗಿ ಸಾಗುವುದು. ಇದರ ಪರಿಣಾಮವಾಗಿ ಪುರುಷರಲ್ಲಿ ಹೊಟ್ಟೆ ಭಾಗ, ತೊಡೆ, ಬೆನ್ನಿನಲ್ಲಿ, ಭುಜದ ಭಾಗದಲ್ಲಿ ಅಧಿಕ ಬೊಜ್ಜು ಶೇಖರಣೆ ಆಗುವುದನ್ನು ನಾವು ಕಾಣಬಹುದು.

ವಯಸ್ಸಾದಂತೆ ತೂಕ ಇಳಿಸಲು ಸಲಹೆಗಳು (H2 Tag)
ಆರೋಗ್ಯ ಸಮಸ್ಯೆ ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಯಸ್ಸಾದಂತೆ ನಮ್ಮ ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆಯಾಗುವುದರಿಂದ ಸಮಸ್ಯೆಗಳು ಹೆಚ್ಚು ಉಲ್ಭಣಗೊಳ್ಳುತ್ತಾ ಹೋಗುವುದು. ವಯಸ್ಸಾದ ಬಳಿಕ ದೇಹದಲ್ಲಿ ಕೊಬ್ಬು ಶೇಖರಣೆ ಆಗುವುದು ಸಹಜ. ಆದರೆ ಅದಕ್ಕಾಗಿ ಕೆಲವು ಪೂರ್ವ ಕ್ರಮವನ್ನು ಕೈಗೊಂಡರೆ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

1. ಕುಳಿತುಕೊಳ್ಳುವುದು ಕಡಿಮೆ ಮಾಡಿ, ಓಡಾಡುವುದನ್ನು ಹೆಚ್ಚಿಸಿ
ವಯಸ್ಸಾದಂತೆ ಕ್ಯಾಲೋರಿ ಆಹಾರವನ್ನು ಸೇವಿಸುವುದಕ್ಕಿಂತ ಅದನ್ನು ಕರಗಿಸಿಕೊಳ್ಳುವುದು ಅಗತ್ಯ. ಹಾಗಾಗಿ ನಿತ್ಯವೂ ನೀವು ಹೆಚ್ಚು ಕ್ರಿಯಾಶೀಲರಾಗಿರಬೇಕು. ದೇಹ ಹೆಚ್ಚೆಚ್ಚು ದಣಿದ ಹಾಗೆ ಕ್ಯಾಲೋರಿಯನ್ನು ಕರಗಿಸಿಕೊಳ್ಳುತ್ತದೆ. ವಯಸ್ಸಾದವರು ಸಾಮಾನ್ಯವಾಗಿ ಕುಳಿತಲ್ಲಿಯೇ ಹೆಚ್ಚು ಕೆಲಸ ಮಾಡಲು ಬಯಸುತ್ತಾರೆ. ಅದನ್ನು ಮೊದಲು ತಪ್ಪಿಸಬೇಕು. ನಿಮ್ಮ ಬಳಿ ವೇಗವಾಗಿ ಓಡಾಡಲು ಸಾಧ್ಯವಾಗದೆ ಇರಬಹುದು. ನಿಧಾನವಾಗಿ ಆದರೂ ಚಟುವಟಿಕಾ ಶೀಲರಾಗಿ ಇರಬೇಕು. ಆಗ ಮನಸ್ಸು ಮತ್ತು ದೇಹವು ಉತ್ತಮ ಆರೋಗ್ಯದಿಂದ ಕೂಡಿರುವುದು. ನೀವು ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿದಷ್ಟು ದೇಹದಲ್ಲಿ ಕೊಬ್ಬಿನಂಶ ಕರಗುವುದು. ಇಲ್ಲವಾದರೆ ಹೆಚ್ಚುವ ದೇಹದ ತೂಕ ನಿಮಗೆ ತೊಂದರೆಯನ್ನು ಉಂಟುಮಾಡುವುದು.

2. ಶಕ್ತಿಯ ತರಬೇತಿ ಪಡೆಯಿರಿ
ವಯಸ್ಸು ನಿಮ್ಮ ದೇಹಕ್ಕೆ ಆಗಬಹುದು, ಆದರೆ ಮನಸ್ಸಿಗೆ ಆಗುವುದಿಲ್ಲ. ನೀವು ನಿಮ್ಮ ಮನಸ್ಸನ್ನು ಹೆಚ್ಚು ಚೈತನ್ಯಶೀಲವಾಗಿರಿಸಿಕೊಳ್ಳಿ. ನಂತರ ಶಕ್ತಿಯ ತರಬೇತಿಯಂತಹ ವ್ಯಾಯಾಮ, ದೈಹಿಕ ಶ್ರಮವನ್ನು ಮಾಡಿ. ಆಗ ದೇಹವು ಆರೋಗ್ಯದಿಂದ ಹಾಗೂ ಬೊಜ್ಜು ರಹಿತವಾಗಿ ಇರುವುದು. ಇದು ನಿಮ್ಮಲ್ಲಿ ಇನ್ನಷ್ಟು ಉತ್ಸಾಹ ಹಾಗೂ ಕ್ರಿಯಾಶೀಲತೆಯ ಮನೋಭವಾವನ್ನು ನೀಡುವುದು.

3. ಕೊಬ್ಬನ್ನು ಉತ್ತೇಜಿಸುವ ಆಹಾರದಿಂದ ದೂರ ಇರಿ
ಹೊಟ್ಟೆಯ ಕೊಬ್ಬು ಕರಗಿಸಲು ದಿನನಿತ್ಯ ಇಂತಹ 6 ಆರೋಗ್ಯಕಾರಿ ಕ್ರಮಗಳನ್ನು ಪಾಲಿಸಿ

4. ನಿಮ್ಮ ಕೆಲಸವನ್ನು ನೀವೇ ಮಾಡಿ
ವಯಸ್ಸಾಗಿದೆ ಎಂದು ಕುಳಿತಲ್ಲಿಯೇ ಇತರರಿಂದ ಸಹಾಯ ಪಡೆದುಕೊಳ್ಳದಿರಿ. ನಿಮ್ಮ ಬಳಿ ದೊಡ್ಡ ದೊಡ್ಡ ಶ್ರಮದ ಕೆಲಸ ಆಗದೆ ಇರಬಹುದು. ನಿಮ್ಮ ಕೈಯಲ್ಲಿ ಆಗಬಹುದಾದ ನಿಮ್ಮ ಕೆಲಸಗಳಿಗಾಗಿ ಓಡಾಡಿ. ನೀವು ಓಡಾಡುವುದರಿಂದಲೂ ದೇಹದಲ್ಲಿ ಕೊಬ್ಬು ಶೇಖರಣೆ ನಿಧಾನವಾಗುವುದು.

5. ನಡಿಗೆಯನ್ನು ಅವಲಂಬಿಸಿ
ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ವಾಕಿಂಗ್ ಮಾಡುವುದರ ಮೂಲಕ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ವಯಸ್ಸಾದ ನಿಮಗೆ ಮನೆಯಲ್ಲಿ ಯಾವುದೇ ಕೆಲಸ ಇರದೆ ಹೋದರೆ ಚಿಂತಿಸುವ ಅಗತ್ಯವಿಲ್ಲ. ನಿಧಾನ ಗತಿಯಲ್ಲಿಯೇ ಸಾಕಷ್ಟು ಸಮಯ ವಾಕ್/ ನಡಿಗೆಯನ್ನು ಅನುಸರಿಸಿ. ನೀವು ವ್ಯಾಯಾಮ
ಅಥವಾ ದೇಹ ದಂಡಿಸುವ ಶ್ರಮದಾಯಕ ಕ್ರಮವನ್ನು ಅನುಸರಿಸದೆ ಹೋದರು ಚಿಂತೆಯಿಲ್ಲ. ನಡೆಯುವ ಹವ್ಯಾಸವನ್ನು ನಿರಂತರವಾಗಿಟ್ಟುಕೊಳ್ಳಿ. ಅದು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುವುದು.

6. ಆಹಾರದ ಯೋಜನೆ
60 ವರ್ಷ ದಾಟಿದವರಲ್ಲಿ ಹೆಚ್ಚು ದೈಹಿಕ ಶ್ರಮ ಅಥವಾ ವ್ಯಾಯಾಮ ಮಾಡುವುದು ಕಷ್ಟ. ಅತಿಯಾದ ಶ್ರಮದ ವ್ಯಾಯಾಮ ಮಾಡುವುದರಿಂದಲೂ ಕೆಲವು ಸಮಸ್ಯೆಯನ್ನು ಎದುರಿಸ ಬೇಕಾಗುವುದು. ಹಾಗಾಗಿ ಆದಷ್ಟು ಆಹಾರ ಕ್ರಮದಲ್ಲಿ ಯೋಜನೆಯನ್ನು ಹೊಂದುವುದು ಸೂಕ್ತ. ದೇಹಕ್ಕೆ ಶಕ್ತಿಯನ್ನು ನೀಡಿ, ಕೊಬ್ಬನ್ನು ಕರಗಿಸುವಂತಹ ತರಕಾರಿ, ಹಣ್ಣು ಮತ್ತು ಸೊಪ್ಪುಗಳ ಮೊರೆ ಹೋಗಿ. ಅವು ದೇಹಕ್ಕೆ ಅಗತ್ಯವಾದ ಪೋಷಕಾಂಶ ನೀಡುವುದರ ಮೂಲಕ ಕೊಬ್ಬನ್ನು ನಿಯಂತ್ರಿಸುತ್ತದೆ. ಜೊತೆಗೆ ಅನಗತ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಸಹ ನಿಯಂತ್ರಣದಲ್ಲಿ ಇಡುವುದು.